ಭಾರತದಲ್ಲಿ Vivo V50 Elite ಫೋನ್ ಬಿಡುಗಡೆ: ಬೆಲೆ ಮತ್ತು ಅದ್ಭುತ ಫೀಚರ್ಸ್ ನೋಡಿ!
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ Vivo V50 Elite ಸ್ಮಾರ್ಟ್‌ಫೋನ್ ಅನ್ನು ಇಂದು (ಮೇ 15, 2025) ಭರ್ಜರಿಯಾಗಿ ಬಿಡುಗಡೆಗೊಳಿಸಿದೆ. ಈ ಹೊಸ ಸ್ಮಾರ್ಟ್‌ಫೋನ್, ಈಗಾಗಲೇ ಮಾರುಕಟ್ಟೆಯಲ್ಲಿರುವ ವಿವೋ V50 ಮತ್ತು V50e ಗಳ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುವ ಗುರಿಯನ್ನು ಹೊಂದಿದ್ದು, ಇದು 6.77 ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್‌ಪ್ಲೇ, 6,000 mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗಿದೆ. ಹಾಗಾದರೆ, ಹೊಸ Vivo V50 Elite ಸ್ಮಾರ್ಟ್‌ಫೋನ್ ಹೇಗಿದೆ?, ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Vivo V50 Elite ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
Vivo V50 Elite ಕೇವಲ 0.757cm ದಪ್ಪದ ಅಲ್ಟ್ರಾ-ಸ್ಲಿಮ್ ದೇಹವನ್ನು ಹೊಂದಿದೆ. ಈ ತೆಳುವಾದ ವಿನ್ಯಾಸದ ಹೊರತಾಗಿಯೂ, ಇದು ಬೃಹತ್ 6,000 mAh ಬ್ಯಾಟರಿಯನ್ನು ಒಳಗೊಂಡಿದೆ. ವಿವೋನ ಸುಧಾರಿತ BlueVolt ತಂತ್ರಜ್ಞಾನ ಮತ್ತು 90 Wಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನವು ವೇಗದ ಚಾರ್ಜಿಂಗ್ ಅನ್ನು ಖಚಿತಪಡಿಸುತ್ತದೆ. ಇದರ 6.77 ಇಂಚಿನ (17.19 cm) ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ 4,500 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ, , 120 Hz ರಿಫ್ರೆಶ್ ದರ ಅತ್ಯಂತ ಸ್ಪಷ್ಟ ಮತ್ತು ತಲ್ಲೀನಗೊಳಿಸುವ ದೃಶ್ಯ ಅನುಭವವನ್ನು ನೀಡುತ್ತದೆ. ಬಾಳಿಕೆಯ ವಿಷಯದಲ್ಲಿಯೂ Vivo V50 Elite ಗಮನಾರ್ಹವಾಗಿ ಡೈಮಂಡ್ ಶೀಲ್ಡ್ ಗ್ಲಾಸ್ ಜೊತೆಗೆ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದುಕೊಂಡಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ.
ಕಾರ್ಯಕ್ಷಮತೆಗಾಗಿ, ಈ Vivo V50 Elite ಫೋನ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12 GB RAM ಮತ್ತು 512 GB ಆಂತರಿಕ ಸಂಗ್ರಹಣೆಯೊಂದಿಗೆ ಲಭ್ಯವಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಇದು ಆಂಡ್ರಾಯ್ಡ್ 15 ಆಧಾರಿತ ಫಂಟೌಚ್ OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿವೋ ಈ ಫೋನ್‌ಗೆ 3 ವರ್ಷಗಳ OS ನವೀಕರಣಗಳನ್ನು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ನೀಡಿದೆ. ದೀರ್ಘಕಾಲದ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಮೊದಲೇ ಹೇಳಿದಂತೆ, ಈ ಸ್ಮಾರ್ಟ್‌ಫೋನ್ 6,000 mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ, ಬಾಕ್ಸ್‌ನಲ್ಲಿಯೇ 90 W ವೇಗದ ಚಾರ್ಜರ್ ಅನ್ನು ನೀಡಲಾಗಿದ್ದು, ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

