Home
ಮೊಬೈಲ್

3500 ಹಳೆ ಫೋನ್‌ಗಳನ್ನು ಸಂಗ್ರಹಿದ್ದಾನೆ ಈತ!..ಆದರೆ ಒಂದೂ ಸ್ಮಾರ್ಟ್‌ಫೋನ್ ಇಲ್ಲ!!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಇಲ್ಲೋರ್ವ 3500 ಹಳೆ ಫೋನ್‌ಗಳನ್ನು ಸಂಗ್ರಹಿಸಿಟ್ಟಿದ್ದಾನೆ.!

By Bhaskar N J

ಈಗಿನ ಮಕ್ಕಳಿಗೆ ಮೊಬೈಲ್ ಎಂದರೆ ಒಂದು ಸಾಮಾನ್ಯ ವಿಷಯವಾದರೆ, ಬಹುಶಃ 90ರ ದಶಕಕ್ಕಿಂತ ಮೊದಲು ಹುಟ್ಟಿದವರಿಗೆ ಮೊಬೈಲ್ ಎಂದರೆ ಒಂದು ಯುಗ ಎಂಬ ಅನುಭವವಾಗಿರಬಹುದು.! ಏಕೆಂದರೆ, ಮೊಬೈಲ್‌ಗಳು ಅಷ್ಟು ವೇಗದಲ್ಲಿ ಎಲ್ಲರ ಜೀವನದಲ್ಲಿ ಬದಲಾವಣೆ ತಂದವು ಎನ್ನಬಹುದು.!!

ಇಂದು ಬೇಸಿಕ್ ಮೊಬೈಲ್‌ಗಳು ಕಾಣೆಯಾಗಿ ಎಲ್ಲರೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಎಲ್ಲರೂ ತಮ್ಮ ಹಳೆಯ ಮೊಬೈಲ್‌ ಫೋನ್‌ಗಳ ಬಗ್ಗೆಯೂ ಒಲವನ್ನು ಇಟ್ಟಿಕೊಂಡಿದ್ದಾರೆ. ಆದರೆ, ಯಾರೂ ಕೂಡ ಹಳೆ ಫೋನ್‌ಗಳ ಸಂಗ್ರಹ ಹೊಂದಿಲ್ಲ.!! ಹೋಗಲಿ ತಾವು ಉಪಯೋಗಿಸಿದ ಹಳೆ ಫೋನ್ ಅನ್ನು ಹೊಂದಿದ್ದಾರೆಯೇ? ಇಲ್ಲ ತಾನೆ?

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಇಲ್ಲೋರ್ವ 3500 ಹಳೆ ಫೋನ್‌ಗಳನ್ನು ಸಂಗ್ರಹಿಸಿಟ್ಟಿದ್ದಾನೆ.! ಅಂಚೆ ಈಟಿ ಮತ್ತು ನಾಣ್ಯ ಸಂಗ್ರಹದ ಹವ್ಯಾಸದಂತೆ ಇವನಿಗೆ ಹಳೆ ಮೊಬೈಲ್‌ಗಳನ್ನು ಸಂಗ್ರಹಿಸುವ ಹವ್ಯಾಸವಿದ್ದು, ಆ ಸಂಗ್ರಹಕಾರ ಯಾರು? ಎಲ್ಲಿದೆ ಆ ಸಂಗ್ರಾಹಾಲಯ ಎಂದು ತಿಳಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

26 ವರ್ಷದ ಯುವಕ ಸ್ಟೆಫನ್ ಪೊಲ್ಗರಿ!!

26 ವರ್ಷದ ಯುವಕ ಸ್ಟೆಫನ್ ಪೊಲ್ಗರಿ!!

ಸ್ಲೊವೇಕಿಯಾ ದೇಶದ 26 ವರ್ಷದ ಸ್ಟೆಫನ್ ಪೊಲ್ಗರಿ ಎಂಬ ಯುವಕನೋರ್ವ ಬೇಸಿಕ್ ಫೋನ್‌ಗಳನ್ನು ಸಂಗ್ರಹಿಸಿ ಫೋನ್ ಸಂಗ್ರಹಾಲಯ ನಿರ್ಮಿಸಿದ್ದಾರೆ.!ಜಗತ್ತಿನ ಸುಮಾರು 1500 ಮಾದರಿಗಳ ಸುಮಾರು 3500 ಬೇಸಿಕ್ ಫೋನ್‌ಗಳನ್ನು ಸಂಗ್ರಹಿಸಿ ಫೋನ್ ಸಂಗ್ರಹಾಲಯ ಮಾಡಿದ್ದಾರೆ.!!

ಎಲ್ಲಿದೆ ಸಂಗ್ರಹಾಲಯ?

ಎಲ್ಲಿದೆ ಸಂಗ್ರಹಾಲಯ?

ಸ್ಲೊವೇಕಿಯಾ ದೇಶದ ಪೂರ್ವದಲ್ಲಿರುವ ಡಾಬ್ಸಿನಾದಲ್ಲಿನ ತನ್ನ ಮನೆಯ ಎರಡು ಕೊಠಡಿಗಳನ್ನು ಸ್ಟೆಫನ್ ಪೊಲ್ಗರಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿದ್ದಾರೆ. ಸಂಗ್ರಹಾಲಯ ಚಿಕ್ಕದಾಗಿದ್ದರೂ ಅತ್ಯದ್ಬುತವಾಗಿ ಮೊಬೈಲ್‌ಗಳ ಜೋಡಣೆಯಿಂದಾಗಿ ಸಂಗ್ರಹಾಲಯ ಎಲ್ಲರನ್ನು ಸೆಳೆಯುತ್ತಿದೆ.!!

ಇಟ್ಟಿಗೆ ಗಾತ್ರದ ಫೋನ್‌ಗಳಿವೆ.!!

ಇಟ್ಟಿಗೆ ಗಾತ್ರದ ಫೋನ್‌ಗಳಿವೆ.!!

ಸ್ಟೆಫನ್ ಪೊಲ್ಗರಿ ಸಂಗ್ರಹಾಲಯದಲ್ಲಿ ಇಟ್ಟಿಗೆ ಗಾತ್ರದ ಫೋನ್‌ಗಳಿಂದ ಹಿಡಿದೂ ಪ್ರಸಿದ್ದ ನೋಕಿಯಾ ಬೇಸಿಕ್ ಮೊಬೈಲ್‌ಗಳೂ ಕೂಡ ಸ್ಥಾನ ಪಡೆದಿವೆ.! ಸ್ಟೆಫನ್ ಪೊಲ್ಗರಿ ಅವರು ಆನ್‌ಲೈನ್‌ನಲ್ಲಿ ಹಳೆ ಮೊಬೈಲ್‌ಗಳನ್ನು ಖರೀದಿಸಿ ಈ ಸಂಗ್ರಹಾಲಯ ನಿರ್ಮಿಸಿದ್ದಾರೆ.!!

ವಾರದಲ್ಲಿ ಒಂದು ದಿನ ಮಾತ್ರ!!

ವಾರದಲ್ಲಿ ಒಂದು ದಿನ ಮಾತ್ರ!!

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೊಬೈಲ್ ಸಂಗ್ರಹಾಲಯ ನಿರ್ಮಿಸಿರುವ ಸ್ಟೆಫನ್ ಪೊಲ್ಗರಿ ವಾರದಲ್ಲಿ ಒಂದು ದಿನ ಮಾತ್ರ ಸಾರ್ವಜನಿಕರಿಗೆ ನೋಡಲು ಅವಕಾಶ ನೀಡಿದ್ದಾರೆ.!! ಬೇರೆ ದಿನ ನೋಡಬೇಕಿದ್ದರೆ ಅವರಿಗೆ ಮೊದಲೇ ತಿಳಿಸಿ ಒಪ್ಪಿಗೆ ಪಡೆದು ಸಂಗ್ರಹಾಲಯ ನೋಡಬಹುದು.!!

ಬಳಕೆ ಮಾಡುವುದು ಮಾತ್ರ ಐಫೋನ್

ಬಳಕೆ ಮಾಡುವುದು ಮಾತ್ರ ಐಫೋನ್

ಹಳೆ ಮೊಬೈಲ್ ಸಂಗ್ರಹದ ಹವ್ಯಾಸವಿರುವ ಸ್ಟೆಫನ್ ಪೊಲ್ಗರಿ ಅವರು ಯಾವ ಪೋನ್ ಉಪಯೋಗಿಸುತ್ತಾರೆ ಎಂಬ ಕುತೋಹಲ ಎಲ್ಲರಿಗೂ ಇದ್ದೇ ಇರುತ್ತದೆ.!! ಹಳೆ ಮೊಬೈಲ್‌ಗಳ ಮೇಲೆ ಅವರಿಗೆ ಪ್ರೀತಿ ಇದ್ದರೂ ಸಹ ಅವರು ಬಳಕೆ ಮಾಡುವ ಫೋನ್ ಮಾತ್ರ ಐಫೋನ್.!!

Best Mobiles in India

English summary
one Slovak technology buff is offering visitors to his vintage cellphone museum a trip down memory lane.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+