ಫಿಂಗರ್‌ಪ್ರಿಂಟ್ ಮತ್ತು ಫೇಸ್ ಐಡಿ ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಭದ್ರತೆ ನೀಡಲ್ಲ..!
ಟಚ್ ಐಡಿ ಮತ್ತು ಫೇಸ್ ಐಡಿಗಳು ನಿಜಕ್ಕೂ ಗ್ರೇಟ್. ನಾವದನ್ನು ಇಷ್ಟ ಪಡುತ್ತೇವೆ ಮತ್ತು ಅದನ್ನು ಬಹಳವಾಗಿ ಬಳಸುತ್ತೇವೆ. ಅವುಗಳು ಕೇವಲ ಕೆಲಸವನ್ನು ಸರಳಗೊಳಿಸುವ ವೈಶಿಷ್ಟ್ಯತೆ ಅಷ್ಟೇ. ಭದ್ರತಾ ವೈಶಿಷ್ಟ್ಯತೆಗಳಲ್ಲ ಮತ್ತು ಯುಸ್ ನಲ್ಲಿ ಅವುಗಳನ್ನು ಬಳಸುವಾಗ ಕಾನೂನಾತ್ಮಕ ರಕ್ಷಣೆಯನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ. ಯಾವಾಗ ಅಗತ್ಯ ಬೀಳುತ್ತೋ ಆಗ ತಾತ್ಕಾಲಿಕವಾಗಿ ಅದನ್ನು ಡಿಸೇಬಲ್ ಕೂಡ ಮಾಡಬೇಕಾಗುತ್ತದೆ.

ಇದು ಆಂಡ್ರಾಯ್ಡ್ ಫೋನ್ ಗಳಲ್ಲಿರುವ ಫಿಂಗರ್ ಪ್ರಿಂಟ್ ಸೆನ್ಸರ್, ಐರಿಸ್ ಸ್ಕ್ಯಾನ್ ಅಥವಾ ಬಯೋಮೆಟ್ರಿಕ್ ಫೀಚರ್ ಗಳಿಗೂ ಕೂಡ ಅನ್ವಯಿಸುತ್ತದೆ.

