Home
ಮೊಬೈಲ್

ಸ್ಮಾರ್ಟ್‌ಫೋನ್ ಸುಗ್ಗಿ..! ಹಳೆಯ ಫೋನ್​ಗೆ ಹೇಳಿ ಬಾಯ್.. ಈ ವಾರ ಬರ್ತಿವೆ ಜಬರ್ದಸ್ತ್ ಮೊಬೈಲ್‌ಗಳು; ಇಲ್ಲಿದೆ ಪಟ್ಟಿ

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಏಪ್ರಿಲ್‌ ತಿಂಗಳು ಬಹಳ ವಿಶೇಷವಾಗಿದೆ. ದೇಶದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ. ಅದರೊಂದಿಗೆ ಭಾರತೀಯ ಮೊಬೈಲ್ ಮಾರುಕಟ್ಟೆಯ ಬಿಸಿಯೂ ಹೆಚ್ಚುತ್ತಿದೆ. ಹೌದು, ಏಪ್ರಿಲ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ, ಮುಂಬರುವ ವಾರದಲ್ಲಿ, ಅಂದರೆ ಏಪ್ರಿಲ್ 21 ಮತ್ತು ಏಪ್ರಿಲ್ 26 ರ ನಡುವೆ ಹಲವು ಹೊಸ 5G ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಬನ್ನಿ, ಈ ವಾರ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್‌ಗಳು (Upcoming smartphones in April 2025) ಯಾವುದು? ಬಿಡುಗಡೆ ದಿನಾಂಕ, ವಿಶೇಷತೆಗಳು ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ.

ಟೆಕ್ ದೈತ್ಯ ಒನ್‌ಪ್ಲಸ್, ಒಪ್ಪೋ, ವಿವೋ ಮತ್ತು ರಿಯಲ್‌ಮಿ ಸೇರಿದಂತೆ ಮುಂತಾದ ಕಂಪನಿಗಳು ಈ ವಾರ ತನ್ನ ಹೊಸ ಫೋನ್‌ಗಳನ್ನು (Upcoming Smartphone Launches Next Week) ಬಿಡುಗಡೆ ಮಾಡಲಿವೆ. ಇವುಗಳು 20,000 ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಪೈಕಿ, ಏಪ್ರಿಲ್ 21 ರಂದು ಒಪ್ಪೋ K13 5G ಮೊಬೈಲ್ ಮೊದಲನೆಯದಾಗಿ ಭಾರತಕ್ಕೆ ಬರಲಿದೆ. ಬಳಿಕ ವಿವೋ T4 5G, ಒಪ್ಪೋ A5 ಪ್ರೊ 5G, ರಿಯಲ್‌ಮಿ 14T 5G, ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್‌ಗಳು ರಿಲೀಸ್ ಆಗಲಿವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹಳೆಯ ಫೋನಿ​ಗೆ ಹೇಳಿ ಬಾಯ್..! ಈ ವಾರ ಬರ್ತಿವೆ ಜಬರ್ದಸ್ತ್ ಫೋನ್‌ಗಳು; ಪಟ್ಟಿ ನೋಡಿ

ಒಪ್ಪೋ K13 5G : ಏಪ್ರಿಲ್ 21 ರಂದು ಬಿಡುಗಡೆ

ಒಪ್ಪೋ K13 5G (OPPO K13 5G) ಬಿಡುಗಡೆಯೊಂದಿಗೆ ಈ ವಾರ ಪ್ರಾರಂಭವಾಗಲಿದೆ. ಕಂಪನಿಯು ತನ್ನ 'K' ಸರಣಿಗೆ ಹೊಸ ಸ್ಮಾರ್ಟ್‌ಫೋನ್ ಸೇರಿಸಲಿದೆ. ಇದನ್ನು 20,000 ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಬಿಡುಗಡೆ ಮಾಡಬಹುದು. ಈ ಫೋನಿನ ವಿಶೇಷತೆಗಳೆಂದರೆ, ಇದು 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇಯೊಂದಿಗೆ ಬರಲಿದೆ. ಇದು ಪಂಚ್ ಹೋಲ್ ಶೈಲಿಯ ಸ್ಕ್ರೀನ್ ಆಗಿದಲಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಒಪ್ಪೋ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ.

ಒಪ್ಪೋ K13 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ AI ಮುಖ್ಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಒಪ್ಪೋ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ. ಈ ಫೋನ್ ಶಕ್ತಿಶಾಲಿ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್ 7000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ನಿಜವಾದರೆ, ಒಪ್ಪೋ K13 5G ಇಷ್ಟು ದೊಡ್ಡ ಬ್ಯಾಟರಿಯನ್ನು ಹೊಂದಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ. ಈ ಮೊಬೈಲ್ 90W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ.

ವಿವೋ T4 5G : ಏಪ್ರಿಲ್ 22 ರಂದು ಬಿಡುಗಡೆ

ವಿವೋ ಕಂಪನಿಯ ಹೊಸ ವಿವೋ T4 5G (Vivo T4 5G) ಫೋನ್ ಏಪ್ರಿಲ್ 22 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಇದನ್ನು ಕೇವಲ 0.789 ಸೆಂ.ಮೀ ದಪ್ಪವಿರುವ ಅತ್ಯಂತ ತೆಳುವಾದ 7,300mAh ಬ್ಯಾಟರಿ ಫೋನ್ ಎಂದು ಕರೆದಿದೆ. ಈ ಫೋನ್ 7,300mAh ಬ್ಯಾಟರಿಯ ಜೊತೆಗೆ 90W ಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಈ ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 120Hz ರಿಫ್ರೆಶ್ ದರ, 5000 ನಿಟ್ಸ್ ಬ್ರೈಟ್‌ನೆಸ್ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಹೊಂದಿದೆ.

ವಿವೋ T4 5G ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 820K+ AnTuTu ಬೆಂಚ್‌ಮಾರ್ಕ್ ಸ್ಕೋರ್ ಪಡೆದಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 8GB RAM ಮತ್ತು 12GB RAM ಹೊಂದಿದೆ. ಇದು 8GB RAM + 128GB, 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಹಾಗೆಯೇ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಒಪ್ಪೋ A5 ಪ್ರೊ 5G : ಏಪ್ರಿಲ್ 24 ರಂದು ಬಿಡುಗಡೆ

ಬಹುನಿರೀಕ್ಷಿತ ಒಪ್ಪೋ A5 ಪ್ರೊ 5G (OPPO A5 Pro 5G) ಫೋನ್ ಏಪ್ರಿಲ್ 24 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಮಾಹಿತಿಯ ಪ್ರಕಾರ, ಈ ಫೋನಿನ 8GB RAM + 128GB ಸ್ಟೋರೇಜ್ ಬೆಲೆ 17,999 ಮತ್ತು 8GB + 256GB ಬೆಲೆ 19,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1604 × 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಕಲರ್‌ಓಎಸ್ 15 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಒಪ್ಪೋ A5 ಪ್ರೊ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಎರಡನೇ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ 5G ಸ್ಮಾರ್ಟ್‌ಫೋನ್ 5,800mAh ಬ್ಯಾಟರಿಯೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಚೀನಾದಲ್ಲಿ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ರಿಲೀಸ್ ಆಗಿದೆ. ಈ ಫೋನ್‌ 45W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ರಿಯಲ್‌ಮಿ 14T 5G : ಏಪ್ರಿಲ್ 25 ರಂದು ಬಿಡುಗಡೆ

ರಿಯಲ್‌ಮಿ 14T 5G (realme 14T 5G) ಮೊಬೈಲ್ ಏಪ್ರಿಲ್ 25 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ 5G ಫೋನ್ 6,000mAh ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದು 45W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಮೊಬೈಲ್ 2100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಐ (AI) ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ಮೊಬೈಲ್ IP69 ರೇಟಿಂಗ್ ಪಡೆದಿದೆ. ಮತ್ತು 300% ಅಲ್ಟ್ರಾ ವಾಲ್ಯೂಮ್ ಮೋಡ್ ಸಹ ಲಭ್ಯವಿರುತ್ತದೆ. ಈ ರಿಯಲ್‌ಮಿ 14T 5G ಫೋನ್ ಸಿಲ್ಕನ್ ಗ್ರೀನ್, ವೈಲೆಟ್ ಗ್ರೇಸ್ ಮತ್ತು ಸ್ಯಾಟಿನ್ ಇಂಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಒನ್‌ಪ್ಲಸ್ 13T : ಏಪ್ರಿಲ್ 24 ರಂದು ಬಿಡುಗಡೆ

ಒನ್‌ಪ್ಲಸ್ 13T (OnePlus 13T) ಮೊಬೈಲ್ ಏಪ್ರಿಲ್ 24 ರಂದು ಚೀನಾದಲ್ಲಿ ಮೊದಲು ಬಿಡುಗಡೆಯಾಗಲಿದೆ. ಬಳಿಕ ಭಾರತದಲ್ಲಿ ಲಾಂಚ್ ಆಗಲಿದೆ. ಇದು OnePlus 13 ಸರಣಿಯ ಮೂರನೇ ಮೊಬೈಲ್ ಆಗಲಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ 5G ಫೋನ್ 12GB RAM ಹೊಂದಿದೆ. ಈ ಫೋನ್ 6.3 ಇಂಚಿನ 1.5K OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದನ್ನು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುವುದು. ಇದು 80W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 6,100mAh ಬ್ಯಾಟರಿಯೊಂದಿಗೆ ಬರಲಿದೆ. ಈ ಒನ್‌ಪ್ಲಸ್ 13T ಮೊಬೈಲ್ 50 ಮೆಗಾಪಿಕ್ಸೆಲ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುತ್ತದೆ.

Best Mobiles in India

English summary
Upcoming Smartphone Launches Next Week: OPPO K13 5G, Vivo T4 5G, OPPO A5 Pro 5G, OnePlus 13T And More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+