Home
ಮೊಬೈಲ್

ವಿವೋ ದೀಪಾವಳಿ ಆಫರ್!..ಕೇವಲ 101 ರೂ. ಪಾವತಿಸಿ ಸ್ಮಾರ್ಟ್‌ಫೋನ್ ಖರೀದಿಸಿ!

ದೀಪಾವಳಿ ಹಬ್ಬದ ಪ್ರಯುಕ್ತ ವಿವೋ ಭರ್ಜರಿ ಆಫರ್ ಘೋಷಿಸಿದ್ದು, ಕೇವಲ 101 ರೂ. ಪಾವತಿಸಿ ವಿವೋ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶವನ್ನು ಕಂಪೆನಿ ನೀಡಿದೆ. ಭಾರತದಾದ್ಯಂತ ತನ್ನ ಆಫ್‌ಲೈನ್ ಅಂಗಡಿಗಳ ಮೂಲಕ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳು ಮತ್ತು ಶೂನ್ಯ ಡೌನ್-ಪೇಮೆಂಟ್ ಯೋಜನೆಗಳಲ್ಲಿ ವಿವೋ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು. ಇದಲ್ಲದೆ, ಈ ಹಬ್ಬದ ಅವಧಿಯಲ್ಲಿ ವಿವೋ ಫೋನ್‌ಗಳನ್ನು ಖರೀದಿಸುವಾಗ ಡಿಜಿಟಲ್ ವಹಿವಾಟು ನಡೆಸುವ ಗ್ರಾಹಕರಿಗೆ ಇದು ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.

101 ರೂ.

ಹೌದು, ಕೇವಲ 101 ರೂ. ಮುಂಗಡ ಪಾವತಿಸಿದರೆ ಮಾತ್ರ ವಿವೋ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ. ಈ ಆಫರ್ ಅಕ್ಟೋಬರ್ 18 ರಿಂದ 31 ರವರೆಗೆ ನಡೆಯಲಿದ್ದು, ವಿವೋ V17 Pro, ವಿವೋ Z1x , ವಿವೋ V15, ವಿವೋ S1, ವಿವೋ Y17, ವಿವೋ Y15, ಮತ್ತು Vivo Y12 ಸ್ಮಾರ್ಟ್​ಫೋನ್​ಗಳ ಮೇಲೆ ಈ ಆಫರ್ ಅನ್ನು ನೀಡುತ್ತಿದೆ. ಮೊದಲು ಮೇಲೆ ನೀಡಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ. ನಂತರ 101 ರೂ. ಡೌನ್‌ಪೇಮೆಂಟ್ ಪಾವತಿಸಿ ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಕೊಳ್ಳಿ ಎಂದು ವಿವೋ ಕಂಪೆನಿ ತಿಳಿಸಿದೆ.

10 ಪ್ರತಿಶತ ಕ್ಯಾಶ್‌ಬ್ಯಾಕ್

ಈ ಆಫರ್ ಅಡಿಯಲ್ಲಿ ವಿವೊ ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಮೂಲಕ 10 ಪ್ರತಿಶತ ಕ್ಯಾಶ್‌ಬ್ಯಾಕ್ ಮತ್ತು ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕ ಸಾಲಗಳನ್ನು ಬಳಸುವ ಗ್ರಾಹಕರಿಗೆ ಐದು ಪ್ರತಿಶತ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಅದೇ ರೀತಿ, ಕಂಪನಿಯು 12 ತಿಂಗಳ ಇಎಂಐ ಅಧಿಕಾರಾವಧಿಯೊಂದಿಗೆ ಬಜಾಜ್ ಫಿನ್‌ಸರ್ವ್, ಹೋಮ್ ಕ್ರೆಡಿಟ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್,ಮತ್ತು ಎಚ್‌ಡಿಬಿಎಫ್‌ಎಸ್ ಮೂಲಕ ಶೂನ್ಯ ಡೌನ್‌ಪೇಮೆಂಟ್ ಆಯ್ಕೆಗಳನ್ನು ನೀಡಿದೆ.

101 ರೂಪಾಯಿಗೆ

ದೀಪಾವಳಿ ಹಬ್ಬದ ಅವಧಿಯಲ್ಲಿ ವಿವೋ ಫೋನ್‌ಗಳನ್ನು ಖರೀದಿಸುವಾಗ ಕೇವಲ 101 ರೂಪಾಯಿಗೆ ವಿವೋ ಸ್ಮಾರ್ಟ್‌ಫೋನ್ ಖರೀದಿಸಬಹುದು. ಉಳಿದ ಮೊತ್ತವನ್ನು ಪ್ರತಿ ತಿಂಗಳು ಇಎಮ್‌ಐ ಮೂಲಕ ಕಡಿತವಾಗುತ್ತದೆ. ಪ್ರತಿ ತಿಂಗಳೂ ಒಟ್ಟು 926 ರೂ.ಗಳನ್ನು ಇಎಮ್ಐ ಮೂಲಕ ಕಡಿತವಾಗುತ್ತದೆ. ಮೇಲಿನ ಯಾವುದೇ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ ನಂತರ ಮಳಿಗೆಗಳಲ್ಲಿ 101 ರೂ.ಗಳನ್ನು ಪಾವತಿಸಬೇಕು. ಆ ನಂತರ ಡೌನ್ ಪೇಮೆಂಟ್ ಪಾವತಿಗೆ ಅನುಮತಿ ನೀಡಲಾಗುತ್ತದೆ ಎಂದು ವಿವೋ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಆನ್‌ಲೈನ್ ಸ್ಟೋರ್

ಈ ವಾರದ ಆರಂಭದಲ್ಲಿ, ವಿವೋ ತನ್ನ ಆನ್‌ಲೈನ್ ಸ್ಟೋರ್ ಮೂಲಕ ವಿವಿಧ ಸ್ಮಾರ್ಟ್‌ಫೋನ್ ಮಾದರಿಗಳಿಗೆ ರಿಯಾಯಿತಿಯನ್ನು ನೀಡಲು ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಮಾರಾಟವನ್ನು ಆರಂಭಿಸಿತ್ತು. ಇದೀಗ ವಿಶೇಷ ಕೊಡುಗೆಯಾಗಿ ಅಕ್ಟೋಬರ್ 18 ಮತ್ತು ಅಕ್ಟೋಬರ್ 31 ರ ನಡುವೆ ಭಾರತದಾದ್ಯಂತದ ಎಲ್ಲಾ ಆಫ್‌ಲೈನ್ ಅಂಗಡಿಗಳು 101 ರೂಪಾಯಿಗೆ ವಿವೋ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಹಾಗಾದರೆ, ಇನ್ನೇಕೆ ತಡ?, ಈಗಲೇ ನಿಮಗಿಷ್ಟವಾದ ಒಂದು ಫೋನನ್ನು ಖರೀದಿಸಲು ವಿವೋ ಅಂಗಡಿಗೆ ತೆರಳಿ.

Best Mobiles in India

English summary
Alongside the Rs. 101 offer, Vivo is offering 10 percent cash back through HDB Financial Services and five percent cash back for customers using HDFC and ICICI Bank credit card EMI transactions. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+