ಗಡಿಯಲ್ಲಿ ಸಮಸ್ಯೆಯೊಡ್ಡುವ ಫೇಸ್ ಐಡಿಗಳು !
ಫೇಸ್ ಐಡಿ ಮೂಲಕ ನಾಲ್ಕ ರಿಂದ ಐದು ಫೂಟ್ ದೂರದಲ್ಲಿದ್ದೂ ಕೂಡ ನಿಮ್ಮ ಫೋನ್ ನ್ನು ಅನ್ ಲಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಉದಾಹರಣೆಗೆ ಒಂದು ಟೇಬಲ್ ನ ಆಚೆಗೆ ಒಬ್ಬ ವ್ಯಕ್ತಿ ನಿಮ್ಮ ಫೋನ್ ನ್ನು ಹಿಡಿದು ನಿಂತಾಗ ನಿಮ್ಮ ಫೋನಿನ ಎಡೆಗೆ ನೀವು ನೋಡಿದರೆ ಆ ಫೋನ್ ಅನ್ ಲಾಕ್ ಆಗುತ್ತದೆ ಮತ್ತು ಫೋನ್ ಹಿಡಿದುಕೊಂಡಿರುವ ವ್ಯಕ್ತಿ ನಿಮ್ಮ ಫೋನ್ ನ್ನು ಆಕ್ಸಿಸ್ ಮಾಡಲು ಅವಕಾಶವಿರುತ್ತದೆ. ಇದು ದೇಶದ ಬಾರ್ಡರ್ ನಲ್ಲಿ ಹೆಚ್ಚು ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ಅಭಿಪ್ರಯಿಸಲಾಗಿದೆ.
ಆರ್ಸ್ ಟೆಕ್ನಿಕಾ ಪಾಯಿಂಟ್ ಮಾಡಿರುವಂತೆ, ಈ ವಿಧಾನವು ಬಾರ್ಡರ್ ಗಾರ್ಡ್ ಗಳಿಗೆ ನಿಮ್ಮ ಫೋನ್ ನ್ನು ಫೇಸ್ ಐಡಿ ಮೂಲಕ ಅನ್ ಲಾಕ್ ಮಾಡಿ ಫೋನಿನ ಒಳಗಿರುವ ಕಟೆಂಟ್ ಗಳನ್ನು ನೋಡಲು ಬಹಳ ಸುಲಭವಾಗುತ್ತದೆ. ನಿಮ್ಮ ಬಳಿ ಫೋನ್ ಅನ್ ಲಾಕ್ ಮಾಡುವಂತೆ ಬಾರ್ಡರ್ ಗಾರ್ಡ್ ಗಳು ಕೇಳುವ ಅಗತ್ಯತೆಯೇ ಬೀಳುವುದಿಲ್ಲ. ಕೂಡಲೇ ಆಕ್ಸಿಸ್ ಮಾಡಿಕೊಳ್ಳಬಹುದಾಗಿರುತ್ತದೆ. ಹುಡುಕಾಟ ಮತ್ತು ಗ್ರಹಿಸುವಿಕೆಗೆ ಸಂಬಂಧಿಸಿದ ಹಲವು ವಿಶೇಷ ಭದ್ರತೆಯನ್ನು ಯುಎಸ್ ಗಡಿಯಲ್ಲಿ ಮಾಡಲಾಗುತ್ತದೆ.
ಅಂತರಾಷ್ಟ್ರೀಯವಾಗಿ ಯಾರು ಹೆಚ್ಚು ಸಂಚರಿಸುತ್ತಿರುತ್ತಾರೋ ಅಂತವರು ಇತರೆ ದೇಶಕ್ಕೆ ಹೋದಾಗ ಅಲ್ಲಿನ ಬಾರ್ಡರ್ ನಲ್ಲಿ ಇಂತಹ ಸೆಕ್ಯುರಿಟಿಗಳಿದ್ದಲ್ಲಿ ಆಗ ಅದು ಗಡಿ ಸಮಸ್ಯೆಗೆ ಕಾರಣವಾಗುತ್ತದೆ. ನಿಮ್ಮ ಫೋನ್ ನಲ್ಲಿರುವ ಎಲ್ಲಾ ವಯಕ್ತಿಕ ಮಾಹಿತಿಗಳನ್ನು ಗಡಿಯ ಅಧಿಕಾರಿಗಳು ನೋಡುವುದು ಎಷ್ಟು ಸರಿ ಮತ್ತು ಇದಕ್ಕೆ ಅವರವರ ದೇಶಗಳಲ್ಲಿ ಹೇಗೆ ಬೆಂಬಲವಿದೆ, ಎರಡೂ ದೇಶಗಳ ನಡುವಿನ ಸಂಬಂಧಕ್ಕೆ ಇದು ಗೊಂದಲ ಸೃಷ್ಟಿಮಾಡಬಹುದು ಎಂಬ ಅಭಿಪ್ರಾಯವನ್ನು ಆರ್ಸ್ ಟೆಕ್ನಿಕಾ ಹೇಳುತ್ತದೆ.

