Home
ಮೊಬೈಲ್

'ವಿವೊ ನೆಕ್ಸ್ 3' ಹೊಂದಿರುವ ಫೀಚರ್ಸ್ ತಲೆತಿರುಗಿಸುತ್ತಿವೆ!

ಕೇವಲ 13 ನಿಮಿಷಗಳಲ್ಲೇ 100 ಪರ್ಸೆಂಟ್ ಚಾರ್ಜ್ ಆಗುವಂತಹ ಹಾಗೂ 5ಜಿ ಕನೆಕ್ಟಿವಿಟಿ ತಂತ್ರಜ್ಞಾನಗಳೊಂದಿಗೆ ಬಹುನಿರೀಕ್ಷಿತ ವಿವೊ ನೆಕ್ಸ್ 3 ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. 2019ರ ಫೆಬ್ರವರಿಯಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ವಿವೊ ಕಂಪೆನಿ ಘೋಷಿಸಿದಂತೆ, 120W ಸಾಮರ್ಥ್ಯದ ಸೂಪರ್ ಫ್ಯಾಶ್ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯ ಹೊಂದಿರುವ ವಿವೊ ನೆಕ್ಸ್ 3 ಅತ್ಯಂತ ತೆಳುವಾದ ಪ್ರದರ್ಶನದೊಂದಿಗೆ ಬರಲಿದೆ ಎಂದು ತಿಳಿದುಬಂದಿದೆ.

'ವಿವೊ ನೆಕ್ಸ್ 3' ಹೊಂದಿರುವ ಫೀಚರ್ಸ್ ತಲೆತಿರುಗಿಸುತ್ತಿವೆ!

ಹೌದು, ವಿವೋ ನೆಕ್ಸ್ 3ಪೋನಿನ ಪ್ರೋಮೋ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಬಾಗಿದ ಪ್ರದರ್ಶನ (ಅಂಚುಗಳಲ್ಲಿ) ಮತ್ತು ಬಟನ್‌ಲೆಸ್ ವಿನ್ಯಾಸವನ್ನು ಹೊಂದಿರುವ ಫೋನ್ ಅನ್ನು ವೀಡಿಯೊ ತೋರಿಸುತ್ತದೆ. ಹೆಡ್‌ಫೋನ್ ಜ್ಯಾಕ್ ಮೇಲ್ಭಾಗದಲ್ಲಿದೆ. ಇದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಅಥವಾ ಅಂಡರ್-ಡಿಸ್ಪ್ಲೇ ಕ್ಯಾಮೆರಾದೊಂದಿಗೆ ಬರಬಹುದೆಂದು ಊಹಿಸಲಾಗುತ್ತಿತ್ತು, ಈಗ ಫೋನ್ ಪಾಪ್-ಅಪ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ ಎಂಬುದನ್ನು ವೀಡಿಯೊ ಖಚಿತಪಡಿಸಿದೆ.

ನೆಕ್ಸ್ 3 ಸಾಧನದ ಹಿಂಭಾಗದಲ್ಲಿ ಗಾಜಿನ ಹಿಂಭಾಗವನ್ನು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಹೊಂದಿರುತ್ತದೆ. ಹಿಂದಿನ ಸೋರಿಕೆಯಂತೆ, ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 64 ಎಂಪಿ ಕ್ಯಾಮೆರಾದೊಂದಿಗೆ ಬರಬಹುದು. ಇನ್ನು ವಿವೊ 4,000 mAh ಬ್ಯಾಟರಿ ಮಾಹಿತಿಯನ್ನು ಸಹ ಬಿಡುಗಡೆ ಮಾಡಿದೆ, ಅದು 120 W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ (ಹೌದು, ಲ್ಯಾಪ್‌ಟಾಪ್‌ನಂತೆ) ಮತ್ತು ಕೇವಲ 13 ನಿಮಿಷಗಳಲ್ಲಿ ಚಾರ್ಜ್ ಮಾಡುತ್ತದೆ. ನೆಕ್ಸ್ 3 ಈ ಬ್ಯಾಟರಿಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

'ವಿವೊ ನೆಕ್ಸ್ 3' ಹೊಂದಿರುವ ಫೀಚರ್ಸ್ ತಲೆತಿರುಗಿಸುತ್ತಿವೆ!

ವಿವೋ ನೆಕ್ಸ್ 3 ಸ್ಮಾರ್ಟ್‌ಪೋನಿನಲ್ಲಿ 5ಜಿ ಕನೆಕ್ಟಿವಿಟಿ, 120W ಸಾಮರ್ಥ್ಯದ ಸೂಪರ್ ಫ್ಯಾಶ್ ಚಾರ್ಜಿಂಗ್ ತಂತ್ರಜ್ಞಾನ, 4ಕೆ ಹೈಡೆಫಿನಿಷಿನ್ ವಿಡಿಯೊ ಸೌಲಭ್ಯ, 64 ಎಂಪಿ ಕ್ಯಾಮೆರಾ ಹಾಗೂ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಎಸ್‌ಒಸಿ ಪ್ರೊಸೆಸರ್ ಫೀಚರ್ಸ್‌ಗಳಿರುವುದು ಬಹುತೇಕ ಖಚಿತವಾಗಿದೆ. ಫೋನಿನ ಬದಿಗಳಲ್ಲಿ ಬಟನ್ಸ್ ಬದಲಾಗಿ ರಿಬ್ಬಡ್ ಮೇಲ್ಮೈಯನ್ನು ಹೊಂದಿರುತ್ತವೆ. ಇವುಗಳ ಮೇಲ ಒತ್ತಡವನ್ನು ಹಾಕಿದಾಗ ಹ್ಯಾಪ್ಟಿಕ್ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಕೆಲ ಮಾದ್ಯಮಗಳು ವರದಿ ಮಾಡಿವೆ.

ಕಳೆದ ಕೆಲವು ವಾರಗಳಲ್ಲಿ ವಿವೋ ನೆಕ್ಸ್ 3 ಹಲವಾರು ರೀತಿಯಲ್ಲಿ ಸೋರಿಕೆಯಾಗಿದೆ. ವಿವೋ ನೆಕ್ಸ್ 3 'ವಾಟರ್‌ಫಾಲ್ ಪ್ರದರ್ಶನ' ವಿನ್ಯಾಸವನ್ನು ಹೊಂದುವ ನಿರೀಕ್ಷೆಯಿದೆ ಮತ್ತು ಕಂಪನಿಯು ಫೋನ್‌ನ 5ಜಿ ರೂಪಾಂತರವನ್ನು ಸಹ ಬಿಡುಗಡೆ ಮಾಡುತ್ತದೆ. ಪ್ರೋಮೋ ವೀಡಿಯೊವು ನಿಖರವಾದ ವಿಶೇಷತೆಗಳನ್ನು ಹೊರತುಪಡಿಸಿ ಫೋನ್‌ನ ವಿನ್ಯಾಸದ ಬಗ್ಗೆ ಎಲ್ಲವನ್ನು ಬಹಿರಂಗಪಡಿಸುತ್ತದೆ. ಈಗ, ಹೊಸ ಸೋರಿಕೆಯುಮುಂಬರುವ ಫ್ಲ್ಯಾಗ್‌ಶಿಪ್ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದೆ. ಉದಾಹರಣೆಗೆ ಫೋನಿನ ಚಾರ್ಜಿಂಗ್ ಸ್ಟ್ಯಾಂಡರ್ಡ್ ಮತ್ತು ಅದರ ಕ್ಯಾಮೆರಾ.

Best Mobiles in India

English summary
Vivo first announced its 120W Super FlashCharge technology ahead of MWC Shanghai earlier this year. At the time, Vivo claims its technology can fully charge a 4,000mAh battery in just 13 minutes. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+