ಅಪ್ ಕಮ್ಮಿಂಗ್ ಸ್ಮಾರ್ಟ್ ಫೋನ್ ಗಳಿಗೆ 30,000 ರುಪಾಯಿ

By Gizbot Bureau
|

ಟೆಲಿಕಾಂ ಇಂಡಸ್ಟ್ರಿ ಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ದೊಡ್ಡ ಬದಲಾವಣೆ ಎಂದರೆ 5ಜಿ ನೆಟ್ ವರ್ಕ್ ಗೆ ಬಲ ನೀಡುವ ಫೋನ್ ಗಳು.ವಿಶ್ವದ ಅನೇಕ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳು ಈಗಾಗಲೇ 5ಜಿ ಬೆಂಬಲಿತ ಫೋನ್‌ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿವೆ. ಭಾರತೀಯ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ, ಬಳಕೆದಾರರಿಗೆ 5ಜಿ ಸೌಲಭ್ಯ ಇನ್ನಷ್ಟೇ ಲಭ್ಯವಾಗಬೇಕಿದೆ. ಕೋವಿಡ್-19 ನಿಂದಾಗಿ 5ಜಿ ಸೇವೆಯ ಬಿಡುಗಡೆ ಮತ್ತಷ್ಟು ನಿಧಾನವಾಗುವ ಸಾಧ್ಯತೆ ಇದೆ ಆದರೆ ಅನೇಕ ಸ್ಮಾರ್ಟ್ ಫೋನ್ ಕಂಪೆನಿಗಳು ಈಗಾಗಲೇ 5ಜಿ ಬೆಂಬಲಿತ ಫೋನ್ ಗಳನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿವೆ.

ಪ್ರೀಮಿಯಂ ಬ್ರ್ಯಾಂಡ್

ಪ್ರೀಮಿಯಂ ಬ್ರ್ಯಾಂಡ್ ನಲ್ಲಿ 5ಜಿ ಫೋನ್ ಗಳು ದುಬಾರಿಯಾಗಿವೆ. ಆದರೆ ಚೀನಾ‌ ಬ್ರ್ಯಾಂಡಿನ ಕೆಲವು ಡಿವೈಸ್ ಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಅಂತಹ ಕೆಲವು ಕೈಗೆಟುಕುವ ಬೆಲೆಯ ಡಿವೈಸ್ ಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದರಲ್ಲೂ ಭಾರತೀಯ ಮಾರುಕಟ್ಟೆಯಲ್ಲಿ 30,000 ರುಪಾಯಿ ಒಳಗೆ ಸಿಗುವ ಡಿವೈಸ್ ಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ.

ಓಪ್ಪೋ ಎ92ಎಸ್

ಓಪ್ಪೋ ಎ92ಎಸ್

ಓಪ್ಪೋಎ92ಎಸ್ ನಲ್ಲಿ 6.57-ಇಂಚಿನ FHD+ IPS LCD ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ಇರಲಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಮೀಡಿಯಾ ಟೆಕ್ ಡೆನ್ಸಿಟಿ 800ಚಿಪ್ ಸೆಟ್ ಜೊತೆಗೆ 5ಜಿ ಕನೆಕ್ಟಿವಿಟಿ ಸಿಗಲಿದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 48MP ಪ್ರಮುಖ ಸೆನ್ಸರ್, , 6GB/8GB RAM ಮತ್ತು 128GB ಸ್ಟೋರೇಜ್ ಜಾಗ ಮತ್ತು 3890mAh ಬ್ಯಾಟರಿ ಜೊತೆಗೆ 20W ಫಾಸ್ಟ್ ಚಾರ್ಜಿಂಗ್ ಗೆ ಇದು ಬೆಂಬಲ ನೀಡುತ್ತದೆ.

ಹಾನರ್ 30ಎಸ್

ಹಾನರ್ 30ಎಸ್

ಹಾನರ್ 30ಎಸ್ 6.5-ಇಂಚಿನ FHD+ ಡಿಸ್ಪ್ಲೇ, ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 820 5ಜಿ ಚಿಪ್‌ಸೆಟ್ , ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 64MP ಪ್ರೈಮರಿ ಕ್ಯಾಮರಾ ಸೆನ್ಸರ್, ಆಂಡ್ರಾಯ್ಡ್ 10 ಇರಲಿದೆ. ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಮೌಂಟ್ ಆಗಿರುತ್ತದೆ. 4000mAh ನ ಬ್ಯಾಟರಿ ಜೊತೆಗೆ 40W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿರುತ್ತದೆ.

