Home
ಮೊಬೈಲ್

ದೊಡ್ಡ ಉಡುಗೊರೆ! ಬಂತು ಏಪ್ರಿಲ್ ಕೊನೆ ವಾರ.. ಈ ಸೊಗಸಾದ ಫೋನ್‌ಗಳು ಭಾರತದಲ್ಲಿ ಬಿಡುಗಡೆ; ಬೆಲೆ, ವಿಶೇಷತೆಗಳೇನು?

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹಬ್ಬವೇ ಸರಿ! ಏಪ್ರಿಲ್ ತಿಂಗಳು ಕೊನೆಯ ಹಂತದಲ್ಲಿದ್ದು, ಕೊನೆಯ ವಾರದಲ್ಲಿ ಮೊಬೈಲ್ ಮಾರುಕಟ್ಟೆಗೆ ಒಂದು ದೊಡ್ಡ ಗಿಫ್ಟ್‌ ನೀಡಲು ಪ್ರಸಿದ್ಧ ಕಂಪನಿಗಳು ಸಜ್ಜಾಗಿದೆ. ಹೌದು, ಈ ತಿಂಗಳ ಕೊನೆಯ ವಾರದಲ್ಲಿ, ಭಾರತದಲ್ಲಿ ಹೊಸ ಮತ್ತು ಉತ್ತಮ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಅಂದರೆ ಏಪ್ರಿಲ್ 28 ಮತ್ತು ಮೇ4ರ ನಡುವೆ ಹಲವು ಹೊಸ 5G ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಬನ್ನಿ, ಈ ವಾರ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್‌ಗಳು (Upcoming smartphones in india this week) ಯಾವುದು? ಬಿಡುಗಡೆ ದಿನಾಂಕ, ವಿಶೇಷತೆಗಳು ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ.

ಟೆಕ್ ದೈತ್ಯ ಮೊಟೊರೊಲಾ, ಸಿಎಂಎಫ್‌ ಮತ್ತು ಐಕ್ಯೂ ಸೇರಿದಂತೆ ಇತರೆ ಕಂಪನಿಗಳು ಈ ವಾರ ತನ್ನ ಹೊಸ ಫೋನ್‌ಗಳನ್ನು (Upcoming Smartphone Launches this Week) ಬಿಡುಗಡೆ ಮಾಡಲಿವೆ. ಇವುಗಳು 25,000 ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಪೈಕಿ, ಏಪ್ರಿಲ್ 28 ರಂದು ಸಿಎಂಎಫ್ ಫೋನ್ 2 ಪ್ರೊ ಮೊಬೈಲ್ ಮೊದಲನೆಯದಾಗಿ ಭಾರತಕ್ಕೆ ಬರಲಿದೆ. ಮುಂಬರುವ ಫೋನ್‌ಗಳ ಪಟ್ಟಿ, ನಿರೀಕ್ಷಿತ ಬೆಲೆ ಮತ್ತು ವಿಶೇಷತೆಗಳ ವಿವರಗಳನ್ನು ತಿಳಿಯಲು ಮುಂದೆ ಓದಿ.

