ಮಾರುಕಟ್ಟೆಯಲ್ಲಿರುವ ಟಾಪ್‌ ವೈರ್‌ಲೆಸ್‌ ಚಾರ್ಜರ್‌ ಸ್ಮಾರ್ಟ್‌ಫೋನ್‌ಗಳು

By Ashwath
|

ಕಳೆದ ಒಂದು ವರ್ಷದಿಂದ ಬ್ರ್ಯಾಂಡೆಡ್‌ ಕಂಪೆನಿಗಳು ತಮ್ಮ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ವೈರ್‌ಲೆಸ್‌ ಚಾರ್ಜರ್‌ ವಿಶೇಷತೆಯನ್ನು ಸೇರಿಸಿ ಬಿಡುಗಡೆ ಮಾಡಲು ಆರಂಭಿಸಿದೆ.
ಫಾರಡೆಯ ಇಲೆಕ್ಟ್ರೊಮಾಗ್ನೆಟಿಕ್ ಇಂಡಕ್ಷನ್ ತತ್ತ್ವದ ಮೇಲೆ ವೈರ್‌ಲೆಸ್‌ ಚಾರ್ಜರ್‌ ಕೆಲಸ ಮಾಡುತ್ತದೆ.ಹೆಸರೇ ಹೇಳುವಂತೆ ಈ ಚಾರ್ಜರ್ ಗಳು ತಂತಿ ರಹಿತವಾಗಿದ್ದು,ಚಾರ್ಜ್ ಮಾಡಲು ಮೊಬೈಲ್ ಸಾಧನವನ್ನು ಚಾರ್ಜರಿನ ಮೇಲಿಡಬೇಕು.ಚಾರ್ಜರಿನ ಒಳಗಿರುವ ತಂತಿಗಳಲ್ಲಿ ಹರಿಯುವ ವಿದ್ಯುತ್ ಮೊಬೈಲ್ ಸಾಧನದೊಳಗಿರುವ ತಂತಿಯಲ್ಲಿ ವಿದ್ಯುತ್ಪ್ರವಾಹವನ್ನು ಪ್ರಚೋದಿಸುವ ಮೂಲಕ ಮೊಬೈಲ್ ಚಾರ್ಜ್ ಆಗುತ್ತದೆ.

ಮೊಬೈಲ್ ಸಾಧನದಲ್ಲಿ ಆಂತರಿಕ ವ್ಯವಸ್ಥೆಯಿಲ್ಲದಿದ್ದ ಪಕ್ಷದಲ್ಲಿ ವೈರ್‍ಲೆಸ್ ಚಾರ್ಜ್ ಮಾಡಲು ಅಡಾಪ್ಟರ್ ಗಳನ್ನು ಬಳಸಬೇಕಾಗುತ್ತದೆ. WPC (wireless power consortium) ಎಂಬ ಸಂಸ್ಥೆ ವೈರ್‍ಲೆಸ್ ಚಾರ್ಜರ್‌ಗಳಿಗೆ ನಿಯಮಗಳನ್ನು ರೂಪಿಸಿದ್ದು, ಈ ನಿಯಮಗಳನ್ನು ಅನುಸರಿಸಿ ತಯಾರಾದ ವೈರ್‌ಲೆಸ್‌ ಚಾರ್ಜರ್‌ಗಳಿಗೆ Qi compatible ಎಂದು ಕರೆಯಲಾಗುತ್ತದೆ.

ನೆಕ್ಸಸ್,ಸ್ಯಾಮ್‌ಸಂಗ್‌‌ ಲೂಮಿಯಾ ಫೋನ್‌ಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಎಲ್.ಜಿ, ನೋಕಿಯ ಸ್ಯಾಮ್ ಸಂಗ್ ಮುಂತಾದ ಪ್ರಖ್ಯಾತ ಕಂಪನಿಗಳ ಹಾಗೂ ಚೀನಾದ ತಯಾರಕರ ವೈರ್‌‌ಲೆಸ್‌ ಚಾರ್ಜರ್ ಗಳು ಮಾರುಕಟ್ಟೆಯಲ್ಲಿದ್ದು, 2 ಸಾವಿರದಿಂದ ಆರಂಭವಾಗಿ ಆರುಸಾವಿರ ರೂಪಾಯಿವರೆಗಿನ ವೈರ್‌‌ಲೆಸ್‌ ಚಾರ್ಜರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ವೈರ್‌ಲೆಸ್‌ ಚಾರ್ಜರ್‌ಗಳು
1.ನೋಕಿಯ DT-900, DT-901, DC-50 ,
2. ಸ್ಯಾಮ್ ಸಂಗ್ EPP 100
3. ಎಲ್.ಜಿ WCP-300, WCP-700

ಹೀಗಾಗಿ ಇಲ್ಲಿ ವೈರ್‌ಲೆಸ್‌ ಚಾರ್ಜರ್‌‌ ವಿಶೇಷತೆ ಹೊಂದಿರುವ ಟಾಪ್ ಸ್ಮಾರ್ಟ್‌‌ಫೋನ್‌ಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗೆ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

 ನೋಕಿಯಾ ಲೂಮಿಯಾ 925

ನೋಕಿಯಾ ಲೂಮಿಯಾ 925

ಬೆಲೆ:27412

ವಿಶೇಷತೆ:
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಫೋನ್‌ 8 ಓಎಸ್‌
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್‌ ಸ್ಟೋರೆಜ್‌
ಹಿಂದುಗಡೆ 8.7 ಎಂಪಿ ಪ್ಯೂರ್‌ ವ್ಯೂ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
2,000 mAh ಬ್ಯಾಟರಿ

ನೋಕಿಯಾ ಲೂಮಿಯಾ 920

ನೋಕಿಯಾ ಲೂಮಿಯಾ 920


ಬೆಲೆ:25500

ವಿಶೇಷತೆ:
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(768 X 1280 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್‌)
1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌,3ಜಿ,ಜಿಪಿಎಸ್‌,ಎ-ಜಿಪಿಎಸ್‌
2,000 mAh ಬ್ಯಾಟರಿ

  ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಬೆಲೆ:44,99

ವಿಶೇಷತೆ:
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

 ಎಲ್‌ಜಿ ನೆಕ್ಸಸ್‌ 4

ಎಲ್‌ಜಿ ನೆಕ್ಸಸ್‌ 4

ಬೆಲೆ:20,990

ವಿಶೇಷತೆ:
4.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೋಸೆಸೆರ್‌
2GB RAM
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಎನ್‌ಎಫ್‌ಸಿ,ವೈರ್‌ಲೆಸ್‌ ಚಾರ್ಜಿಂಗ್‌,ವೈಫೈ,ಬ್ಲೂಟೂತ್‌
2,100 mAh ಬ್ಯಾಟರಿ

 ಎಲ್‌ಜಿ ನೆಕ್ಸಸ್‌ 5

ಎಲ್‌ಜಿ ನೆಕ್ಸಸ್‌ 5

ಬೆಲೆ:29,400

ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್‌ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಎನ್‌ಎಫ್‌ಸಿ
2300 mAh ಬ್ಯಾಟರಿ

  ನೋಕಿಯಾ ಲೂಮಿಯಾ  720

ನೋಕಿಯಾ ಲೂಮಿಯಾ 720

ಬೆಲೆ:14,690

ವಿಶೇಷತೆ:
4.3 ಇಂಚಿನ ಕ್ಲಿಯರ್‌ ಬ್ಲ್ಯಾಕ್‌ ಸ್ಕ್ರೀನ್‌(480 x 800 ಪಿಕ್ಸೆಲ್‌ )
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
6.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ,3ಜಿ
2000 mAh ಬ್ಯಾಟರಿ

 ನೋಕಿಯಾ ಲೂಮಿಯಾ 1020

ನೋಕಿಯಾ ಲೂಮಿಯಾ 1020

ಬೆಲೆ:

ವಿಶೇಷತೆ:
4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

ಲೂಮಿಯಾ1520

ಲೂಮಿಯಾ1520

ಬೆಲೆ:46999

ವಿಶೇಷತೆ:
ಸಿಂಗಲ್‌ ಸಿಮ್‌
6 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
2.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್
16 GB ಆಂತರಿಕ ಮೆಮೊರಿ
20 ಎಂಪಿ ಪ್ಯೂರ್‌ವ್ಯೂ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಕ್ಲೌಡ್‌ ಸ್ಟೋರೆಜ್‌‌ ಸ್ಕೈ ಡ್ರೈವ್‌ನಲ್ಲಿ 7 GB ಉಚಿತವಾಗಿ ಡೇಟಾ ಸಂಗ್ರಹ
3ಜಿ,ಬ್ಲೂಟೂತ್‌,ಎನ್‌ಎಫ್‌ಸಿ,ವೈಫೈ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌
3400 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X