ಮಾರ್ಚ್ 1 ರಿಂದ Vivo ಮತ್ತು iQOO ಫೋನ್‌ಗಳ ಬೆಲೆ ಏರಿಕೆ ಸುಳಿವು!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೆ ಬೆಲೆ ಏರಿಕೆಯ ಸುಳಿವು ಕಂಡುಬಂದಿದೆ. ದೇಶದಲ್ಲಿನ ಪ್ರಮುಖ ಮೊಬೈಲ್ ಬ್ರಾಂಡ್ Vivo ಮತ್ತು ಇದರ ಸಬ್-ಬ್ರ್ಯಾಂಡ್ iQOO ಎರಡೂ ಕಂಪೆನಿಗಳು ತಮ್ಮ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು 2026 ಮಾರ್ಚ್ 1ರಿಂದ ಹೆಚ್ಚಿಸಲು ಸಜ್ಜಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಮೆಮೊರಿ ಚಿಪ್ ಕೊರತೆ ಮತ್ತು ಉತ್ಪಾದನಾ ವೆಚ್ಚದ ಏರಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಮಧ್ಯಮ ಶ್ರೇಣಿಯ Z10 ಮತ್ತು T4 5G ಮಾದರಿಗಳಿಗೆ ರೂ. 2,000 ಹೆಚ್ಚಳ ಸಾಧ್ಯತೆ
ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ iQOO Z10 ಮತ್ತು Vivo T4 5G ಮಾದರಿಗಳ ದರದಲ್ಲಿ ರೂ. 2,000ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ ರೂ. 22,999ರಿಂದ ಆರಂಭವಾಗುತ್ತಿರುವ ಈ ಫೋನ್‌ಗಳ ಮೂಲ ಬೆಲೆ ರೂ. 24,999ಕ್ಕೆ ಏರಬಹುದು. ಇದೇ ರೀತಿ iQOO Z10R ಹಾಗೂ Vivo T4R 5G ಮಾದರಿಗಳ ದರವೂ ರೂ. 20,999ರಿಂದ ರೂ. 22,999ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ.
3. ಬಜೆಟ್ ವಿಭಾಗದ Z10x ಮತ್ತು T4x 5Gಗೂ ಬೆಲೆ ಏರಿಕೆ ಪರಿಣಾಮ
ಬಜೆಟ್ ವಿಭಾಗದಲ್ಲೂ ಬದಲಾವಣೆ ಅನಿವಾರ್ಯವಾಗಿದೆ. ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗಿರುವ iQOO Z10x ಮತ್ತು Vivo T4x 5G ಮಾದರಿಗಳಲ್ಲಿ ರೂ. 1,500ರಷ್ಟು ಏರಿಕೆ ಸಾಧ್ಯತೆ ಇದೆ. ಈಗ ರೂ. 15,499ರಿಂದ ಲಭ್ಯವಿರುವ ಈ ಫೋನ್‌ಗಳು ಮಾರ್ಚ್‌ನಿಂದ ರೂ. 16,999ರ ಪ್ರಾರಂಭಿಕ ಬೆಲೆಯನ್ನು ಹೊಂದಬಹುದು ಎಂದು ಹೇಳಲಾಗಿದೆ. ಆದರೆ, ಬ್ರ್ಯಾಂಡ್‌ನಿಂದ ಯಾವುದೇ ಅಧಿಕೃತ ಹೇಳಿಕೆಯು ಹೊರಬಿದ್ದಿಲ್ಲ ಎಂಬುದನ್ನು ಗಮನಿಸಬೇಕಿದೆ.

ಜಾಗತಿಕ ಮೆಮೊರಿ ಸಂಕಷ್ಟ: ದರ ಏರಿಕೆಯ ಪ್ರಮುಖ ಕಾರಣ!
ಈ ಬೆಲೆ ಏರಿಕೆಯ ಹಿನ್ನೆಲೆಯು ಜಾಗತಿಕ ಮೆಮೊರಿ ಮಾರುಕಟ್ಟೆಯ ಅಸ್ಥಿರತೆ. AI ಆಧಾರಿತ ಸೇವೆಗಳು, ಡೇಟಾ ಸೆಂಟರ್‌ಗಳು ಮತ್ತು ಹೈ-ಪರ್ಫಾರ್ಮೆನ್ಸ್ ಸಾಧನಗಳ ಬಳಕೆ ಹೆಚ್ಚುತ್ತಿರುವುದ ಆಗಿರಬಹುದು. RAM ಮತ್ತು HBM ಚಿಪ್‌ಗಳಿಗೆ ಬೇಡಿಕೆ ಏರಿದೆ. ಇದರಿಂದ ಭಾಗಗಳ ಬೆಲೆ ಹೆಚ್ಚಳವಾಗಿದ್ದು, ಸ್ಮಾರ್ಟ್‌ಫೋನ್ ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಕಂಪನಿಗಳು ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವ ಪರಿಸ್ಥಿತಿಯಲ್ಲಿವೆ ಎಂದು ಹೇಳಲಾಗುತ್ತಿದೆ.
ಇತರ ಬ್ರಾಂಡ್‌ಗಳಲ್ಲೂ ದರ ಪರಿಷ್ಕರಣೆ: OnePlus 15Rಗೂ ಏರಿಕೆ ಸಾಧ್ಯತೆ
ಇತ್ತೀಚೆಗೆ OPPO ಮತ್ತು Realme ಕೂಡ ಕೆಲವು ಮಾದರಿಗಳ ದರವನ್ನು ಪರಿಷ್ಕರಿಸಿದ್ದವು. ಹಾಗೆಯೇ OnePlus 15Rಗೂ ಶೀಘ್ರದಲ್ಲೇ ಬೆಲೆ ಏರಿಕೆ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿವೆ. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರು ಮಾರ್ಚ್ 1ರೊಳಗೆ ಖರೀದಿ ಮಾಡುವುದರಿಂದ ಹೆಚ್ಚುವರಿ ವೆಚ್ಚ ತಪ್ಪಿಸಿಕೊಳ್ಳಬಹುದು. ಮುಂದಿನ ತಿಂಗಳುಗಳಲ್ಲಿ ಇತರ ಬ್ರಾಂಡ್‌ಗಳಲ್ಲಿಯೂ ಇದೇ ರೀತಿಯ ದರ ಪರಿಷ್ಕರಣೆ ಕಂಡುಬರುವ ಸಾಧ್ಯತೆ ಇರುವುದರಿಂದ, ನೀವು ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸುವುದು ಒಳಿತು.


Click it and Unblock the Notifications