Home
ಮೊಬೈಲ್

2025ರ ಭಾರತದ ಟಾಪ್ 10 ಮೊಬೈಲ್ ಬ್ರ್ಯಾಂಡ್ ಪಟ್ಟಿ: ನಂ.1 ಯಾವುದು ಗೊತ್ತಾ?

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ 2025 ರಲ್ಲಿ ಮತ್ತೊಮ್ಮೆ ಪುಟಿದೆದ್ದಿದೆ. IDC ಬಿಡುಗಡೆ ಮಾಡಿದ ಇತ್ತೀಚಿನ ವರದಿ ಪ್ರಕಾರ, 2025ರ ಮೂರನೇ ತ್ರೈಮಾಸಿಕದಲ್ಲಿ (3Q25) ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇ. 4.3% ವರಷ್ಟು ವಾರ್ಷಿಕ ವೃದ್ಧಿಯಾಗಿದೆ. ದೇಶದಲ್ಲಿ ಮಧ್ಯಮ ಬೆಲೆಯ 5G ಫೋನ್‌ಗಳ ಹೆಚ್ಚುತ್ತಿರುವ ಬೇಡಿಕೆ ಮತ್ತು ಪ್ರೀಮಿಯಂ ಫೋನ್‌ಗಳತ್ತ ಗ್ರಾಹಕರ ಆಸಕ್ತಿ ಈ ಬೆಳವಣಿಗೆಯ ಪ್ರಮುಖ ಕಾರಣವಾಗಿದ್ದು, ಈ ಬಾರಿ Vivo ನಂಬರ್ 1 ಸ್ಥಾನದಲ್ಲಿದೆ.

ಭಾರತದ ನಂಬರ್ 1 ಬ್ರ್ಯಾಂಡ್ Vivo!
ಈ ಭಾರಿ ದೇಶದ ಮಾರುಕಟ್ಟೆಯಲ್ಲಿ Vivo ನಂಬರ್ 1 ಸ್ಥಾನದಲ್ಲಿದೆ. Vivo ನ ಮಾರುಕಟ್ಟೆ ಹಂಚಿಕೆ 15.8% ನಿಂದ 18.3% ಕ್ಕೆ ಏರಿಕೆಯಾಗಿ, ವಾರ್ಷಿಕ 20.7% ಬೆಳವಣಿಯನ್ನು ಸಾಧಿಸಿದೆ. ಇತ್ತೀಚಿನ ಹೊಸ Vivo V ಮತ್ತು X ಸರಣಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟದ ಎರಡೂ ಮಾರ್ಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಕಂಪನಿಯು ಬಲವಾದ ವಿತರಣೆ ಜಾಲ ಮತ್ತು ಆಕರ್ಷಕ ಆಫರ್‌ಗಳ ಮೂಲಕ ಸ್ಪರ್ಧಿಗಳನ್ನು ಹಿಂದಿಕ್ಕಿದೆ.

ಭಾರತದಲ್ಲಿ Apple ನ ದಾಖಲೆ ಬೆಳವಣಿಗೆ
ಟೆಕ್ ದೈತ್ಯ Apple ಭಾರತದಲ್ಲಿ ಈ ಬಾರಿ ತನ್ನ ಇತಿಹಾಸದಲ್ಲೇ ಅತಿಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಅದರ ಮಾರುಕಟ್ಟೆ ಹಂಚಿಕೆ 8.6% ನಿಂದ 10.4% ಕ್ಕೆ ಏರಿಕೆಯಾಗಿ, 25.6% ವೃದ್ಧಿಯಾಗಿದೆ. ಸ್ಥಳೀಯ ಉತ್ಪಾದನೆ ಹೆಚ್ಚಿಸಿದ ನಂತರ iPhone 15 ಸರಣಿಯು ಭಾರತದಲ್ಲಿ ದೊಡ್ಡ ಹಿಟ್ ಆಗಿದ್ದು, ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ Apple ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. ಭಾರತದ ತಯಾರಿಕಾ ಘಟಕಗಳಲ್ಲಿ ಮಾಡಿದ ಹೂಡಿಕೆ ಮತ್ತು ಆಫರ್‌ಗಳ ಮೂಲಕ ಕಂಪನಿಯು ಹೊಸ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ.

2025ರ ಭಾರತದ ಟಾಪ್ 10 ಮೊಬೈಲ್ ಬ್ರ್ಯಾಂಡ್ ಪಟ್ಟಿ: ನಂ.1 ಯಾವುದು ಗೊತ್ತಾ?

ಅಚ್ಚರಿ ಪುನರಾಗಮನಕ್ಕೆ Motorola ಸಾಕ್ಷಿ
ಒಂದು ಕಾಲದಲ್ಲಿ ಬಜೆಟ್ ಫೋನ್ ಪ್ರಿಯರ ಜನಪ್ರಿಯ ಬ್ರ್ಯಾಂಡ್ Motorola ಈ ಬಾರಿ ದೊಡ್ಡ ಪುನರಾಗಮನ ಮಾಡಿದೆ. ಅದರ ಮಾರುಕಟ್ಟೆ ಹಂಚಿಕೆ 5.7% ನಿಂದ 8.3% ಕ್ಕೆ ಏರಿಕೆಯಾಗಿ, 52.4% ವೇಗದ ಬೆಳವಣಿಗೆ ಕಂಡಿದೆ. Moto G ಮತ್ತು Edge ಸರಣಿಯ ಕಡಿಮೆ ಬೆಲೆಯ 5G ಫೋನ್‌ಗಳು ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿ ಪರಿಣಮಿಸಿವೆ. ಅತ್ಯುತ್ತಮ ಡಿಸ್‌ಪ್ಲೇ, ಉತ್ತಮ ಬ್ಯಾಟರಿ ಮತ್ತು ಕ್ಲೀನ್ ಸಾಫ್ಟ್‌ವೇರ್ ಅನುಭವವು Motorola ಗೆ ಪುನಃ ಜನಪ್ರಿಯತೆ ತಂದಿದೆ ಎನ್ನಲಾಗುತ್ತಿದೆ.

ಸ್ಥಿರವಾಗಿವೆ Samsung ಮತ್ತು OPPO
ಈ ತ್ರೈ-ಮಾಸಿಕದಲ್ಲಿ Samsung ತನ್ನ ಸ್ಥಾನವನ್ನು ಕಾಪಾಡಿಕೊಂಡಿದ್ದು, 12.6% ಮಾರುಕಟ್ಟೆ ಹಂಚಿಕೆ ಮತ್ತು 6.3% ವೃದ್ಧಿಯನ್ನು ಸಾಧಿಸಿದೆ. ಕಂಪೆನಿಗೆ Galaxy A ಮತ್ತು S ಸರಣಿಯು ಬಲ ನೀಡಿದ್ದು, ಬ್ರ್ಯಾಂಡ್‌ನ ಪ್ರೀಮಿಯಂ ಇಮೇಜ್‌ನ್ನು ಉಳಿಸಿದೆ. ಇದೇ ಸಮಯದಲ್ಲಿ, OPPO ತನ್ನ 13.9% ಹಂಚಿಕೆಯನ್ನು ಕಾಯ್ದುಕೊಂಡು 4.2% ಬೆಳವಣಿಗೆ ಸಾಧಿಸಿದೆ. ಅದರ Reno ಸರಣಿ ಯುವ ಗ್ರಾಹಕರಲ್ಲಿ ಇನ್ನೂ ಜನಪ್ರಿಯವಾಗಿದ್ದು, ಆನ್‌ಲೈನ್ ಸೇಲ್‌ಗಳಲ್ಲಿ ಉತ್ತಮ ಡಿಸ್ಪ್ಲೇ ನೀಡುತ್ತಿದೆ.

ಇತರ ಬ್ರ್ಯಾಂಡ್‌ಗಳಿಗೆ ಹಿನ್ನಡೆಯಾಗಿದೆ
ಕಳೆದ ಕೆಲವು ವರ್ಷಗಳಿಂದ ಯಶಸ್ವಿಯಾಗಿದ್ದ Realme, Xiaomi, Poco, iQOO ಮತ್ತು OnePlus ಕಂಪನಿಗಳು ಈ ಬಾರಿ ಹಿನ್ನಡೆಯನ್ನು ಅನುಭವಿಸಿವೆ.

  • Realme: 9.8% (- 10.9%)
  • Xiaomi: 9.2% (-15.6%)
  • Poco: 4.3% (-21.9%)
  • iQOO: 3.3% (-16.9%)
  • OnePlus: 2.4% (-30.5%)

ಕಡಿಮೆ ಬೆಲೆಯ ಹೊಸ ಚೀನಿ ಬ್ರ್ಯಾಂಡ್‌ಗಳ ಪ್ರವೇಶ, ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಬೆಲೆಯ ಒತ್ತಡವು ಈ ಬ್ರ್ಯಾಂಡ್‌ಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ.2025ರ ಮೂರನೇ ತ್ರೈಮಾಸಿಕದ ವೇಳೆಗೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ 4.3% ವೃದ್ಧಿಯಾಗಿದೆ. "Others" ವಿಭಾಗದಲ್ಲಿಯೂ 8% ಬೆಳವಣಿಗೆ ಕಂಡು ಬಂದಿದೆ - ಇದು ಹೊಸ ಭಾರತೀಯ ಮತ್ತು ಚೀನಿ ಬ್ರ್ಯಾಂಡ್‌ಗಳ ತ್ವರಿತ ಪ್ರವೇಶದಿಂದಾಗಿದೆ.2025ರ ಅಂತ್ಯದ ವೇಳೆಗೆ ಸ್ಥಳೀಯ ತಯಾರಿಕೆ, ಪ್ರೀಮಿಯಂ ಫೋನ್‌ಗಳ ಬೇಡಿಕೆ ಮತ್ತು 5G ಅಪ್‌ಗ್ರೇಡ್‌ಗಳ ಪ್ರಭಾವ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. Vivo, Apple ಮತ್ತು Motorola ಮುಂದಿನ ತಿಂಗಳಲ್ಲಿ ಪೈಪೋಟಿಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.

ಟಾಪ್ 10 ಬ್ರ್ಯಾಂಡ್‌ಗಳು (IDC 3Q25):
1. Vivo - 18.3% (+20.7%)
2. OPPO - 13.9% (+4.2%)
3. Samsung - 12.6% (+6.3%)
4. Apple - 10.4% (+25.6%)
5. Realme - 9.8% (-10.9%)
6. Xiaomi - 9.2% (-15.6%)
7. Motorola - 8.3% (+52.4%)
8. Poco - 4.3% (-21.9%)
9. iQOO - 3.3% (-16.9%)
10. OnePlus - 2.4% (-30.5%)
ಒಟ್ಟಾರೆ ಮಾರುಕಟ್ಟೆ ಬೆಳವಣಿಗೆ: +4.3%

ಮೂಲ: IDC Worldwide Quarterly Mobile Phone Tracker, ನವೆಂಬರ್ 2025

Best Mobiles in India

English summary
Vivo is the number 1 smartphone brand in the country. Vivo's market share increased from 15.8% to 18.3%, achieving a year-on-year growth of 20.7%. The latest Vivo V and X series smartphones have been very popular among consumers, receiving a good response in both online and offline sales channels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+