8ಜಿಬಿ ಮೆಮೊರಿ ವ್ಯವಸ್ಥೆಯ ಫೋನ್ ಗಳು
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ನೂತನ ವಿಶೇಷತೆಗಳು ಮತ್ತು ವೈಶಿಷ್ಟ್ಯತೆಗಳು ಪ್ರಾರಂಭವಾಗಿದೆ. ಹಾಗಾಗಿ ಫ್ಲ್ಯಾಗ್ ಶಿಪ್ ಮಟ್ಟದ ವೈಶಿಷ್ಟ್ಯತೆಗಳು ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಗಳಲ್ಲಿ ಮತ್ತು ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ಲಭ್ಯವಾಗುತ್ತಿದೆ. ಅಂತಹ ಒಂದು ಪ್ರಮುಖ ವೈಶಿಷ್ಟ್ಯತೆಯೆಂದರೆ 8GB RAM.

ದೊಡ್ಡ RAM ವ್ಯವಸ್ಥೆಯ ಫೋನ್ ಗಳು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಲ್ಯಾಪ್ ಟಾಪ್ ಗಳಲ್ಲೂ ಕೂಡ ನಿರ್ಧಿಷ್ಟ ಗಾತ್ರದ ಮೆಮೊರಿ ವ್ಯವಸ್ಥೆ ಇರುತ್ತದೆ. ಹಾಗಂತ ಇದು ಫ್ಯೂಷರ್ ಪ್ರೂಫ್ ಪರಿಹಾರವಲ್ಲ ಆದರೆ ಖಂಡಿತ ಬಳಕೆಯೋಗ್ಯ ಫೀಚರ್ ಗಳಲ್ಲಿ ಒಂದೆನಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 8ಜಿಬಿ ಮೆಮೊರಿ ವ್ಯವಸ್ಥೆಯ ಹಲವು ಫೋನ್ ಗಳಿವೆ. ಅವುಗಳಲ್ಲಿ ಉತ್ತಮವಾಗಿರುವ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಹುವಾಯಿ ಪಿ40
ಹುವಾಯಿ ಪಿ40 ಆಕ್ಟಾ ಕೋರ್ Kirin 990 5G ಪ್ರೊಸೆಸರ್, ಆಂಡ್ರಾಯ್ಡ್ 10 OS, 8GB RAM, ಮತ್ತು 256GB ಸ್ಟೊರೇಜ್ ವ್ಯವಸ್ಥೆಯನ್ನು ಇದು ಹೊಂದಿದೆ. ಈ ಡಿವೈಸ್ ನಲ್ಲಿ 50MP ಪ್ರೈಮರಿ ಕ್ಯಾಮರಾ ಸೆನ್ಸರ್ ಹಿಂಭಾಗದಲ್ಲಿದ್ದು ಇತರೆ ಹಲವು ಫೀಚರ್ ಗಳನ್ನು ಇದು ಹೊಂದಿರಲಿದೆ

ಎಲ್ ಜಿ ವಿ60 ThinQ
ಎಲ್ ಜಿ ವಿ60 ThinQ ನಲ್ಲಿ 6.8-ಇಂಚಿನ ಪಿ-OLED ಡಿಸ್ಪ್ಲೇ, ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 SoC, 128GB ಸ್ಟೋರೇಜ್ ಜಾಗ, 5000mAh ಬ್ಯಾಟರಿ ಮತ್ತು ಇತರೆ ವ್ಯವಸ್ಥೆಯನ್ನು ಹೊಂದಿರಲಿದೆ

ವಿವೋ ವೈ50
ವಿವೋ ವೈ50 6.53-ಇಂಚಿನ ಡಿಸ್ಪ್ಲೇ, 8GB RAM, 5000mAh ಬ್ಯಾಟರಿ, 128ಜಿಬಿ ಸ್ಟೋರೇಜ್ ಜಾಗ, ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದ್ದು ಹಲವು ವೈಶಿಷ್ಟ್ಯತೆಯನ್ನು ಇದು ಒಳಗೊಂಡಿರಲಿದೆ.

ಹಾನರ್ 30ಎಸ್
ಹಾನರ್ 30ಎಸ್ 6.5-ಇಂಚಿನ LTPS IPS LCD ಡಿಸ್ಪ್ಲೇ, ಆಕ್ಟಾ ಕೋರ್ HiSilicon Kirin 820 SoC, 4000mAh ಬ್ಯಾಟರಿ, 8GB RAM ಮತ್ತು 256GB ಸ್ಟೋರೇಜ್ ಜಾಗವನ್ನು ಇದು ಹೊಂದಿರಲಿದೆ.

ಹುವಾಯಿ ಪಿ40 ಪ್ರೋ
ಹುವಾಯಿ ಪಿ40 ಪ್ರೋ 6.58-ಇಂಚಿನ OLED ಡಿಸ್ಪ್ಲೇ, HiSilicon Kirin 990 SoC, 4200mAh ಬ್ಯಾಟರಿ, 512GB ಸ್ಟೋರೇಜ್ ಜಾಗ ಮತ್ತು 8GB RAM ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

ಹುವಾಯಿ ಪಿ40 ಪ್ರೋ ಪ್ಲಸ್
ಹುವಾಯಿ ಪಿ40 ಪ್ರೋ ಪ್ಲಸ್ ಪಿ40 ಸರಣಿಯಲ್ಲಿ ಲಭ್ಯವಿರುವ ಅತೀ ಹೆಚ್ಚು ನೂತನ ಫೀಚರ್ ಗಳನ್ನು ಒಳಗೊಂಡಿರುವ ಫೋನ್ ಆಗಿದೆ. ಇದರಲ್ಲಿ 6.58-ಇಂಚಿನ ಡಿಸ್ಪ್ಲೇ, ಆಂಡ್ರಾಯ್ಡ್ 10 OS, ಆಕ್ಟಾ ಕೋರ್ ಪ್ರೊಸೆಸರ್, 32MP ಸೆಲ್ಫೀ ಕ್ಯಾಮರಾ ಸೆನ್ಸರ್ ಮತ್ತು ಇತ್ಯಾದಿಗಳನ್ನು ಒಳಗೊಂಡಿದೆ.


Click it and Unblock the Notifications








