Subscribe to Gizbot

ವಿಫೋನ್ ಗ್ರ್ಯಾಂಡ್ ವಿಶೇಷತೆ ಏನು?

Written By:

ವೀಡಿಯೋಕಾನ್ ಮೊಬೈಲ್ ಫೋನ್ಸ್ ಸೇವೆಗಳು, ತಮ್ಮ ಇತ್ತೀಚಿನ ಅತ್ಯಾಧುನಿಕ ಭವಿಷ್ಯದ ಫೋನ್ ಅನ್ನು ಘೋಷಿಸಿದ್ದು, ವೀಡಿಯೋಕಾನ್ ಮೊಬೈಲ್‌ಗಳು ಈ ಫೋನ್‌ಗಳನ್ನು ರೂ 1950 ಕ್ಕೆ ಇದನ್ನು ಮಾರುಕಟ್ಟೆಗೆ ಲಾಂಚ್ ಮಾಡಿವೆ.

ಇದು ಉತ್ತಮ ರೀತಿಯ ಇಂಟರ್ ಚಾರ್ಜ್ ಮಾಡಲು ಸಾಧ್ಯವಿರುವಂತಹ ಬ್ಯಾಕ್ ಪ್ಯಾನೆಲ್‌ಗಳೊಂದಿಗೆ ಬಂದಿದ್ದು ಇದು ದೊಡ್ಡದಾದ ಪರದೆ ಅನುಭವವನ್ನು ಗ್ರಾಹಕರಿಗೆ ನೀಡುತ್ತಿದೆ. ಇದು 2.8 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು ಮಲ್ಟಿಮೀಡಿಯಾ ಅನುಭವವನ್ನು ಗ್ರಾಹರಿಗೆ ನೀಡಲಿದೆ. ಇದು ಪರದೆಯಲ್ಲಿ ದೊಡ್ಡ ಅಕ್ಷಗಳನ್ನು ಕೂಡ ತೋರಿಸುತ್ತಿದ್ದು ಇದು ವಯಸ್ಸಾದವರಿಗೆ ಸಂಖ್ಯೆಗಳನ್ನು ಡಯೆಲ್ ಮಾಡಲು ಆನ್ ಸ್ಕ್ರೀನ್ ಮೆನುವನ್ನು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ವೀಡಿಯೋಕಾನ್‌ನಿಂದ ಅಗ್ಗದ ಫೋನ್ ಮಾರುಕಟ್ಟೆಗೆ

ವಿಫೋನ್ ಗ್ರ್ಯಾಂಡ್ ಆರು ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತಿದ್ದು ಹಿಂದಿ, ಪಂಜಾಬಿ ತಮಿಳು ಹೀಗೆ ಭಾಷೆಗಳನ್ನು ಬೆಂಬಲಿಸುತ್ತಿದೆ. ಈ ಡಿವೈಸ್ 'ಸ್ಮಾರ್ಟ್ ಕರೆ ಸೌಲಭ್ಯವನ್ನು' ಕೂಡ ಬಳಕೆದಾರರಿಗೆ ನೀಡುತ್ತಿದ್ದು ಬಳಕೆದಾರರು ಮಿಸ್ ಮಾಡಿರುವಂತಹ ಒಳಬರುವ ಕರೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ದೀರ್ಘ ಗ್ರಾಹಕ ಆದ್ಯತೆಗಳಿಗಾಗಿ, ವಿಫೋನ್ ಗ್ರ್ಯಾಂಡ್ ಒಂದು ಉತ್ತಮ ಡಿವೈಸ್ ಆಗಿದೆ ಮತ್ತು ಇದರ ಸ್ಮಾರ್ಟ್ ವೈಶಿಷ್ಟ್ಯಗಳು ಇದನ್ನೊಂದು ಉತ್ತಮ ಫೋನ್ ಆಗಿಸುವಲ್ಲಿ ಯಶಸ್ವಿಯಾಗಿದೆ. ಇದು 2.8 ಇಂಚಿನ QVGA ಡಿಸ್‌ಪ್ಲೇಯನ್ನು ಹೊಂದಿದ್ದು, 1.3 ಮೆಗಾಪಿಕ್ಸೆಲ್ ಕ್ಯಾಮೆರಾ ಇದರಲ್ಲಿದೆ. 1100mAH ಬ್ಯಾಟರಿ ಫೋನ್‌ನಲ್ಲಿದ್ದು ಇತರ ಫೀಚರ್‌ಗಳಾದ ಮೂವಿ ಜ್ಯೂಕ್ ಬಾಕ್ಸ್ ಅಪ್ಲಿಕೇಶನ್, ಸೆಕ್ಯುರಿಟಿ ಇನ್‌ಬಾಕ್ಸ್, ಸ್ಮಾರ್ಟ್ ಆಟೋ ಕರೆ ದಾಖಲಿಸುವಿಕೆ ಫೀಚರ್, ಸ್ಮಾರ್ಟ್ ಕರೆ ಡೈವರ್ಟ್ ಫೀಚರ್ ಮತ್ತು ಬಳಕೆದಾರರ ಅನುಭವಕ್ಕೆ ತಕ್ಕಂತಹ ವಿಶೇಷತೆಗಳನ್ನು ಫೋನ್ ಒಳಗೊಂಡಿದೆ.

ವೀಡಿಯೋಕಾನ್ ಟೆಲಿಕಾಮ್‌ನ ಸಿಇಒ ಜೆರಾಲ್ಡ್ ಪಿರೇರಾ ಹೇಳುವಂತೆ, ಫೋನ್‌ನ ವಿನ್ಯಾಸವು ಅಷ್ಟೊಂದು ಆಕರ್ಷಣೀಯವಾಗಿಲ್ಲ ಆದರೂ ಪ್ರೀಮಿಯಮ್ ವಿನ್ಯಾಸ, ಅಂತರಾಷ್ಟ್ರೀಯ ಲುಕ್‌ಗಳು ಮತ್ತು ಅತ್ಯುತ್ತಮ ಫೀಚರ್‌ಗಳಿಂದ ಮತ್ತು ಮುಖ್ಯವಾಗಿ ಕೈಗೆಟಕುವ ಬೆಲೆಯಿಂದ ಇದನ್ನೊಂದು ಆಕರ್ಷಣೀಯ ಫೋನ್‌ನನ್ನಾಗಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot