ಯೂನಿಹರ್ಟ್ಸ್ ಜಲ್ಲಿ ಪ್ರೋ: ವಿಶ್ವದ ಅತೀ ಸಣ್ಣ ಸ್ಮಾರ್ಟ್ ಫೋನ್.!!

Written By: Lekhaka

ಯೂನಿಹರ್ಟ್ಸ್ ನೂತನ ಸ್ಮಾರ್ಟ್ ಫೋನ್ ವೊಂದನ್ನು ಬಿಡುಗಡೆ ಮಾಡಿದ್ದು, ಅದೇ ಜಲ್ಲಿ ಪ್ರೋ. ಈ ಇದು ವಿಶ್ವದ ಅತೀ ಸಣ್ಣ 4G ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಈ ನೋಡಲು ಸಣ್ಣದಾಗಿದ್ದು, ಬೆಲೆ ಸಹ ಕಡಿಮೆಯೇ ಇದೆ ಎನ್ನಲಾಗಿದೆ.

 ಯೂನಿಹರ್ಟ್ಸ್ ಜಲ್ಲಿ ಪ್ರೋ: ವಿಶ್ವದ ಅತೀ ಸಣ್ಣ ಸ್ಮಾರ್ಟ್ ಫೋನ್.!!

ಇದನ್ನು ಒಂದು ಮುಷ್ಠಿಯಲ್ಲಿ ಹಿಡಿದುಕೊಳ್ಳಬಹುದಾಗಿದ್ದು, ಕೇವಲ 2.45 ಇಂಚಿನ ಡಿಸ್ ಪ್ಲೇ ಯನ್ನು ಹೊಂದಿದೆ ಎನ್ನಲಾಗಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ ಈ ಹಿನ್ನಲೆಯಲ್ಲಿ ಈ ಫೋನಿನ ಕುರಿತ ಮಾಹಿತಿ ಈ ಕೆಳಕಂಡತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡ್ಯುಯಲ್ ಸಿಮ್ ಸ್ಲಾಟ್:

ಡ್ಯುಯಲ್ ಸಿಮ್ ಸ್ಲಾಟ್:

ಈ ಸಣ್ಣ ಸ್ಮಾರ್ಟ್ ಫೋನ್ ನಲ್ಲಿ ಎರಡು ಜಿಎಸ್ ಎಂ ಸಿಮ್ ಗಳನ್ನು ಹಾಕಿಕೊಳ್ಳಬಹುದಾಗಿದೆ. ಈ ಫೋನ್ ಅನ್ನು ಕ್ಯಾರಿ ಮಾಡುವುದು ತುಂಬ ಸುಲಭವಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಇದಲ್ಲದೇ ಈ ಸ್ಮಾರ್ಟ್ ಫೋನ್ ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾಣಬಹುದಾಗಿದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಪ್ಲಾಸ್ಟಿಕ್ ನಿಂದ ಮಾಡಿದ ಫೋನ್ ಇದಾಗಿದೆ. ಕೈನಲ್ಲಿ ಹಿಡಿದುಕೊಳ್ಳುವ ಅನುಭವವು ಉತ್ತಮವಾಗಿದೆ. ಅಲ್ಲದೇ ಬ್ಯಾಟರಿಯನ್ನು ತೆಗೆಯುವ ಅವಕಾಶವು ಇದೆ.

ಕನೆಕ್ಟಿವಿಟಿ:

ಕನೆಕ್ಟಿವಿಟಿ:

ಮಾರುಕಟ್ಟೆಯಲ್ಲಿ ದೊರೆಯಲಿರುವ ಸ್ಮಾರ್ಟ್ ಫೋನ್ ಗಳ ಮಾದರಿಯಲ್ಲಿ ಇದರಲ್ಲಿಯೂ ಹಿಂಬದಿ ಮತ್ತು ಮುಂಬದಿ ಕ್ಯಾಮೆರಾವನ್ನು ನೀಡಿದೆ. USB ಪೋರ್ಟ್, ಆಡಿಯೋ 3.5 ಜಾಕ್ ಇದರಲ್ಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಈ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ಹಾಗೂ 2 MP ಕ್ಯಾಮೆರಾವನ್ನು ಮುಂಭಾಗದಲ್ಲಿ ಕಾಣಬಹುದಾಗಿದೆ. ಹಿಂಭಾಗದಲ್ಲಿ LED ಪ್ಲಾಷ್ ಲೈಟ್ ಕಾಣಬಹುದಾಗಿದೆ.

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ 1.1GHz ಕ್ವಾಡ್ ಕೋರ್ ಪ್ರೋಸೆಸರ್ ಕಾಣಬಹುದಾಗಿದೆ. 1GB /2GB RAM ಕಾಣಬಹುದಾಗಿದೆ.

ಬ್ಯಾಟರಿ:

ಬ್ಯಾಟರಿ:

950mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್ ಫೋನ್ ಒಂದು ದಿನ ಬ್ಯಾಟರಿ ಬ್ಯಾಕಪ್ ಹೊಂದಿದೆ ಎನ್ನಲಾಗಿದೆ,

ಬೆಲೆ:

ಬೆಲೆ:

1 GB ಹಾಗೂ 8 GB ಇಂಟರ್ನಲ್ ಮೆಮೊರಿ ಇರುವಂತಹ ಫೋನಿನ ಬೆಲೆ $ 79 ಆಗಿದೆ. ಇದೇ ಮಾದರಿಯಲ್ಲಿ 2 GB RAM ಮತ್ತು 16GB ಇಂಟರ್ನಲ್ ಮಮೊರಿ ಇರುವ ಫೋನಿನ ಬೆಲೆ $ 95 ಆಗಿದೆ.

ಒಳ್ಳೆಯ ಬಳಕೆ ಅನುಭವ:

ಒಳ್ಳೆಯ ಬಳಕೆ ಅನುಭವ:

ಇದು ಅತಿ ಸಣ್ಣ ಸ್ಮಾರ್ಟ್ ಫೋನ್ ಆಗಿದ್ದು, ಸಾಮಾನ್ಯ ಸ್ಮಾರ್ಟ್ ಫೋನ್ ನಲ್ಲಿರುವ ಎಲ್ಲಾ ಆಯ್ಕೆಗಳನ್ನು ಕಾಣಬಹುದಾಗಿದೆ. ಬಳಕೆ ಮಾಡುವ ಅನುಭವವೇ ಉತ್ತಮವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Unihertz Jelly Pro, the smallest 4G smartphone seems to be rich in features despite its size.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot