Subscribe to Gizbot

ಉತ್ತಮ ಬೆಲೆಯ ಅತ್ಯದ್ಭುತ ಫೋನ್‌ಗಳು

Written By:

ನೂತನ ವಿನ್ಯಾಸದ ಫೋನ್‌ಗಳು ಈಗೀಗ ಗ್ರಾಹಕರ ಮನಮಟ್ಟುವ ರೀತಿಯಲ್ಲಿ ಬರುತ್ತಿದೆ. ಯಾವುದೇ ವಸ್ತುವನ್ನು ಕೊಳ್ಳುವ ಗ್ರಾಹಕ ತಾನು ನೀಡಿದ ದುಡ್ಡಿಗೆ ಸಮಾನವಾದ ಮೌಲ್ಯವನ್ನು ಖರೀದಿಸುವಲ್ಲಿಂದ ಬಯಸುತ್ತಾನೆ. ಗ್ರಾಹಕ ಹಾಗೂ ಮಾರಾಟ ನೀತಿ ಈ ತತ್ವಕ್ಕೆ ಒಳಪಟ್ಟಿರುತ್ತದೆ.

ಅದರಲ್ಲೂ ತಾಂತ್ರಿಕ ರಂಗದಲ್ಲಿ ಇದು ಹೆಚ್ಚು ಮಹತ್ವಪೂರ್ಣವಾದ ಅಂಶವಾಗಿದೆ. ಫೋನ್, ಟ್ಯಾಬ್ಲೇಟ್, ಲ್ಯಾಪ್‌ಟಾಪ್ ಹೀಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಖರೀದಿಸುವಾಗ ಗ್ರಾಹಕರು ಉತ್ಪನ್ನದ ಗುಣಮಟ್ಟಕ್ಕೆ ಬೆಲೆ ಕೊಡುವುದು ಸಹಜವೇ ಆಗಿದೆ.

ನೀವು ಫೋನ್ ವಿಷಯಕ್ಕೆ ಬಂದಾಗ ಈ ಮಾತು ಅಕ್ಷರಶಃ ನಿಜ ಎನಿಸದೆ ಇರಲಾರದು. ಹೊಸ ಅಪ್ಲಿಕೇಶನ್ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಫೋನ್‌ನ ಬೇಡಿಕೆ ಮೌಲ್ಯ ಕೂಡ ಏರುತ್ತದೆ. ಕೆಲವೊಂದು ಫೋನ್‌ಗಳು ಹೆಚ್ಚು ಬೆಲೆಯನ್ನು ಹೊಂದಿದ್ದರೂ ಸರಿಯಾದ ವೈಶಿಷ್ಟ್ಯತೆಗಳನ್ನು ಹೊಂದಿಲ್ಲದಿದ್ದರೆ ಅದು ವ್ಯರ್ಥವೆನಿಸುತ್ತದೆ.

ಹಾಗಿದ್ದರೆ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳಿರುವ ಫೋನ್ ಅನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ಇಲ್ಲಿ ನಾವು ನೀಡಿರುವ ಫೋನ್‌ಗಳು ಖಂಡಿತ ನಿಮಗೆ ಉತ್ತಮವಾಗಿ ಒಪ್ಪುವ ರೀತಿಯಲ್ಲಿ ಇರುವುವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋರೋಲಾ ಮೋಟೋ ಇ

