Home
ಮೊಬೈಲ್

Vivo ಮತ್ತು iQOO ಫೋನ್‌ಗಳಿಗೆ OriginOS 6 ಅಪ್‌ಡೇಟ್ ಪಟ್ಟಿ ಬಿಡುಗಡೆ!

Vivo ಮತ್ತು iQOO ಸ್ಮಾರ್ಟ್‌ಫೋನ್ ಪ್ರಿಯರು ಬಹುದಿನಗಳಿಂದ ಎದುರುನೋಡುತ್ತಿದ್ದ ಇತ್ತೀಚಿನ ಆಂಡ್ರಾಯ್ಡ್ 16 ಆಧಾರಿತ ಆಪರೇಟಿಂಗ್ ಸಿಸ್ಟಮ್ OriginOS 6 ನ ರೋಲ್‌ಔಟ್ ವೇಳಾಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹಂತ ಹಂತವಾಗಿ ಈ ರೋಲ್‌ಔಟ್ ಆಗಲಿದ್ದು, ನಿಮ್ಮ ಬಳಿ ಇರುವ Vivo ಅಥವಾ iQOO ಫೋನ್‌ ಯಾವಾಗ ಅಪ್‌ಡೇಟ್ ಸಿಗುತ್ತದೆ ಎಂಬ ವಿವರ ಇಲ್ಲಿದೆ. ಜೊತೆಗೆ ಈ ಹೊಸ OriginOS 6 ಅಪ್‌ಡೇಟ್‌ನಿಂದ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದನ್ನು ಸಹ ತಿಳಿಯೋಣ ಬನ್ನಿ.

OriginOS 6: ಯಾವ ಫೋನ್‌ಗೆ ಯಾವಾಗ ಅಪ್‌ಡೇಟ್?
ಹಂತ 1: ನವೆಂಬರ್ 2025 ರಿಂದ ಆರಂಭವಾಗಲಿದ್ದು, ಅಪ್‌ಡೇಟ್‌ನ ಆರಂಭಿಕ ಹಂತದಲ್ಲಿ Vivo ನ ಉನ್ನತ ದರ್ಜೆಯ X ಮತ್ತು V ಸರಣಿಯ ಮಾದರಿಗಳು ಮತ್ತು iQOO ನ ಫ್ಲ್ಯಾಗ್‌ಶಿಪ್‌ಗಳು ಮೊದಲು ಪಡೆಯಲಿವೆ.
Vivo ಫೋನ್‌ಗಳು: X Fold5, X200 Pro, X200, X200 FE, ಮತ್ತು V60.
iQOO ಮಾದರಿಗಳು: iQOO 13.

ಹಂತ 2: ನವೆಂಬರ್ 2025 ಮಧ್ಯಭಾಗದಲ್ಲಿ
ಇದರ ನಂತರ, ಹಿಂದಿನ ತಲೆಮಾರಿನ ಹೆಚ್ಚು ಶಕ್ತಿಶಾಲಿ X-ಸರಣಿಯ ಫೋನ್‌ಗಳಿಗೆ ಅಪ್‌ಡೇಟ್ ಸಿಗಲಿದೆ.
Vivo ಮಾದರಿಗಳು: X Fold3 Pro, X100 Pro, X100.
iQOO ಮಾದರಿಗಳು: iQOO 12.

ಹಂತ 3: ಡಿಸೆಂಬರ್ 2025 ಮಧ್ಯಭಾಗದಲ್ಲಿ
ಈ ಹಂತದಲ್ಲಿ V ಮತ್ತು T ಸರಣಿ ಮತ್ತು iQOO ನ Neo ಸರಣಿಯ ಮಾದರಿಗಳು ಅಪ್‌ಡೇಟ್ ಪಡೆಯಲಿವೆ.
Vivo ಮಾದರಿಗಳು: V60e, V50, V50e, T4 Ultra, T4 Pro.
iQOO ಮಾದರಿಗಳು: iQOO Neo 10, iQOO Neo 10R, iQOO Neo9 Pro.

Vivo ಮತ್ತು iQOO ಫೋನ್‌ಗಳಿಗೆ OriginOS 6 ಅಪ್‌ಡೇಟ್ ಪಟ್ಟಿ ಬಿಡುಗಡೆ!

ಹಂತ 4: 2026 ರ ಮೊದಲಾರ್ಧ (ಪ್ರಮುಖ ರೋಲ್‌ಔಟ್)
ಇದು ಅತ್ಯಂತ ದೊಡ್ಡ ಹಂತವಾಗಿದ್ದು, X, V, T, ಮತ್ತು Y ಸರಣಿಯ ಎಲ್ಲಾ ಶ್ರೇಣಿಯ ಹಳೆಯ ಮತ್ತು ಹೊಸ ಮಾದರಿಗಳಿಗೆ ಅಪ್‌ಡೇಟ್ ದೊರೆಯಲಿದೆ. ದೇಶದಲ್ಲಿ ಜನಪ್ರಿಯವಾಗಿರುವ V60 Lite 5G, V40, V30 ಸರಣಿ, T4 5G, ಮತ್ತು Y400/Y300/Y200 ಸರಣಿಯಂತಹ ಅನೇಕ ಮಧ್ಯಮ ಶ್ರೇಣಿಯ ಮತ್ತು ಜನಪ್ರಿಯ ಫೋನ್‌ಗಳು ಈ ಸಮಯದಲ್ಲಿ ಅಪ್‌ಡೇಟ್ ಪಡೆಯಲಿವೆ. iQOO 11, Z10, ಮತ್ತು Z9 ಸರಣಿಯ ಅನೇಕ ಮಾದರಿಗಳಿಗೂ ಈ ಅವಧಿಯಲ್ಲಿ OriginOS 6 ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

