Home
ಮೊಬೈಲ್

ಭಾರತಕ್ಕೆ ಮತ್ತೊಂದು ಚೀನಾ ಮೊಬೈಲ್ ಕಂಪೆನಿ ಎಂಟ್ರಿ?!..ಶಿಯೋಮಿ, ಒನ್‌ಪ್ಲಸ್‌ಗೆ ಭಯ!!

By Bhaskar N J

ಬಹುತೇಕ ನೀವು ಹೆಸರೇ ಕೇಳಿಲ್ಲದ ಚೀನಾದ 'ಯುಲೆಫೊನ್' ಎಂಬ ಕಂಪೆನಿಯೊಂದು ಮೊಬೈಲ್ ಜಗತ್ತಿಗೆ ಶಾಕ್ ನೀಡುವಂತಹ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿದ್ದ ಸುದ್ದಿ ನಿಮಗೆಲ್ಲಾ ತಿಳಿದಿರಬಹುದು. ಚೀನಾದಲ್ಲಿ ಶಿಯೋಮಿ ಮತ್ತು ಒನ್‌ಪ್ಲಸ್‌ನಂತಹ ಕಂಪೆನಿಗೆ ಸೆಡ್ಡು ಹೊಡೆದು ನಿಂತಿದ್ದ 'ಯುಲೆಫೊನ್' ಕಂಪೆನಿ ಇದೀಗ ಭಾರತಕ್ಕೆ ಕಾಲಿಡುತ್ತಿದೆ.

ಹೌದು, ಅತ್ಯಂತ ಕಡಿಮೆ ಬೆಲೆಯಲ್ಲಿ ಶಿಯೋಮಿ, ಒನ್‌ಪ್ಲಸ್‌ನಂತಹ ಚೀನಾದ ಕಂಪೆನಿಗಳಿಗೆ ಸೆಡ್ಡು ಹೊಡೆದಿದ್ದ 'ಯುಲೆಫೊನ್' ಇದೀಗ ಭಾರತಕ್ಕೆ ಎಂಟ್ರಿ ನೀಡುತ್ತಿದೆ ಎನ್ನುವ ರೂಮರ್ಸ್ ಹರಿದಾಡಿದೆ. ಇತರೆ ಚೀನಾ ಕಂಪೆನಿಗಳಂತೆ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಭಾರತದ ಒಂದು ಕಂಪೆನಿ ಜೊತೆಗೆ ಪಾಲುದಾರಿಕೆಯನ್ನು ಹೊಂದುತ್ತಿದೆ ಎನ್ನಲಾಗಿದೆ.

ಭಾರತಕ್ಕೆ ಮತ್ತೊಂದು ಚೀನಾ ಮೊಬೈಲ್ ಕಂಪೆನಿ ಎಂಟ್ರಿ?!..ಶಿಯೋಮಿ, ಒನ್‌ಪ್ಲಸ್‌ಗೆ ಭಯ

6080mAh ಬ್ಯಾಟರಿ, 6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹಾಗೂ 4 ಕ್ಯಾಮೆರಾಗಳಂತಹ ಎಲ್ಲಾ ಹೈ ಎಂಡ್ ಫೀಚರ್‌ಗಳನ್ನು ಹೊತ್ತಿದ್ದ 'ಯುಲೆಫೊನ್ ಪವರ್ 3 ಎಸ್' ಎಂಬ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಯುಲೆಫೊನ್ ಮೊಬೈಲ್ ಜಗತ್ತನೇ ಅಚ್ಚರಿಗೊಳಿಸಿತ್ತು. ಇದೆ ಸುದ್ದಿಯ ಜೊತೆಗೆ ಮತ್ತೊಮ್ಮೆ ಈ ಫೋನಿನ ಫೀಚರ್ಸ್ ಅನ್ನು ಮುಂದೆ ತಿಳಿಯಿರಿ.

6080mAh ಬಿಗ್ ಬ್ಯಾಟರಿ!

6080mAh ಬಿಗ್ ಬ್ಯಾಟರಿ!

ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಯಾವ ಮೊಬೈಲ್ ಹೊಂದಿರದ ಬ್ಯಾಟರಿ ಶಕ್ತಿಯನ್ನು ಹೊತ್ತು "ಯುಲೆಫೊನ್ ಪವರ್ 3ಎಸ್" ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಇಷ್ಟು ದೊಡ್ಡ ಬ್ಯಾಟರಿ 5V/3A ಫಾಸ್ಟ್ ಚಾರ್ಜಗಿಂಗ್ ಮೂಲಕ ಕೇವಲ 120 ನಿಮಿಷಕ್ಕೆ ಪೂರ್ತಿ ಚಾರ್ಜ್ ಆಗಲಿದೆ ಎಂದು ಕಂಪೆನಿ ತಿಳಿಸಿದ್ದು, ಸ್ಮಾರ್ಟ್‌ಫೋನ್ 4 ದಿನಗಳಿಗಿಂತ ಹೆಚ್ಚು ಕಾರ್ಯನಿರ್ವಹಣೆ ನೀಡಲಿದೆ.!

6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ

6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ

ದೊಡ್ಡ ಡಿಸ್‌ಪ್ಲೇ ಇಷ್ಟ ಪಡುವವರಿಗಾಗಿಯೇ ''ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ 6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್‌ಗಳು ಹೊಂದಿರದ 2160 x 1080 ಪಿಕ್ಸೆಲ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಮಲ್ಟಿಮೀಡಿಯಾ ಪ್ರಿಯರಿಗೂ ಹೇಳಿ ಮಾಡಿಸಿದಂತಿದೆ.

ಕ್ಯಾಮೆರಾಗೆ ಎಲ್ಲರೂ ಫಿದಾ

ಕ್ಯಾಮೆರಾಗೆ ಎಲ್ಲರೂ ಫಿದಾ

''ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ ಒಪ್ಪೊ ಮತ್ತು ವಿವೊ ಕಂಪೆನಿಗಳಿಗೆ ಟಾಂಗ್ ನೀಡಿದೆ. ಈ ಫೋನ್ ನಾಲ್ಕು ಕ್ಯಾಮೆರಾಗಳನ್ನು ಹೊಂದಿದ್ದು, 16MP ಮತ್ತು 5MPಯ ಎರಡು ರಿಯರ್ ಕ್ಯಾಮೆರಾ ಹಾಗೂ 21MP ಮತ್ತು 5MPಯ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ. ಡಿಸ್‌ಎಲ್‌ಆರ್ ರೀತಿಯ ಬೊಕ್ಕೆ ಚಿತ್ರಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ತೆಗೆಯಬಹುದಂತೆ.

ಪ್ರೊಸೆಸರ್ ಮತ್ತು RAM?

ಪ್ರೊಸೆಸರ್ ಮತ್ತು RAM?

ಮೀಡಿಯಾಟೆಕ್ ಹೀಲಿಯೋ ಪಿ23 (64ಬಿಟ್) ಪ್ರೊಸೆಸರ್ ಅನ್ನು ''ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಇನ್ನು 6GB RAM ಮತ್ತು 64GB ಮೆಮೊರಿ ಸ್ಮಾರ್ಟ್‌ಫೋನ್‌ನಲ್ಲಿದ್ದು, ಆಂಡ್ರಾಯ್ಡ್ 8.0 ಮೂಲಕ ಸ್ಮಾರ್ಟ್‌ಫೋನ್ ರನ್ ಆಗಲಿದೆ.

1,999 ರೂ.ಗಳ ಈ ಸ್ಪೀಕರ್ ನೀರಿನ ಒಳಗೂ ಹಾಡುತ್ತದೆ! Riversong Fusion Speaker
 ಇತರ ಫೀಚರ್ಸ್ ಮತ್ತು ಬೆಲೆ!!

ಇತರ ಫೀಚರ್ಸ್ ಮತ್ತು ಬೆಲೆ!!

'ಯುಲೆಫೊನ್ ಪವರ್ 3' ಸ್ಮಾರ್ಟ್‌ಫೋನ್ ಫೇಸ್‌ಐಡಿ, ಆಂಡ್ರಾಯ್ಡ್ ಓಡಿಯೋ ಅಪ್‌ಡೇಟ್, 90.7%ಬಾಡಿ ರೇಷ್ಯೂ ಹಾಗೂ ಫಿಂಗರ್‌ಪರಿಂಟ್ ಫೀಚರ್‌ನಂತಹ ಎಲ್ಲಾ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ. ಈ ಎಲ್ಲಾ ಫೀಚರ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 12,000 ರೂಪಾಯಿಗಳ ಆಸುಪಾಸಿನಲ್ಲಿದೆ.

Best Mobiles in India

English summary
Wide range of Ulefone’s products will satisfy even the most demanding clients.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+