#1

ಇದು 4.3 ಇಂಚಿನ ಕ್ಯೂ ಎಚ್‌ಡಿ (540x960 pixel) ರೆಸಲ್ಯೂಶನ್‌ನೊಂದಿಗೆ ಬಂದಿದ್ದು 256ppi ಪಿಕ್ಸೆಲ್ ಡೆನ್ಸಿಟಿ ಇದರಲ್ಲಿದೆ. ಇದು ಗೋರಿಲ್ಲಾ ಗ್ಲಾಸ್ 3 ಅನ್ನು ಕೂಡ ಒಳಗೊಂಡಿದ್ದು ತನ್ನ ವಾಟರ್ - ನ್ಯಾನೋ ಕೋಟಿಂಗ್‌ನಿಂದ ಹೆಚ್ಚು ಪ್ರಸಿದ್ಧವಾಗಿದೆ. 1.2 ಜಿಎಚ್‌ಝೆಡ್ ಡ್ಯುಯೆಲ್ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ ಅನ್ನು ಹೊಂದಿದ್ದು 200 ಪ್ರೊಸೆಸರ್‌ನೊಂದಿಗೆ Adreno 302 ಜಿಪಿಯು ಈ ಫೋನ್‌ನಲ್ಲಿದೆ ಮತ್ತು 1 ಜಿಬಿ ರ್‌ಯಾಮ್ ಈ ಫೋನ್‌ನ ವಿಶೇಷತೆಯಾಗಿದೆ. ಮೋಟೋ ಇ 1980mAh ಬ್ಯಾಟರಿ ಸೇವೆಯನ್ನು ನೀಡಲಿದ್ದು 124.8x64.8x12.3 ಡೈಮೆನ್ಶನ್ ಅನ್ನು ಒದಗಿಸಲಿದೆ. ಇದರ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ ರೂ 6,999 ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌4

#2

ಸ್ಯಾಮ್‌ಸಂಗ್ ಫ್ಲ್ಯಾಗ್‌ಶಿಪ್ ಅನ್ನು ತನ್ನಲ್ಲಿ ಉಳಿಸಿಕೊಂಡು ಅತಿ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿರುವ ಸ್ಯಾಮ್‌ಸಂಗ್ ಗ್ಲಾಲಕ್ಸಿ ಎಸ್4 28,000 ದಿಂದ 31,000 ದ ಶ್ರೇಣಿಯಲ್ಲಿ ನಿಮಗೆ ದೊರೆಯಲಿದೆ. ಇದು 5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು ಸ್ಯಾಮ್‌ಸಂಗ್‌ನ ಶಕ್ತಿಯುತ ಎಕ್ಸಿನೋಸ್ ಓಕ್ಟಾ ಪ್ರೊಸೆಸರ್ ಇದರಲ್ಲಿದೆ.

ಜಿಯೋನಿ ಇಲೈಫ್ ಇ7

#3

ಚೈನಾ ಕಂಪೆನಿ ಹ್ಯಾಂಡ್‌ಸೆಟ್ ಆಗಿರುವ ಜಿಯೋನಿ ಇಲೈಫ್ ಇ7 ಉತ್ತಮ ಕ್ಯಾಮೆರಾದೊಂದಿಗೆ (16ಎಂಪಿ ರಿಯರ್, 8ಎಂಪಿ ಮುಂಭಾಗ) ಹಾಗೂ ಅತ್ಯಾಧುನಿಕ ಹಾರ್ಡ್‌ವೇರ್‌ನೊಂದಿಗೆ ಬಂದಿದೆ. ಇದು ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಮತ್ತು 2ಜಿಬಿ ಅಥವಾ 3ಜಿಬಿ ರ್‌ಯಾಮ್‌ನೊಂದಿಗೆ ಶಕ್ತಿಯುತವಾಗಿದೆ. ಇದು 5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು 16ಜಿಬಿ ಸಂಗ್ರಹಣಾ ಸಾಮರ್ಥ್ಯವಿರುವ ಫೋನ್ ರೂ 23,300 ವಾಣಿಜ್ಯ ವೆಬ್‌ಸೈಟ್‌ಗಳಲ್ಲಿ ದೊರೆಯಲಿದೆ.

