Subscribe to Gizbot

ಪವರ್‌ಫುಲ್ ಧಮಾಕ ಓನ್ ಪ್ಲಸ್ 5 ಬಿಡುಗಡೆಗೆ ಕ್ಷಣಗಣನೆ: ಮಾರುಕಟ್ಟೆಯಲ್ಲಿ ಶುರುವಾಗಿದೆ ತಲ್ಲಣ

Written By:

ಭಾರೀ ಕುತೂಹಲವನ್ನು ಕೆರಳಿಸಿರುವ ಓನ್ ಪ್ಲಸ್ ನಿರ್ಮಾಣದ ಮುಂದಿನ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಓನ್ ಪ್ಲಸ್ 5 ಇನ್ನು ಎರಡು ದಿನದಲ್ಲಿ ಲಾಂಚ್ ಆಗಲಿದ್ದು, ಈಗಾಗಲೇ ಈ ಕುರಿತು ಸಾಕಷ್ಟು ರೂಮರ್ ಗಳು ಹುಟ್ಟಿಕೊಂಡಿದೆ, ಓನ್ ಪ್ಲಸ್ ಅಭಿಮಾನಿಗಳು ಈ ಫೋನ್ ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಬಿಡುಗಡೆಗೂ ಮುನ್ನವೇ ಸ್ಪರ್ಧೆ ನೀಡಲು ಮುಂದಾಗಿರುವ ಓನ್‌ಪ್ಲಸ್ 5 'ಕಿಲ್ಲರ್ ಫಾಗ್ ಶಿಪ್' ಎನ್ನುವ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಜೂನ್ 2೦ ರಂದು ಜಾಗತಿಕವಾಗಿ ಮಾರುಕಟ್ಟೆಗೆ ಲಗ್ಗೆ ಇಡುವ ಓನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಭಾರತದಲ್ಲಿ ಜೂನ್ 22 ರಂದು ಕಾಣಿಸಿಕೊಳ್ಳಲಿದೆ. ಈಗಾಗಲೇ ಈ ಫೋನಿನ ಬೆಲೆ ಹಾಗೂ ವಿಶೇಷತೆಗಳ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿದೆ.

ಪವರ್‌ಫುಲ್ ಧಮಾಕ ಓನ್ ಪ್ಲಸ್ 5 ಬಿಡುಗಡೆಗೆ ಕ್ಷಣಗಣನೆ: ಮಾರುಕಟ್ಟೆಯಲ್ಲಿ ತಲ್ಲಣ

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಓನ್ ಪ್ಲಸ್ 5 ಮಾಡಿದಷ್ಟು ಸದ್ದು ಬೇರೆ ಯಾವುದೇ ಸ್ಮಾರ್ಟ್‌ಫೋನ್‌ಗಳು ಮಾಡಿಲ್ಲ ಎನ್ನಲಾಗಿದ್ದು, ಈ ಫೋನಿನ ಕುರಿತು ಹಬ್ಬಿದ ರೂಮರ್ ಗಳು ಇನ್ಯಾವುದೇ ಸ್ಮಾರ್ಟ್‌ಫೋನಿನ ಕುರಿತು ಹರಡಿರಲಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಪವರ್ ಫುಲ್ ಧಮಾಕ ಓನ್ ಪ್ಲಸ್ 5:

ಇನ್ನೇರಡು ದಿನದಲ್ಲಿ ಮಾರುಕಟ್ಟೆಗೆ ಬರಲಿರುವ ಓನ್ ಪ್ಲಸ್ 5 ಸ್ಮಾರ್ಟ್‌ಪೋನ್ ಪವರ್ ಫುಲ್ ಧಮಾಕ ಎನ್ನಲಾಗಿದೆ. ಈ ಟಾಪ್ ಎಂಡ್ ಸ್ಮಾರ್ಟ್‌ಫೋನಿನಲ್ಲಿ ಪವರ್ ಫುಲ್ ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಚಿಪ್ ಸೆಟ್ ಕಾಣಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ವೇಗದ ಪ್ರೋಸೆಸರ್ ಆಗಿದೆ. ಇದು ಫೋನಿನ ವೇಗವನ್ನು ಹೆಚ್ಚಿಸಲಿದ್ದು, ಟಾಸ್ಕ್ ಗಳನ್ನು ವೇಗವಾಗಿ ನಿರ್ವಹಿಸಲಿದೆ. ಈ ಕುರಿತು ಟ್ವಿಟರ್ ನಲ್ಲಿ ಓನ್ ಪ್ಲಸ್ ಮಾಹಿತಿಯನ್ನು ಹೊರಹಾಕಿದೆ.

