ಆಪಲ್‌ನಿಂದ ಡ್ಯುಯಲ್ ಸಿಮ್ ಐಫೋನ್ ಲಾಂಚ್..! ಆಂಡ್ರಾಯ್ಡ್ ಬೇಡ ಎನ್ನಲು ಸಿಕ್ತು ಕಾರಣ..!
ಮಾರುಕಟ್ಟೆಯಲ್ಲಿ ತನ್ನದೇ ವಿಶೇಷತೆಗಳೊಂದಿಗೆ ಕಾಣಿಸಿಕೊಳ್ಳುವ ಆಪಲ್ ಐಫೋನ್ ಈ ಬಾರಿ ಇನ್ನಷ್ಟು ಹೊಸ ಆಯ್ಕೆಗಳನ್ನು ಮೈಗೂಡಿಸಿಕೊಳ್ಳಲಿದೆ. ಈಗಾಗಲೇ ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ 9 ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎನ್ನುವ ವಿಚಾರವೂ ಈಗಾಗಲೇ ಖಚಿತವಾಗಿದೆ. ಅಲ್ಲದೇ ಈ ಐಫೋನ್‌ಗಳು ಹೊಂದಿರುವ ವಿಶೇಷತೆಗಳು ಸಾಕಷ್ಟು ದೊಡ್ಡ ಮಾದರಿಯಲ್ಲಿ ಸದ್ದು ಮಾಡುತ್ತಿವೆ.

OLED ಸ್ಕ್ರಿನ್ ಸೇರಿದಂತೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಆಯ್ಕೆಗಳನ್ನು ಹೊಂದಿರುವ ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ 9ಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುವಂತ ಆಯ್ಕೆಗಳನ್ನು ಹೊಂದಿರಲಿದೆ ಎನ್ನಲಾಗಿದ್ದು, ಇದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ. ಈ ಕುರಿತ ಮಾಹಿತಿಯೂ ಮುಂದಿದೆ.

ಡ್ಯುಯಲ್ ಸಿಮ್:
ಇಷ್ಟು ದಿನ ಮಾರುಕಟ್ಟೆಯಲ್ಲಿ ಸಿಂಗಲ್ ಸಿಮ್ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶ ಮಾತ್ರವೇ ಹೊಂದಿದ್ದ ಆಪಲ್ ಐಫೋನ್‌ಗಳು ಈ ಬಾರಿ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ಹೊಂದಲಿದೆ ಎನ್ನಲಾಗಿದೆ. ಈ ಬದಲಾವಣೆ ಎಂದರೆ ಈ ಎಲ್ಲಾ ಹೊಸ ಐಫೋನ್‌ಗಳು ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ಮಾಡಿಕೊಡಲಿದೆ.

ಡ್ಯುಯಲ್ 4G:
ಇದಲ್ಲದೇ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶದೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿರುವ ಡ್ಯುಯಲ್ 4Gಯನ್ನು ಈ ಐಫೋನ್‌ಗಳಲ್ಲಿ ಕಾಣಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ಆಪಲ್ ಐಫೋನ್ ಬೇಡಿಕೆಯನ್ನು ಹೆಚ್ಚು ಮಾಡಿಕೊಳ್ಳಲು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

ಮೂರು ಐಫೋನ್
ಆಪಲ್ ಐಫೋನ್ XS ಮಾರುಕಟ್ಟೆಗೆ ಎರಡು ಮಾದರಿಯಲ್ಲಿ ಲಾಂಚ್ ಆಗಲಿದೆ. 5.8 ಇಂಚಿನ ಆವೃತ್ತಿಯಲ್ಲಿ ಒಂದು 6.5 ಇಂಚಿನ ಆವೃತ್ತಿಯಲ್ಲಿ ಮತ್ತೊಂದು ಕಾಣಿಸಿಕೊಳ್ಳಲಿದೆ. ಈ ಹೊಸ ಐಫೋನ್ XS ಬಳಕೆದಾರರಿಗೆ ಹೊಸ ಮಾದರಿಯ ಬಳಕೆಯ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಜೊತೆಗೆ ಐಫೋನ್ 9 ಸಹ ಕಾಣಿಸಿಕೊಳ್ಳಲಿದೆ.

ಹೊಸ ಮಾದರಿಯ ಬಣ್ಣ:
ಐಫೋನ್ ಹೊಸ ಬಣ್ಣದಲ್ಲಿ ಲಾಂಚ್ ಆಗುವ ಸಾಧ್ಯತೆಯ ಬಗ್ಗೆಯೂ ಮಾಹಿತಿ ಲೀಕ್ ಆಗಿದೆ. ಪ್ರತಿ ಬಾರಿಯೂ ಮಾರುಕಟ್ಟೆಯಲ್ಲಿ ಹೊಸತನವನ್ನು ಪರಿಚಯಿಸುವ ಆಪಲ್ ಈ ಬಾರಿಯೂ ಹೊಸದೊಂದು ಆಯ್ಕೆಯನ್ನು ಖಂಡಿತವಾಗಿಯೂ ನೀಡಲಿದೆ.

ಆಪಲ್ ವಾಚ್:
ಈ ಬಾರಿ ಆಪಲ್ ಎರಡು ಐಫೋನ್ ಗಳನ್ನು ಮತ್ತು ಹೊಸ ಮಾದರಿಯ ಆಪಲ್ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದೆ. ಆಪಲ್ ವಾಚ್ ಮತ್ತು ಐಫೋನ್ ಮುಂದಿನ ತಲೆ ಮಾರಿನ ಆಯ್ಕೆಗಳನ್ನು ಹೊಂದಿರಲಿದೆ.

ಸೆಪ್ಟೆಂಬರ್ 12ರಂದು
ಪ್ರತಿ ಬಾರಿಯೂ ವರ್ಷದ ಕೊನೆಯಲ್ಲಿ ಹೊಸ ಐಫೋನ್ ಅನ್ನು ಪರಿಚಯ ಮಾಡುವ ಆಪಲ್, ಬಳಕೆದಾರರಿಗೆ ಸರ್ಪೈಸ್ ಅನ್ನು ನೀಡಲಿದೆ. ಇದೇ ಮಾದರಿಯಲ್ಲಿ 2018ರ ಸೆಪ್ಟೆಂಬರ್ 12ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಆಪಲ್ ನೂತನ ಐಫೋನ್ ಮತ್ತು ಆಪಲ್ ವಾಚ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.


Click it and Unblock the Notifications








