Home
ಮೊಬೈಲ್

ಭಾರತೀಯ ಗ್ರಾಹಕರಿಗಾಗಿ ಬಿಡುಗಡೆಗೊಳ್ಳಲಿರುವ ಮುಂಬರುವ ಸ್ಮಾರ್ಟ್ ಫೋನ್ ಗಳು

By Gizbot Bureau

ಕರೋನಾ ವೈರಸ್ ಸದ್ಯ ಆರ್ಥಿಕವಾಗಿ ವಿಶ್ವದಾದ್ಯಂತ ದೊಡ್ಡ ಪರಿಣಾಮವನ್ನೇ ಮಾಡಿದೆ. ಹಲವು ಇಂಡಸ್ಟ್ರಿಗಳು ಇದರ ದುಷ್ಪರಿಣಾಮವನ್ನು ಎದುರಿಸುತ್ತಿವೆ ಎಂಬ ಮಾತುಗಳಿವೆ. ಅದರಲ್ಲಿ ಸ್ಮಾರ್ಟ್ ಫೋನ್ ಇಂಡಸ್ಟ್ರಿ ಕೂಡ ಸೇರಿದೆ. ಆದರೆ ಹೊಸ ಡಿವೈಸ್ ಗಳ ಬಿಡುಗಡೆಯನ್ನು ಹಲವು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ಮುಂದುವರಿಸಿದೆ.

ಸ್ಮಾರ್ಟ್ ಫೋನ್

ಈ ವರ್ಷದ ಎರಡನೇ ತ್ರೈಮಾಸಿಕಕ್ಕೆ ನಾವು ಕಾಲಿಟ್ಟಿದ್ದೇವೆ. ತಮ್ಮ ಹೊಸ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವುದಕ್ಕೆ ಹಲವು ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಸಿದ್ಧವಾಗಿವೆ. ಕೋವಿಡ್-19 ಕಾರಣದಿಂದಾಗಿ ಈಗಾಗಲೇ ಫೆಬ್ರವರಿಯಲ್ಲಿ ನಡೆಯಬೇಕಿದ್ದ MWC 2020 ನಿಂತಿದೆ. ಹಾಗಾಗಿ ಆನ್ ಲೈನ್ ಮೂಲಕ ತಮ್ಮ ಡಿವೈಸ್ ಗಳನ್ನು ಬಿಡುಗಡೆಗೊಳಿಸುವುದಕ್ಕೆ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ಸಿದ್ಧಗೊಂಡಿವೆ. ಆಪಲ್, ಒನ್ ಪ್ಲಸ್ ಮತ್ತು ಹಾನರ್ ಗಳು ಈ ನಿಟ್ಟಿನಲ್ಲಿ ಕ್ಯೂನಲ್ಲಿವೆ.

ಹಲವು ದಿನಗಳಿಂದ ವದಂತಿಯಾಗಿರುವ ಫೋನ್ ಗಳಲ್ಲಿ ಪ್ರಮುಖವಾಗಿರುವುದು ಐಫೋನ್ SE 2020 ಯನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ಇನ್ನುಳಿದಂತೆ ಕೆಲವು ಡಿವೈಸ್ ಗಳು ಭಾರತೀಯ ಮಾರುಕಟ್ಟೆಯನ್ನು ಕೆಲವೇ ದಿನಗಳಲ್ಲಿ ಪ್ರವೇಶಿಸಲಿದೆ.

ಆಪಲ್ ಐಫೋನ್ ಎಸ್ಇ 2020

ಆಪಲ್ ಐಫೋನ್ ಎಸ್ಇ 2020

ಹಲವು ದಿನಗಳ ಕಾಯುವಿಕೆಯ ನಂತರ ಆಪಲ್ ಐಫೋನ್ ಎಸ್ಇಯನ್ನು ಪ್ರಕಟಿಸಲಾಗಿದೆ. ಆಪಲ್ ಎ13 ಬಯೋನಿಕ್ ಚಿಪ್ ಸೆಟ್ ನ್ನು ಐಫೋನ್ 11 ಸರಣಿಯಲ್ಲಿ ಹೊಂದಿರುವಂತೆ ಇದರಲ್ಲಿಯೂ ಅಳವಡಿಸಲಾಗಿರುತ್ತದೆ. 4.7-ಇಂಚಿನ HD ರೆಟಿನಾ ಡಿಸ್ಪ್ಲೇ ಜೊತೆಗೆ ಟಚ್ ಐಡಿ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು ಹ್ಯಾಪ್ಟಿಕ್ ಟಚ್ ನ್ನು ಇದು ಹೊಂದಿದೆ.ಈ ಡಿವೈಸ್ ಗ್ಲಾಸ್ ಮತ್ತು ಅಲ್ಯೂಮಿನಿಯಂ ಡಿಸೈನ್ ನ್ನು ಹೊಂದಿದೆ. 12MP ಕ್ಯಾಮರಾವನ್ನು ಹಿಂಭಾಗದಲ್ಲಿ ಹೊಂದಿದ್ದು 4K ವೀಡಿಯೋ ರೆಕಾರ್ಡಿಂಗ್ ಗೆ ಬೆಂಬಲ ನೀಡುತ್ತದೆ ಮತ್ತು ಮುಂಭಾಗದಲ್ಲಿ 7MP ಕ್ಯಾಮರಾಗೆ ಬೆಂಬಲವಿದ್ದು 1080p ವೀಡಿಯೋ ರೆಕಾರ್ಡಿಂಗ್ ಗೆ ಬೆಂಬಲ ನೀಡುತ್ತದೆ.

ಒನ್ ಪ್ಲಸ್ 8

ಒನ್ ಪ್ಲಸ್ 8

ಒನ್ ಪ್ಲಸ್ 8 ನ ಸ್ಟ್ಯಾಂಡರ್ಡ್ ವೇರಿಯಂಟ್ ನ ಸ್ಮಾರ್ಟ್ ಫೋನ್ 6.55-ಇಂಚಿನ ಫ್ಲೂಯಿಡ್ AMOLED FHD+ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್, HDR10+, ಆಕ್ಟಾ ಕೋರ್ ಸ್ನ್ಯಾಪ್ ಡ್ರಾಗನ್ 865 SoC, 48MP ಸೋನಿ IMX586 ಸೆನ್ಸರ್ ನ್ನು ಹಿಂಭಾಗದಲ್ಲಿ ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಡಾಲ್ಬೈ ಅಟ್ಮೋಸ್ ಗೆ ಬೆಂಬಲ ನೀಡುತ್ತದೆ ಮತ್ತು ವ್ರ್ಯಾಪ್ ಚಾರ್ಜ್ 30ಟಿ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

ಒನ್ ಪ್ಲಸ್ 8 ಪ್ರೋ

ಒನ್ ಪ್ಲಸ್ 8 ಪ್ರೋ

ಒನ್ ಪ್ಲಸ್ 8 ಪ್ರೋ 3ಡಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ನ್ನು ಹೊಂದಿದೆ. 12GB RAM, ಮತ್ತು ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 SoC, ಆಂಡ್ರಾಯ್ಡ್ 10 ಇದ್ದು ಆಕ್ಸಿಜನ್ ಓಎಸ್ 10, ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 48MP ಸೆನ್ಸರ್ಸ್, 8MP ಟೆಲಿಫೋಟೋ ಲೆನ್ಸ್ ಮತ್ತು 5MP ಮೋನೋ ಸೆನ್ಸರ್ ವ್ಯವಸ್ಥೆಯನ್ನು ಹೊಂದಿರುತ್ತದೆ. ವ್ರ್ಯಾಪ್ ಚಾರ್ಜ್ 30T ಫಾಸ್ಟ್ ಚಾರ್ಜಿಂಗ್ ಗೆ ಇದು ಬೆಂಬಲ ನೀಡುತ್ತದೆ ಮತ್ತು ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ಗೆ ಇದು ಸಹಕರಿಸುತ್ತದೆ. 7

ಹಾನರ್ 20ಇ

ಹಾನರ್ 20ಇ

ಹಾನರ್ 20ಇ ಹೈಸಿಲಿಕಾನ್ ಕಿರಿನ್ 710ಎಫ್ ಪ್ರೊಸೆಸರ್, 4GB RAM, 64GB ಸ್ಟೋರೇಜ್ ಜಾಗ, 3400mAh ಬ್ಯಾಟರಿ, 6.21-ಇಂಚಿನ ಡಿಸ್ಪ್ಲೇ ಜೊತೆಗೆ FHD+ ರೆಸಲ್ಯೂಷನ್ ಮತ್ತು ಟ್ರಿಪಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿರುತ್ತದೆ ಮತ್ತು 8MP ಸೆಲ್ಫೀ ಕ್ಯಾಮರಾ ಮುಂಭಾಗದಲ್ಲಿರಲಿದೆ ಎಂಬ ನಿರೀಕ್ಷೆ ಇದೆ.

ಶಿಯೋಮಿ ರೆಡ್ಮಿ ನೋಟ್ 9 ಪ್ರೋ ಮ್ಯಾಕ್ಸ್

ಶಿಯೋಮಿ ರೆಡ್ಮಿ ನೋಟ್ 9 ಪ್ರೋ ಮ್ಯಾಕ್ಸ್

ಶಿಯೋಮಿ ರೆಡ್ಮಿ ನೋಟ್ 9 ಪ್ರೋ ಮ್ಯಾಕ್ಸ್ ಕಳೆದ ತಿಂಗಳು ಪ್ರಕಟಿಸಲಾಗಿದ್ದು ರೆಡ್ಮಿ ನೋಟ್ 9 ಪ್ರೋ ಜೊತೆಗೆ ಬರಲಿದೆ. ಆದರೆ ಮೇ,3,2020 ರ ವರೆಗೆ ಭಾರತದಲ್ಲಿ ಕರೋನಾವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವುದರಿಂದಾಗಿ ಬಿಡುಗಡೆಯ ದಿನಾಂಕ ಮುಂದೂಡಲಾಗಿದ್ದು ಮುಂದಿನ ದಿನಗಳಲ್ಲಿ ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬುದನ್ನು ಶಿಯೋಮಿ ಇನ್ನೇನು ಕೆಲವೇ ದಿನಗಳಲ್ಲಿ ಖಾತ್ರಿಗೊಳಿಸುವ ಸಾಧ್ಯತೆ ಇದೆ.

ಹಾನರ್ 30 ಪ್ರೋ +

ಹಾನರ್ 30 ಪ್ರೋ +

ಹಾನರ್ 30 ಪ್ರೋ+ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಾಕಷ್ಟು ಕ್ಯಾಮರಾ ಕೆಪಾಸಿಟಿಯನ್ನು ಇದು ಹೊಂದಿದೆ. 50MP ಪ್ರೈಮರಿ ಸೆನ್ಸರ್ ಮತ್ತು ಪೆರಿಸ್ಕೋಪ್ ಕ್ಯಾಮರಾ ಸೆನ್ಸರ್, OLED ಡಿಸ್ಪ್ಲೇ ಮತ್ತು 90Hz ರಿಫ್ರೆಶ್ ರೇಟ್ ನ್ನು ಇದು ಹೊಂದಿರುತ್ತದೆ.

Best Mobiles in India

English summary
Upcoming Smartphones To Be Launched For Indian Consumers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+