Home
ಮೊಬೈಲ್

ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿರುವ ರೆಡ್ಮಿ ಸ್ಮಾರ್ಟ್ ಫೋನ್ ಗಳು

By Gizbot Bureau

ಶಿಯೋಮಿ ಸಂಸ್ಥೆ 2020 ರಲ್ಲಿ ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ಇನ್ನೊಂದಿಷ್ಟು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವ ಸನ್ನಾಹದಲ್ಲಿದ್ದು ಕೆಲವೇ ದಿನಗಳಲ್ಲಿ ಇವುಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಲಾಕ್ ಡೌನ್ ಕಾರಣದಿಂದಾಗಿ ಈ ಫೋನ್ ಗಳ ಬಿಡುಗಡೆಯಲ್ಲಿ ವಿಳಂಬವಾಗಿದೆ. ಈಗಾಗಲೇ ಹರಡಿರುವ ವದಂತಿಗಳ ಪ್ರಕಾರ ಹೊಸ ಡಿವೈಸ್ ಗಳಲ್ಲಿ ಏನೆಲ್ಲಾ ವೈಶಿಷ್ಟ್ಯತೆಗಳಿರಲಿವೆ ಮತ್ತು ಯಾವ ಫೋನ್ ಗಳು ಶಿಯೋಮಿ ಸಂಸ್ಥೆಯಿಂದ ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿವೆ ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಸ್ಮಾರ್ಟ್ ಫೋನ್

ಆದರೆ ನಾವಿಲ್ಲಿ ಹೇಳುತ್ತಿರುವ ವೈಶಿಷ್ಟ್ಯತೆಗಳು ಕೇವಲ ವದಂತಿಗಳು ಎಂಬುದು ನಿಮ್ಮ ಗಮನದಲ್ಲಿರಲಿ. ಎಲ್ಲಾ ಮಾರುಟ್ಟೆಗಳಲ್ಲಿ ಈ ಡಿವೈಸ್ ಗಳು ಬಿಡುಗಡೆಯಾಗದಿರುವ ಸಾಧ್ಯತೆ ಕೂಡ ಇದೆ. ಸದ್ಯ ಚೀನಾದಲ್ಲಿ ಸಿಗಲಿದೆ. ಹಾಗಾದ್ರೆ ಬಿಡುಗಡೆಯಾಗುವ ಶಿಯೋಮಿ ರೆಡ್ಮಿ ಸ್ಮಾರ್ಟ್ ಫೋನ್ ಗಳು ಯಾವುವು ನೋಡೋಣ ಬನ್ನಿ.

ಶಿಯೋಮಿ ರೆಡ್ಮಿ 10X

ಶಿಯೋಮಿ ರೆಡ್ಮಿ 10X

ಶಿಯೋಮಿ ರೆಡ್ಮಿ 10 X MIUI 12 ಸ್ಕಿನ್ ಆಧಾರಿತ ಆಂಡ್ರಾಯ್ಡ್ 10 OS ಹೊಂದಿರುವ ಮೊದಲ ಡಿವೈಸ್ ಎನ್ನಲಾಗುತ್ತಿದೆ. ಇದರಲ್ಲಿ ಮೀಡಿಯಾ ಟೆಕ್ ಹೆಲಿಯೋ ಜಿ80 SoC ಜೊತೆಗೆ 6GB RAM ವ್ಯವಸ್ಥೆ ಇರಲಿದೆ.ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 48MP ಪ್ರೈಮರಿ ಕ್ಯಾಮರಾ ಮತ್ತು ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಶಿಯೋಮಿ ಎಂಐ 10 ಯ್ಯೂತ್ 5ಜಿ

ಶಿಯೋಮಿ ಎಂಐ 10 ಯ್ಯೂತ್ 5ಜಿ

ಹೆಸರೇ ಸೂಚಿಸುವಂತೆ ಶಿಯೋಮಿ ಎಂಐ 10 ಯ್ಯೂತ್ 5ಜಿ 5G ನೆಟ್ ವರ್ಕ್ ಗೆ ಬೆಂಬಲ ನೀಡುವ ಡಿವೈಸ್ ಆಗಿರುತ್ತದೆ. ಮಿಡ್ ಟಯರ್ ಸ್ಮಾರ್ಟ್ ಫೋನ್ ಗಳಲ್ಲಿ ಇದು ಒಂದೆನಿಸುತ್ತದೆ. ಎಂಐ 10 ಗಿಂತ ಮತ್ತು ಎಂಐ 10 ಪ್ರೋ ಗಿಂತ ಕಡಿಮೆ ಬೆಲೆಗೆ ಕೈಗೆಟುಕುತ್ತದೆ. ಈ ಡಿವೈಸ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 765 SoC ಮತ್ತು ಆಂಡ್ರಾಯ್ಡ್ 10 OS ಜೊತೆಗೆ ಕಸ್ಟಮ್ MIUI ಸ್ಕಿನ್ ನ್ನು ಮೇಲ್ಬಾಗದಲ್ಲಿ ಹೊಂದಿರಲಿದೆ ಎನ್ನಲಾಗುತ್ತಿದೆ.

ಶಿಯೋಮಿ ರೆಡ್ಮಿ ಕೆ30ಐ 5ಜಿ

ಶಿಯೋಮಿ ರೆಡ್ಮಿ ಕೆ30ಐ 5ಜಿ

ಶಿಯೋಮಿ ರೆಡ್ಮಿ ಕೆ30ಐ 5ಜಿ ಕೂಡ 5ಜಿ ನೆಟ್ ವರ್ಕ್ ಗೆ ಬೆಂಬಲ ನೀಡುವ ಡಿವೈಸ್ ಆಗಿದ್ದು ರೆಡ್ಮಿ ಕೆ30 5ಜಿ ಗಿಂತ ಸ್ವಲ್ಪ ಹೆಚ್ಚು ಪವರ್ ಫುಲ್ ಆಗಿರುತ್ತದೆ. ಈ ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 800 SoC ಜೊತೆಗೆ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಶಿಯೋಮಿ ಎಂಐ ನೋಟ್ 10 ಲೈಟ್

ಶಿಯೋಮಿ ಎಂಐ ನೋಟ್ 10 ಲೈಟ್

ಶಿಯೋಮಿ ಎಂಐ ನೋಟ್ 10 ಲೈಟ್ ಫ್ಲ್ಯಾಬ್ಲೆಟ್ ಆಗಿರಲಿದ್ದು ದೊಡ್ಡ ಸ್ಕ್ರೀನ್ ನ್ನು ಹೊಂದಿರುತ್ತದೆ. ಕನಿಷ್ಟ 1080p ರೆಸಲ್ಯೂಷನ್ ವ್ಯವಸ್ಥೆ ಇದರಲ್ಲಿ ಇರಲಿದೆ. ಮಧ್ಯಮ ರೇಂಜಿನ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ವ್ಯವಸ್ಥೆ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಇದು ಬೆಂಬಲ ನೀಡಲಿದೆ. 48/64MP ಕ್ಯಾಮರಾ ಜೊತೆಗೆ 4K ವೀಡಿಯೋ ರೆಕಾರ್ಡಿಂಗ್ ಗೆ ಇದು ಬೆಂಬಲ ನೀಡುತ್ತದೆ.

Best Mobiles in India

English summary
Do note that, the mentioned specifications are completely based on speculations and these devices might not be launched in all the markets and are likely to be available in China. Here is the list of upcoming Xiaomi Redmi smartphones likely to launch in the next few days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+