Subscribe to Gizbot

ಕರೆ ಮಾಡಿದರೆ 5000 ರೂಪಾಯಿ ದಂಡ

Posted By: Varun
ಕರೆ ಮಾಡಿದರೆ 5000 ರೂಪಾಯಿ ದಂಡ

ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬೇಡಿ ಎಂದು ಸಂಚಾರಿ ಪೊಲೀಸರು ಎಷ್ಟು ಹೇಳಿದರೂ ಕೇಳುವುದಿಲ್ಲ ನಾವು. ಈಗ ನೋಡಿ, ಮೊಬೈಲ್ ಬಳಕೆಯಿಂದಾಗಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತರಲು ಯೋಚಿಸಿದೆ.

ಅದರ ಪ್ರಕಾರ ನೀವು ವಾಹನ ಚಲಾಯಿಸುವಾಗ ಫೋನ್ ನಲ್ಲಿ ಮಾತನಾಡುವುದು, ಎಸ್.ಎಂ.ಎಸ್ ಮಾಡುವುದು, ಇಲ್ಲವೆ ಹ್ಯಾಂಡ್ಸ್ ಫ್ರೀ ಉಪಯೋಗಿಸಿದರೂ 500 ರೂಪಾಯಿ ದಂಡ ವಿಧಿಸಲಾಗುವುದು. ಮತ್ತೆ ಮತ್ತೆ ತಪ್ಪು ಮಾಡಿ ಸಿಕ್ಕಿಹಾಕಿಕೊಂಡರೆ 5000 ರೂಪಾಯಿವರೆಗೂ ದಂಡ ವಿಧಿಸುತ್ತಾರಂತೆ.

ನಿಯಮ ಪಾಲಿಸಿದರೆ ಅಪಘಾತ ತಡೆಗಟ್ಟುವುದರ ಜೊತೆಗೆ ದಂಡದ ಹಣಕ್ಕೆ ನಿಮ್ಮ ಮೊಬೈಲ್ ರಿ-ಚಾರ್ಜ್ ಮಾಡಿಸಬಹುದು ಇಲ್ಲವೆ BSNL ಟ್ಯಾಬ್ಲೆಟ್ ಕೊಳ್ಳಬಹುದು.ಏನಂತೀರ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot