Smartphones: ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಿವು ! ಏನಿರಲಿವೆ ಫೀಚರ್ಸ್ ?
ಮೇ ತಿಂಗಳಿನಲ್ಲಿ ಈಗಾಗಲೇ ಇನ್‌ಫಿನಿಕ್ಸ್ ಗೇಮಿಂಗ್ ಫೋಕಸ್ಡ್, GT 20 Pro, ಪೋಕೋ F6, ರಿಯಲ್‌ಮಿ GT 6T, ಸ್ಯಾಮ್‌ಸಂಗ್ ಗ್ಯಾಲಕ್ಸಿ F55, ಟೆಕ್ನೋ ಕ್ಯಾಮನ್ 30 ಸರಣಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು (Smartphones) ಮಾರುಕಟ್ಟೆಗೆ ಬಂದಿವೆ, ಈ ಬಿಡುಗಡೆಯ ಸರಣಿ ಇಲ್ಲಿಗೇ ನಿಲ್ಲದೆ ಇದೀಗ ಜೂನ್ ತಿಂಗಳಿನಲ್ಲಿಯೂ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳು ಬರುವ ನಿರೀಕ್ಷೆ ಇದೆ. ಶಿಯೋಮಿ, ವೀವೊ ಸೇರಿದಂತೆ ಅನೇಕ ಬ್ರ್ಯಾಂಡ್‌ನ ಮೊಬೈಲ್‌ಗಳು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಜೂನ್ 2024ರಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ (Smartphones) ವಿವರ:
ವಿವೋ ಎಕ್ಸ್ ಫೋಲ್ಡ್ 3 ಪ್ರೊ (Vivo X fold 3 pro): ಈ ಸ್ಮಾರ್ಟ್‌ಫೊನ್ ಜೂನ್ 6ರಂದು ನಡೆಯುವ ಸಮಾರಂಭದಲ್ಲಿ ಭಾರತದಲ್ಲಿ ತನ್ನ ಮೊದಲ ಫೋಲ್ಡಿಂಗ್ ಡಿವೈಸ್ ಅನ್ನು ಬಿಡುಗಡೆ ಮಾಡುವುದಾಗಿ ವೀವೊ ಸಂಸ್ಥೆ ದೃಢಪಡಿಸಿದೆ. ಈ ಸ್ಮಾರ್ಟ್‌ಫೋನ್ 2200 x 2480 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ವೇರಿಯೇಬಲ್ ರಿಫ್ರೆಶ್ ರೇಟ್ ಮತ್ತು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 8.03 ಇಂಚಿನ LTPO ಅಮೋಲ್ಡ್ ಆಂತರಿಕ ಡಿಸ್‌ಪ್ಲೇ ಒಳಗೊಂಡಿರುವ ಸಾಧ್ಯತೆಯಿದೆ. ಇದರ ಜೊತೆಗೆ 1172 x 2748 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.53 ಇಂಚಿನ ಅಮೋಲ್ಡ್ ಬಾಹ್ಯ ಡಿಸ್‌ಪ್ಲೇ ಹೊಂದಿದೆ.
ಸ್ಮಾರ್ಟ್‌ಫೋನ್ ಅನ್ನು ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ನಿಂದ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಎಲ್ಲಾ ಗ್ರಾಫಿಕ್ಸ್ ಕಾರ್ಯಗಳನ್ನು ನಿರ್ವಹಿಸಲು ಅಂಡ್ರೇನೊ 750 GPU ನೊಂದಿಗೆ ಸಂಯೋಜಿಸಲಾಗಿದೆ. ಈ ಫೋನ್ 16GBಯ LPDDR5X RAM ಮತ್ತು 1TB ವರೆಗಿನ UFS 4.0 ಸಂಗ್ರಹಣೆ ಹೊಂದಿರಬಹುದು.

ಶಿಯೋಮಿ 14 CIVI (Xiaomi 14 CIVI): ಜೂನ್ 12ರಂದು ಭಾರತಕ್ಕೆ ಮೊಟ್ಟ ಮೊದಲ CIVI ಸರಣಿಯ ಸಾಧನವನ್ನು ತರುವುದಾಗಿ ಶಿಯೋಮಿ ಸಂಸ್ಥೆ ದೃಢಪಡಿಸಿದೆ. ಇದು 2750 x 1236 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.55 ಇಂಚಿನ 12 ಬಿಟ್ OLED ಡಿಸ್‌ಪ್ಲೇ ಒಳಗೊಂಡಿರುವ ಸಾಧ್ಯತೆಯಿದೆ. ಇದು 3,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್, 240Hz ಸ್ಪರ್ಶ ರೇಟ್, 2160Hz PWM ಮಬ್ಬಾಗಿಸುವಿಕೆ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿರಬಹುದು ಎಂದು ಊಹಿಸಲಾಗಿದೆ. ಈ ಫೋನ್ 16GB ವರೆಗೆ LPDDR5x RAM ಮತ್ತು 512GB ವರೆಗಿನ UFS 4.0 ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ.
