ಸಾರ್ವಜನಿಕ ವೈಫೈ ಬಳಸುವಾಗ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ

By Gizbot Bureau
|

ನೀವು ಪ್ರಯಾಣಿಸುವ ಮಾರ್ಗದುದ್ದಕ್ಕೂ ಅಂದರೆ ಸ್ಥಳೀಯ ಕಾಫಿ ಶಾಪ್ ಗಳು, ಹೋಟೆಲ್ ಗಳು, ಏರ್ ಪೋರ್ಟ್ ಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಇದೀಗ ಸಾರ್ವಜನಿಕ ವೈ-ಫೈ ಲಭ್ಯವಿರುತ್ತದೆ.ವೈಫೈ ನಮ್ಮ ಜೀವನ ಶೈಲಿಯನ್ನು ಮತ್ತಷ್ಟು ಸರಳಗೊಳಿಸಿದೆ. ಆದರೆ ಅದರ ಜೊತೆಗೆ ಕೆಲವು ಭದ್ರತಾ ಸಮಸ್ಯೆಗಳನ್ನು ಕೂಡ ಇದು ತಂದೊಡ್ಡುತ್ತದೆ. ನಿಮ್ಮ ವಯಕ್ತಿಕ ಮಾಹಿತಿಗಳು ನಿಮ್ಮ ಲ್ಯಾಪ್ ಟಾಪ್ ನಿಂದ ಅಥವಾ ಸ್ಮಾರ್ಟ್ ಫೋನ್ ಗಳಿಂದ ಕದಿಯಲ್ಪಡುವ ಅಪಾಯವೂ ಇರುತ್ತದೆ. ಹಾಗಾಗಿ ನಾವು ಸಾರ್ವಜನಿಕ ವೈಫೈ ಬಳಕೆಯಲ್ಲಿ ನೀವು ಮಾಡಬಹುದಾದ ಮತ್ತು ಮಾಡಲೇಬಾರದು ಕೆಲವು ಸಂಗತಿಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಸಾರ್ವಜನಿಕ ವೈ-ಫೈ ನಲ್ಲಿ ಎರಡು ವಿಧಗಳು:

ಸಾರ್ವಜನಿಕ ವೈ-ಫೈ ನಲ್ಲಿ ಎರಡು ವಿಧಗಳು:

ಸಾಮಾನ್ಯವಾಗಿ ಎರಡು ರೀತಿಯ ಸಾರ್ವಜನಿಕ ವೈಫೈ ನೆಟ್ ವರ್ಕ್ ಗಳಿರುತ್ತವೆ: ಸುರಕ್ಷಿತ ಮತ್ತು ಅಸುರಕ್ಷಿತ

ಅಸುರಕ್ಷಿತ ನೆಟ್ ವರ್ಕ್:

ಅಸುರಕ್ಷಿತ ನೆಟ್ ವರ್ಕ್:

ಅಸುರಕ್ಷಿತ ನೆಟ್ ವರ್ಕ್ ನ್ನು ನೀವು ಯಾವುದೇ ರೇಂಜ್ ನಲ್ಲಿ ಬೇಕಿದ್ದರು ಮತ್ತು ಯಾವುದೇ ಭದ್ರತಾ ವೈಶಿಷ್ಟ್ಯತೆಗಳಿಲ್ಲದೆ ಅಂದರೆ ಪಾಸ್ ವರ್ಡ್ ಅಥವಾ ಲಾಗಿನ್ ಇಲ್ಲದೆಯೂ ಕೂಡ ಕನೆಕ್ಟ್ ಮಾಡಿಕೊಳ್ಳಬಹುದು.

ಸುರಕ್ಷಿತ ನೆಟ್ ವರ್ಕ್:

ಸುರಕ್ಷಿತ ನೆಟ್ ವರ್ಕ್:

ಸುರಕ್ಷಿತ ನೆಟ್ ವರ್ಕ್ ನಲ್ಲಿ ಬಳಕೆದಾರರು ಕಾನೂನು ನಿಯಮಾವಳಿಗಳಿಗೆ ಒಪ್ಪಿಗೆ ನೀಡಬೇಕು, ಅಕೌಂಟ್ ನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು ಅಥವಾ ನೆಟ್ ವರ್ಕ್ ಗೆ ಕನೆಕ್ಟ್ ಆಗುವ ಮುನ್ನ ಪಾಸ್ ವರ್ಡ್ ನ್ನು ಹಾಕಬೇಕಾಗುತ್ತದೆ. ಪಾಸ್ ವರ್ಡ್ ಅಥವಾ ನೆಟ್ ವರ್ಕ್ ಪಡೆಯುವುದಕ್ಕಾಗಿ ಫೀಸ್ ಕಟ್ಟಬೇಕಾಗುವ ಅಥವಾ ಆಕ್ಸಿಸ್ ನ್ನು ಖರೀದಿಸಬೇಕಾಗುವ ಅಗತ್ಯವೂ ಇರಬಹುದು.

ಕನೆಕ್ಷನ್ ವಿಧವನ್ನು ಗಣನೆಗೆ ತೆಗೆದುಕೊಳ್ಳದೆಯೂ ಹೇಳುವುದಾದರೆ ಸಾರ್ವಜನಿಕ ವೈಫೈ ಬಳಕೆ ಮಾಡುವಾಗ ಜಾಗೃತರಾಗಿರುವುದು ಅತ್ಯವಶ್ಯಕ. ಹಾಗಾದ್ರೆ ನೀವು ಸಾರ್ವಜನಿಕ ವೈಫೈ ಬಳಕೆಯಲ್ಲಿ ಮಾಡಬಹುದಾದ ಮತ್ತು ಮಾಡಲೇಬಾರದು ಕೆಲವು ಸಂಗತಿಗಳ ಬಗ್ಗೆ ಗಮನ ಹರಿಸೋಣ.

ಪಬ್ಲಿಕ್ ನೆಟ್ ವರ್ಕ್

1. ಸುರಕ್ಷಿತ ಪಬ್ಲಿಕ್ ನೆಟ್ ವರ್ಕ್ ಗೆ ಸಾಧ್ಯವಾದಷ್ಟು ಕನೆಕ್ಟ್ ಆಗುವುದಕ್ಕೆ ಪ್ರಯತ್ನಿಸಿ. ಒಂದು ವೇಳೆ ನೀವು ಸುರಕ್ಷಿತ ನೆಟ್ ವರ್ಕ್ ಗೆ ಕನೆಕ್ಟ್ ಆಗುವ ಸಂದರ್ಬ ಇಲ್ಲದೇ ಇದ್ದಲ್ಲಿ ಅಸುರಕ್ಷಿತ ನೆಟ್ ವರ್ಕ್ ಗೆ ಯಾವುದಾದರೂ ಲಾಗಿನ್ ಅಥವಾ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದಕ್ಕೆ ಅನುಮತಿಸಿದ್ದರೆ ಅಂತವನ್ನು ಆಯ್ಕೆ ಮಾಡಿಕೊಳ್ಳಬಹುದು.

ಪಬ್ಲಿಕ್ ವೈಫೈ

2. ಅಸುರಕ್ಷಿತ ನೆಟ್ ವರ್ಕ್ ನಲ್ಲಿ ನಿಮ್ಮ ವಯಕ್ತಿಕ ಬ್ಯಾಂಕ್ ಖಾತೆ ಅಥವಾ ಸೂಕ್ಷ್ಮವಾಗಿರುವ ವಯಕ್ತಿಕ ಡಾಟಾಗಳು ಇತ್ಯಾದಿಗಳನ್ನು ಆಕ್ಸಿಸ್ ಮಾಡಬೇಡಿ. ಸುರಕ್ಷಿತ ನೆಟ್ ವರ್ಕ್ ಕೂಡ ಈ ವಿಚಾರದಲ್ಲಿ ತೊಂದರೆಯೊಡ್ಡಬಹುದು. ಇಂತಹ ಮಾತಿಗಳನ್ನು ಸಾರ್ವಜನಿಕ ವೈಫೈ ನಲ್ಲಿ ಆಕ್ಸಿಸ್ ಮಾಡುವ ಅನಿವಾರ್ಯತೆ ಇದ್ದಲ್ಲಿ ನಿಮ್ಮ ಅತ್ಯುತ್ತಮ ತೀರ್ಮಾನವನ್ನು ಮೊದಲು ಕೈಗೊಳ್ಳಿ.

3. ನಿಮ್ಮ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನ್ ನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬೇಡಿ. ನೀವು ಸುರಕ್ಷಿತ ವೈ-ಫೈ ನೆಟ್ ವರ್ಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ನಿಮ್ಮ ಡಿವೈಸ್ ನಿಂದ ಸೂಕ್ಷ್ಮ ಮಾಹಿತಿಯನ್ನು ಇತರರು ತೆಗೆದುಕೊಳ್ಳುವುದನ್ನು ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ.

4. ಪಬ್ಲಿಕ್ ವೈಫೈ ಬಳಸಿ ಯಾವುದೇ ಕಾರಣಕ್ಕೂ ಶಾಪಿಂಗ್ ಮಾಡಬೇಡಿ. ಖಂಡಿತವಾಗ್ಲೂ ಶಾಪಿಂಗ್ ನಲ್ಲಿ ಅಂತಹ ಸೆನ್ಸಿಟೀವ್ ಡಾಟಾ ಇರುವುದಿಲ್ಲ ಎಂದು ನೀವು ಅಂದುಕೊಳ್ಳುತ್ತಿದ್ದರೆ ಅದು ನಿಮ್ಮ ತಪ್ಪು ಭಾವನೆ. ಶಾಪಿಂಗ್ ನಲ್ಲಿ ನೀವು ನೀಡುವ ಬ್ಯಾಂಕ್ ಖಾತೆಯ ವಿವರ ಅಥವಾ ರೀಟೈಲರ್ ಲಾಗಿನ್ ಕ್ರಿಡೆನ್ಶಿಯಲ್ಸ್ ಗಳು ಬೇರೆಯವರಿಂದ ಕದಿಯಲ್ಪಡಬಹುದು. ಅಸುರಕ್ಷಿತ ನೆಟ್ ವರ್ಕ್ ನಲ್ಲಿ ಮಾಡುವ ಕೆಲಸ ಶಾಪಿಂಗ್ ಅಲ್ಲವೇ ಅಲ್ಲ ಎಂಬುದು ನಿಮ್ಮ ಮನಸ್ಸಿನಲ್ಲಿರಲಿ.

ಬ್ಲೂಟೂತ್ ಕನೆಕ್ಟಿವಿಟಿ

5. ಸ್ವಯಂಚಾಲಿತವಾಗಿ ಕನೆಕ್ಟ್ ಆಗುವುದನ್ನು ಆಫ್ ಮಾಡಿ ಇಡಿ. ಹೆಚ್ಚಿನ ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮತ್ತು ಟ್ಯಾಬ್ಲೆಟ್ ಗಳು ಸ್ವಯಂಚಾಲಿತವಾಗಿ ನೆಟ್ ವರ್ಕ್ ಸೆಟ್ಟಿಂಗ್ಸ್ ನ್ನು ಹೊಂದಿರುತ್ತದೆ. ಒಂದು ಹಾಟ್ ಸ್ಪಾಟ್ ನಿಂದ ಮತ್ತೊಂದು ಹಾಟ್ ಸ್ಪಾಟ್ ಗೆ ಇದು ಯಾವುದೇ ನಿಯಂತ್ರಣವಿಲ್ಲದೆ ಕನೆಕ್ಟ್ ಆಗುತ್ತಲೇ ಇರುತ್ತದೆ. ಖಂಡಿತ ಇದು ಬಹಳ ಆರಾಮದಾಯಕವಾಗಿರುವ ಫೀಚರ್ ಹೌದು. ಆದರೆ ಇದು ನಿಮ್ಮ ಡಿವೈಸ್ ನ್ನು ಅಸುರಕ್ಷಿತಗೊಳಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗಾಗಿ ಈ ಸ್ವಯಂಚಾಲಿತ ಸೆಟ್ಟಿಂಗ್ಸ್ ನ್ನು ಆಫ್ ಮಾಡಿ ಇಡಿ. ಅದರಲ್ಲೂ ಪ್ರಮುಖವಾಗಿ ನೀವು ಅಪರಿಚಿತ ಸ್ಥಳಗಳಿಗೆ ಪ್ರಯಾಣಿಸುವಾಗ ಹೀಗೆ ಮಾಡುವುದು ಬಹಳ ಸುರಕ್ಷಿತವಾಗಿರುವ ಕ್ರಮವಾಗಿದೆ.

6. ಯಾವಾಗಲೂ ನಿಮ್ಮ ಬ್ಲೂಟೂತ್ ಕನೆಕ್ಟಿವಿಟಿಯನ್ನು ಗಮನಿಸುತ್ತಿರಿ. ಸ್ಮಾರ್ಟ್ ಡಿವೈಸ್ ಗಳಲ್ಲಿ ಮನೆಯಲ್ಲಿ ಬ್ಲೂಟೂತ್ ಬಳಸುವುದು ಖಂಡಿತ ಆಕರ್ಷಕವಾಗಿರುವ ಫೀಚರ್ ಆಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಬ್ಲೂಟೂತ್ ಆನ್ ಮಾಡಿ ಇಡುವುದರಿಂದಾಗಿ ಸೈಬರ್ ಸೆಕ್ಯುರಿಟಿ ಸಮಸ್ಯೆಯನ್ನು ನೀವು ಎದುರಿಸಬೇಕಾಗಬಹುದು ಎಂಬ ಎಚ್ಚರಿಕೆ ನಿಮ್ಮಲ್ಲಿರಲಿ. ಬ್ಲೂಟೂತ್ ಕನೆಕ್ಟಿವಿಟಿಯು ಹಲವು ಡಿವೈಸ್ ಗಳನ್ನು ಸಂಪರ್ಕಿಸಲು ಅನುಮತಿಸುತ್ತದೆ ಮತ್ತು ಹ್ಯಾಕರ್ ಗಳು ನಿಮ್ಮ ಡಿವೈಸ್ ನ್ನು ಆಕ್ಸಿಸ್ ಮಾಡುವುದಕ್ಕೆ ಬ್ಲೂಟೂತ್ ಕನೆಕ್ಟಿವಿಟಿಯನ್ನು ಬಳಸುವ ಸಾಧ್ಯತೆ ಇರುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ. ನಿಮ್ಮ ಮನೆ, ಆಫೀಸ್ ಅಥವಾ ಸುರಕ್ಷಿತವಾಗಿರುವ ಸ್ಥಳದಿಂದ ಬೇರೆ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಬದಲ್ಲಿ ನಿಮ್ಮ ಡಿವೈಸ್ ನ್ನು ಲಾಕ್ ಮಾಡುವುದನ್ನು ಮರೆಯಬೇಡಿ.