ಗೂಗಲ್ ನೆಕ್ಸಸ್ 5

#4

ಗೂಗಲ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ನೆಕ್ಸಸ್ 5, ನಿಯಮಿತ ಸಾಫ್ಟ್‌ವೇರ್ ಅಪ್‌ಡೇಟ್‌ನೊಂದಿಗೆ ಬಂದಿದೆ. ಬ್ಲಾಟ್‌ವೇರ್ - ಮುಕ್ತ, ಸಂಗ್ರಹಿತ ಆಂಡ್ರಾಯ್ಡ್ ಬಳಕೆದಾರ ಇಂಟರ್ಫೇಸ್ ಇದರಲ್ಲಿದೆ. ಇದು ಶಕ್ತಿಯುತ ಹಾರ್ಡ್‌ವೇರ್ ಅನ್ನು ಹೊಂದಿದ್ದು ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಹಾಗೂ 2ಜಿಬಿ ರ್‌ಯಾಮ್ ಇದರಲ್ಲಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದರ ಬೆಲೆ ರೂ 28,999 ಆಗಿದೆ.

ಮೋಟೋರೋಲಾ ಮೋಟೋ ಜಿ

#5

ಇದೊಂದು ಉತ್ತಮ ಬಜೆಟ್ ಫೋನ್ ಆಗಿದ್ದು ಉತ್ತಮ ಡಿವೈಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆವೃತ್ತಿ ಇದರಲ್ಲಿದೆ. ಇದು ಬೆಲೆಗೆ ತಕ್ಕಬಾಗಿ ವೈಶಿಷ್ಟ್ಯಗಳನ್ನು ಹೊಂದಿದ್ದು ಯೂಸರ್ ಫ್ರೆಂಡ್ಲೀ ಎಂಬ ಹೆಸರಿಗೆ ತಕ್ಕನಾಗಿದೆ. ಇದು 4.3 ಇಂಚಿನ 720 ಪಿ ಡಿಸ್‌ಪ್ಲೇಯನ್ನು ಹೊಂದಿದ್ದು, ಉತ್ತಮವಾದ ವೀಕ್ಷಣೆ ಆಯಾಮಗಳನ್ನು ಫೋನ್ ಹೊಂದಿದೆ. ಇದರಲ್ಲಿ ಅತ್ಯುತ್ತಮ ಬಣ್ಣಗಳಿದ್ದು ಒಳ್ಳೆಯ ಕಾಂಟ್ರಾಸ್ಟ್ ಅನ್ನು ಹೊಂದಿದೆ. ಫೋನ್‌ನ ಬ್ಯಾಟರಿ ಬ್ಯಾಕಪ್ ಕೂಡ ಚೆನ್ನಾಗಿದ್ದು ಬಳಸಲು ಮಜಬೂತಾಗಿದೆ. ಇದರ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ ರೂ 12,499 ಆಗಿದೆ.

ಸೋನಿ ಎಕ್ಸ್‌ಪೀರಿಯಾ ಝೆಡ್

#6

ಸೋನಿಯ ವರ್ಷದ ಹಳೆಯ ಸ್ಮಾರ್ಟ್‌ಫೋನಾಗಿರುವ ಇದು ಉತ್ತಮ ಖರೀದಿ ಎಂಬ ಟ್ಯಾಗ್‌ಗೆ ಪಾತ್ರವಾಗಿದೆ. ಇದರಲ್ಲಿ ಸೋನಿಯ ಓಮ್ನಿ ಬ್ಯಾಲೆನ್ಸ್ ಲಭ್ಯವಿದ್ದು, ಇದು ನೀರು ಮತ್ತು ಧೂಳು ಪ್ರತಿರೋಧಕವಾಗಿದೆ. ಇದು 1.5 GHz ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ ಅನ್ನು ಹೊಂದಿದ್ದು S4 ಪ್ರೊ ಕ್ವಾಡ್ ಕೋರ್ ಪ್ರೊಸೆಸರ್ ಮತ್ತು 2 ಜಿಬಿ ರ್‌ಯಾಮ್ ಫೋನ್‌ ಸಾಮರ್ಥ್ಯವಾಗಿದೆ. ಇದರ ಬೆಲೆ ಆನ್‌ಲೈನ್ ರೀಟೈಲ್ ತಾಣದಲ್ಲಿ ರೂ 24,499 ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3 ನಿಯೋ

