ಇದಕ್ಕಿಂತ ಚಿಕ್ಕದಾದ-ಉತ್ತಮವಾದ ಫೋನ್ ಇನ್ನೊಂದಿಲ್ಲ..!!
ಜೇಬಿನಲ್ಲಿ ಇಡಲು ಸಾಧ್ಯವಾಗದಷ್ಟು ದೊಡ್ಡದಾಗುತ್ತಿವೆ. ಇದೇ ಸಂದರ್ಭದಲ್ಲೇ ಇಲ್ಲೊಂದು ಕಂಪನಿ ವಿಶ್ವದ ಅತೀ ಸಣ್ಣ ಪರದೆ ಇರುವ ಚಿಕ್ಕ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆ ಮಾಡಿ ಸ್ಮಾರ್ಟ್‌ಫೋನ್ ಗಳ ನಡುವೆ ವಿಭಿನ್ನವಾಗಿ ಕಾಣಿಸಿಕೊಂಡಿದೆ.
ವಿವಿಧ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ದೊಡ್ಡ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಸಲು ತಾ ಮುಂದು ನಾ ಮುಂದು ಎಂದು ಸ್ಪರ್ಧೆ ನಡೆಸುತ್ತಿವೆ, ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಜೇಬಿನಲ್ಲಿ ಇಡಲು ಸಾಧ್ಯವಾಗದಷ್ಟು ದೊಡ್ಡದಾಗುತ್ತಿವೆ. ಇದೇ ಸಂದರ್ಭದಲ್ಲೇ ಇಲ್ಲೊಂದು ಕಂಪನಿ ವಿಶ್ವದ ಅತೀ ಸಣ್ಣ ಪರದೆ ಇರುವ ಚಿಕ್ಕ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆ ಮಾಡಿ ಸ್ಮಾರ್ಟ್‌ಫೋನ್ ಗಳ ನಡುವೆ ವಿಭಿನ್ನವಾಗಿ ಕಾಣಿಸಿಕೊಂಡಿದೆ.

ಯೂನಿಹರ್ಟ್ಜ್ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು, ಜಲ್ಲಿ ಪ್ರೋ ಎನ್ನುವ 4G VoLET ಸಪೋರ್ಟ್ ಮಾಡುವ ವಿಶ್ವದ ಅತೀ ಸಣ್ಣ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಆಂಡ್ರಾಯ್ಡ್ 7.0 ನ್ಯಾಗಾದಲ್ಲಿ ಕಾರ್ಯನಿರ್ವಹಿಸುವ ಈ ಲಿಲ್ಲಿಪುಟ್ ಸ್ಮಾರ್ಟ್‌ಫೋನ್ ಮೂರ್ತಿ ಚಿಕ್ಕದಾದರು ಇದರ ಕೀರ್ತಿ ಮಾತ್ರ ದೊಡ್ಡದಾಗಿದೆ. ದೊಡ್ಡ ದೊಡ್ಡ ಸ್ಮಾರ್ಟ್‌ಫೋನ್‌ಗಳು ಕಾರ್ಯನಿರ್ವಹಿಸುವ ಮಾದರಿಯಲ್ಲಿ ಇದು ಸಹ ಕಾರ್ಯನಿರ್ವಹಿಸಲಿದೆ.
ಪ್ಲಸ್ ಪಾಯಿಂಟ್:
- ಅತೀ ಚಿಕ್ಕ ಗಾತ್ರ
- ಸಾಮಾನ್ಯ ಕಾರ್ಯಚರಣೆ
- ಆಂಡ್ರಾಯ್ಡ್ ನ್ಯಾಗಾ
ಮೈನಸ್ ಪಾಯಿಂಟ್:
- ಟೈಪಿಂಗ್ ಕಷ್ಟ
- ಕ್ಯಾಮೆರಾ ಗುಣಮಟ್ಟ ಕಡಿಮೆ
- ಮೀಡಿಯಾ ಬಳಕೆ ಕಸ್ಟ ಸಾಧ್ಯ

ಜೇಬಿಗೆ ಹೊರೆ ಎನ್ನಿಸದ ಸಾಮಾನ್ಯ ಬೆಲೆ:
ಯೂನಿಹರ್ಟ್ಜ್ ಜಲ್ಲಿ ಪ್ರೋ ಸ್ಮಾರ್ಟ್‌ಫೋನ್ ಸಾಮಾನ್ಯ ಬೆಲೆಯಲ್ಲಿ, ಎರಡು ಆವೃತ್ತಿಯಲ್ಲಿ ಲಭ್ಯವಿದೆ. 1 GB RAM ಮತ್ತು 8 GB ಇಂಟರ್ನಲ್ ಮೆಮೊರಿ ಇರುವ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಇದರ ಬೆಲೆ $ 79 ಆಗಿದೆ. 2GB RAM ಮತ್ತು 16 GB ಇಂಟರ್ನಲ್ ಮೆಮೊರಿ ಇರುವ ಸ್ಮಾರ್ಟ್‌ಫೋನ್ ಬೆಲೆ $ 95 ಆಗಿದೆ. ಇದು ಕಿಕ್ ಸ್ಟಾರ್ಟ್ ಪ್ರಾಜೆಕ್ಟ್ ಆಗಿದ್ದು, ಒಮ್ಮೆ ಹಿಟ್ ಆದಲ್ಲಿ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ವಿನ್ಯಾಸ: ಲಿಲ್ಲಿ ಪುಟ್ ಆಂಡ್ರಾಯ್ಡ್ ಫೋನ್
ಇಂದೊಂದು ಸಣ್ಣ ಆಂಡ್ರಾಯ್ಡ್ ಫೋನ್ ಆಗಿದ್ದು, ಇದನ್ನು ಕೈನ ಒಂದು ಮುಷ್ಠಿಯಲ್ಲಿ ಬಚ್ಚಿಟ್ಟುಕೊಳ್ಳಬಹುದಾಗಿದೆ. ನೋಡಲು ಲಿಲ್ಲಿ ಪುಟ್ ಮಾದರಿಯಲ್ಲಿದೆ. ಜೇಬಿನಲ್ಲಿ ಇಟ್ಟುಕೊಂಡರು ಅನುಭವಕ್ಕೆ ಬಾರಷ್ಟು ಚಿಕ್ಕದಾಗಿದೆ. ಫೋನ್ ಇದಯೇ ಎಂಬುದನ್ನು ಬಾರಿ ಬಾರಿ ಮುಟ್ಟಿ ನೋಡಿಕೊಳ್ಳಬೇಕಾಗಿದೆ. ಸಣ್ಣ ಫೋನ್ ಆದರು ಕೈನಿಂದ ಜಾರಿ ಬೀಳುವ ಸಾಧ್ಯತೆ ತೀರಾ ಕಡಿಮೆ. ಆದರೆ ಇದರ ಗಾತ್ರವೇ ಈ ಫೋನಿನ ಪ್ಲಸ್ ಪಾಯಿಂಟ್ ಜೊತೆಗೆ ಮೈನಸ್ ಪಾಂಯಿಟ್ ಸಹ ಆಗಿದೆ. ಕಾರಣ ಎಲ್ಲಾದರು ಕೆಳಗೆ ಇಟ್ಟರೆ ಗಾತ್ರ ಸಣ್ಣ ಇರುದರಿಂದ ಮರೆಯುವ ಸಾಧ್ಯತೆ ಹೆಚ್ಚು.
ಸಣ್ಣ ಸ್ಕ್ರಿನ್ ಇರುವುದರಿಂದ ಈ ಸ್ಮಾರ್ಟ್‌ಫೋನ್ ನಲ್ಲಿ ಟೈಪಿಂಗ್ ಮಾಡುವುದು ಕಷ್ಟ. ಚಾಟಿಂಗ್ ಮಾಡಲು ಇದು ಸರಿಯಾದ ಫೋನ್ ಅಲ್ಲವೇ ಅಲ್ಲ. ಟೈಪ್ ಮಾಡಬಹುದಾಗಿದ್ದರೂ ಸಾಮಾನ್ಯ ಫೋನಿನಂತೆ ಬಳಕೆ ಮಾಡಿಕೊಳ್ಳಲು ಆಗುವುದಿಲ್ಲ. ಸೋಶಿಯಲ್ ಮೀಡಿಯಾ ಬಳಕೆ ಸಂದರ್ಭದಲ್ಲಿಯೂ ಈ ಸಣ್ಣ ಸ್ಕ್ರಿನ್ ಕಿರಿಕಿರಿ ಮಾಡಲಿದೆ.
ಇನ್ನು ಈ ಫೋನ್ ಪ್ಲಾಸ್ಟಿಕ್ ನಿಂದ ಮಾಡಲಾಗಿದೆ. ಬ್ಯಾಕ್ ಕವರ್ ತೆಗೆಯ ಬಹುದಾಗಿದ್ದು, ಸಿಮ್ ಮತ್ತು SD ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇದರಲ್ಲಿದೆ. 2.4 ಇಂಚಿನ ಡಿಸ್‌ಪ್ಲೇ ಇದರಲ್ಲಿದ್ದು, ಮೈಕ್ರೋ USB ಫೋರ್ಟ್ ಬಲಭಾಗದಲ್ಲಿದೆ. ಕೆಳಭಾಗದಲ್ಲಿ ಮೂರು ಕೆಪಸಿಟಿವ್ ಬಟನ್ ಗಳನ್ನು ನೋಡಬಹುದು. ಮುಂಭಾಗದ ಮತ್ತು ಹಿಂಭಾಗದಲ್ಲಿ ಕ್ಯಾಮೆರಾ ನೀಡಲಾಗಿದೆ.

ಡಿಸ್‌ಪ್ಲೇ: ವಿಡಿಯೋ ನೋಡಲು ಗೇಮ್ ಆಡಲು ಸೂಕ್ತವಲ್ಲ
ಯೂನಿಹರ್ಟ್ಜ್ ಜಲ್ಲಿ ಪ್ರೋ ಸ್ಮಾರ್ಟ್‌ಫೋನ್ ನಲ್ಲಿ ಅತೀ ಸಣ್ಣ ಎನ್ನುವ 2.45 ಇಂಚಿನ 240x432 ರೆಸಲ್ಯೂಷನ್ ಗುಣಮಟ್ಟದ ಡಿಸ್‌ಪ್ಲೇ ನೀಡಲಾಗಿದ್ದು, ಇದು ವಿಡಿಯೋ ನೋಡಲು, ಗೇಮ್ ಆಡಲು ಸೂಕ್ತವಲ್ಲ. ಸ್ಮಾರ್ಟ್‌ಫೋನ್ ನಲ್ಲಿ ವಿಡಿಯೋ, ಪೋಟೋ, ಗೇಮ್ ಆಡಲು ಬಳಕೆ ಮಾಡಬೇಕು ಎನ್ನುವವರಿಗೆ ಈ ಫೋನ್ ಸೂಕ್ತವಲ್ಲ.

ಹಾರ್ಡ್‌ವೇರ್: ಯಾವ ಸ್ಮಾರ್ಟ್‌ಫೋನ್‌ಗೂ ಕಮ್ಮಿ ಇಲ್ಲ
ಯೂನಿಹರ್ಟ್ಜ್ ಜಲ್ಲಿ ಪ್ರೋ ಸ್ಮಾರ್ಟ್‌ಫೋನ್ ನಲ್ಲಿ ಮೀಡಿಯಾ ಟೆಕ್ MT6735 ಪ್ರೋಸೆಸರ್ ಕಾಣಬಹುದಾಗಿದ್ದು, 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಹಾಗೇಯೇ 1 GB RAM ಮತ್ತು 8GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯೂ ಲಭ್ಯವಿದೆ.
ಉತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯ ಹೊಂದಿದ್ದು, ಕೊಟ್ಟ ಕಾರ್ಯಗಳನ್ನು ಸರಳವಾಗಿ ನಿರ್ವಹಿಸಲಿದೆ. ಇದರಲ್ಲಿ 950 mAh ಬ್ಯಾಟರಿ ಇದ್ದು, ಮೂರು ದಿನಗಳ ಬ್ಯಾಕಪ್ ನೀಡಲಿದೆ. ಆದರೆ ಹೆಚ್ಚು ಬಳಕೆ ಮಾಡಿದರೆ ಪ್ರತಿ ನಿತ್ಯವೂ ಚಾರ್ಜ್ ಮಾಡಬೇಕಾಗಿದೆ.

ಕ್ಯಾಮೆರಾ: ಬೆಸ್ಟ್ ಎನ್ನಲಾಗದು, ಪರವಾಗಿಲ್ಲ ಎನ್ನಬಹುದು
ಯೂನಿಹರ್ಟ್ಜ್ ಜಲ್ಲಿ ಪ್ರೋ ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಎನ್ನದಿದ್ದರೂ ಪರವಾಗಿಲ್ಲ ಎನ್ನುವ ಕ್ಯಾಮೆರಾವನ್ನು ನೋಡಬಹುದಾಗಿದೆ. ಇದರಲ್ಲಿ 8 MP ಹಿಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್ ಮತ್ತು ಮುಂಭಾಗದಲ್ಲಿ 2 MP ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ತೆಗೆದ ಪೋಟೋಗಳು ಉತ್ತಮವಾಗಿ ಇಲ್ಲವಾರೂ ಪರವಾಗಲ್ಲ ಎನ್ನುವ ಹಾಗಿದೆ. ಇಲ್ಲಿ ಈ ಫೋನ್ ನಲ್ಲಿಯೇ ತೆಗೆದ ಕೇಲವು ಚಿತ್ರಗಳನ್ನು ನೀಡಲಾಗಿದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ ಇದೇ, ಅದೇ ಬೆಸ್ಟ್
ಯೂನಿಹರ್ಟ್ಜ್ ಜಲ್ಲಿ ಪ್ರೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಇದೇ ಈ ಫೋನಿನ ಪ್ಲಸ್ ಪಾಯಿಂಟ್ ಎಂದರೆ ತಪ್ಪಾಗುವುದಿಲ್ಲ. ಸರಳ ಯೂಸರ್ ಇಂಟರ್ ಫೇಸ್ ಇದರಲ್ಲಿದೆ. ಎಲ್ಲಾ ಆಪ್ ಗಳನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಕೊನೆ ಮಾತು:
ತನ್ನ ಗ್ರಾತ್ರದಿಂದಲ್ಲೇ ಗುರುತಿಸಿಕೊಂಡಿರುವ ಯೂನಿಹರ್ಟ್ಜ್ ಜಲ್ಲಿ ಪ್ರೋ ಸ್ಮಾರ್ಟ್‌ಫೋನ್ ಇದೇ ಈ ಪೋನಿನ ಮಾರಾಟದ ಪ್ರಮುಖ ಅಂಶವಾದರೆ, ಇದನ್ನು ಬೇಡ ಎಂದು ತಿರಸ್ಕರಿಸುವ ಕಾರಣವೂ ಆಗಲಿದೆ.
ಒಟ್ಟಿನಲ್ಲಿ ಈಗಾಗಲೇ ಒಂದು ಫೋನ್ ಹೊಂದಿದ್ದು, ಮತ್ತೊಂದು ಆಂಡ್ರಾಯ್ಡ್ ಸಣ್ಣ ಫೋನ್ ಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದಂತಿದೆ. ಸಂಚಾರದ ಸಮಯದಲ್ಲಿ ತೆಗೆದುಕೊಂಡು ಹೋಗಲು ಸೂಕ್ತವಾಗಿದೆ.


Click it and Unblock the Notifications