7. ವರ್ಚುವಲ್ ಪ್ರೈವೇಟ್ ನೆಟ್ ವರ್ಕ್ ಬಳಕೆಯ ಬಗ್ಗೆ ಒಮ್ಮೆ ಯೋಚಿಸಿ. ಇದು ನಿಮಗೆ ಸಾರ್ವಜನಿಕ ವೈಫೈಯಲ್ಲಿ ಹೆಚ್ಚು ಸುರಕ್ಷತೆಯನ್ನು ಒದಗಿಸುತ್ತದೆ. ವಿಪಿಎನ್ ಸೇವೆಯು ಉದಾಹರಣೆಗೆ ಹೊಸ ನಾರ್ಟನ್ ಸೆಕ್ಯೂರ್ ವಿಪಿಎನ್ ಪಬ್ಲಿಕ್ ವೈಫೈ ನಲ್ಲಿ ನೀವು ಕಳುಹಿಸುವ ಅಥವಾ ಪಡೆಯುವ ಡಾಟಾವನ್ನು ಎನ್ಕ್ರಿಪ್ಟ್ ಮಾಡಿ ಕಳುಹಿಸುವುದಕ್ಕೆ ಅವಕಾಶ ನೀಡುತ್ತದೆ. ಒಂದೇ ಕನೆಕ್ಷನ್ ನಲ್ಲಿ ಇತರೆ ಬಳಕೆದಾರರಿಂದ ನಿಮ್ಮ ಡಾಟಾವನ್ನು ಅಥವಾ ಮಾಹಿತಿಯನ್ನು ಸುರಕ್ಷಿತವಾಗಿಡುವುದಕ್ಕೆ ಇದು ನೆರವು ನೀಡುತ್ತದೆ.

ಹೆಚ್ಚುವರಿ ಸೂಚನೆ:

ಹೆಚ್ಚುವರಿ ಸೂಚನೆ:

ಈ ಲೇಖನದಲ್ಲಿ ನಾವು ತಿಳುವಳಿಯ ಮಾಹಿತಿಯನ್ನು ನೀಡಿದ್ದೇವೆ. ನಾರ್ಟನ್ ಲೈಫ್ ಲಾಕ್ ನಿಮ್ಮ ಎಲ್ಲಾ ರೀತಿಯ ಕ್ರೈಮ್, ಫ್ರಾಡ್ ಅಥವಾ ಭಯದಿಂದ ರಕ್ಷಣೆ ನೀಡುವುದಿಲ್ಲ. ಸೈಬರ್ ಸುರಕ್ಷಿತೆಯ ಬಗ್ಗೆ ಜಾಗೃತೆ ಮೂಡಿಸುವ ಗುರಿಯನ್ನಷ್ಟೇ ನಾವು ಹೊಂದಿದ್ದೇವೆ. ಸಾರ್ವಜನಿಕ ವೈಫೈ ಪಡೆಯುವ ಸಂದರ್ಬದಲ್ಲಿ ಎಲ್ಲಾ ರೀತಿಯ ದಾಖಲಾತಿ ಮತ್ತು ನಿಯಮಗಳನ್ನು ಪರಿಶೀಲಿಸಿಕೊಳ್ಳಿ. ಯಾರೂ ಕೂಡ ಎಲ್ಲಾ ರೀತಿಯ ಸೈಬರ್ ಕ್ರೈಮ್ ಅಥಾ ಭಯವನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಮತ್ತು ಲೈಫ್ ಲಾಕ್ ಎಲ್ಲಾ ರೀತಿಯ ಟ್ರಾನ್ಸ್ಯಾಕ್ಷನ್ ಅಥವಾ ಬ್ಯುಸಿನೆಸ್ ನ್ನು ಗಮನಿಸುತ್ತಲೇ ಇರುವುದಿಲ್ಲ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲೇ ಇರಬೇಕು ಎಂಬುದು ನಿಮಗೆ ತಿಳಿದಿರಲಿ.

Best Mobiles in India

English summary
Using Public Wi-Fi? Use These Tips To Stay Safe

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X