8GB RAM/128GB ROM ಇದರಲ್ಲಿದೆ:

8GB RAM/128GB ROM ಇದರಲ್ಲಿದೆ:

ಓನ್ ಪ್ಲಸ್ 5 ಸ್ಮಾರ್ಟ್‌ಫೋನಿನಲ್ಲಿ 8GB RAM ಕಾಣಬಹುದಾಗಿದೆ. ಇದು ಈ ಫೋನಿನ ವೇಗವನ್ನು ಹೆಚ್ಚಿಸಲು ಸಹಾಯಕಾರಿಯಾಗಲಿದೆ. ಇದರೊಂದಿಗೆ ಈ ಫೋನಿನಲ್ಲಿ 128GB ಯೂನಿವರ್ಸಲ್ ಫ್ಲಾಷ್ ಸ್ಟೋರೆಜ್ ಕಾಣಬಹುದಾಗಿದ್ದು, ಟಾಪ್ ಎಂಡ್ ಫೋನಿನಲ್ಲಿ ಈ ಯೂನಿವರ್ಸಲ್ ಫ್ಲಾಷ್ ಸ್ಟೋರೆಜ್ ಹೊಂದಿರುವ ಮೊದಲ ಫೋನ್ ಓನ್ ಪ್ಲಸ್ 5 ಆಗಿದೆ. ಇದೇ ಈ ಫೋನಿನ ಹೈಲೆಟ್ ಗಳಲ್ಲಿ ಒಂದಾಗಲಿದೆ. ಇದರೊಂದಿಗೆ ಈ ಫೋನಿನಲ್ಲಿ ಉತ್ತಮವಾದ ಹಾರ್ಡ್‌ವೆರ್ ಅನ್ನು ಕಾಣಬಹುದಾಗಿದೆ.

ಸುಗಮವಾಗಿ ಕಾರ್ಯನಿರ್ವಹಿಸಲಿದೆ:

ಓನ್ ಪ್ಲಸ್ 5 ಸ್ಮಾರ್ಟ್‌ಫೋನಿನಲ್ಲಿ ಆಕ್ಸಿಜನ್ ಓಎಸ್ ಕಾಣಬಹುದಾಗಿದೆ. ಇದು ಈ ಫೋನ ಕಾರ್ಯಚರಣೆಯನ್ನು ಸುಗಮಗೊಳಿಸಲಿದ್ದು, ಫೋನ್ ಸರಳವಾಗಿ, ಸೌಮ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಇದು ಸಹಾಯಕಾರಿಯಾಗಲಿದೆ.

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:

ಇದಲ್ಲದೇ ಓನ್ ಪ್ಲಸ್ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಈ ಕುರಿತು ಓನ್ ಪ್ಲಸ್ ಆಫಿಷಿಯಲ್ ಟ್ವೀಟರ್ ನಲ್ಲಿ ಚಿತ್ರವೊಂದನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಓನ್ ಪ್ಲಸ್ 5 ಫೋನಿನಲ್ಲಿ ತೆಗದ ಚಿತ್ರವೊಂದನ್ನು ಹಾಕಲಾಗಿದ್ದು, ಕ್ವಾಲಿಟಿಯ ಬಗ್ಗೆ ತಿಳಿಸಲಾಗಿದೆ.

