ಫ್ರೀ ಟೈಮ್ ಕಳೆಯುವುದಕ್ಕೆ ಮೊಬೈಲ್ ಬಳಸುತ್ತಿದ್ದರೆ ಈ ಲೇಖನವನ್ನೊಮ್ಮೆ ಓದಿ..

By Gizbot Bureau
|

ಮೊಬೈಲ್ ಬಳಕೆಯ ಬಗ್ಗೆ, ಅದರ ಒಳಿತು ಕೆಡುಕಿನ ಬಗ್ಗೆ ಆಗಾಗ ಅಧ್ಯಯನಗಳು, ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಮೆದುಳಿನ ಆರೋಗ್ಯದ ವಿಚಾರದಲ್ಲಿ ಸ್ಮಾರ್ಟ್ ಫೋನ್ ಗಳು ಮಾಡುವ ದುಷ್ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಇದೀಗ ಮತ್ತೊಂದು ಸಂಶೋಧನೆ ಸೆಲ್ ಫೋನ್ ಬಳಕೆಯ ಬಗ್ಗೆ ನಡೆದಿದೆ.

ವಿರಾಮಕ್ಕಾಗಿ ಮೊಬೈಲ್:

ವಿರಾಮಕ್ಕಾಗಿ ಮೊಬೈಲ್:

ಹೌದು ಮಾನಸಿಕವಾಗಿ ಸವಾಲೊಡ್ಡುವ ಕೆಲಸದ ಸಮಯದಲ್ಲಿ ವಿರಾಮ ತೆಗೆದುಕೊಳ್ಳುವುದಕ್ಕೆಂದು ಸೆಲ್ ಫೋನ್ ಬಳಕೆ ಮಾಡುವುದು ಸರ್ವೇಸಾಮಾನ್ಯ. ತುಂಬಾ ಕೆಲಸದ ಒತ್ತಡದಿಂದ ಹೊರಬರಲು ಒಂದೆರೆಡು ನಿಮಿಷ ಮೊಬೈಲ್ ಹಿಡಿದುಕೊಳ್ಳುವುದು ಹೆಚ್ಚಿನವರಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ಮೆದುಳು ರೀಚಾರ್ಜ್ ಆಗುವುದಕ್ಕೆ ಸಾಧ್ಯವಿಲ್ಲವಂತೆ. ಬದಲಾಗಿ ಹೀಗೆ ಮಾಡುವುದರ ಪರಿಣಾಮವಾಗಿ ನಿಮ್ಮ ಮೆದುಳಿನ ಕಾರ್ಯಕ್ಷಮತೆ ಮತ್ತಷ್ಟು ಕುಂಠಿತವಾಗುವ ಸಾಧ್ಯತೆಯೇ ಹೆಚ್ಚು ಎಂದು ಹೇಳುತ್ತದೆ ಅಧ್ಯಯನ.

ಯಾಕೆ ಗೊತ್ತಾ?

ಯಾಕೆ ಗೊತ್ತಾ?

ಸೆಲ್ ಫೋನ್ ಗಳಿಂದ ಈ ಪರಿಣಾಮವಾಗುತ್ತದೆ ಯಾಕೆಂದರೆ ಇದು ನಿಮ್ಮ ಮೆಸೇಜ್ ನೋಡುವ ತವಕವನ್ನು, ಜನರೊಂದಿಗೆ ಸಂಪರ್ಕ ಸಾಧಿಸುವ ಬಯಕೆಯನ್ನು, ಯಾವುದೇ ಮಾಹಿತಿಯ ಹುಡುಕಾಟವನ್ನು ಅಥವಾ ಇತ್ಯಾದಿ ಯಾವುದೇ ಕೆಲಸವನ್ನು ಹೆಚ್ಚೆಚ್ಚು ಮಾಡುವ ನಿಟ್ಟಿನಲ್ಲಿ ನಿಮ್ಮನ್ನ ಆಕ್ಟೀವ್ ಮಾಡುತ್ತದೆ. ಇದು ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನೋಡುವ ರೀತಿಗಿಂತಲೂ ಮೊಬೈಲ್ ನೋಡುವ ರೀತಿಯಲ್ಲಿ ಬದಲಾವಣೆ ಇರುತ್ತದೆ ಎನ್ನುತ್ತಾರೆ ಯುಸ್ ನಲ್ಲಿರುವ ರಟ್ಜರ್ಸ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಟೆರ್ರಿ ಕರ್ಟ್ಸ್ ಬರ್ಗ್.

ಸಂಶೋಧನೆ ನಡೆದದ್ದು ಹೇಗೆ,ಎಲ್ಲಿ?

ಸಂಶೋಧನೆ ನಡೆದದ್ದು ಹೇಗೆ,ಎಲ್ಲಿ?

ಈ ಸಂಶೋಧನೆಗಾಗಿ ಜರ್ನಲ್ ಆಫ್ ಬಿಹೇವಿಯರಲ್ ಅಡಿಕ್ಷನ್ ನ ಸಂಶೋಧಕರು 144 ಕಾಲೇಜು ಪದವಿಪೂರ್ವ ವಿದ್ಯಾರ್ಥಿಗಳನ್ನು ವಿಶ್ಲೇಷಣೆ ಮಾಡಿದರು. ಅವರಿಗೆ 20 ಪದಗಳ ಒಗಟನ್ನು ಬಿಡಿಸುವುದಕ್ಕೆ ಹೇಳಲಾಗಿತ್ತು.

ಫಲಿತಾಂಶ ಹೇಳಿದ್ದೇನು?

ಫಲಿತಾಂಶ ಹೇಳಿದ್ದೇನು?

ಕೆಲವರಿಗೆ ಅರ್ಧದಷ್ಟು ವಿರಾಮ ನೀಡಲಾಯಿತು, ಈ ಸಮಯದಲ್ಲಿ ಅವರ ಸೆಲ್‌ಫೋನ್, ಕಾಗದದ ಸುತ್ತೋಲೆ ಅಥವಾ ಕಂಪ್ಯೂಟರ್ ಬಳಸಿ ನಿರ್ದಿಷ್ಟ ಬಜೆಟ್‌ನಲ್ಲಿ ಖರೀದಿಸಲು ಮೂರು ವಸ್ತುಗಳನ್ನು ಆಯ್ಕೆ ಮಾಡಲು ತಿಳಿಸಲಾಯಿತು. ಇದರಲ್ಲಿ ಭಾಗವಹಿಸಿದವರಲ್ಲಿ ಯಾರು ಸೆಲ್ ಫೋನ್ ಬಳಕೆ ಮಾಡಿದ್ದರೋ ಅವರು ಅತೀ ಹೆಚ್ಚಿನ ಮಟ್ಟದ ಮಾನಸಿಕ ಕ್ಷೀಣತೆಯನ್ನು ಅನುಭವಿಸಿದರು ಮತ್ತು ನಂತರದಲ್ಲಿ ಅತೀ ಕಡಿಮೆ ಫಝಲ್ ಗಳನ್ನು ಬಿಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಯಾರು ಸೆಲ್ ಫೋನ್ ಬಳಕೆ ಮಾಡಿದ್ದರೋ ಅವರು ಶೇಕಡಾ 19 ರಷ್ಟು ಹೆಚ್ಚು ಸಮಯವನ್ನು ನೀಡಲಾದ ಕೆಲಸವನ್ನು ಪೂರ್ಣಗೊಳಿಸಲು ತೆಗೆದುಕೊಂಡಿದ್ದಾರೆ ಮತ್ತು ಬೇರೆ ರೀತಿಯ ವಿರಾಮದಲ್ಲಿ ತೊಡಗಿಸಿಕೊಂಡವರಿಗಿಂತ ಶೇಕಡಾ 22 ರಷ್ಟು ಸಮಸ್ಯೆಯನ್ನು ಅಥವಾ ಒಗಟನ್ನು ಬಿಡಿಸುವುದರಲ್ಲಿ ವಿಫಲರಾಗಿದ್ದಾರೆ.

ಹೋಲಿಕೆ:

ಹೋಲಿಕೆ:

ವಿರಾಮದ ನಂತರದ ಅವರ ದಕ್ಷತೆಯನ್ನು ಯಾವುದೇ ವಿರಾಮವನ್ನು ತೆಗೆದುಕೊಳ್ಳದವರೊಂದಿಗೆ ಹೋಲಿಕೆ ಮಾಡಬಹುದು. ವಿರಾಮ ತೆಗೆದುಕೊಂಡ ನಂತರ ಒಟ್ಟಾರೆ ಪದಗಳ ಸಮಸ್ಯೆಯನ್ನು ಬಗೆಹರಿಸಿದವರಿಂತ ವಿರಾಮ ತೆಗೆದುಕೊಳ್ಳದೇ ಇರುವವರದ್ದೇ ಉತ್ತಮವಾಗಿದೆ ಆದರೆ ಇತರೆ ಎಲ್ಲಾ ಭಾಗೀದಾರರಿಗಿಂತ ಅತ್ಯಂತ ಕೆಟ್ಟದಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಆಲೋಚಿಸಬೇಕಿರುವ ವಿಚಾರ:

ಆಲೋಚಿಸಬೇಕಿರುವ ವಿಚಾರ:

ಒಟ್ಟಿನಲ್ಲಿ ಮೊಬೈಲ್ ಇಲ್ಲದೇ ಬದುಕುವುದು ಅನಿವಾರ್ಯವಾಗಿರುವ ಈ ಜಗತ್ತಿನಲ್ಲಿ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡುವುದು ಹೇಗೆ ಎಂಬುದನ್ನು ಪ್ರಯತ್ನಿಸಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುವುದಕ್ಕೆ ಸಾಧ್ಯ ಎಂಬುದು ಮಾತ್ರ ದಿಟವಾದ ಸಂಗತಿ.

Best Mobiles in India

Read more about:
English summary
Using Smartphones In Free Time Might Not Be Good For Your Brain

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X