ರಿಯಲ್‌ಮಿ GT 6 (Realme GT 6): ಜಾಗತಿಕವಾಗಿ ಇತ್ತೀಚಿನ ಜಿಟಿ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ರಿಯಲ್‌ಮಿ ಸಂಸ್ಥೆ ದೃಢಪಡಿಸಿದೆ. ಕಂಪನಿ ಉನ್ನತ ಮಟ್ಟದ ಕಾರ್ಯನಿರ್ವಾಹಕರು ಇತ್ತೀಚೆಗೆ ಫೋನ್ ಅನ್ನು ಜೂನ್ 20ರಂದು ಜಾಗತಿಕವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಊಹಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಅಥವಾ ಯಾವುದೇ ಇತರ ವಿವರಗಳನ್ನು ಬಹಿರಂಗಪಡಿಸದಿದ್ದರೂ, ರಿಯಲ್‌ಮಿ GT Neo 6 ನ ಫೀಚರ್ ಗಮನಿಸಿ, ಭಾರತದಲ್ಲಿ ಬಿಡುಗಡೆ ಮಾಡಲಿರುವ ಮುಂಬರುವ ಸ್ಮಾರ್ಟ್‌ಫೋನ್ ಫೀಚರ್ಸ್‌ನ ಕಲ್ಪನೆಯನ್ನು ನಾವು ಊಹಿಸಬಹುದು.
ರಿಯಲ್‌ಮಿ GT Neo 6 ಇದು 6.78 ಇಂಚಿನ ಫುಲ್ HD+ LTPO ಅಮೋಲ್ಡ್ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 6,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪೋಕೋ M6 Plus (Poco M6 Plus): ಪೋಕೋ ಬಜೆಟ್ ಸರಣಿಯ ಫೋನ್ ಇತ್ತೀಚೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣವನ್ನು ಪಡೆದುಕೊಂಡಿದೆ, ಇದು ಶೀಘ್ರದಲ್ಲೇ ದೇಶದಲ್ಲಿ ಬಿಡುಗಡೆಯಾಗಬಹುದು ಎಂದು ಸೂಚಿಸುತ್ತದೆ. ಇತ್ತೀಚಿನ ಪೋಕೋ ಸಾಧನ 6.79 ಇಂಚಿನ ಫುಲ್ HD+ 120Hz LCD ಡಿಸ್‌ಪ್ಲಢ, 50MP ಪ್ರಾಥಮಿಕ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಲೆನ್ಸ್‌ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 8MP ಮುಂಭಾಗದ ಕ್ಯಾಮರಾವನ್ನು ಒಳಗೊಂಡಿರುತ್ತದೆ.
ಹಾನರ್ 200 ಮತ್ತು ಮ್ಯಾಜಿಕ್ 6 Pro (Honor 200 ಮತ್ತು Magic 6 Pro): ಹೈಟೆಕ್ (HTech) ತನ್ನ ಮ್ಯಾಜಿಕ್ 6 ಪ್ರೊ ಮತ್ತು ಹಾನರ್ 200 ಸರಣಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. HTech ಇನ್ನೂ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಈ ತಿಂಗಳು ಭಾರತಕ್ಕೆ ಬರುವ ಲಕ್ಷಣಗಳಿವೆ.
ಹಾನರ್ ಮ್ಯಾಜಿಕ್ 6 Pro ಇದು 120Hz ರಿಫ್ರೆಶ್ ರೇಟ್ ಮತ್ತು 5,000 nits ನ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ 6.8 ಇಂಚಿನ ಫುಲ್ HD+ ಬಾಗಿದ OLED ಡಿಸ್ಪ್ಲೇಯನ್ನು ಹೊಂದಿದೆ. ಫೋನ್ ಇತ್ತೀಚಿನ Qualcomm Snapdragon 8 Gen 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ, ಇದು 12GB LPDDR5x RAM ಮತ್ತು 512GB UFS 4.1 ಸ್ಟೋರೆಜ್ ಸಾಮರ್ಥ್ಯ ಹೊಂದಿರಬಹುದುಎ ಎಂದು ಊಹಿಸಲಾಗಿದೆ.
Honor 200 ಸರಣಿಯನ್ನು ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಆ ಸಾಧನಗಳ ವಿಶೇಷಣಗಳನ್ನು ನೋಡಿದರೆ ಫೋನ್‌ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಆಗಮಿಸುವ ಸಾಧ್ಯತೆಗಳಿವೆ. ಇದು 2664 x 1200 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಜೊತೆಗೆ 6.7 ಇಂಚಿನ ಫುಲ್ HD+ ಬಾಗಿದ OLED ಡಿಸ್‌ಪ್ಲೇ ಹೊಂದಿದೆ.


Click it and Unblock the Notifications








