Home
ಮೊಬೈಲ್

Upcoming Smartphones: ಈ ತಿಂಗಳು ಬಿಡುಗಡೆಯಾಗುವ ಜಬರ್ದಸ್ತ್ ಫೋನ್‌ಗಳಿವು; ಫಸ್ಟ್ ಯಾವುದು? ಬೆಲೆ, ಫೀಚರ್ಸ್‌ ನೋಡಿ

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಜನವರಿ ತಿಂಗಳು ಹಬ್ಬದೂಟ ಉಣಬಡಿಸಿದೆ. ಜನವರಿ ತಿಂಗಳಿನಂತೆಯೇ, ಈ ತಿಂಗಳು ಸಹ ಹಲವು ಪ್ರಸಿದ್ಧ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಹೌದು, ಜನವರಿ ತಿಂಗಳಲ್ಲಿ ವಿವಿಧ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು. OnePlus 13 ಸರಣಿಯ ಸ್ಮಾರ್ಟ್‌ಫೋನ್‌ಗಳು, Galaxy S25 ಸರಣಿಯಂತಹ Samsung ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು, Realme 14 Pro ಸರಣಿ ಮತ್ತು Poco X7 ಸರಣಿ ಸೇರಿದಂತೆ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ, ಫೆಬ್ರವರಿಯಲ್ಲಿಯೂ ಸಹ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸಿದ್ಧವಾಗಿವೆ.

ಹೌದು, ಈ ಪಟ್ಟಿಯಲ್ಲಿ ಐಕ್ಯೂ, ವಿವೋ, ಒಪ್ಪೋ ಮತ್ತು ಶಿಯೋಮಿ ಸೇರಿದಂತೆ ವಿವಧ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು (Upcoming smartphones in february 2025) ಸೇರಿವೆ. Samsung Galaxy A36, Samsung Galaxy A56, iQOO Neo 10R, Vivo V50 ಸರಣಿ, Oppo, Tecno, Xiaomi 15 Ultra, Asus, Infinix Note 50 ಸರಣಿಗಳು ಬಿಡುಗಡೆಯಾಗಲಿವೆ. ಇದರಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಲಿವೆ.

Upcoming Smartphones: ಈ ತಿಂಗಳು ಬಿಡುಗಡೆಯಾಗುವ ಫೋನ್‌ಗಳಿವು; ಇಲ್ಲಿದೆ ಪಟ್ಟಿ

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್

ಐಕ್ಯೂ ನಿಯೋ 10R (iQOO Neo 10R) ಸ್ಮಾರ್ಟ್‌ಫೋನ್ 30,000 ರೂ.ಗಳ ಬಜೆಟ್ ವಿಭಾಗದಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 144Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಕ್ಯಾಮೆರಾ ಸೆಟಪ್ ಮತ್ತು ಸೊಗಸಾದ ಕ್ಯಾಮೆರಾಗಳನ್ನು ಒಳಗೊಂಡಿರುತ್ತದೆ. ಈ ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಮಾರ್ಚ್ 11 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ವಿವೋ V50 ಸರಣಿ

ವಿವೋ V50 ಸರಣಿಯಲ್ಲಿ ಎರಡು ಮೊಬೈಲ್‌ಗಳು ಬಿಡುಗಡೆಯಾಗಲಿವೆ. ಅವುಗಳೇ ವಿವೋ V50 ಮತ್ತು ವಿವೋ V50 ಪ್ರೊ ಸ್ಮಾರ್ಟ್‌ಫೋನ್‌ಗಳು. ಎರಡೂ ಫೋನ್‌ಗಳು 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಪೂರ್ಣ HD+ ಅಮೋಲೆಡ್ ಡಿಸ್ಪ್ಲೇ ಹೊಂದಿವೆ ಎಂದು ಹೇಳಲಾಗಿದೆ. ಇದು 50MP + 50MP ಕ್ಯಾಮೆರಾ ಒಳಗೊಂಡಡಿದೆ. ಹಾಗೆಯೇ 6000mAh ಬ್ಯಾಟರಿ ಹೊಂದಿರುವ ಸಾಧ್ಯತೆಯಿದೆ. ವಿವೋ V50 ಸರಣಿಯ ಸ್ಮಾರ್ಟ್‌ಫೋನ್‌ಗಳು 30,000 ರೂ. ನಿಂದ 50,000 ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸರಣಿಯ ಬಿಡುಗಡೆ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಈ ತಿಂಗಳ ಅಂತ್ಯದಲ್ಲಿ ಇದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A36, A56

ಸ್ಯಾಮ್‌ಸಂಗ್ ಸಹ ಎರಡು ಹೊಸ ಮೊಬೈಲ್‌ ಬಿಡುಗಡೆ ಮಾಡಲಿದೆ. ಇವು ಸ್ಯಾಮ್‌ಸಂಗ್ ಗ್ಯಾಲಕ್ಸಿ A36 (Samsung Galaxy A36) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A56 (Samsung Galaxy A56) ಹೆಸರಿನೊಂದಿಗೆ ಬರಲಿವೆ. ಈ ಎರಡು ಫೋನ್‌ಗಳು ಈ ತಿಂಗಳು ಭಾರತ ಮತ್ತು ಇತರೆ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ A36 ಮತ್ತು ಗ್ಯಾಲಕ್ಸಿ A56 ಫೋನ್‌ಗಳು 30,000 ರೂ. ನಿಂದ 45,000 ರೂ.ಗಳ ಬಜೆಟ್‌ ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇನ್ಫಿನಿಕ್ಸ್ ನೋಟ್ 50 ಸರಣಿ

ಇನ್ಫಿನಿಕ್ಸ್‌ನ ನೋಟ್ 50 ಸರಣಿ (Infinix Note 50) ಈ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಆದರೆ, ಕಂಪನಿಯು ಯಾವುದೇ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ. ಇದು ದೊಡ್ಡ ಬ್ಯಾಟರಿ ಜೊತೆಗೆ ಉತ್ತಮ ಡಿಸ್ಪ್ಲೇ ಹೊಂದಿರುತ್ತದೆ. ಇದು 15,000 ರೂ.ಗಳ ಬಜೆಟ್ ವಿಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಟೆಕ್ನೋ ಕರ್ವ್

ಟೆಕ್ನೋ ಕರ್ವ್ ಫೋನನ್ನು ಬಜೆಟ್ ಶ್ರೇಣಿಯ ವಿಭಾಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗುತ್ತದೆ. ಇದನ್ನು 10,000 ರೂ. ನಿಂದ 20,000 ರೂ.ಗಳ ಬಜೆಟ್‌ನಲ್ಲಿ ಪರಿಚಯಿಸಲಾಗುವುದು. ಇದು ಪ್ರೀಮಿಯಂ ವಿನ್ಯಾಸದೊಂದಿಗೆ ಬರುತ್ತದೆ. ಇದು ಬಾಗಿದ ಡಿಸ್ಪ್ಲೇ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.

Best Mobiles in India

English summary
Upcoming smartphones in february 2025: here is the List of mobiles releasing in february
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+