OriginOS 6: ವಿನ್ಯಾಸ ಮತ್ತು ವೇಗದಲ್ಲಿ ಹೊಸ ಆಯಾಮ ಸಿಗಲಿದೆ!
ಆಂಡ್ರಾಯ್ಡ್ 16 ಆಧಾರಿತ ಆಪರೇಟಿಂಗ್ ಸಿಸ್ಟಮ್ OriginOS 6 ಅಪ್‌ಡೇಟ್ ಆದ ನಂತರ ನಿಮ್ಮ ಫೋನ್‌ನಲ್ಲಿ ಭಾರೀ ಬದಲಾವಣೆ ಕಾಣಲಿದೆ. ಇದರಲ್ಲಿ ಮರುರೂಪಿಸಲಾದ ಇಂಟರ್‌ಫೇಸ್ ಹೊಸ ದೃಶ್ಯ ವೈಭವವನ್ನು ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ವಿನ್ಯಾಸದ ದೃಷ್ಟಿಯಿಂದ, ಇದು ಪ್ರಕೃತಿಯಿಂದ ಸ್ಫೂರ್ತಿ ಪಡೆದ ಬಣ್ಣಗಳು, ಅನಿಮೇಷನ್ ಅನ್ನು ಪರಿಚಯಿಸುತ್ತದೆ. Dynamic Glow, Translucent Colour, ಮತ್ತು Flip Cards ನಂತಹ ಆಕರ್ಷಕ ವೈಶಿಷ್ಟ್ಯಗಳು ಇಂಟರ್‌ಫೇಸ್‌ಗೆ ಹೊಸ ಸ್ಪರ್ಶ ನೀಡುತ್ತವೆ. ಇದರೊಂದಿಗೆ, ಬಳಕೆದಾರರು Lock Screen Grid ಮತ್ತು Home Screen Grid ವ್ಯವಸ್ಥೆಗಳ ಮೂಲಕ ತಮ್ಮ ಲಾಕ್ ಸ್ಕ್ರೀನ್ ಮತ್ತು ಹೋಮ್ ಸ್ಕ್ರೀನ್ ವಿನ್ಯಾಸಗಳನ್ನು ತಮ್ಮಿಷ್ಟದಂತೆ ಬದಲಾಯಿಸಿಕೊಳ್ಳಬಹುದು. ಇದರಿಂದ ಬಳಕೆದಾರರ ಅನುಭವವವು ಸಂಪೂರ್ಣವಾಗಿ ಬದಲಿಸಲಿದೆ.

ಈ ಹೊಸ ಆವೃತ್ತಿಯ ಹೃದಯ ಭಾಗದಲ್ಲಿ Origin Smooth Engine ಇದೆ. ಇದು ಕಂಪ್ಯೂಟಿಂಗ್, ಮೆಮೊರಿ ಮತ್ತು ಡಿಸ್‌ಪ್ಲೇ ವ್ಯವಸ್ಥೆಗಳ ನಡುವೆ ಸಮನ್ವಯ ಸಾಧಿಸಿ, ದೀರ್ಘಾವಧಿಯವರೆಗೆ ಸ್ಥಿರ ಮತ್ತು ಮೃದುವಾದ ಕಾರ್ಯಕ್ಷಮತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಹಾಗೆಯೇ, ಈ ಹೊಸ OriginOS 6 ನಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತಷ್ಟು ಚುರುಕಾಗಿದೆ. ಫೋಟೋಗಳಿಗಾಗಿ AI Retouch,, ಡಾಕ್ಯುಮೆಂಟ್ ನಿರ್ವಹಣೆಗಾಗಿ DocMaster, ಮತ್ತು ಸಂವಹನಕ್ಕಾಗಿ Smart Call Assistant ನಂತಹ ಸಾಧನಗಳನ್ನು ಅಪ್‌ಡೇಟ್ ಒಳಗೊಂಡಿದೆ. ಹೊಸ 8+1 Ultra-Core Computing ವ್ಯವಸ್ಥೆಯೊಂದಿಗೆ, ಅಪ್ಲಿಕೇಶನ್‌ಗಳ ಲಾಂಚ್ ಸ್ಪೀಡ್ ಮತ್ತು ಮಲ್ಟಿಟಾಸ್ಕಿಂಗ್ ಸ್ಥಿರತೆಯಲ್ಲಿ ಸುಧಾರಣೆ ಕಂಡುಬರುತ್ತದೆ ಎಂದು Vivo ಹೇಳಿಕೊಂಡಿದೆ. ಇದು ಫೋನ್ ಬಳಕೆಯ ಅನುಭವವನ್ನು ಮತ್ತಷ್ಟು ಹೆಚ್ಚಿಸುವುದು ಖಂಡಿತ.!

Best Mobiles in India

English summary
Vivo and iQOO users can soon experience the new OriginOS 6 update. Check rollout dates and supported devices here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+