ದೊಡ್ಡ ಉಡುಗೊರೆ! ಈ ವಾರ ಬರ್ತಿವೆ ಸೊಗಸಾದ ಫೋನ್‌ಗಳು; ಇಲ್ಲಿದೆ ಪಟ್ಟಿ

ಸಿಎಂಎಫ್‌ ಫೋನ್ 2 ಪ್ರೊ: ಏಪ್ರಿಲ್ 28 ರಂದು ಬಿಡುಗಡೆ

ಸಿಎಂಎಫ್‌ ಫೋನ್ 2 ಪ್ರೊ 5G (CMF Phone 2 Pro) ಬಿಡುಗಡೆಯೊಂದಿಗೆ ಈ ತಿಂಗಳ ಕೊನೆಯ ವಾರ ಪ್ರಾರಂಭವಾಗಲಿದೆ. ಇದರ ಬೆಲೆ 18,999 ರೂ. ಆಗಿದೆ. ಲಂಡನ್ ಮೂಲದ ಟೆಕ್ ಕಂಪನಿ ನಥಿಂಗ್ ತನ್ನ ಉಪ-ಬ್ರಾಂಡ್ 'CMF' ಅಡಿಯಲ್ಲಿ ಏಪ್ರಿಲ್ 28 ರಂದು ತನ್ನ ಎರಡನೇ ಫೋನನ್ನು ಬಿಡುಗಡೆ ಮಾಡಲಿದೆ. ಸಿಎಂಎಫ್‌ ಫೋನ್ 2 ಪ್ರೊ ಮಧ್ಯಮ ಬಜೆಟ್ ಮೊಬೈಲ್ ಆಗಿದೆ. ಇದರ ಬೆಲೆ 20 ಸಾವಿರಕ್ಕಿಂತ ಕಡಿಮೆ ಇರಬಹುದು. ಇದರ ಆರಂಭಿಕ ಬೆಲೆ 18,999 ರೂ. ಆಗಿರಬಹುದು. ಮತ್ತು ಟಾಪ್ ರೂಪಾಂತರದ ಬೆಲೆ 20,999 ರೂ. ಆಗಿರಲಿದೆ. ಈ ಸಿಎಂಎಫ್‌ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಕಂಪನಿಯು ದೃಢಪಡಿಸಿದೆ.

ಸಿಎಂಎಫ್ ಫೋನ್ 2 ಪ್ರೊ 5G ಫೋನ್ 6.7 ಇಂಚಿನ ಫುಲ್‌ ಎಚ್‌ಡಿ ಪ್ಲಸ್ + ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಈ ಫೋನಿನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಎರಡನೇ ಕ್ಯಾಮೆರಾವು 50 ಮೆಗಾಪಿಕ್ಸೆಲ್ 2x ಟೆಲಿಫೋಟೋ ಲೆನ್ಸ್ ಇರುತ್ತದೆ. ವರದಿಯ ಪ್ರಕಾರ, ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರಲಿದೆ. ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, 5100mAh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರುತ್ತದೆ.

ಮೊಟೊರೊಲಾ ಎಡ್ಜ್ 60 ಪ್ರೊ: ಏಪ್ರಿಲ್ 30ರಂದು ಬಿಡುಗಡೆ

ಮೊಟೊರೊಲಾ ಎಡ್ಜ್ 60 ಪ್ರೊ (Motorola Edge 60 Pro 5G) ಫೋನ್ ಈಗಾಗಲೇ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದೇ ಏಪ್ರಿಲ್ 30 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್‌ ಬೆಲೆ 30 ಸಾವಿರ ರೂ.ಗಳ ಬಜೆಟ್‌ನಲ್ಲಿ ಇರಲಿದೆ ಎಂದು ವರದಿಯಾಗಿದೆ. ಕಂಪನಿಯು ಇದನ್ನು 28,999 ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆಯಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಎಕ್ಸ್‌ಟ್ರೀಮ್ ಪ್ರೊಸೆಸರ್‌ನೊಮದಿಗೆ ಬಿಡುಗಡೆಯಾಗಿದೆ. ಇದೇ ಪ್ರೊಸೆಸರ್ ಜೊತೆಗೆ ಭಾರತದಲ್ಲಿಯೂ ಈ ಮೊಬೈಲ್ ಲಾಂಚ್ ಆಗಲಿದೆ.

ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ 1.5K POLED ಡಿಸ್ಪ್ಲೇ ಹೊಂದಿದೆ. ಇದು 2,712 x 1,220 ಪಿಕ್ಸೆಲ್‌ಗಳ ರೆಸಲ್ಯೂಶನ್‌, 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಈ ಫೋನಿನ ಪ್ರೊಸೆಸರ್ ಅನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್ ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಮಾಲಿ G615 MC6 ಜಿಪಿಯು ಇದೆ. ಈ ಫೋನ್ 8GB, 12GB RAM ಮತ್ತು 256GB, 512GB ಸ್ಟೋರೇಜ್ ಹೊಂದಿದೆ.