#7

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3 ಯಾವುದೇ ಭಾರೀ ಬೆಲೆಯನ್ನು ಹೊಂದಿಲ್ಲ ಮತ್ತು ಇದೀಗ ವಾಣಿಜ್ಯ ವೆಬ್‌ಸೈಟ್‌ಗಳಲ್ಲಿ ರೂ 32,000 ಕ್ಕೆ ದೊರೆಯಲಿದೆ. ಇದು ಎಸ್ ಪೆನ್ ಸ್ಟೇಟಸ್‌ನೊಂದಿಗೆ ಬಂದಿದ್ದು ತನ್ನ ಇತರ ದೊಡ್ಡ ಫೋನ್‌ಗಳಲ್ಲಿರುವಂತೆ ಉತ್ತಮ ವೈಶಿಷ್ಟ್ಯಗಳನ್ನು ಇದು ಕೂಡ ಹೊಂದಿದೆ. ಇದರಲ್ಲಿ ಹೆಕ್ಸಾ ಕೋರ್ ಪ್ರೊಸೆಸರ್ ಇದ್ದು 2 ಜಿಬಿ ರ್‌ಯಾಮ್‌ನೊಂದಿಗೆ ಲಭ್ಯವಿದೆ. ಇದು 5.5 ಇಂಚಿನ 720ಪಿ ಸೂಪರ್ ಅಮೊಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.

ಎಲ್‌ಜಿ ಆಪ್ಟಿಮಸ್ ಜಿ ಪ್ರೊ

#8

ನಿಮಗೆ ದೊಡ್ಡ ಸ್ಕ್ರೀನ್ ಫೋನ್ ಬೇಕೆಂದಲ್ಲಿ ಎಲ್‌ಜಿ ಆಪ್ಟಿಮಸ್ ಉತ್ತಮ ಬೆಲೆಯ ಫೋನಾಗಿದೆ. ಅಧಿಕೃತವಾಗಿ ಇದರ ಬೆಲೆ ರೂ 42,500 ಆಗಿದೆ. ಆದರೆ ನೀವಿದನ್ನು ರೂ 27,000 ಕ್ಕೆ ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ. ಇದು 5.5 ಇಂಚಿನ ಪೂರ್ಣ ಎಚ್‌ಡಿ (1080p) ಡಿಸ್‌ಪ್ಲೇಯನ್ನು ಹೊಂದಿದ್ದು 1.7GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 600 ಪ್ರೊಸೆಸರ್ ಇದರಲ್ಲಿದೆ. 13ಎಂಪಿ ರಿಯರ್ ಕ್ಯಾಮೆರಾ, 2ಜಿಬಿ ರ್‌ಯಾಮ್ ಹಾಗೂ 3,140mAh ಬ್ಯಾಟರಿ ಈ ಫೋನ್‌ನಲ್ಲಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್ A350

#9

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್‌ನ ಮೊದಲ ಫೋನ್ ಆಗಿದ್ದು ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿ ಚಾಲನೆಯಾಗುತ್ತದೆ. ಇದು 5 ಇಂಚಿನ ಪೂರ್ಣ ಡಿಸ್‌ಪ್ಲೇಯನ್ನು ಹೊಂದಿದ್ದು 32ಜಿಬಿ ಆಂತರಿಕ ಸಂಗ್ರಹಣೆ ಫೋನ್‌ಗಿದೆ. ಇದು 16ಎಂಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು 8ಎಂಪಿ ಮುಂಭಾಗ ಕ್ಯಾಮೆರಾ ಇದರ ವಿಶೇಷತೆಯಾಗಿದೆ. ಇದರ ಬೆಲೆ ರೂ 19,999 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot