Home
ಮೊಬೈಲ್

Vivo; S19 ಸರಣಿಯ ಮೊಬೈಲ್‌ಗಳನ್ನು ಬಿಡುಗಡೆಗೊಳಿಸಿದ ವಿವೋ: ಬೆಲೆ, ಫೀಚರ್ಸ್‌ ತಿಳಿಯಿರಿ

ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವಿಭಿನ್ನವಾದ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆದಿರುವ ವಿವೋ (Vivo) ಇದೀಗ ಚೀನಾದಲ್ಲಿ ತನ್ನ ವಿವೋ S19 ಸರಣಿಯ ಎರಡು ಮೊಬೈಲ್‌ಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ಸಂಚಲನ ಉಂಟು ಮಾಡಲು ವಿವೋ ಸಿದ್ದವಾಗಿದೆ. ಚೀನಾದಲ್ಲಿ ಮೇ. 30ರಂದು ನಡೆದ ಕಾರ್ಯಕ್ರಮದಲ್ಲಿ ವಿವೋ S19 ಮತ್ತು ವಿವೋ S19 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಬನ್ನಿ ಈ ಎರಡೂ ಮೊಬೈಲ್‌ಗಳ ಫೀಚರ್ಸ್, ಬೆಲೆ ಹಾಗೂ ಇವುಗಳ ಲಭ್ಯತೆಯ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ.

ಹೌದು, ವಿವೋ ಸಂಸ್ಥೆಯು ತನ್ನ S19 ಸರಣಿಯ ವಿವೋ S19 ಮತ್ತು ವಿವೋ S19 Pro ಎಂಬ ಎರಡು ಫೋನ್‌ಳನ್ನು ಬಿಡುಗಡೆಗೊಳಿಸಿದೆ. ಅವುಗಳು 80W ವೇಗದ ಚಾರ್ಜಿಂಗ್ ಮತ್ತು ಕೆಲವು ಇತರೆ ಫೀಚರ್ಸ್‌ಗಳನ್ನು ಹೊಂದಿವೆ. ಇವೆರಡೂ 50MP ಸೆನ್ಸಾರ್ ಫ್ರಂಟ್ ಕ್ಯಾಮರಾ, ಹಿಂಭಾಗದಲ್ಲಿ 50MP ವಿಭಿನ್ನವಾದ ಸೆನ್ಸಾರ್ ಹೊಂದಿರುವ ಮುಖ್ಯ ಕ್ಯಾಮರಾಗಳನ್ನು ಹೊಂದಿದೆ. ಇದರ ಪರಿಣಾಮವಾಗಿ ಈ ಮೊಬೈಲ್‌ಗ ಆರಂಭಿಕ ಬೆಲೆಯಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಬಹುದಾಗಿದೆ.

Vivo; S19 ಸರಣಿಯ ಮೊಬೈಲ್‌ಗಳನ್ನು ಬಿಡುಗಡೆಗೊಳಿಸಿದ ವಿವೋ

ಚೀನಾದಲ್ಲಿ Vivo S19 ಬೆಲೆ: ಚೀನಾದಲ್ಲಿ ವಿವೋ S19 ಮೂಲ ಮಾದರಿಯಾಗಿರುವ 8GB/256GB ವೇರಿಯಂಟ್‌ನ ಬೆಲೆ CNY 2,499 ಅಂದರೆ ಸುಮಾರು 29,000 ರೂ. ಗಳಾಗಿವೆ. ಇನ್ನೂ ಈ ಸ್ಮಾರ್ಟ್‌ಫೋನ್ ಪೀಚ್ ಬ್ಲಾಸಮ್ ಫ್ಯಾನ್, ಮಿಸ್ಟಿ ಬ್ಲೂ ಮತ್ತು ಪೈನ್ ಸ್ಮೋಕ್ ಇಂಕ್ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಚೀನಾದಲ್ಲಿ ವಿವೋ S19 Pro ಬೆಲೆ: ಚೀನಾದಲ್ಲಿ ವೀವೋ S19 ಪ್ರೋ ಮೊಬೈಲ್‌ನ 8GB/256GB ವೇರಿಯಂಟ್‌ಗೆ CNY 3,299 ಅಂದರೆ ಸುಮಾರು 38,350 ರೂ. ಗಳಿಂದ ಪ್ರಾರಂಭವಾಗುತ್ತದೆ. ಇನ್ನೂ ಈ ಸ್ಮಾರ್ಟ್‌ಫೊನ್ ಹಸಿರು, ಮಿಸ್ಟಿ ಬ್ಲೂ ಮತ್ತು ಸ್ವೋರ್ಡ್ ಶಾಡೋ ಗ್ರೇ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.

ವಿವೋ S19 ಪ್ರೋ ಫೀಚರ್ಸ್‌: ಈ ಮೊಬೈಲ್‌ ಮೀಡಿಯಾಟೆಕ್ ಡೈಮೆನ್ಸಿಟಿ 9200+ SoC ಯಿಂದ Immortal-G715 ಜೊತೆ ಜೋಡಿಸಲಾಗಿದೆ. ಇದು 16GB LPDDR5X RAM ಮತ್ತು 512GB ವರೆಗಿನ UFS 3.1 ಸ್ಟೋರೆಜ್‌ ಸಾಮರ್ಥ್ಯ ಹೊಂದಿದೆ. ಜೊತೆಗೆ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500 mAh ಬ್ಯಾಟರಿ ಸೌಲಭ್ಯ ಹೊಂದಿದೆ. ಜೊತೆಗೆ, 6.78 ಇಂಚಿನ 1.5K ಕವರ್ಡ್‌ ಅಮೋಲ್ಡ್ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 300Hz ಟಚ್ ರೇಟ್ ಹೊಂದಿದೆ.

ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, 50MP ಪ್ರಾಥಮಿಕ Sony IMX92 ಸೆನ್ಸಾರ್ ಕ್ಯಾಮರಾ ಜೊತೆಗೆ OIS, VCS ಬಯೋನಿಕ್ ತಂತ್ರಜ್ಞಾನ ಮತ್ತು f/1.85 ಅಪಾರ್ಚರ್ ಹೊಂದಿದೆ. ಇದರ ಮುಖ್ಯ ಕ್ಯಾಮರಾವು 50 MP ಆಂಟಿ ಶೇಕ್‌ ಟೆಲಿಫೋಟೋ ಯೂನಿಟ್ ಜೊತೆಗೆ f/2.2 ಅಪಾರ್ಚರ್‌ ಹಾಗೂ 8 MP ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಇದರ ಮುಂಭಾಗದ ಕ್ಯಾಮೆರಾ ಸ್ವಯಂ ಅಭಿವೃದ್ಧಿಪಡಿಸಿದ AI ಫೇಸ್ ತಿದ್ದುಪಡಿ ತಂತ್ರಜ್ಞಾನದ ಜೊತೆಗೆ ಆಟೋಫೋಕಸ್‌ನೊಂದಿಗೆ 50MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ವಿವೋ S19 ಫೀಚರ್ಸ್‌: ಇದು ಸ್ನಾಪ್‌ಡ್ರಾಗನ್ 7 ಜೆನ್ 3 SoCನಿಂದ ರನ್ ಆಗಲಿದೆ, V30 ರೀತಿಯ ಚಿಪ್‌ ಅನ್ನೇ ಹೊಂದಿದೆ. ಸ್ಮಾರ್ಟ್‌ಫೋನ್ 16GB LPDDR5 RAM ಮತ್ತು 512GB ವರೆಗಿನ UFS 3.1 ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. 8GB/256GB ವೇರಯಂಟ್‌ LPDDR4X RAM ಮತ್ತು UFS 2.2 ಸ್ಟೋರೇಜ್ ಸಾಮರ್ಥ್ಯ ಹೊಂದಿದೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

Vivo S19 ಇದು ಕೂಡ ಪ್ರೊ ಮಾದರಿಯಂತೆ ಡಿಸ್‌ಪ್ಲೇ ಹೊಂದಿದ್ದು, ಇದು ಫ್ಲಾಟ್ ಪ್ಯಾನೆಲ್ ಹೊಂದಿದೆ. 80W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000 mAh ಬ್ಯಾಟರಿಯನ್ನು ಸಹ ಹೊಂದಿದೆ. ಜೊತೆಗೆ ಈ ಮಾದರಿ ಚಿಕ್ಕದಾದ 3000mm2 VC ಸೀಟ್ ಸಿಂಕ್ ಅನ್ನು ಹೊಂದಿದೆ. ಫೋನ್ ಆಂಡ್ರಾಯ್ಡ್ 14-ಆಧಾರಿತ ಮೂಲ ಓಎಸ್ 4.0 ನಿಂದ ಕಾರ್ಯ ನಿರ್ವಹಿಸಲಿದೆ.

ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ 50 MP ಪ್ರಾಥಮಿಕ ಅಲ್ಟ್ರಾ ಶೇಕ್ ರೆಸಿಸ್ಟೆಂಟ್ ಕ್ಯಾಮೆರಾ ಜೊತೆಗೆ ಪ್ರೊ ಮಾದರಿಯಂತೆ ಸ್ವಯಂ ಅಭಿವೃದ್ಧಿಪಡಿಸಿದ OIS ಮತ್ತು ಕ್ಯಾಮೆರಾ ಲೆವೆಲ್ ಇಮೇಜ್ ಸ್ಟೆಬಿಲೈಸೇಶನ್ (CIPA 4.0) ಅನ್ನು ಸಹ ಒಳಗೊಂಡಿದೆ. ಇದು ಕೂಡ ಡೌನ್‌ಗ್ರೇಡ್ ಮಾಡಿದ 8 MP ಅಲ್ಟ್ರಾವೈಡ್ ಲೆನ್ಸ್ ಜೊತೆಗೆ f/2.2 ಅಪರ್ಚರ್ ಅನ್ನು ಹೊಂದಿದೆ. ಮುಂಭಾಗದಲ್ಲಿ f/2.0 ಅಪರ್ಚರ್ ಜೊತೆಗೆ 50 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನೂ ಈ ಮೊಬೈಲ್ 193 ಗ್ರಾಂ ತೂಕವಿದೆ

Best Mobiles in India

English summary
Vivo has launched S19 series two Smartphones in China, the name is Vivo S19 and Vivo S19 Pro. They have 80W fast charging and some other features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+