ಮೊಟೊರೊಲಾ ಎಡ್ಜ್ 60 ಪ್ರೊ 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಜೊತೆಗೆ ಎಲ್‌ಇಡಿ ಫ್ಲ್ಯಾಷ್ ಲೈಟ್ ಹೊಂದಿದೆ. ಎರಡನೇ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ + ಮ್ಯಾಕ್ರೋ ಲೆನ್ಸ್ ಹೊಂದಿದೆ. ಜೊತೆಗೆ 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಲಭ್ಯವಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 90W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದೆ. ಈ ಮೊಬೈಲ್ 15W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ.

ದೊಡ್ಡ ಉಡುಗೊರೆ! ಈ ವಾರ ಬರ್ತಿವೆ ಸೊಗಸಾದ ಫೋನ್‌ಗಳು; ಇಲ್ಲಿದೆ ಪಟ್ಟಿ

ಐಕ್ಯೂ Z10 ಟರ್ಬೊ ಸರಣಿ: ಏಪ್ರಿಲ್ 28 ರಂದು ಬಿಡುಗಡೆ

ಐಕ್ಯೂ Z10 ಟರ್ಬೊ ಸರಣಿಯು (iQOO Z10 Turbo Series) ಏಪ್ರಿಲ್ 28 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಈ ಸರಣಿಯಲ್ಲಿ ಐಕ್ಯೂ Z10 ಟರ್ಬೊ (iQOO Z10 Turbo) ಮತ್ತು ಐಕ್ಯೂ Z10 ಟರ್ಬೊ ಪ್ರೊ (iQOO Z10 Turbo Pro) ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಫೋನ್‌ಗಳನ್ನು ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಐಕ್ಯೂ Z10 ಟರ್ಬೊ ಕಂಪನಿಯ ಅತಿದೊಡ್ಡ ಬ್ಯಾಟರಿ ಹೊಂದಿರುವ ಫೋನ್ ಆಗಿದೆ. ಈ ಮೊಬೈಲ್ 7620mAh ಬ್ಯಾಟರಿಯನ್ನು ಹೊಂದಿರುತ್ತದೆ. ಈವರೆಗೆ ಯಾವುದೇ ಐಕ್ಯೂ ಫೋನಿನಲ್ಲಿ ಇಷ್ಟು ದೊಡ್ಡ ಬ್ಯಾಟರಿಯನ್ನು ಒದಗಿಸಲಾಗಿಲ್ಲ. ಈ ಫೋನಿನ ಆರಂಭಿಕ ಬೆಲೆ 22,999 ರೂ. ಆಗಿದೆ.

ಐಕ್ಯೂ Z10 ಟರ್ಬೊ ಪ್ರೊ ಫೋನ್ 7000mAh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 120W ಸೂಪರ್ ಫಾಸ್ಟ್ ಫ್ಲ್ಯಾಶ್ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿದೆ. ಐಕ್ಯೂ Z10 ಟರ್ಬೊ ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8400 ಪ್ರೊಸೆಸರ್ ಜೊತೆಗೆ ಬಿಡುಗಡೆಯಾಗಲಿದೆ. ಐಕ್ಯೂ ಟರ್ಬೊ ಪ್ರೊ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 4 ಪ್ರೊಸೆಸರ್ ಅನ್ನು ಹೊಂದಿರಲಿದೆ. ಈ ಎರಡೂ ಫೋನ್‌ಗಳು 144Hz ರಿಫ್ರೆಶ್ ದರದೊಂದಿಗೆ OLED ಡಿಸ್ಪ್ಲೇಯೊಂದಿಗೆ ಬರಲಿವೆ.

ಕಳೆದ ವಾರ ಒನ್‌ಪ್ಲಸ್, ಒಪ್ಪೋ, ವಿವೋ ಮತ್ತು ರಿಯಲ್‌ಮಿ ಸೇರಿದಂತೆ ಹಲವು ಕಂಪನಿಗಳು ತನ್ನ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಇವುಗಳು 20,000 ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಪೈಕಿ ಒಪ್ಪೋ K13 5G, ವಿವೋ T4 5G, ಒಪ್ಪೋ A5 ಪ್ರೊ 5G, ರಿಯಲ್‌ಮಿ 14T 5G, ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಬಂದಿವೆ.

Best Mobiles in India

English summary
Upcoming Smartphone Launches this Week: CMF Phone 2 Pro, Motorola Edge 60 Pro 5G, iQOO Z10 Turbo And More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+