ಹುವಾಯಿ ನೋವಾ 7 ಎಸ್ ಇ

ಹುವಾಯಿ ನೋವಾ 7 ಎಸ್ ಇ

ಹುವಾಯಿ ನೋವಾ 7 ಎಸ್ ಇ ಯಲ್ಲಿ 6.5-ಇಂಚಿನ LCD ಡಿಸ್ಪ್ಲೇ ಜೊತೆಗೆ FHD+ ರೆಸಲ್ಯೂಷನ್ ಇರಲಿದೆ. ಕಿರಿನ್ 820 5ಜಿ SoC ಇದರಲ್ಲಿದ್ದು 8GB RAM ಮತ್ತು 256GB ಸ್ಟೋರೇಜ್ ಜಾಗ ಇದರಲ್ಲಿದೆ. ಹುವಾಯಿ ನೋವಾ 7ಎಸ್ ಇ 64ಎಂಪಿ ಕ್ವಾಡ್ ಕ್ಯಾಮರಾ ಮಾಡ್ಯೂಲ್ ಹಿಂಭಾಗದಲ್ಲಿದ್ದು 16MP ಸೆಲ್ಫೀ ಕ್ಯಾಮರಾ ಸೆನ್ಸರ್ ಮತ್ತು 4000mAh ಬ್ಯಾಟರಿ ಜೊತೆಗೆ 40W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿ ಇರಲಿದೆ.

ರಿಯಲ್ ಮಿ ಎಕ್ಸ್50 5ಜಿ

ರಿಯಲ್ ಮಿ ಎಕ್ಸ್50 5ಜಿ

ರಿಯಲ್ ಮಿ ಎಕ್ಸ್50 5ಜಿ ಯಲ್ಲಿ 6.57-ಇಂಚಿನ FHD+ ಡಿಸ್ಲ್ಪೇ ಜೊತೆಗೆ 120Hz ರಿಫ್ರೆಶ್ ರೇಟ್ ಇರಲಿದೆ. 2.4GHz ನ ಸ್ನ್ಯಾಪ್ ಡ್ರ್ಯಾಗನ್ 765G SoC, 12GB RAM ವರೆಗಿನ ವ್ಯವಸ್ಥೆ ಮತ್ತು 256GB ಸ್ಟೋರೇಜ್ ಜಾಗ ಇರಲಿದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 64MP ಪ್ರಮುಖ ಸೆನ್ಸರ್ ಮತ್ತು 4200mAh ಬ್ಯಾಟರಿ ಜೊತೆಗೆ 30W ಡಾರ್ಟ್ ಫಾಸ್ಟ್ ಚಾರ್ಜಿಂಗದ ವ್ಯವಸ್ಥೆ ಇರಲಿದೆ.

ನುಬಿಯಾ ಪ್ಲೇ 5ಜಿ

ನುಬಿಯಾ ಪ್ಲೇ 5ಜಿ

ನುಬಿಯಾ ಪ್ಲೇ 5ಜಿ ಗೇಮಿಂಗ್ ಸ್ಮಾರ್ಟ್ ಫೋನ್ ಇದಾಗಿದ್ದು 5ಜಿ ಕನೆಕ್ಟಿವಿಟಿ ಇರಲಿದೆ. ಈ ಡಿವೈಸ್ ನಲ್ಲಿ 6.55-ಇಂಚಿನ FHD+ ಡಿಸ್ಪ್ಲೇ ಜೊತೆಗೆ ವೇಗದ ರಿಫ್ರೆಶ್ ರೇಟ್ 144Hz ಇರಲಿದೆ. ಇದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 765G SoC ಇದ್ದು 8GB RAM ವ್ಯವಸ್ಥೆ ಇರಲಿದೆ. ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನ ಇದರಲ್ಲಿದ್ದು ಕ್ವಾಡ್ ಕ್ಯಾಮರಾ ಮಾಡ್ಯೂಲ್ ಇರಲಿದೆ.5100mAh ಬ್ಯಾಟರಿ ಜೊತೆಗೆ 30W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

ಕೂಲ್ ಪ್ಯಾಡ್ ಲೆಗೆಸ್ಸಿ 5ಜಿ

ಕೂಲ್ ಪ್ಯಾಡ್ ಲೆಗೆಸ್ಸಿ 5ಜಿ

ಕೂಲ್ ಪ್ಯಾಡ್ ಲಗೆಸ್ಸಿ 5ಜಿ ಯಲ್ಲಿ 6.53-ಇಂಚಿನ FHD+ ಡಿಸ್ಪ್ಲೇ ಜೊತೆಗೆ HDR10 ಗೆ ಬೆಂಬಲ ನೀಡುತ್ತದೆ ಮತ್ತು ವಾಟರ್ ಡ್ರಾಪ್ ನಾಚ್ ವ್ಯವಸ್ಥೆ ಮುಂಭಾಗದಲ್ಲಿ ಇರಲಿದೆ.ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 765 SoC, 4GB RAM, 64GB ಸ್ಟೋರೇಜ್ ಜಾಗ, 48MP ಪ್ರೈಮರಿ ಹಿಂಭಾಗದ ಸೆನ್ಸರ್ , ಆಂಡ್ರಾಯ್ಡ್ 10 ಮತ್ತು 4000mAh ಬ್ಯಾಟರಿ ವ್ಯವಸ್ಥೆ ಇರಲಿದೆ.

Best Mobiles in India

English summary
5G smartphones from premium brands are expensive there are Chinese brands that have come up with relatively affordable offerings. Some of these affordable 5G smartphones are expected to be launched soon in India. And, here we have curated a list of affordable 5G smartphones likely to be priced under Rs. 30,000 expected

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X