Home
ಮೊಬೈಲ್

iPhoneಗಿಂತಲೂ ದುಬಾರಿ ಈ ಫೋನು! Vivo X Fold 3 Pro ಬಿಡುಗಡೆ, ಜೂನ್ 30ರಿಂದ ಸೇಲ್ ಶುರು

ವಿವೋ (Vivo) ಕಂಪನಿಯು, ತನ್ನ ವಿಭಿನ್ನ ಫೀಚರ್ಸ್‌ ಮೂಲಕ ಹೆಚ್ಚು ಗ್ರಾಹಕರ ಬಳಗವನ್ನೇ ಹೊಂದಿದೆ. ಮೊಬೈಲ್ ಪ್ರಿಯರಿಗಾಗಿ ಹೊಸ ಹೊಸ ವಿನ್ಯಾಸದ, ಅದ್ಭುತ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬೆಲೆಗೆ ತಕ್ಕನಾದ ಸ್ಮಾರ್ಟ್‌ಫೋನ್ ಒದಗಿಸುವಲ್ಲಿಯೂ ವಿವೋ ಸಕ್ಸಸ್‌ ಆಗಿದೆ. ಇದೀಗ, Vivo X Fold 3 Pro ಹೆಸರಿನಲ್ಲಿ ಮೊದಲ ಫೋಲ್ಡಬಲ್ ಮೊಬೈಲ್‌ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಹಾಗಿದ್ರೆ, ಈ ಮೊಬೈಲ್‌ನ ಬೆಲೆ ಎಷ್ಟು? ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಬ್ಯಾಕಪ್ ಸೇರಿದಂತೆ ಫೀಚರ್ಸ್‌ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಇದು ವಿವೋನ ಮೊದಲ ಫೋಲ್ಡಬಲ್ (ಮಡಚಬಹುದಾದ) ಮೊಬೈಲ್‌ ಆಗಿದೆ. ಮಾರುಕಟ್ಟೆಯಲ್ಲಿ ಇತರ ಮಡಿಸಬಹುದಾದ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಲಿದೆ. ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. 11.2 ಮಿಮೀ ದಪ್ಪ ಮತ್ತು 236 ಗ್ರಾಂ ತೂಕ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ತೂಕ ತುಂಬಾ ಕಡಿಮೆಯಾಗಿದೆ ಮತ್ತು ಇದನ್ನು ಸುಲಭವಾಗಿ ಜೇಬಿನಲ್ಲಿ ಇಡಬಹುದು ಎಂದು ವಿವೋ ಕಂಪನಿ ಹೇಳಿದೆ.

iPhoneಗಿಂತಲೂ ದುಬಾರಿ ಈ ಫೋನು! ಜೂನ್ 30ರಿಂದ ಸೇಲ್ ಶುರು

ವಿವೋ X ಫೋಲ್ಡ್ 3 ಪ್ರೊ ಬೆಲೆ 1,59,999 ರೂ.!

ಭಾರತೀಯ ಮಾರುಕಟ್ಟೆಯಲ್ಲಿ ಈ Vivo X Fold 3 Pro 16GB RAM + 512GB ಸ್ಟೋರೇಜ್‌ನ ಬೆಲೆ 1,59,999 ರೂ. ಆಗಿದೆ. ಈ ಡಿವೈಸ್ 16GB ವರೆಗೆ LPDDR5X RAM ಮತ್ತು 1TB ವರೆಗೆ UFS4.0 ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದು ಹಿಂಜ್ ಕಾರ್ಯವಿಧಾನದಲ್ಲಿ ಕಾರ್ಬನ್ ಫೈಬರ್ ಕೀಲ್ ಘಟಕವನ್ನು ಪಡೆದಿರುವ ಮೊದಲ ಫೋಲ್ಡ್ ಫೋನ್. ಈ ತಂತ್ರಜ್ಞಾನವು ಡಿವೈಸ್‌ನ ವರ್ಧಿತ ಪೋರ್ಟಬಿಲಿಟಿಗಾಗಿ ಹಾಗೂ ಹಗುರವಾದ ಅನುಭವ ನೀಡಲಿದೆ. ದೀರ್ಘಕಾಲದ ಬಳಕೆಯನ್ನು ಸಹಿಸಿಕೊಳ್ಳುವಷ್ಟು ದೃಢವಾಗಿರಲಿದೆ.