ಪಿನ್ ಗಳೇ ಹೆಚ್ಚು ಕಾನೂನಾತ್ಮಕ ರಕ್ಷಣೆಯನ್ನು ನೀಡುತ್ತದೆ: ಯುಎಸ್ ನ್ಯಾಯಾಲಯದ ಹೇಳಿಕೆ
ಯುಎಸ್ಎ ನಲ್ಲಿ ಟಚ್ ಐಡಿ ಮತ್ತು ಫೇಸ್ ಐಡಿಯ ಪರಿಸ್ಥಿತಿಯು ನೀವು ನಿರೀಕ್ಷಿಸಿರುವುದಕ್ಕಿಂತ ಭಾರೀ ವಿಭಿನ್ನವಾಗಿದೆ. ಯುಸ್ ನ್ಯಾಯಾಲಯವು ಫಿಂಗರ್ ಪ್ರಿಂಟ್ ಅಥವಾ ಫೇಸ್ ಅನ್ ಲಾಕ್ ನ್ನು ನಿಮ್ಮ ಫೋನ್ ನಲ್ಲಿ ಬಳಸಲು ಅನುಮತಿಸುತ್ತದೆ. ಆದರೆ ಪಾಸ್ ಕೋಡ್, ಪಿನ್ ಕೋಡ್ ಅಥವಾ ಪಾಸ್ ವರ್ಡ್ ಬಳಸಿ ಫೋನ್ ಅನ್ ಲಾಕ್ ಮಾಡುವಿರಾದ್ದಲ್ಲಿ ಅದಕ್ಕಾಗಿ ಕಾನೂನು ಬದ್ಧವಾಗಿ ಯಾವುದೇ ನಿರ್ಭಂಧನೆಗಳಿರುವುದಿಲ್ಲ.
ಯುಸ್ ನ್ಯಾಯಾಲಯದ ಐದನೇ ತಿದ್ದುಪಡಿಯ ಪ್ರಕಾರ ಒಂದು ವೇಳೆ ಒತ್ತಾಯಪೂರ್ವಕವಾಗಿ ನಿಮ್ಮ ಫೋನ್ ನ್ನು ಅನ್ ಲಾಕ್ ಮಾಡುವ ಸಂದರ್ಬದಲ್ಲಿ ಪಿನ್ ಬಳಸುವಂತಾಗಿದ್ದಲ್ಲಿ ಆಗ ನಿಮಗೆ ನ್ಯಾಯಾಲಯದಿಂದ ಬೆಂಬಲ ಸಿಗುತ್ತದೆ. ಆದರೆ ಈ ಬೆಂಬಲವು ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿ ಅಥವಾ ಬಯೋಮೆಟ್ರಿಕ್ ಡಾಟಾಗಳಲ್ಲಿ ಲಭ್ಯವಾಗುವುದಿಲ್ಲ.ಅಂದರೆ ಯುಎಸ್ ನ ನ್ಯಾಯಾಲಯದ ಐದನೇ ತಿದ್ದುಪಡಿಯು ನಿಮ್ಮನ್ನು ಫೋನಿನ ಪಿನ್ ನೀಡುವಂತೆ ಒತ್ತಾಯಿಸಿದ ಸಂದರ್ಬದಲ್ಲಿ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ ಆದರೆ ಬಯೋಮೆಟ್ರಿಕ್ ಗಳನ್ನು ದೈಹಿಕ ಸಾಕ್ಷಿಗಳು ಎಂದು ಪರಿಗಣಿಸುತ್ತದೆ. ಅಂದರೆ ಫಿಂಗರ್ ಪ್ರಿಂಟ್ ಗಳನ್ನು ಪ್ರಶಂಸಾತ್ಮಕ ಸಂವಹನ ಎಂದು ಕೋರ್ಟ್ ಪರಿಗಣಿಸುವುದಿಲ್ಲ ಆದರೆ ಪಿನ್ ಗಳನ್ನು ಹಾಗೆ ಪರಿಗಣಿಸುತ್ತದೆ.

