Upcoming Smartphones: ಈ ಜಬರ್ದಸ್ತ್ ಫೋನ್‌ಗಳು ಈ ವಾರ ಬಿಡುಗಡೆ; ಯಾವುದು ಫಸ್ಟ್? ಇಲ್ಲಿದೆ ಪಟ್ಟಿ
Upcoming Smartphones: ಸ್ಮಾರ್ಟ್‌ಫೋನ್ ಪ್ರಿಯರಿಗೆ ಈ ವಾರ ಹಬ್ಬವೇ ಸರಿ. ಪ್ರಸಿದ್ಧ ಕಂಪನಿಯ ಹೊಸ ಮೊಬೈಲ್‌ಗಳು ಈ ವಾರ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದರಲ್ಲಿ ಅಗ್ಗದ ಫೋನ್ ಮತ್ತು ಮಧ್ಯಮ ಶ್ರೇಣಿಯ ಮೊಬೈಲ್ ಕೂಡ ಬಿಡುಗಡೆಯಾಗಲಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಮೊಬೈಲ್‌ಗಳ ಪಟ್ಟಿಯಲ್ಲಿ, ವಿವೋ Y300 (Vivo Y300) ಮತ್ತು ರೆಡ್ಮಿ A4 5G (Redmi A4 5G) ಫೋನ್‌ಗಳ ಹೆಸರು ಸೇರಿದೆ. ಬನ್ನಿ, ಈ ಫೋನ್‌ಗಳ ಬಿಡುಗಡೆ ಯಾವಾಗ? ವಿಶೇಷತೆಗಳೇನು? ಎನ್ನುವುದನ್ನು ತಿಳಿಯೋಣ.
ವಿವೋ ಮತ್ತು ರೆಡ್ಮಿ ಕಂಪನಿಯು ಹೊಸ ಫೋನ್‌ಗಳ ಬಿಡುಗಡೆ ದಿನಾಂಕವನ್ನು ಘೋಷಿಸಿವೆ. ಉಳಿದಂತೆ, ಯಾವುದೇ ಫೋನ್‌ಗಳ ಲಾಂಚ್ ದಿನಾಂಕವನ್ನು ಪ್ರಕಟಿಸಿಲ್ಲ. ರೆಡ್ಮಿ A4 5G ಮೊಬೈಲ್ ಇದೇ ನವೆಂಬರ್ 20 ರಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಒಂದು ದಿನದ ಬಳಿಕ (ನವೆಂಬರ್ 21) ವಿವೋ Y300 ಫೋನ್ ಭಾರತಕ್ಕೆ ಎಂಟ್ರಿ ಕೊಡಲಿದೆ. ಈ ಫೋನ್‌ಗಳ ಬೆಲೆ ಮತ್ತು ಇನ್ನಿತರ ವಿವರಗಳನ್ನು ತಿಳಿಯಲು ಮುಂದೆ ಓದಿ.

ಈ ವಾರ ಬಿಡುಗಡೆಗೆ ಸಿದ್ಧವಾಗಿರುವ ಫೋನ್‌ಗಳಿವು!
ರೆಡ್ಮಿ A4 5G
ಬಿಡುಗಡೆ ದಿನಾಂಕ : ನವೆಂಬರ್ 20
ನಿರೀಕ್ಷಿತ ಬೆಲೆ : 9,999 ರೂ.
ರೆಡ್ಮಿ A4 5G ಫೋನನ್ನು ನವೆಂಬರ್ 20 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಇದು ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಪ್ರೊಸೆಸರ್ ಹೊಂದಿರುವ ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಶಿಯೋಮಿ (Xiaomi) ಮತ್ತು ಕ್ವಾಲ್ಕಾಮ್ (Qualcomm) ಒಪ್ಪಂದದ ಅಡಿಯಲ್ಲಿ ಪರಿಚಯಿಸಲಾಗುತ್ತಿದೆ. ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ರೆಡ್ಮಿ A4 5G ಫೋನನ್ನು ತಯಾರಿಸಲಾಗಿದೆ.
ರೆಡ್ಮಿ A4 5G ಫೋನಿನ ವೈಶಿಷ್ಟ್ಯಗಳು
ಕಂಪನಿಯು ರೆಡ್ಮಿ A4 5G ಫೋನನ್ನು 4GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಬಹುದು. ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರಲಿದೆ.
ಈ ರೆಡ್ಮಿ A4 5G ಫೋನ್ 6.68 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಕಂಪನಿಯು ಹೊಸ ಮೊಬೈಲ್‌ನಲ್ಲಿ 5160mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗುತ್ತದೆ.
ವಿವೋ Y300
ಬಿಡುಗಡೆ ದಿನಾಂಕ : ನವೆಂಬರ್ 21
ನಿರೀಕ್ಷಿತ ಬೆಲೆ : 21,499 ರೂ.
ವಿವೋ Y300 ಮೊಬೈಲ್ ನವೆಂಬರ್ 21 ರಂದು ಭಾರತದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕಂಪನಿಯು ನೂತನ ಫೋನನ್ನು 12 ಸಾವಿರ ಅಥವಾ 22 ಸಾವಿರ ರೂ.ಗಳ ಆರಂಭಿಕ ಬೆಲೆಗೆ ಪರಿಚಯಿಸುವ ಸಾಧ್ಯತೆಯಿದೆ. ವರದಿದ ಪ್ರಕಾರ, ಈ ಮೊಬೈಲ್ 8GB RAM ಅನ್ನು ಹೊಂದಿರಲಿದೆ. ಇದು ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ನೀವು, ಈ ಫೋನನ್ನು 128GB ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು.
32MP ಸೆಲ್ಫಿ ಕ್ಯಾಮೆರಾ, 5000mAh ಬ್ಯಾಟರಿ
ವಿವೋ Y300 ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೆಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.
ಈ ವಿವೋ Y300 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದನ್ನು ಚಾರ್ಜ್ ಮಾಡಲು, 80W ಫ್ಲ್ಯಾಶ್‌ಚಾರ್ಜ್ ಸೌಲಭ್ಯ ಒದಗಿಸಲಾಗುತ್ತದೆ. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ IP64 ರೇಟಿಂಗ್ ಪಡೆದಿದೆ.


Click it and Unblock the Notifications








