ಕೇವಲ 7,999 ರೂ..! ಸದ್ದಿಲ್ಲದೇ ಹೊಸ Vivo ಫೋನ್ ಲಾಂಚ್: ಮಸ್ತ್ ಫೀಚರ್!
ವಿವೋ (Vivo) ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Vivo Y18 ಮತ್ತು Y18e ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮಧ್ಯೆಯೇ, ಸೈಲೆಂಟ್ ಆಗಿಯೇ Vivo 'Y' ಸರಣಿಯ ಮತ್ತೊಂದು ಅಗ್ಗದ ಮೊಬೈಲ್ Vivo Y18i ಅನ್ನು ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಫ್‌ಲೈನ್ ಸ್ಟೋರ್‌ಗಳಲ್ಲಿ ಕೇವಲ 7,999 ರೂ.ಗಳಲ್ಲಿ ಲಭ್ಯವಿದೆ. ಬನ್ನಿ, ಈ ಹೊಸ ಮೊಬೈಲ್‌ನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಹೌದು, ನಾವು ಹೊಸ Vivo Y18i ಫೋನಿನ ಬಗ್ಗೆ ಮಾತನಾಡುತ್ತಿದ್ದೇವೆ. ವಿವೋ ಕಂಪನಿಯು ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕಡಿಮೆ ಬೆಲೆಯ ಹೊರತಾಗಿಯೂ, ಈ ಫೋನ್‌ನಲ್ಲಿ ನೀವು ಉತ್ತಮ ಗುಣಮಟ್ಟದ ಫೀಚರ್ಸ್‌ಗಳನ್ನು ಕಾಣಬಹುದು. ಇದು 6.56 ಇಂಚಿನ ಡಿಸ್ಪ್ಲೇ, Unisoc Tiger T612 ಪ್ರೊಸೆಸರ್, 4GB RAM + 64GB ಸ್ಟೋರೇಜ್, 13 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹಾಗೂ 5,000mAh ಬ್ಯಾಟರಿ ಹೊಂದಿದೆ.

Vivo Y18i ಬೆಲೆ ಎಷ್ಟು?
ವಿವೋದ ಈ ಹೊಸ ಮೊಬೈಲ್ ಅನ್ನು ಭಾರತೀಯ ಆಫ್‌ಲೈನ್ ಮಾರುಕಟ್ಟೆಯಲ್ಲಿ ಸಿಂಗಲ್ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಶೀಘ್ರದಲ್ಲೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಮಾರಾಟಕ್ಕೆ ಲಭ್ಯವಿರಬಹುದು ಎಂದು ನಿರೀಕ್ಷಿಸಲಾಗಿದೆ. ಮಾಹಿತಿಯ ಪ್ರಕಾರ, Vivo Y18i ಸ್ಮಾರ್ಟ್‌ಫೋನ್ 4GB RAM + 64GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಕೇವಲ 7,999 ರೂ.ಗಳಿಗೆ ಬಿಡುಗಡೆಯಾಗಿದೆ.
ಹೊಸ Vivo Y18i ಫೋನಿನ ವಿಶೇಷತೆಗಳೇನು?
ಡಿಸ್‌ಪ್ಲೇ: Vivo Y18i ಸ್ಮಾರ್ಟ್‌ಫೋನ್ 1612 × 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ದೊಡ್ಡ 6.56 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು ಎಲ್ಸಿಡಿ ಪ್ಯಾನಲ್‌ನಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿ 90Hz ರಿಫ್ರೆಶ್ ರೇಟ್ ಮತ್ತು 528nits ಬ್ರೈಟ್‌ನೆಸ್ ಸಪೋರ್ಟ್ ಇದೆ.
ಪ್ರೊಸೆಸರ್: Vivo Y18i ಫೋನ್ Android OS ಮತ್ತು Funtouch OS 14.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. Unisoc Tiger T612 ಚಿಪ್‌ಸೆಟ್ ಅನ್ನು ಈ ಫೋನ್‌ನಲ್ಲಿ ಒದಗಿಸಲಾಗಿದೆ.
ಸ್ಟೋರೇಜ್: ಈ ಹೊಸ ಮತ್ತು ಅಗ್ಗದ Vivo ಫೋನ್ 4 GB RAM, 4 GB ಎಕ್ಸ್ಟೆಂಡೆಡ್ RAM ತಂತ್ರಜ್ಞಾನವನ್ನು ಹೊಂದಿದೆ. ಇದರ ಸಹಾಯದಿಂದ ನೀವು 8 GB RAMನ ಶಕ್ತಿಯನ್ನು ಬಳಸಿಕೊಳ್ಳಬಹುದು. ಆದರೆ, ಇಂಟರ್ನಲ್ ಸ್ಟೋರೇಜ್‌ಗಾಗಿ 64 GB ಮೆಮೊರಿ ಇದೆ. ಅಷ್ಟೇ ಅಲ್ಲ, ಇದು 1TB ವರೆಗಿನ ಮೈಕ್ರೊ SD ಕಾರ್ಡ್‌ಗೆ ಬೆಂಬಲವನ್ನು ಸಹ ಹೊಂದಿದೆ.
ಕ್ಯಾಮೆರಾ: Vivo Y18i ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ, 0.08 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಅನ್ನು ಹೊಂದಿದೆ. ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: Vivo Y18i ಫೋನಿನ ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಚಾರ್ಜಿಂಗ್‌ಗಾಗಿ 15W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತದೆ.
ಇತರೆ ವೈಶಿಷ್ಟ್ಯಗಳು: Vivo Y18i ನೀರು ಮತ್ತು ಧೂಳಿನ ನಿರೋಧಕ IP54 ರೇಟಿಂಗ್‌ನೊಂದಿಗೆ ಬರುತ್ತದೆ. ಇದರಲ್ಲಿ ವೈಫೈ, ಬ್ಲೂಟೂತ್, 4ಜಿ ನೆಟ್‌ವರ್ಕ್, GPS ಮತ್ತು USB ಟೈಪ್-C ಪೋರ್ಟ್ ಸೌಲಭ್ಯವಿದೆ. Vivo Y18i ಫೋನ್ ಡ್ಯುಯಲ್ ಸಿಮ್ ಅನ್ನು ಬೆಂಬಲಿಸುತ್ತದೆ ಮತ್ತು ನೀವು ಇದರಲ್ಲಿ 5G ಬೆಂಬಲವನ್ನು ಸಹ ಪಡೆಯಬಹುದು.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