ನಿಮ್ಮ ಪಿನ್ ನಂಬರ್ ಗಿಂತ ಸುಲಭದಲ್ಲಿ ನಿಮ್ಮ ಬೆರಳು ಮತ್ತು ಮುಖ ಗುರುತಿಸುವಿಕೆ ಸುಲಭ
ಇದು ಕೇವಲ ಸರ್ಕಾರದೊಂದಿನ ಕಾನೂನು ಸಮಸ್ಯೆಗಳಿಗೆ ಮಾತ್ರವಲ್ಲ. ಇತರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಈ ಕೆಳಗೆ ಎರಡು ಕೆಟ್ಟ ಸನ್ನಿವೇಶಗಳು ಇದರಿಂದ ಸೃಷ್ಟಿಯಾದ ಉದಾಹರಣೆಗಳನ್ನು ನೀಡಲಾಗಿದೆ.
1. ಒಂದು ಮಗು ತನ್ನ ಪೋಷಕರ ಮೊಬೈಲ್ ನ್ನು ಅವರು ಮಲಗಿದ್ದಾಗ ತೆಗೆದು ಫೇಸ್ ಐಡಿ ಬಳಸಿ ಅನ್ ಲಾಕ್ ಮಾಡಿದೆ ಮತ್ತು 250 ಡಾಲರ್ ಬೆಲೆಬಾಳುವ ಪೋಕ್ಮಾನ್ ಮರ್ಸೀಡೀಸ್ ನ್ನು ಪೋಷಕರ ಮೊಬೈಲ್ ನಿಂದ ಖರೀದಿ ಮಾಡಿದೆ.
2. ಯಾರೋ ಒಬ್ಬ ವ್ಯಕ್ತಿ ಜನಸಂದಣಿಯಲ್ಲಿ ನಿಮ್ಮ ಫೋನ್ ನ್ನು ಕದ್ದಿದ್ದಾನೆ ಮತ್ತು ಯಾರೆಂದು ತಿಳಿಯದೆ ನೀವು ಆತನೆಡೆಗೆ ನೋಡಿ ಬಿಟ್ಟಿದ್ದೀರಿ. ಆತ ಫೋನ್ ಅನ್ ಲಾಕ್ ಮಾಡಿಕೊಂಡು ಮಾಡಬೇಕಾದ ಕೆಲಸವನ್ನು ಮುಗಿಸಿ ಬಿಡುತ್ತಾನೆ.

ಕಠಿಣ ಪಾಸ್ ವರ್ಡ್ ಗಳೂ ಕೂಡ ನೆರವಿಗೆ ಬಾರದು!
ಒಂದು ಸಂಶೋಧನೆಯ ಪ್ರಕಾರ ಕಠಿಣ ಪಾಸ್ ಕೋಡ್ ಗಳೂ ಕೂಡ ಕೆಲವೊಮ್ಮೆ ಭದ್ರತೆಯನ್ನು ನೀಡಲಾರವು. ಅಮೇರಿಕಾದವರು ಸರಾಸರಿ ದಿನಕ್ಕೆ 80 ಬಾರಿ ತಮ್ಮ ಫೋನ್ ನ್ನು ಚೆಕ್ ಮಾಡುತ್ತಾರೆ. ನಿಮ್ಮ ಫೋನ್ ನ್ನು ಅತೀ ಹೆಚ್ಚು ಬಾರಿ ಪಿನ್ ಬಳಸಿ ಅನ್ ಲಾಕ್ ಮಾಡುತ್ತಲೇ ಇದ್ದಲ್ಲಿ ಖಂಡಿತ ಸಾರ್ವಜನಿಕವಾಗಿಯೂ ಅದನ್ನು ಮಾಡುತ್ತಿರುತ್ತೀರಿ. ಅಷ್ಟೇ ಅಲ್ಲದೆ ಅದನ್ನೂ ಯಾರೂ ನೋಡಿರುವುದಿಲ್ಲ ಎಂದು ಹೇಗೆ ಖಾತ್ರಿ ಮಾಡಿಕೊಳ್ಳುತ್ತೀರಿ? ನಿಮ್ಮ ಸ್ನೇಹಿತನೇ ನಿಮ್ಮ ಹೆಗಲ ಮೇಲೆ ಕೈ ಹಾಕಿ ಕೆಲವು ಕ್ಷಣ ಕಳೆದರೆ ಖಂಡಿತ ನಿಮ್ಮ ಕಠಿಣ ಪಾಸ್ ಕೋಡ್ ಕೂಡ ಆತನಿಗೆ ತಿಳಿದು ಬಿಡುತ್ತದೆ. ಅದಕ್ಕಾಗಿ ಪಾಸ್ ಕೋಡ್ ಕೂಡ ನಿಮಗೆ ಭದ್ರತೆಯನ್ನು ನೀಡುವುದಿಲ್ಲ ಎಂಬುದು ಕೆಲವರ ಅಭಿಪ್ರಾಯ.

ನಿಮ್ಮನ್ನ ನೀವು ರಕ್ಷಿಸಿಕೊಳ್ಳುವುದು ಹೇಗೆ?
ಹಾಗಂದ ಮಾತ್ರಕ್ಕೆ ನೀವು ಟಚ್ ಐಡಿ ಮತ್ತು ಫೇಸ್ ಐಡಿಯನ್ನು ಡಿಸೇಬಲ್ ಮಾಡಿ ಇಡಬೇಕು ಎಂದರ್ಥವಲ್ಲ. ಇವುಗಳು ಆರಾಮದಾಯಕವಾಗಿ ಬಳಸಬಹುದಾಗಿರುವ ವೈಶಿಷ್ಟ್ಯತೆಗಳು. ಖಂಡಿತ ಇವು ಸಹಾಯ ಮಾಡುತ್ತದೆ. ಆದರೆ ಯುಎಸ್ ನ ಐದನೆ ತಿದ್ದುಪಡಿಯ ಬಗ್ಗೆ ಗಮನವಿರಲಿ.
ತಾತ್ಕಾಲಿಕವಾಗಿ ಡಿಸೇಬಲ್ ಮಾಡಿ ಇಡುವ ಅವಕಾಶಗಳೂ ಇದೆ. ಒಂದು ವೇಳೆ ನೀವು ಅಂತರಾಷ್ಟ್ರೀಯವಾಗಿ ಸಂಚಾರ ಮಾಡುತ್ತಿರುವಾಗ ತಾತ್ಕಾಲಿಕವಾಗಿ ಡಿಸೇಬಲ್ ಮಾಡಿ ಇಡಬಹುದು. ಅದಕ್ಕಾಗಿ ಕೆಲವು ವಿಧಾನಗಳಿವೆ.

ಎರ್ಮರ್ಜೆನ್ಸಿ SOS ಮೋಡ್ (ಐಫೋನ್):
ಐಫೋನ್ 8 ಮತ್ತು ಅದಕ್ಕಿಂತ ಮೇಲಿನದ್ದರಲ್ಲಿ ಸೈಡ್ ಬಟನ್ ನ್ನು ಮತ್ತು ವಾಲ್ಯೂಮ್ ಬಟನ್ ನ್ನು ಪ್ರೆಸ್ ಮಾಡಿ ಮತ್ತು ಹೋಲ್ಡ್ ಮಾಡಿ. ಐಫೋನ್ 7 ಮತ್ತು ಅದಕ್ಕಿಂತ ಮುಂಚಿನದ್ದರಲ್ಲಿ ಐದು ಬಾರಿ ಪವರ್ ಬಟನ್ ನ್ನು ಪದೇ ಪದೇ ಪ್ರೆಸ್ ಮಾಡಿ. "Emergency SOS" ಎಂಬ ಟೆಕ್ಸ್ಟ್ ನಿಮ್ಮ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತದೆ.ಆ ಮೂಲಕ ನೀವು ಎಮರ್ಜೆನ್ಸಿ ಕಾಲ್ ಮಾಡಬಹುದು. ಟಚ್ ಐಜಿ ಮತ್ತು ಫೇಸ್ ಐಡಿಯನ್ನು ಕೂಡ ತಾತ್ಕಾಲಿಕವಾಗಿ ಡಿಸೇಬಲ್ ಮಾಡಬಹುದು. ಫೋನ್ ನ್ನು ಅನ್ ಲಾಕ್ ಮಾಡಲು ನೀವು ಮತ್ತೆ ಪಿನ್ ನ್ನು ಎಂಟರ್ ಮಾಡಬೇಕಾಗುತ್ತದೆ.