ಇದರಲ್ಲಿ 16 MP ಕ್ಯಾಮರಾವನ್ನು ಕಾಣಬಹುದಾಗಿದೆ ಎನ್ನಲಾಗಿದೆ. ಇದಕ್ಕಾಗಿಯೇ ಈ ಪೋನಿನಲ್ಲಿ DxO ಲೈನ್ಸ್ ಗಳನ್ನು ಅಳವಡಿಲಾಗಿದ್ದು, ಇದು ಕ್ಯಾಮೆರಾ ಕ್ವಾಲಿಟಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗುವುದಿಲ್ಲ. ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ.

ಅಮೆಜಾನ್ ನಲ್ಲಿ ಮಾತ್ರವೇ ಲಭ್ಯ:

ಅಮೆಜಾನ್ ನಲ್ಲಿ ಮಾತ್ರವೇ ಲಭ್ಯ:

ಓನ್ ಪ್ಲಸ್ 5 ಸ್ಮಾರ್ಟ್‌ಫೋನ್ ಜೂನ್ 20 ರಂದು ಗ್ಲೋಬಲ್ ಆಗಿ ಲಾಂಚ್ ಆಗಲಿದ್ದು, ಜೂನ್ 22 ರಂದು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದಲ್ಲಿ ಈ ಫೋನ್ ಅನ್ನು ಲಾಂಚ್ ಮಾಡಲಿದೆ. ಅಂದೇ ಅಮೆಜಾನ್‌ನಲ್ಲಿ ಈ ಫೋನ್ ಏಕ್ಸ್ ಕ್ಲೂಸಿವ್ ಆಗಿ ಮಾರಾಟವಾಗಲಿದೆ ಎನ್ನಲಾಗಿದೆ. ಇದರೊಂದಿಗೆ ಓನ್ ಪ್ಲಸ್ ಅಧಿಕೃತ ಸ್ಟೋರ್‌ಗಳಲ್ಲಿಯೂ ಈ ಓನ್ ಪ್ಲಸ್ 5 ಮಾರಾಟವಾಗಲಿದೆ.

ಬೇರೆ ನಗರಗಳಲ್ಲೂ ಕಾರ್ಯಕ್ರಮ:

ಬೇರೆ ನಗರಗಳಲ್ಲೂ ಕಾರ್ಯಕ್ರಮ:

ಓನ್ ಪ್ಲಸ್ 5 ಪ್ರಮುಖ ನಗರಗಳಲ್ಲಿ ಸ್ಟೋರ್ ಏಕ್ಸ್‌ಪಿರಿಯನ್ಸ್ ನೀಡಲಿದ್ದು, ಜೂನ್ 24 ರಂದು ಬೆಂಗಳೂರಿನಲ್ಲಿ. ಜೂನ್ 23 ರಂದು ದೆಹಲಿಯಲ್ಲಿ, ಚೆನ್ನೈನಲ್ಲಿ ಜೂನ್ 24 ರಂದು ಹಾಗೆಯೇ ಜೂನ್ 25 ರಂದು ಹೈದ್ರಾಬಾದ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೇರೆ ಕಂಪನಿಗಳಿಗೆ ಶುರುವಾಗಿ ನಡುಕ:

ಬೇರೆ ಕಂಪನಿಗಳಿಗೆ ಶುರುವಾಗಿ ನಡುಕ:

ಈಗಾಗಲೇ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವ ಕಂಪನಿಗಳಿಗೆ ನಡುಕ ಶುರುವಾಗಿದೆ. ಸ್ಯಾಮ್ ಸಂಗ್ ಗ್ಯಾಲೆಕ್ಸಿ 8, ಶಿಯೋಮಿ ಮಿ 6, ಆಪಲ್ ಐಪೋನ್ 7 ಗಳಿಗೆ ಓನ್ ಪ್ಲಸ್ 5 ಭರ್ಜರಿ ಸ್ಪರ್ಧೆಯನ್ನು ನೀಡುವುದು ಎನ್ನಲಾಗಿದೆ. ಇದಕ್ಕಾಗಿ ಈ ಫೋನಿಗೆ ನೇವರ್ ಸೆಟಲ್ ಎಂಬ ಟ್ಯಾಗ್ ಲೈನ್ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
With just three more days left for the launch of the OnePlus 5 in India, here what we expect from the device. t0 know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot