Subscribe to Gizbot

ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು

Written By:

ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ ತಯಾರಿಸುವ ಕಂಪೆನಿಗಳು ಈ ಕ್ವಾಡ್‌ ಕೋರ್‌ಪ್ರೊಸೆಸರ್‌ನ್ನು ಬಿಟ್ಟು ಅಕ್ಟಾಕೋರ್‌(ಎಂಟು ಕೋರ್‌) ಪ್ರೊಸೆಸರ್‌‌‌ಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗುತ್ತಿದೆ.


ಸ್ಯಾಮ್‌ಸಂಗ್‌ ಕಂಪೆನಿ ಗೆಲಾಕ್ಸಿ ಎಸ್‌4 ಸ್ಮಾರ್ಟ್‌ಫೋನ್ ಅಕ್ಟಾ ಕೋರ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿ ಬೆಲೆ ಕೊಂಚ ದುಬಾರಿಯಾಗಿದ್ದರೂ ಜನರು ಖರೀದಿಸುತ್ತಿದ್ದಾರೆ.ಈ ಕಾರಣಕ್ಕಾಗಿ ಈಗ ದೇಶೀಯ ಮತ್ತು ಚೀನಾ ಕಂಪೆನಿಗಳ ಜೊತೆಗೆ ಬ್ಯ್ರಾಂಡೆಡ್‌ ಕಂಪೆನಿಗಳು ಆಕ್ಟಾ ಕೋರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗುತ್ತಿದ್ದಾರೆ. ಹೀಗಾಗಿ ಇಲ್ಲಿ2014ರಲ್ಲಿ ಕಂಪೆನಿಗಳು ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಈ ಸ್ಮಾರ್ಟ್‌ಫೋನ್‌‌ಗಳ ವಿಶೇಷತೆಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಇಂಟೆಕ್ಸ್‌ ಅಕ್ಟಾ ಕೋರ್‌:

ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು

1.7GHz ಅಕ್ಟಾ ಕೋರ್‌ ಮಿಡಿಯಾಟೆಕ್‌ ಎಂಟಿ 6592 ಪ್ರೊಸೆಸರ್‌,ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌,13 ಎಂಪಿ ಹಿಂದುಗಡೆ ಕ್ಯಾಮೆರಾ,5 ಎಂಪಿ ಮುಂದುಗಡೆ ಕ್ಯಾಮೆರಾ,16/ 32GB ಆಂತರಿಕ ಮೆಮೊರಿ,2GB ರ್‍ಯಾಮ್‌ ವಿಶೇಷತೆಯೊಂದಿಗೆ ಇಂಟೆಕ್ಸ್‌ ಫ್ಯಾಬ್ಲೆಟ್‌ 2014 ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

 ಎಚ್‌ಟಿಸಿ ಒನ್‌ 2 :

ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು


ತೈವಾನ್‌ ಮೂಲದ ಎಚ್‌ಟಿಸಿ ಸಹ ಅಕ್ಟಾ ಕೋರ್‌ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಮುಂದಾಗಿದೆ.ಎಚ್‌ಟಿಸಿ ಒನ್‌ 2 ಹೆಸರಿನ ಸ್ಮಾರ್ಟ್‌‌ಫೋನ್‌ನ್ನು ಎಚ್‌ಟಿಸಿ ತಯಾರಿಸುತ್ತಿದ್ದು,5 ಅಥವಾ 4.7 ಇಂಚಿನ ಫುಲ್‌ ಎಚ್‌‌ಡಿ ಸ್ಕ್ರೀನ್,3GB ರ್‍ಯಾಮ್‌‌‌ 2014ರ ಮಾರ್ಚ್ ವೇಳೆಗೆ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

 ಸೋನಿ ಟಿನಾಚಿ:

ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು

ಹೆಸರಿನಲ್ಲಿ ಅಕ್ಟಾ ಕೋರ್‌ ಸ್ಮಾರ್ಟ್‌ಫೋನ್‌ ತಯಾರಿಸುತ್ತಿದ್ದು ಈ ಸ್ಮಾರ್ಟ್‌‌ಫೋನ್‌ 6 ಇಂಚಿನ ಸ್ಕ್ರೀನ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ.

 ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 5:

ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು


ಮೈಕ್ರೋಮ್ಯಾಕ್ಸ್‌ ಮೊದಲ ಫುಲ್‌ ಎಚ್‌ಡಿ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಬಳಿಕ ಕ್ಯಾನ್‌ವಾಸ್‌ 5 ಹೆಸರಿನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ.ಈ ಸ್ಮಾರ್ಟ್‌ಫೋನ್‌ ಅಕ್ಟಾಕೋರ್ ಪ್ರೊಸೆಸರ್‌ನಲ್ಲಿ ಬರಲಿದೆ.ಜೊತೆಗೆ ಫುಲ್‌ ಎಚ್‌ಡಿ ಸ್ಕ್ರೀನ್‌,ಗುಣಮಟ್ಟದ ಕ್ಯಾಮೆರಾ ವಿಶೇಷತೆಯನ್ನು ಈ ಸ್ಮಾರ್ಟ್‌ಫೋನ್‌‌‌‌ ಒಳಗೊಂಡಿರುತ್ತದೆ ಎನ್ನಲಾಗಿದೆ.

 ಹುವಾವೇ ಅಸೆಂಡ್‌ ಪಿ6ಎಸ್‌:

ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು


ಚೀನಾದ ಹುವಾವೇ ಕಂಪೆನಿಯೂ 1.6GHz K3V2 ಅಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗುತ್ತಿದೆ.4.7 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌,2GB ರ್‍ಯಾಮ್‌,16GB ಆಂತರಿಕ ಮೆಮೊರಿ,8 ಎಂಪಿ ಹಿಂದುಗಡೆ ಕ್ಯಾಮೆರಾ ವಿಶೇಷತೆಯೊಂದಿಗೆ ಸ್ಮಾರ್ಟ್‌ಫೋನ್‌ ಬರಲಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5:

ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು

ಸ್ಯಾಮ್‌ಸಂಗ್ ಕಂಪೆನಿ ಈಗಾಗಲೇ ಗೆಲಾಕ್ಸಿ ಎಸ್‌4 ಸ್ಮಾರ್ಟ್‌ಫೋನ್‌, ನೋಟ್‌3 ಫ್ಯಾಬ್ಲೆಟ್‌ನ್ನು ಅಕ್ಟಾ ಕೋರ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈಗ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ತಯಾರಿಸುತ್ತಿದ್ದು ಇದನ್ನೂ ಅಕ್ಟಾ ಕೋರ್‌‌ನಲ್ಲೇ ಸ್ಯಾಮ್‌ಸಂಗ್‌ ಮುಂದಿನ ಜನವರಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot