ಫ್ಲಿಪ್ ಕಾರ್ಟ್ ನಲ್ಲಿ ವಿವೋ ಕಾರ್ನಿವಲ್ ಸೇಲ್ ನಲ್ಲಿ ವಿವೋ ಫೋನ್ ಗಳಿಗೆ ಭರ್ಜರಿ ಡಿಸ್ಕೌಂಟ್
ವಿವೋ ಕಾರ್ನಿವಲ್ ಸೇಲ್ ಮತ್ತೆ ಫ್ಲಿಪ್ ಕಾರ್ಟ್ ನಲ್ಲಿ ಆರಂಭವಾಗುತ್ತಿದೆ. ಎಪ್ರಿಲ್ 11 ರ ವರೆಗೆ ಈ ಸೇಲ್ ನಡೆಯಲಿದೆ.ಈ ಸೇಲಿನ ಭಾಗವಾಗಿ ಖರೀದಿದಾರರು 17,000 ರುಪಾಯಿ ವರೆಗೆ ವಿವೋ ಫೋನ್ ಗಳ ಮೇಲೆ ರಿಯಾಯಿತಿ ಪಡೆಯುವ ಸುವರ್ಣಾವಕಾಶ ಲಭ್ಯವಿದೆ. ವಿವೋ ವಿ15 ಪ್ರೋ, ವಿವೋ ವೈ95, ವಿವೋ ವಿ9, ವಿವೋ ವೈ93 ಸೇರಿದಂತೆ ಹಲವು ಫೋನ್ ಗಳು ರಿಯಾಯಿತಿಯಲ್ಲಿ ಸಿಗುತ್ತದೆ. ನಾವಿಲ್ಲಿ ಅವುಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

ವಿವೋ ವಿ15: Rs 23,990 ಗೆ ಲಭ್ಯ
ವಿವೋ ವಿ15 ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಂಡಿರುವ ಸ್ಮಾರ್ಟ್ ಫೋನ್. ಇದು ಈ ಸೇಲ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ಸಿಗುತ್ತಿದ್ದು 23,990 ರುಪಾಯಿಗೆ ಖರೀದಿಸಬಹುದು. ಅಂದರೆ ನೈಜ ಬೆಲೆಯ 11% ರಿಯಾಯಿತಿ ಸಿಗುತದೆ. 6ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ವ್ಯವಸ್ಥೆಯ ಫೋನಿನಲ್ಲಿ 4000mAh ಬ್ಯಾಟರಿ ಸಾಮರ್ಥ್ಯವಿದೆ.
ವಿವೋ ವಿ15 ಪ್ರೋ: 28,990 ರುಪಾಯಿಗೆ ಲಭ್ಯ
ವಿವೋ ವಿ15 ಪ್ರೋ ನ್ನು ಈ ಸೇಲ್ ನಲ್ಲಿ 12% ರಿಯಾಯಿತಿಯಲ್ಲಿ ನೀಡಲಾಗುತ್ತಿದ್ದು 28,990 ರುಪಾಯಿ ಬೆಲೆಗೆ ಸಿಗುತ್ತದೆ. ಎಕ್ಸ್ ಚೇಂಜ್ ಆಫರ್ ನಲ್ಲಿ 19,450 ರುಪಾಯಿಗೆ ಖರೀದಿಸಬಹುದು. 6.39 ಇಂಚಿನ FHD+ ಡಿಸ್ಪ್ಲೇ ಮತ್ತು ಸ್ನ್ಯಾಪ್ ಡ್ರ್ಯಾಗನ್ 675 AIE ಪ್ರೊಸೆಸರ್ ನ್ನು ಇದು ಹೊಂದಿದೆ.

ವಿವೋ ವೈ95 : Rs 14,990 ಗೆ ಲಭ್ಯ
14,990 ರುಪಾಯಿ ಬೆಲೆಗೆ ಈ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದು.ನೈಜ ಬೆಲೆಗಿಂತ 21% ನಷ್ಟು ರಿಯಾಯಿತಿಯನ್ನು ಈ ಸೇಲ್ ನಲ್ಲಿ ಪಡೆಯಬಹುದು. 4ಜಿಬಿ RAM ಈ ಫೋನಿನಲ್ಲಿದ್ದು 4030mAh ಬ್ಯಾಟರಿ ಸಾಮರ್ಥ್ಯವಿದೆ ಜೊತೆಗೆ 20MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.

ವಿವೋ ವೈ93: 11,990 ರುಪಾಯಿಗೆ ಸಿಗುತ್ತದೆ.
ವಿವೋ ಡಿವೈಸ್ 3ಜಿಬಿ 3GB RAM ನ್ನು 11,990 ರುಪಾಯಿ ಬೆಲೆಗೆ ಸಿಗುತ್ತದೆ. ವಿವೋ ವೈ93 6.22-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ.

ವಿವೋ ವೈ81: Rs 7,999 ಗೆ ಸಿಗುತ್ತದೆ
ವಿವೋ ವೈ81 ಯನ್ನು 7,999 ರುಪಾಯಿಗೆ ಈ ಸೇಲ್ ನಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಈ ಸ್ಮಾರ್ಟ್ ಫೋನ್ 6.1-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದ್ದು 3260mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. ನೈಜ ಬೆಲೆಗಿಂತ 42% ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ವಿವೋ ವಿ9 ಪ್ರೋ: Rs 13,990 ಗೆ ಸಿಗುತ್ತದೆ
ವಿವೋ ವಿ9 ಪ್ರೋ ವನ್ನು 13,990 ರುಪಾಯಿಗೆ ಫ್ಲಿಪ್ ಕಾರ್ಟ್ ನ ಕಾರ್ನಿವಲ್ ಸೇಲ್ ನಲ್ಲಿ ಮಾರಾಟ ನಡೆಸಲಾಗುತ್ತದೆ.ಈ ಸ್ಮಾರ್ಟ್ ಫೋನ್ ಗೆ ನೈಜ ಬೆಲೆ 17,990 ಕ್ಕೆ 22% ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇದು 3260mAh ಬ್ಯಾಟರಿ ಮತ್ತು 6.3- ಇಂಚಿನ ಸ್ಕ್ರೀನ್ ಸೈಜ್ ನ್ನು ಹೊಂದಿದೆ.


Click it and Unblock the Notifications








