ಆಪಲ್, ಒನ್‌ಪ್ಲಸ್‌ಗಳನ್ನು ಮೀರಿಸಿದ ಭವಿಷ್ಯದ ಸ್ಮಾರ್ಟ್‌ಪೋನ್ 'ವಿವೊ ನೆಕ್ಸ್' !!

|

ವಿಶ್ವದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ಮುಂದಿನ ಪೀಳಿಗೆಯ ಸ್ಮಾರ್ಟ್‌ಪೋನ್ ಎಂದೇ ಹೆಸರಾಗಿರುವ ವಿವೊ ಕಂಪೆನಿಯ ಅತ್ಯಂತ ನವೀನ ಸ್ಮಾರ್ಟ್‌ಪೋನ್ 'ವಿವೊ ನೆಕ್ಸ್' ಸ್ಮಾರ್ಟ್‌ಫೋನ್ ಭಾರತದಲ್ಲಿ ಹವಾ ಎಬ್ಬಿಸುತ್ತಿದೆ. ಸ್ಮಾರ್ಟ್‌ಪೋನ್ ಪ್ರಪಂಚದಲ್ಲಿಯೇ ಅತ್ಯಂತ ವಿಶೇಷವಾದ ಭವಿಷ್ಯದ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಇದಾಗಿದೆ.

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಜುಲೈ 21 ರಿಂದಲೇ ಅಮೆಜಾನ್.ಕಾಮ್, ವಿವೊ ಸ್ಟೋರ್‌ಗಳಲ್ಲಿ ಮಾರಾಟಕ್ಕಿರುವ ಈ ಸ್ಮಾರ್ಟ್‌ಪೋನಿನ ಫೀಚರ್ಸ್ ಮೊಬೈಲ್ ಪ್ರಿಯರ ನಿದ್ದೆಗೆಡಿಸಿವೆ. ಎಲಿವೆಟಿಂಗ್ ಕ್ಯಾಮೆರಾ ಮತ್ತು ಇನ್-ಡಿಸ್ಪ್ಲೇ ಸ್ಕ್ಯಾನಿಂಗ್ ಫೀಚರ್ ತಂತ್ರಜ್ಞಾನಗಳನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆಯನ್ನು ಸಹ 'ವಿವೊ ನೆಕ್ಸ್' ಹೊಂದಿದೆ.

ಆಪಲ್, ಒನ್‌ಪ್ಲಸ್‌ಗಳನ್ನು ಮೀರಿಸಿದ ಭವಿಷ್ಯದ ಸ್ಮಾರ್ಟ್‌ಪೋನ್ 'ವಿವೊ ನೆಕ್ಸ್' !!

44,990 ರೂಪಾಯಿಗಳ ಬೆಲೆಯಿಂದ ಆರಂಭವಾಗಿರುವ ಈ 'ವಿವೊ ನೆಕ್ಸ್' ಸ್ಮಾರ್ಟ್‌ಪೋನ್ ವಿಶ್ವದ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸ್ಮಾರ್ಟ್‌ಫೋನ್ ಆಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿವೊ ಕಂಪೆನಿಯ ಅತ್ಯಂತ ನವೀನ ಸ್ಮಾರ್ಟ್‌ಪೋನ್ 'ವಿವೊ ನೆಕ್ಸ್ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕಣ್ಣು ಮಿಟುಕಿಸದಂತಿದೆ ರಿಯಾಲಿಟಿ ಕಾನ್ಸೆಪ್ಟ್!!

ಕಣ್ಣು ಮಿಟುಕಿಸದಂತಿದೆ ರಿಯಾಲಿಟಿ ಕಾನ್ಸೆಪ್ಟ್!!

'ವಿವೋ ನೆಕ್ಸ್' ಸ್ಮಾರ್ಟ್‌ಫೋನ್ ವಿವೊ ಕಂಪೆನಿಯ 'ಅಪೆಕ್ಸ್' ಕಾನ್ಸೆಪ್ಟ್ ಫೋನ್‌ ಅನ್ನು ಆಧರಿಸಿದೆ. 2018 ನೇ MWCನಲ್ಲಿ ಪ್ರದರ್ಶನಗೊಂಡು ವಿಶ್ವ ಮೊಬೈಲ್ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿದ ನಿಜವಾದ ಅಂಚಿನ ಎಡ್ಜ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದೆ. ವಿವೊ ಕಂಪೆನಿ ತನ್ನ ಹೈ ಎಂಡ್ ಸ್ಮಾರ್ಟ್‌ಫೋನ್ ತಯಾರಿಕೆಗಾಗಿ ನಿರ್ಮಿಸಿರುವ ನವೀನ ತಂತ್ರಜ್ಞಾನಗಳಲ್ಲಿ ಸ್ಮಾರ್ಟ್‌ಫೋನ್ ಬೆಜೆಲ್ ಲೆಸ್ ಕೂಡ ಸ್ಥಾನ ಪಡೆದಿದೆ.

ಬೆರಗುಗೊಳಿಸುವ ವಿನ್ಯಾಸ ಮತ್ತು ಫುಲ್ ವ್ಯೂ ಡಿಸ್‌ಪ್ಲೇ!

ಬೆರಗುಗೊಳಿಸುವ ವಿನ್ಯಾಸ ಮತ್ತು ಫುಲ್ ವ್ಯೂ ಡಿಸ್‌ಪ್ಲೇ!

ಮೊದಲೇ ಹೈ ಎಂಡ್ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ 'ವಿವೋ ನೆಕ್ಸ್' ಸ್ಮಾರ್ಟ್‌ಫೋನಿನ ವಿನ್ಯಾಸವು ನಿರೀಕ್ಷೆಯನ್ನು ಮುಟ್ಟಿದೆ. ನಿಖರ ನ್ಯಾನೋ ಲೇಸರ್ ಕೆತ್ತನೆ ಪ್ರಕ್ರಿಯೆಯ ಮೂಲಕ ಪ್ರತಿಯೊಂದು 'ವಿವೋ ನೆಕ್ಸ್' ಸ್ಮಾರ್ಟ್‌ಫೋನ್ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಗ್ಲಾಸ್-ಮೆಟಲ್ ವಿನ್ಯಾಸದಲ್ಲಿ 2160 x 1080p ರೆಸೊಲ್ಯೂಷನ್ ಹೊಂದಿರುವ 6.59 ಇಂಚಿನ ಸೂಪರ್ AMOLED ಅಲ್ಟ್ರಾ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯು ಸ್ಕ್ರೀನ್-ಟು-ಬಾಡಿ ಅನುಪಾತದ ಶೇ 91.24% ನಷ್ಟಿದೆ.

ವಿಶ್ವದ ಮೊದಲ ಎಲಿವೆಟಿಂಗ್ ಕ್ಯಾಮೆರಾ!

ವಿಶ್ವದ ಮೊದಲ ಎಲಿವೆಟಿಂಗ್ ಕ್ಯಾಮೆರಾ!

ಸೆಲ್ಫಿ ಕ್ಯಾಮೆರಾವನ್ನು ಬಿಟ್ಟಿ ಇಂದಿನ ಸ್ಮಾರ್ಟ್‌ಪೋನ್‌ಗಳಿಲ್ಲ. ಆದರೆ, ಸ್ಮಾರ್ಟ್‌ಪೋನ್ ಸ್ಕ್ರೀನ್ ಅನ್ನು ಬೆಜೆಲ್ ಲೆಸ್‌ಗೊಳಿಸುವುದು ಸಹ ಮೊಬೈಲ್ ಪ್ರಿಯರ ಆಕಾಂಕ್ಷೆಯಾಗಿದೆ. ಹಾಗಾಗಿ, ವಿವೊ ಕಂಪೆನಿ ವಿಶ್ವದ ಮೊದಲ ಎಲಿವೆಟಿಂಗ್ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದೆ. ವಿವೋ ನೆಕ್ಸ್' ಸ್ಮಾರ್ಟ್‌ಫೋನ್ ಸೆಲ್ಫಿ ಕ್ಯಾಮೆರಾವನ್ನು ಮರೆಮಾಡುತ್ತದೆ. ಸೆಲ್ಫಿ ತೆಗೆಯಲು ಮುಂದಾದಾಗ ಮಾತ್ರ ಕ್ಯಾಮೆರಾವು ಮೊಬೈಲ್ ದೇಹದಿಂದ ಹೊರಬರುತ್ತದೆ. ಈ ಕ್ಯಾಮೆರಾ ಸಂವೇದಕ ಸೆನ್ಸಾರ್ ಮೊಬೈಲ್ ಐಸಿಯೊಂದಿಗೆ ನಿಯಂತ್ರಿಸಲ್ಪಡುತ್ತದೆ.

'ಇನ್-ಡಿಸ್ಲೆಂಡ್ ಫಿಂಗರ್ಪ್ರಿಂಟ್' ಸ್ಕ್ಯಾನಿಂಗ್!

'ಇನ್-ಡಿಸ್ಲೆಂಡ್ ಫಿಂಗರ್ಪ್ರಿಂಟ್' ಸ್ಕ್ಯಾನಿಂಗ್!

ವಿಶ್ವದಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕರಿಗೆ 'ಇನ್-ಡಿಸ್ಲೆಂಡ್ ಫಿಂಗರ್ಪ್ರಿಂಟ್' ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಮೊದಲು ನೀಡಿದ ಕೀರ್ತಿಯನ್ನು 'ವಿವೋ ನೆಕ್ಸ್' ಸ್ಮಾರ್ಟ್‌ಫೋನ್ ಪಡೆದುಕೊಂಡಿದೆ. ತಂತ್ರಜ್ಞಾನ ಯುಗದಲ್ಲಿ ಅಸಾಧ್ಯ ಎನಿಸುವಂತಹ ಕ್ರಾಂತಿಕಾರಿ 'ಇನ್-ಡಿಸ್ಲೆಂಡ್ ಫಿಂಗರ್ಪ್ರಿಂಟ್' ಸ್ಕ್ಯಾನಿಂಗ್ ತಂತ್ರಜ್ಞಾನ ಬಂದಿರುವುದರಿಂದ ಸ್ಮಾರ್ಟ್‌ಫೋನ್ ಫಿಂಗರ್ಪ್ರಿಂಟ್ ಸಂವೇದಕ ಮರೆಯಾಗಿದೆ. ಈಗ ನೀವು ಈ ಸ್ಮಾರ್ಟ್‌ಪೋನಿನ ಪರದೆಯಲ್ಲಿ ಗೊತ್ತುಪಡಿಸಿದ ಪ್ರದೇಶವನ್ನು ಸ್ಪರ್ಶಿಸುವ ಕ್ಷಣ ನಿಮ್ಮ ಮೊಬೈಲ್ ತೆರೆದುಕೊಳ್ಳುತ್ತದೆ.

ಇದು ಶಕ್ತಿಶಾಲಿ ಸ್ಮಾರ್ಟ್‌ಪೋನ್!

ಇದು ಶಕ್ತಿಶಾಲಿ ಸ್ಮಾರ್ಟ್‌ಪೋನ್!

'ವಿವೋ ನೆಕ್ಸ್' ಒಂದು ನವೀನತೆಯ ಫೋನ್ ಮಾತ್ರವಾಗದೆ ಶಕ್ತಿಶಾಲಿ ಸ್ಮಾರ್ಟ್‌ಪೋನ್ ಕೂಡ ಆಗಿದೆ. ಪ್ರಸ್ತುತ ಅತ್ಯುತ್ತಮ ಪ್ರೊಸೆಸರ್ ಎಂದು ಕರೆಸಿಕೊಳ್ಳುವ ಸ್ನ್ಯಾಪ್‌ಡ್ರಾಗನ್ 845 ಚಿಪ್‌ಸೆಟ್ ಅನ್ನು ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಲಾಗಿದೆ. ಇನ್ನು 8GB RAM ಮತ್ತು 128GB ಆಂತರಿಕ ಮೆಮೊರಿಯನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ 4000mAH ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಕೃತಕ ಬುದ್ದಿಮತ್ತೆ ಸ್ಮಾರ್ಟ್‌ ಎಂಜಿನ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ಕಾರ್ಯನಿರ್ವಹಣೆ ನಿರೀಕ್ಷೆಗೂ ಹೆಚ್ಚಿನದನ್ನು ಹೊಂದಿದೆ.

ಡ್ಯುಯಲ್ ಲೆನ್ಸ್ ಕೃತಕಬುದ್ದಿಮತ್ತೆ ಕ್ಯಾಮೆರಾ!

ಡ್ಯುಯಲ್ ಲೆನ್ಸ್ ಕೃತಕಬುದ್ದಿಮತ್ತೆ ಕ್ಯಾಮೆರಾ!

ವಿಯೋ ನೆಕ್ಸ್ ಹೊಸ ತಲೆಮಾರಿನ ಸೋನಿ IMX363 ಲೆನ್ಸ್ (ನೀಲಮಣಿಯ ಸ್ಫಟಿಕ ಮೇಲ್ಮೈಯೊಂದಿಗೆ ) ಶಕ್ತಿಯನ್ನು ಹೊಂದಿರುವ ದ್ವಿ-ಲೆನ್ಸ್ ಹಿಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 12MP ಪ್ರಾಥಮಿಕ ಲೆನ್ಸ್ 'ಡ್ಯುಯಲ್-ಪಿಕ್ಸೆಲ್ ಫೋಕಸಿಂಗ್' ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು 1.4μm ಸೂಪರ್ ದೊಡ್ಡ ಪಿಕ್ಸೆಲ್ ಸಂವೇದಕಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಇಡೀ ಕ್ಯಾಮೆರಾ ವ್ಯವಸ್ಥೆಯು ದೊಡ್ಡ f / 1.8 ದೊಡ್ಡ ದ್ಯುತಿರಂಧ್ರವನ್ನು ಆಧರಿಸಿದೆ ಮತ್ತು 4-ಆಕ್ಸಿಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಅನ್ನು ಹೊಂದಿದ್ದು ಬರುತ್ತದೆ. ಎನ್ಎಕ್ಸ್ಎಕ್ಸ್ ಕೂಡ ವೇಗದ ಕೇಂದ್ರೀಕರಿಸುವ ತಂತ್ರಜ್ಞಾನವನ್ನು ಹೊಂದಿದೆ, ಇದು ಪ್ರತಿ ಪಿಕ್ಸೆಲ್ನಲ್ಲಿ ತ್ವರಿತವಾಗಿ ಕೇಂದ್ರೀಕರಿಸಲು ಮತ್ತು ಕ್ಷೇತ್ರದ ದತ್ತಾಂಶದ ಆಳವನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Vivo has unveiled the most innovative flagship smartphone of the modern times in the Indian market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X