ಲಾಕ್ ಡೌನ್ ಮೋಡ್ (ಆಂಡ್ರಾಯ್ಡ್ ):
ಆಂಡ್ರಾಯ್ಡ್ ಪಿ ಬಳಸುತ್ತಿದ್ದರೆ ಇದನ್ನು ನೀವು "Show lockdown option" ನ್ನು ಸೆಟ್ಟಿಂಗ್ಸ್ ನಲ್ಲಿ ಅನೇಬಲ್ ಮಾಡುವ ಮೂಲಕ ಸಾಧಿಸಬಹುದು. ಇದು ನಿಮಗೆ ಲಾಕ್ ಡೌನ್ ಶಾರ್ಟ್ ಕಟ್ ಒಂದನ್ನು ನೀಡುತ್ತದೆ. ನಿಮ್ಮ ಲಾಕ್ ಸ್ಕ್ರೀನ್ ನ್ನು ಆ ಮೂಲಕ ಅನ್ ಲಾಕ್ ಮಾಡಬಹುದು. ಇದನ್ನು ಆಕ್ಟಿವೇಟ್ ಮಾಡಿಕೊಂಡರೆ ನಿಮ್ಮ ಫಿಂಗರ್ ಪ್ರಿಂಟ್ ಮತ್ತು ಸ್ಮಾರ್ಟ್ ಲಾಕ್ ವೈಶಿಷ್ಟ್ಯತೆಗಳು ನೀವು ಪಿನ್ ಬಳಸಿ ಫೋನ್ ಅನ್ ಲಾಕ್ ಮಾಡುವವರೆಗೆ ಡಿಸೇಬಲ್ ಆಗಿರುತ್ತದೆ.

ನಿಮ್ಮ ಫೋನ್ ನ್ನು ಪವರ್ ಆಫ್ ಮಾಡುವುದು :
ನಿಮ್ಮ ಫೋನ್ ನ್ನು ಸ್ವಿಚ್ ಆಫ್ ಮಾಡಬಹುದು. ನೀವು ಮತ್ತೆ ಪವರ್ ಆನ್ ಮಾಡಿದಾಗ ಪಿನ್ ಮತ್ತು ಪಾಸ್ ವರ್ಡ್ ಗಳನ್ನು ಬಳಸಿ ಅನ್ ಲಾಕ್ ಮಾಡಬಹುದು. ಅಂತರಾಷ್ಟ್ರೀಯ ಗಡಿಗಳಲ್ಲಿ ಸಂಚರಿಸುವಾಗ ಹೀಗೆ ಮಾಡಿಕೊಂಡರೆ ಇದು ಟಚ್ ಐಡಿ, ಫೇಸ್ ಐಡಿ ಬಳಸಿ ಸಡನ್ ಆಗಿ ಅನ್ ಲಾಕ್ ಆಗುವುದಿಲ್ಲ. ಸ್ವಿಚ್ ಆನ್ ಮಾಡಿ ನೀವು ಫೋನ್ ನ್ನು ಆನ್ ಮಾಡಿಕೊಟ್ಟ ನಂತರವೇ ಅನ್ ಲಾಕ್ ಆಗುತ್ತದೆ.

ತೊಂದರೆಗಳನ್ನು ತಿಳಿದುಕೊಳ್ಳಿ:
ಹೆಚ್ಚಿನ ಜನರು ಫೇಸ್ ಐಡಿ ಮತ್ತು ಟಚ್ ಐಡಿಗಳನ್ನು ಬಳಸುತ್ತಾರೆ. ಆದರೆ ಅದರ ರಿಸ್ಕ್ ಗಳನ್ನು ಅರಿತಿರುವುದೇ ಇಲ್ಲ. ನಿಮಗೂ ಕೂಡ ಫೇಸ್ ಐಡಿ ಮತ್ತು ಟಚ್ ಐಡಿಗಳು ತೊಂದರೆದಾಯಕ ಎಂದು ಭಾಸವಾಗಿದ್ದರೆ ಕೂಡಲೇ ಡಿಸೇಬಲ್ ಮಾಡಿಕೊಳ್ಳಿ ಮತ್ತು ಪಿನ್ ನಂಬರ್ ನ್ನು ತಾತ್ಕಾಲಿಕವಾಗಿ ಬಳಕೆ ಮಾಡುವುದೇ ಸೂಕ್ತ.


Click it and Unblock the Notifications