ವಿವೋ X ಫೋಲ್ಡ್ 3 ಪ್ರೊನ ಫೀಚರ್‌ & ವಿಶೇಷತೆಗಳು

ಈ ವಿವೋ X ಫೋಲ್ಡ್ 3 ಪ್ರೊನ (Vivo X Fold 3 Pro) ಬ್ಯಾಟರಿ ಬಗ್ಗೆ ಹೇಳುವುದಾದರೆ, ಇದು 5,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಗಾಗಿ ಅಡ್ರಿನೋ ಜಿಪಿಯು ಅನ್ನು ಜೋಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಒರ್ಜಿನ್‌ಓಎಸ್ 4 ನಲ್ಲಿ ರನ್ ಆಗುತ್ತದೆ.

iPhoneಗಿಂತಲೂ ದುಬಾರಿ ಈ ಫೋನು! ಜೂನ್ 30ರಿಂದ ಸೇಲ್ ಶುರು

ಇದು ಡ್ಯುಯಲ್ ಡಿಸ್‌ಪ್ಲೇಯನ್ನು ಹೊಂದಿದೆ. 6.53-ಇಂಚಿನ ಕವರ್ ಡಿಸ್‌ಪ್ಲೇ ಮತ್ತು 8.03 ಇಂಚಿನ ಒಳಗಿನ ಅಮೋಲೆಡ್ LTPO ಫೋಲ್ಡಿಂಗ್ ಡಿಸ್‌ಪ್ಲೇ ಒಳಗೊಂಡಿದೆ. ಎರಡೂ ಡಿಸ್‌ಪ್ಲೇಗಳು 2480 x 2200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. 120Hz ರಿಫ್ರೆಶ್ ದರ, ಡಾಲ್ಬಿ ವಿಷನ್, ಹೆಚ್‌ಡಿಆರ್‌ 10+ ನಂತಹ ಇತರ ಫೀಚರ್ಸ್ ಜೊತೆಗೆ 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. TA"V Rheinlandನ ಪರೀಕ್ಷೆಯಲ್ಲಿ ಇದು 12 ವರ್ಷಗಳ ಬಳಕೆಗೆ ಯೋಗ್ಯವಾಗಿದೆ.

ವಿವೋ X ಫೋಲ್ಡ್ 3 ಪ್ರೊ ಕ್ಯಾಮೆರಾ ಏನು?

ಇನ್ನು, ಈ Vivo X Fold 3 Proನ ಕ್ಯಾಮೆರಾ ಬಗ್ಗೆ ನೋಡುವುದಾದರೆ, ಓಐಎಸ್‌ನೊಂದಿಗೆ 50 MP ಅಲ್ಟಾಸೆನ್ಸಿಂಗ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 64 MP 3x ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 32 MP ಕ್ಯಾಮೆರಾ ಆಯ್ಕೆ ಪಡೆದಿದೆ. ಗ್ರಾಹಕರು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಆನ್‌ಲೈನ್ ಸ್ಟೋರ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಗೆ ಮಾಡಬಹುದು.

Vivo X Fold 3 Pro ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಜೂನ್ 30 ರಿಂದ ಅಧಿಕೃತ ಮಾರಾಟ ಪ್ರಾರಂಭವಾಗಲಿದೆ. HDFC ಮತ್ತು SBI ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಪಾವತಿಗಳ ಮೇಲೆ 15,000 ರೂ. ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ. 10,000 ರೂ. ವರೆಗಿನ ಎಕ್ಸ್‌ಚೇಂಜ್ ಬೋನಸ್, ಒಂದು ಬಾರಿ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಸೌಲಭ್ಯ ಮತ್ತು EMI (6,666 ರೂ.) ಆಯ್ಕೆಗಳು ಇದೆ.

Best Mobiles in India

English summary
Vivo launches its first foldable phone X Fold3 Pro in India. We can see that Vivo launched its Vivo X Fold 3 and X Fold 3 Pro series of smartphones in China earlier this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+