ಭಾರತದಲ್ಲಿ 5ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ವಿವೋ ಸಂಸ್ಥೆಯಿಂದ ಭರ್ಜರಿ ರಿಯಾಯಿತಿ

By Gizbot Bureau
|

ಭಾರತೀಯ ಮಾರುಕಟ್ಟೆಯಲ್ಲಿ 5ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ವಿವೋ ಸಂಸ್ಥೆ ಭರ್ಜರಿ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ಈ ಸಮಯವನ್ನು ಅಧ್ದೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ತನ್ನ ಕೆಲವು ಡಿವೈಸ್ ಗಳಿಗೆ ಬೆಸ್ಟ್ ಆಫರ್ ಬೆಲೆಯನ್ನು ಕೂಡ ನೀಡುತ್ತಿದೆ. ಈ ರಿಯಾಯಿತಿ ಮಾರಾಟವು ನಿನ್ನೆಯಿಂದ ಆರಂಭವಾಗಿದ್ದು ನವೆಂಬರ್ 14 ರ ವರೆಗೆ ನಡೆಯಲಿದೆ. ಹಾಗಾದ್ರೆ ಯಾವೆಲ್ಲಾ ಫೋನ್ ಗಳಿಗೆ ರಿಯಾಯಿತಿ ಇದೆ ಎಂಬ ವಿವರ ಇಲ್ಲಿದೆ.

ವಿವೋ

ವಿವೋ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಐಸಿಐಸಿಐ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಟ್ರಾನ್ಸ್ಯಾಕ್ಷನ್ ಗಳಿಗೆ 5% ಕ್ಯಾಷ್ ಬ್ಯಾಕ್ ನ್ನು ನೀಡುತ್ತಿದೆ. ಹೆಚ್ಚುವರಿಯಾಗಿ 1,000 ರುಪಾಯಿಯ ಎಕ್ಸ್ ಚೇಂಜ್ ಆಫರ್ ಇದೆ ಬಜಾಜ್ ಫಿನ್ ಸರ್ವ್ ಮತ್ತು ಇತರೆ ಕೆಲವು ಕ್ರೆಡಿಟ್ ಕಾರ್ಡ್ ಗಳಲ್ಲಿ ನೋ-ಕಾಸ್ಟ್ ಇಎಂಐ ಆಯ್ಕೆ ಇದೆ. ಏರ್ ಟೆಲ್ ಡಾಟಾ ಆಫರ್, 6,000 ರುಪಾಯಿಯ ಜಿಯೋ ಬೆನಿಫಿಟ್ ಮತ್ತು ವಡಾಫೋನ್ ಐಡಿಯಾ ಆಫರ್ ನಲ್ಲಿ 3,750 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ. ಇದಿಷ್ಟೇ ಅಲ್ಲ ಉಚಿತ ಹೆಡ್ ಫೋನ್ ಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದ್ದು ಕೆಲವು ಹ್ಯಾಂಡ್ ಸೆಟ್ ಗಳಿಗೆ 2,999 ರುಪಾಯಿ ಬೆಲೆಬಾಳುವ ಹೆಡ್ ಫೋನ್ ಕೂಡ ಸಿಗುತ್ತದೆ.

ವಿವೋ ಝಡ್ 1 ಪ್ರೋ

ವಿವೋ ಝಡ್ 1 ಪ್ರೋ

4GB RAM ಮತ್ತು 64GB ROM ಆಯ್ಕೆಯ ವೇರಿಯಂಟ್ ನ ಈ ಸ್ಮಾರ್ಟ್ ಫೋನ್ 13,990 ರುಪಾಯಿ ಬೆಲೆಗೆ ಸಿಗುತ್ತದೆ. 6GB RAM/64GB ROM ಮತ್ತು 6GB RAM/128GB ROM ಆಯ್ಕೆಯ ಫೋನ್ ಗಳು ಕೂಡ ಸಿಗುತ್ತದೆ. ಇದು ಮಿರರ್ ಬ್ಲಾಕ್, ಸೋನಿಕ್ ಬ್ಲಾಕ್ ಮತ್ತು ಸೋನಿಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ.

ವಿವೋ ಝಡ್ 1x

ವಿವೋ ಝಡ್ 1x

ಈ ಡಿವೈಸ್ ಖರೀದಿಯ ಪ್ರಿಪೇಯ್ಡ್ ಆರ್ಡರ್ ನಲ್ಲಿ 1,000 ರುಪಾಯಿ ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದು. 6GB RAM ಮತ್ತು 64GB ROM ವೇರಿಯಂಟ್ ನ ಈ ಫೋನ್ 15,990 ರುಪಾಯಿಗೆ ಅಂದರೆ 20% ರಿಯಾಯಿತಿಯಲ್ಲಿ ಸಿಗುತ್ತದೆ. ಈ ಹ್ಯಾಂಡ್ ಸೆಟ್ ವಿವೋ ಎಕ್ಸ್ ಕ್ಲೂಸೀವ್ 22.5W ವಿವೋ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ.

ವಿವೋ ಯು 10

ವಿವೋ ಯು 10

3GB RAM ಮತ್ತು 32GB ROM ವ್ಯವಸ್ಥೆಯ ಈ ಫೋನ್ 8,990 ರುಪಾಯಿ ಬೆಲೆಗೆ ಸಿಗುತ್ತದೆ. ಥಂಡರ್ ಬ್ಲಾಕ್ ಮತ್ತು ಎಲೆಕ್ಟ್ರಿಕ್ ಬ್ಲೂ ಬಣ್ಣದ ಆಯ್ಕೆಗಳು ಲಭ್ಯವಿದೆ. ಈ ಫೋನಿನ ಪ್ರಮುಖ ವೈಶಿಷ್ಟ್ಯತೆಯೆಂದರೆ 13MP + 8MP + 2MP ಹಿಂಭಾಗದ ಕ್ಯಾಮರಾ ವ್ಯವಸ್ಥೆ, 8MP ಸೆಲ್ಫೀ ಸೆನ್ಸರ್ , 5,000 mAh ಬ್ಯಾಟರಿ, ಮತ್ತು ಸ್ನ್ಯಾಪ್ ಡ್ರ್ಯಾಗನ್ 665AIE ಪ್ರೊಸೆಸರ್ ನ್ನು ಹೊಂದಿದೆ.

ವಿವೋ ಎಸ್1

ವಿವೋ ಎಸ್1

4GB RAM ಮತ್ತು 128GB ROM ವ್ಯವಸ್ಥೆಯ ಫೋನ್ 16,990 ರುಪಾಯಿ ಬೆಲೆಗೆ ಸಿಗುತ್ತದೆ. ನಿಮಗೆ ಹೆಚ್ಚುವರಿಯಾಗಿ 700 ರುಪಾಯಿಯ ಎಕ್ಸ್ ಚೇಂಜ್ ಆಫರ್ ಇದೆ. ಇದು ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ವ್ಯವಸ್ಥೆ ಹೊಂದಿದ್ದು ಬಹಳ ಇಂಟರ್ಯಾಕ್ಟೀವ್ ಆಗಿದೆ ಮತ್ತು 4,500mAh ಬ್ಯಾಟರಿ ಜೊತೆಗೆ ವಿವೋನ 18W ಡುಯಲ್ ಇಂಜಿನ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ವಿವೋ ವಿ17 ಪ್ರೋ

ವಿವೋ ವಿ17 ಪ್ರೋ

ಈ ಹ್ಯಾಂಡ್ ಸೆಟ್ ಖರೀದಿಸುವುದರಿಂದಾಗಿ ನಿಮಗೆ ಹೆಚ್ಚುವರಿಯಾಗಿ 1,000 ರುಪಾಯಿ ಎಕ್ಸ್ ಚೇಂಜ್ ಆಫರ್ ಸಿಗುತ್ತದೆ. ಇದು 32MP ಡುಯಲ್ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. 48MP AI ಕ್ವಾಡ್ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ. FHD+ ಸೂಪರ್ AMOLED ಡಿಸ್ಪ್ಲೇ, 8GB RAM, ಮತ್ತು 128GB ROM ನ್ನು ಒಳಗೊಂಡಿದೆ.

