Home
ಮೊಬೈಲ್

ನವೆಂಬರ್‌ನಲ್ಲಿ ಭಾರತಕ್ಕೆ ಬರ್ತಿವೆ ಸೊಗಸಾದ ಫೋನ್‌ಗಳು: ನಂ.1 ಯಾವುದು? ಪಟ್ಟಿ ಇಲ್ಲಿದೆ

ದೀಪಾವಳಿ ಸಂದರ್ಭದಲ್ಲಿ ಹೊಸ ಫೋನ್‌ಗಳ ಖರೀದಿ ಭರಾಟೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಆಫರ್‌ಗಳು ಲಭ್ಯವಿದೆ. ಮೊಬೈಲ್‌ ಪ್ರಿಯರು ಸಹ ಮುಗಿಬಿದ್ದು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಿದ್ದಾರೆ. ಈ ಬಾರಿ ದೀಪಾವಳಿ ನಂತರವೂ ಭಾರತದ ಮೊಬೈಲ್ ಮಾರುಕಟ್ಟೆ ಮಿಂಚಲಿದೆ. ಹಲವು ದೈತ್ಯ ಕಂಪನಿಗಳು ನವೆಂಬರ್‌ನಲ್ಲಿ ಹೊಸ ಫೋನ್‌ಗಳನ್ನು (Upcoming smartphones in november 2024) ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ ಹೆಚ್ಚಿನವು ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರಮುಖ ಫೋನ್‌ಗಳಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಈಗಾಗಲೇ ಕೆಲವು ಫೋನ್‌ಗಳ ಭಾರತದಲ್ಲಿ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಉಳಿದಂತೆ, ಯಾವುದೇ ಸ್ಮಾರ್ಟ್‌ಫೋನ್‌ಗಳ ಲಾಂಚ್ ದಿನಾಂಕವನ್ನು ಪ್ರಕಟಿಸಿಲ್ಲ. ಈ ಪೈಕಿ ರೆಡ್ಮಿ, ಪೊಕೊ, ರಿಯಲ್‌ಮಿ, ಒಪ್ಪೋ ಮತ್ತು ವಿವೋ ಸೇರಿದಂತೆ ಹಲವು ಕಂಪನಿಗಳ ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ನವೆಂಬರ್‌ ತಿಂಗಳಲ್ಲಿ ಯಾವೆಲ್ಲಾ ಫೋನ್‌ಗಳು ಬರಲಿವೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ನವೆಂಬರ್‌ ತಿಂಗಳಲ್ಲಿ ಮುಂಬರುವ ಫೋನ್‌ಗಳಿವು!

ರೆಡ್ಮಿ 14C 5G

ರೆಡ್ಮಿ 14C 5G (Redmi 14C 5G) ಫೋನನ್ನು ನವೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಇದು 8GB RAM ಹೊಂದಿರಲಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ವರದಿಯ ಪ್ರಕಾರ, ರೆಡ್ಮಿ 14C 5G ಫೋನ್ 120Hz ರಿಫ್ರೆಶ್‌ ದರದೊಂದಿಗೆ 6.88 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಮೊಬೈಲ್‌ನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಲಭ್ಯವಿರಲಿದೆ. ಇದು 5060mAh ಬ್ಯಾಟರಿಯನ್ನು ಹೊಂದಿರಲಿದೆ.

Upcoming Smartphones: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು

ಪೊಕೊ C75 5G

ರೆಡ್ಮಿ ಮತ್ತು ಪೊಕೊ ಕಂಪನಿಗಳು ಬಹುತೇಕ ಒಂದೇ ರೀತಿಯ ಫೋನ್‌ಗಳನ್ನು ಬಿಡುಗಡೆ ಮಾಡಬಹುದು. ಪೊಕೊ C75 5G (Poco C75 5G) ಫೋನ್ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದು ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ಹೊಂದಿರಲಿದೆ. ಈ ಫೋನ್‌ನಲ್ಲಿ 8GB RAM ಇರಲಿದೆ. ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿರಲಿದೆ. ಈ ಫೋನಿನಲ್ಲಿ 5100mAh ಸಾಮರ್ಥ್ಯದ ಬ್ಯಾಟರಿಯನ್ನು ಇರಲಿದೆ.

Upcoming Smartphones: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು

ರಿಯಲ್‌ಮಿ GT 7 ಪ್ರೊ

ರಿಯಲ್‌ಮಿ GT 7 ಪ್ರೊ (Realme GT 7 Pro) ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುವ ಮೊದಲ ಫೋನ್ ಆಗಿದೆ. ಈ ಮೊಬೈಲ್‌ 16GB RAM ಹೊಂದಿರಲಿದೆ. ಇದು 6500mAh ಸಾಮರ್ಥ್ಯದ ಬ್ಯಾಟರಿ, 120W ಚಾರ್ಜಿಂಗ್, 8T LTPO ಓಎಲ್‌ಡಿ ಡಿಸ್ಪ್ಲೇ ಮತ್ತು ಎಐ ಪವರ್ ಒಳಗೊಂಡಿರಲಿದೆ.

Upcoming Smartphones: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು

ಐಕ್ಯೂ 13

ಐಕ್ಯೂ 13 (iQOO 13) ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಲೋಕಾರ್ಪಣೆಗೊಳ್ಳಲಿದೆ. ವರದಿಯ ಪ್ರಕಾರ, ಈ ಫೋನ್ 16GB RAM ಮತ್ತು 512GB ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ. ಇದು 6150mAh ಸಾಮರ್ಥ್ಯದ ಬ್ಯಾಟರಿ ಮತ್ತು 120W ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ. ಮೊಬೈಲ್‌ನಲ್ಲಿ ಓಎಲ್‌ಇಡಿ ಪ್ಯಾನೆಲ್‌, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನವನ್ನು ಹೊಂದಿರುವ ಕ್ಯಾಮೆರಾ ಸೆಟಪ್ ಇರಲಿದೆ.

Upcoming Smartphones: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು

ಒಪ್ಪೋ ಫೈಂಡ್ X8

ಒಪ್ಪೋ ಫೈಂಡ್ X8 (Oppo Find X8) ಫೋನನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ಭಾರತೀಯ ಮಾರುಕಟ್ಟೆಗೆ ಬರಲಿದೆ. ಇದು ಮುಂದಿನ ತಿಂಗಳು (ನವೆಂಬರ್‌) ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ 16GB RAM, ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ.

ಇದರಲ್ಲಿ 32 ಮೆಗಾಪಿಕ್ಸೆಲ್ ಸೋನಿ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಲಭ್ಯವಿರಲಿದೆ. ಈ ಮೊಬೈಲ್ 120Hz ರಿಫ್ರೆಶ್‌ ದರದೊಂದಿಗೆ 6.59 ಇಂಚಿನ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 5630mAh ಸಾಮರ್ಥ್ಯದ ಬ್ಯಾಟರಿ ಇರಲಿದೆ. ಜೊತೆಗೆ, 80W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

Upcoming Smartphones: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು

ಒಪ್ಪೋ ಫೈಂಡ್ X8 ಪ್ರೊ

ಕಂಪನಿಯು ಒಪ್ಪೋ ಫೈಂಡ್ X8 ಸರಣಿಯಲ್ಲಿ ಒಪ್ಪೋ ಫೈಂಡ್ X8 ಪ್ರೊ ಅನ್ನು ಬಿಡುಗಡೆ ಮಾಡಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿರಲಿದೆ. ಇದರೊಂದಿಗೆ 16GB RAM ಇರಲಿದೆ. ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 6.78 ಇಂಚಿನ ಕರ್ವ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಫೋನಿನಲ್ಲಿ 5910mAh ಸಾಮರ್ಥ್ಯದ ಬ್ಯಾಟರಿ ಲಭ್ಯವಿರಲಿದೆ. ಇದು 80W ವೈರ್ಡ್, 50W ವೈರ್‌ಲೆಸ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾಂರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ.

ವಿವೋ X200

ವಿವೋ X200 (Vivo X200) ಸರಣಿಯನ್ನು ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಇದು 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ 8T ಅಮೋಲೆಡ್‌ ಡಿಸ್ಪ್ಲೇಯನ್ನು ಹೊಂದಿದೆ. ಫೋನನ್ನು ಮೀಡಿಯಾ ಟೆಕ್ ಡೈಮೆನ್ಶನ್ 9400 ಪ್ರೊಸೆಸರ್‌ನೊಂದಿಗೆ ಪರಿಚಯಿಸಲಾಗುತ್ತದೆ. ಈ ಮೊಬೈಲ್ 5800mAh ಬ್ಯಾಟರಿಯನ್ನು ಹೊಂದಿದ್ದು, 90W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

Upcoming Smartphones: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು

ವಿವೋ X200 ಪ್ರೊ

ವಿವೋ X200 ಪ್ರೊ ಮೊಬೈಲ್ 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಇರಲಿದೆ. ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಫೋನ್ 6.78 ಇಂಚಿನ 8T LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಜೊತೆಗೆ, 6000mAh ಸಾಮರ್ಥ್ಯದ ಬ್ಯಾಟರಿ ಮತ್ತು 90W ವೈರ್ಡ್, 30W ವೈರ್‌ಲೆಸ್ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿರಲಿದೆ.

Best Mobiles in India

English summary
Upcoming smartphones in november 2024: List of mobiles releasing in november
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+