ಭವಿಷ್ಯದಲ್ಲಿ ಬಿಡುಗಡೆಗೊಳ್ಳಲಿರುವ ಮೊಟೋ ಸ್ಮಾರ್ಟ್ ಫೋನ್ ಗಳು
ಮೊಟೋರೊಲಾ, ಲೆನೊವಾ ಮಾಲೀಕತ್ವದ ಬ್ರ್ಯಾಂಡ್ ವಿಭಿನ್ನ ರೇಂಜಿನ ಸ್ಮಾರ್ಟ್ ಪೋನ್ ಗಳಿಗೆ ಮತ್ತು ನೂತನ ಆಯ್ಕೆಗಳಿಗಾಗಿ ಭಾರೀ ಪ್ರಸಿದ್ಧಿ ಪಡೆದಿದೆ. ಅದರಲ್ಲಿ ಮೊಟೋರೊಲಾ Razr 2019 ಕೂಡ ಸೇರಿದೆ.ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವುದರಲ್ಲಿ ಈ ಬ್ರ್ಯಾಂಡ್ ಫೇಮಸ್ ಆಗಿದ್ದು ಸ್ಟಾಕ್ ಆಂಡ್ರಾಯ್ಡ್ ಯುಐ ನ್ನು ಹೊಂದಿದೆ ಮತ್ತು ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಲ್ಲಿ ವಿಶೇಷತೆ ಇರುತ್ತದೆ.

ಭಾರತದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ ಕೆಲವು ಮೊಟೋ ಡಿವೈಸ್ ಗಳ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಸ್ಪರ್ಧಾತ್ಮಕ ಹಾರ್ಡ್ ವೇರ್ ಗಳು ಮತ್ತು ಹೊಸ ಹೊಸ ಡಿಸೈನ್ ಗಳು ಇವುಗಳಲ್ಲಿ ಇರಲಿದೆ.

ಮೊಟೋರೊಲಾ ಎಡ್ಜ್ ಪ್ಲಸ್
ಮೊಟೋರೊಲಾ ಎಡ್ಜ್ ಪ್ಲಸ್ ಮುಂಬರುವ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಆಗಿರಲಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ನ್ನು ಹೊಂದಿದೆ.ಹೆಸರೇ ಸೂಚಿಸುವಂತೆ ಡುಯಲ್ ಕರ್ವ್ಡ್ ಡಿಸ್ಪ್ಲೇ, ಜೊತೆಗೆ ಪಂಚ್ ಹೋಲ್ ಕಟ್ ಔಟ್ ಡಿಸ್ಪ್ಲೇ ಮೇಲ್ಬಾಗದಲ್ಲಿ ಇರುವ ಸಾಧ್ಯತೆ ಇದೆ.

ಮೊಟೋರೊಲಾ ಪಿ40
ಮೊಟೋರೊಲಾ ಪಿ40 ಮಧ್ಯಮ ರೇಂಜಿನಲ್ಲೇ ಸ್ವಲ್ಪ ಉತ್ಕೃಷ್ಟವಾಗಿರುವ ಸ್ಮಾರ್ಟ್ ಫೋನ್ ಆಗಿರಲಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 675 SoC ನ್ನು ಆಧರಿಸಿರುತ್ತದೆ. ಈ ಡಿವೈಸ್ ನಲ್ಲಿ FHD+ ರೆಸಲ್ಯೂಷನ್ ಡಿಸ್ಪ್ಲೇ ಜೊತೆಗೆ ಟ್ರಿಪಲ್ ಅಥವಾ ಕ್ವಾಡ್ ಕ್ಯಾಮರಾ ಸೆಟ್ ಅಪ್ ಇರಲಿದೆ.

ಮೊಟೋರೊಲಾ ಎಡ್ಜ್
ಮೊಟೋರೊಲಾ ಎಡ್ಜ್ ಮಿಡ್ ರೇಂಜಿನ 5ಜಿ ಸ್ಮಾರ್ಟ್ ಫೋನ್ ಆಗಿರಲಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 765G SoC ಆಧರಿಸಿರುತ್ತದೆ ಜೊತೆಗೆ ಕನಿಷ್ಟ 4GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆ ಇರಲಿದೆ. ಅಭಿವೃದ್ಧಿ ಪಡಿಸಲಾಗಿರುವ ಗೇಮಿಂಗ್ ಅನುಭವ ಮತ್ತು ದೊಡ್ಡ ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿರಲಿದ್ದು 5ಜಿ ಅಗತ್ಯವಿರುವ ಸೌಲಭ್ಯವನ್ನು ಒಳಗೊಂಡಿರುವ ಸ್ಮಾರ್ಟ್ ಫೋನ್ ಆಗಿರುತ್ತದೆ..

ಮೊಟೋರೊಲಾ ಒನ್ 2020
ಮೊಟೋರೊಲಾ ಒನ್ 2020 ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಆಗಿರಲಿದ್ದು ಅಂದಾಜು 20,000 ರುಪಾಯಿಗೆ ಲಭ್ಯವಾಗುತ್ತದೆ. ಮೊಟೋರೊಲಾ ಒನ್ ಆಲ್-ಸ್ಕ್ರೀನ್ ಡಿಸ್ಪ್ಲೇ, ಫಾಸ್ಟ್ ಆಕ್ಟಾ ಕೋರ್ ಪ್ರೊಸೆಸರ್ ಮತ್ತು 6GB RAM ಮತ್ತು 64GB ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆ ಹೊಂದಿರುತ್ತದೆ.

ಮೊಟೋರೊಲಾ ಪಿ40 ಪ್ಲೇ
ಮೊಟೋರೊಲಾ ಪಿ40 ಪ್ಲೇ ಮೊಟೋರೊಲಾ ಪಿ40 ವರ್ಷನ್ನಿನ ಕೈಗೆಟುಕುವ ಬೆಲೆಯ ಡಿವೈಸ್ ಆಗಿರುತ್ತದೆ. ರೆಗ್ಯುಲರ್ ವರ್ಷನ್ ಗಿಂತ ಸ್ವಲ್ಪ ಭಿನ್ನವಾಗಿರುವ ಇದು 5ಜಿ ಬೆಂಬಲ ನೀಡುತ್ತದೆ ಮತ್ತು ಮಡಿ-ಟಯರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್ ಜೊತೆಗೆ ಬ್ಲೂಟೂತ್ 5.0, ವೋಲ್ಟ್ ಮತ್ತು ಡುಯಲ್ ಬ್ಯಾಂಡ್ ವೈಫೈ ಯನ್ನು ಹೊಂದಿರುತ್ತದೆ.


Click it and Unblock the Notifications