ಕ್ಯಾಮೆರಾ ವಿಭಾಗದಲ್ಲಿಯೂ Vivo V50 Elite ಸ್ಮಾರ್ಟ್‌ಫೋನ್ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹಿಂಭಾಗದಲ್ಲಿ 50 MP ಮುಖ್ಯ ಕ್ಯಾಮೆರಾ ಮತ್ತು 50 MP ಅಲ್ಟ್ರಾವೈಡ್ ಸೆನ್ಸರ್ ಅನ್ನು ನೀಡಲಾಗಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್), ಅಲ್ಟ್ರಾ-ವೈಡ್ ಮತ್ತು ಗ್ರೂಪ್ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿರುವ 50 MP ZEISS ಆಲ್-ಮೇನ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ವಿಶೇಷವಾಗಿ, ಈ Elite ಆವೃತ್ತಿಯು ZEISS ಮಲ್ಟಿಫೋಕಲ್ ಪೋರ್ಟ್ರೇಟ್‌ಗಳು (23mm, 35mm, 50mm) ಮತ್ತು 7 ಐಕಾನಿಕ್ ZEISS ಭಾವಚಿತ್ರ ಶೈಲಿಗಳನ್ನು ಒಳಗೊಂಡಿದೆ. ಭಾರತೀಯ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೆಡ್ಡಿಂಗ್ ಸ್ಟೈಲ್ ಪೋರ್ಟ್ರೇಟ್ ಸ್ಟುಡಿಯೋ ಪ್ರತಿ ವಿಶೇಷ ಕ್ಷಣಕ್ಕೂ ಸಿನಿಮೀಯ ಸ್ಪರ್ಶವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, Vivo V50 Elite ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 50 MP ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಲ್ಲಿ ಸ್ಪಷ್ಟವಾದ ಬ್ಯಾಕ್‌ಲಿಟ್ ಸೆಲ್ಫಿಗಳಿಗಾಗಿ ವಿವೋನ ಸ್ವಯಂ-ಅಭಿವೃದ್ಧಿಪಡಿಸಿದ AI 3D ಸ್ಟುಡಿಯೋ ಲೈಟಿಂಗ್ 2.0 ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ನೀರೊಳಗಿನ ಛಾಯಾಗ್ರಹಣಕ್ಕೂ ಸೂಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ. ಈ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ ಜನರೇಷನ್ AI ವೈಶಿಷ್ಟ್ಯಗಳಾದ ಸರ್ಕಲ್ ಟು ಸರ್ಚ್, AI ಸ್ಕ್ರೀನ್ ಟ್ರಾನ್ಸ್‌ಲೇಷನ್ ಮತ್ತು ಲೈವ್ ಕಾಲ್ ಟ್ರಾನ್ಸ್‌ಲೇಷನ್, AI ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್, AI ಸೂಪರ್‌ಲಿಂಕ್ ಮತ್ತು ಎರೇಸರ್‌ನಂತಹ ಉಪಯುಕ್ತ ವೈಶಿಷ್ಟ್ಯಗಳನ್ನು ಈ Vivo V50 Elite ಸ್ಮಾರ್ಟ್‌ಫೋನ್ ಒಳಗೊಂಡಿದೆ.
Vivo V50 Elite ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆ,
Vivo V50 Elite ಭಾರತದಲ್ಲಿ ₹41,999 ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದು ಇಂದಿನಿಂದಲೇ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾದ ಅಧಿಕೃತ ವೆಬ್‌ಸೈಟ್ ಹಾಗೂ ದೇಶಾದ್ಯಂತದ ಎಲ್ಲಾ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ. ಆರಂಭದಲ್ಲಿ, ಈ ಫೋನ್ ರೋಸ್ ರೆಡ್ ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಗ್ರಾಹಕರು ಆನ್‌ಲೈನ್‌ನಲ್ಲಿ, HDFC, SBI ಮತ್ತು Axis ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವ ಮೂಲಕ ₹ 3000 ವರೆಗೆ ತ್ವರಿತ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ₹ 3000 ವರೆಗೆ ಎಕ್ಸ್‌ಚೇಂಜ್ ಬೋನಸ್ ಅನ್ನು ಪಡೆಯಬಹುದು. ಇದರ ಜೊತೆಗೆ, 6 ತಿಂಗಳವರೆಗೆ ನೋ ಕಾಸ್ಟ್ EMI ಆಯ್ಕೆಯೂ ಲಭ್ಯವಿದೆ ಎಂದು ಕಂಪೆನಿಯು ಹೇಳಿದೆ.


Click it and Unblock the Notifications