ವಿವೋ ವಿ15 ಪ್ರೋ

ವಿವೋ ವಿ15 ಪ್ರೋ

ಈ ಹ್ಯಾಂಡ್ ಸೆಟ್ ನಿಮಗೆ 2,000 ರುಪಾಯಿಯ ಎಕ್ಸ್ ಚೇಂಜ್ ಆಫರ್ ನಲ್ಲಿ ಲಭ್ಯವಾಗುತ್ತದೆ. ಇದರ ಖರೀದಿಯಲ್ಲಿ ನೀವು 10,000 ರುಪಾಯಿ ಜಿಯೋ ಬೆನಿಫಿಟ್ ನ್ನು ಪಡೆಯಬಹುದು ಮತ್ತು ಎಐ ಟ್ರಿಪಲ್ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ.

ವಿವೋ ವೈ90

ವಿವೋ ವೈ90

2GB RAM ಮತ್ತು 16GB ROM ವೇರಿಯಂಟ್ ನ ಈ ಫೋನ್ 6,4920 ರುಪಾಯಿ ಬೆಲೆಗೆ ಸಿಗುತ್ತದೆ. ಇದರಲ್ಲಿ 4,030 mAh ಬ್ಯಾಟರಿ, ಫಾಸ್ಟ್ ಫೇಸ್ ಅನ್ ಲಾಕ್ ಫೀಚರ್, ಹಾಲೋ ಫುಲ್ ವ್ಯೂ ಡಿಸ್ಪ್ಲೇ ವ್ಯವಸ್ಥೆ ಮತ್ತು ಮೀಡಿಯಾ ಟೆಕ್ ಹೆಲಿಯೋ ಪಿ22 ಪ್ರೊಸೆಸರ್ ನ್ನು ಹೊಂದಿದೆ.

ವಿವೋ ವೈ15

ವಿವೋ ವೈ15

4GB RAM/64GB ROM ವೇರಿಯಂಟ್ ನ ಫೋನ್ 11,990 ರುಪಾಯಿ ಬೆಲೆಗೆ ಸಿಗುತ್ತದೆ. ಇದನ್ನು ನೀವು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ 12 ತಿಂಗಳ ಕಂತಿನ ರೂಪದಲ್ಲಿ ಬೇಕಿದ್ದರೂ ಖರೀದಿಸಬಹುದು. ಇದರಲ್ಲಿ ಅತೀ ದೊಡ್ಡ ಅಂದರೆ 5,000mAh ಸಾಮರ್ಥ್ಯದ ಬ್ಯಾಟರಿ ಇದೆ ಮತ್ತು ಎಐ ಟ್ರಿಪಲ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ.

ವಿವೋ ವೈ12

ವಿವೋ ವೈ12

3GB RAM ಮತ್ತು 64GB ROM ಆಯ್ಕೆಯ ಈ ಫೋನಿನ ಬೆಲೆ 9,990 ರುಪಾಯಿಗಳು. ಈ ಫೋನ್ ಖರೀದಿಸಿ ಉಚಿತ ಬ್ಲೂಟೂತ್ ನ್ನು ಪಡೆಯಬಹುದಾಗಿದ್ದು ಇದು 999 ರುಪಾಯಿ ಬೆಲೆಬಾಳುತ್ತದೆ. ಇದರ ಪ್ರಮುಖ ವೈಶಿಷ್ಟ್ಯತೆಯೆಂದರೆ ಅತೀ ದೊಡ್ಡ ಬ್ಯಾಟರಿ ವ್ಯವಸ್ಥೆ. ಹೌದು ಈ ಫೋನಿನಲ್ಲಿ 5,000 mAh ಸಾಮರ್ಥ್ಯದ ಬ್ಯಾಟರಿ ಇದೆ.

Best Mobiles in India

English summary
Vivo has organized a grand celebration to mark its foothold for five years in the market. Check out a list of some Vivo devices, and buy a suitable handset.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X