ಭವಿಷ್ಯದ ಸ್ಮಾರ್ಟ್ ಫೋನ್: ಹಿಡನ್ ಕ್ಯಾಮೆರಾ, ಸ್ಕ್ಯಾನರ್ ಇನ್ನು ಹಲವು....!

|

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳನ್ನು ಕಾಣಬಹುದಾಗಿದ್ದು, ಚೀನಾ ಮೂಲದ ವಿವೋ ಕಂಪನಿಯೂ ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ಹಲವು ಹೊಸ ಸಂಶೋಧನೆಗಳನ್ನು ನಡೆಸುವ ಮೂಲಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಭವಿಷ್ಯದ ತಲೆ ಮಾರಿನ ತಂತ್ರಜ್ಞಾನವನ್ನು ಬಳಕೆದಾರರಿಗೆ ನೀಡುತ್ತಿದೆ. ಈ ಹಿಂದೆ ಹಲವು ಬಾರಿ ಮಾರುಕಟ್ಟೆಗೆ ಹೊಸ ವಿಷಯಗಳನ್ನು ಪರಿಯಚ ಮಾಡಿದ್ದ ವಿವೋ, ಈ ಬಾರಿ ಮತ್ತೊಂದು ಕ್ರಾಂತಿಕಾರಕ ಬದಲಾವಣೆಯನ್ನು ತನ್ನ ಸ್ಮಾರ್ಟ್ ಫೋನಿನಲ್ಲಿ ಮಾಡಿದೆ. ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಈ ಮೂಲಕ ಸ್ಮಾರ್ಟ್ ಫೋನ್ ಅನ್ನು ಇನಷ್ಟು ಕಾಂಪಾಕ್ಟ್ ಮಾಡಲು ಮುಂದಾಗಿದೆ.

ಭವಿಷ್ಯದ ಸ್ಮಾರ್ಟ್ ಫೋನ್: ಹಿಡನ್ ಕ್ಯಾಮೆರಾ, ಸ್ಕ್ಯಾನರ್ ಇನ್ನು ಹಲವು....!

ಮೊದಲ ಬಾರಿಗೆ ತನ್ನ ಸ್ಮಾರ್ಟ್ ಫೋನ್ ನಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಿದ ವಿವೋ ಕಂಪನಿಯೂ, ವಿವೋ X21 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿ ಸ್ಮಾರ್ಟ್ ಫೋನ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲಿ ನಿರ್ಮಿಸಿತ್ತು, ಇದಾದ ನಂತರದಲ್ಲಿ ಈಗ ಮತ್ತೊಂದು ಹೊಸ ಆಯ್ಕೆಯನ್ನು ಸ್ಮಾರ್ಟ್ ಫೋನಿನಲ್ಲಿ ನೀಡಲು ಮುಂದಾಗಿದೆ. ಸ್ಮಾರ್ಟ್ ಫೋನಿನಲ್ಲಿ ಕ್ಯಾಮೆರಾವನ್ನು ಪಾಪ್ ಆಪ್ ಮಾದರಿಯಲ್ಲಿ ನೀಡುವ ಮೂಲಕ ಸ್ಮಾರ್ಟ್ ಫೋನ್ ಮುಂಭಾಗದ ಡಿಸ್ ಪ್ಲೇ ಸಂಪೂರ್ಣವಾಗಿ ಆವರಿಸುವಂತಹ ವಿನ್ಯಾಸವನ್ನು ಮಾಡಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಪ್ರಯೋಗ ಎನ್ನಲಾಗಿದೆ.

ಬಳಕೆದಾರರಿಗೆ ಬ್ರೆಜಿಲ್ ಫ್ರಿ ವಿನ್ಯಾಸವನ್ನು ನೀಡಲು ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಯತ್ನಿಸುತ್ತಿದೆ. ಇದೇ ಮಾದರಿಯಲ್ಲಿ ಯಶಸ್ಸು ಕಂಡಿರುವ ವಿವೋ, ಮುಂಭಾಗದ ಕ್ಯಾಮೆರಾವನ್ನು ಆಡಗಿಸಿ ಇಟ್ಟಿದ್ದು, ಬೇಕೆಂದಾಗ ಮಾತ್ರವೇ ಪಾಪ್ ಆಪ್ ಆಗುವಂತೆ ಮಾಡಿದೆ. ಇದರಿಂದಾಗಿ ಬಳಕೆದಾರರಿಗೆ ಸೆಲ್ಫಿ ತೆಗೆಯುವ ಅನುಭವವು ಹೊಸ ತನದಿಂದ ಕೂಡಿರಲಿದೆ. ಈ ಹೊಸ ತಂತ್ರಜ್ಞಾನವನ್ನು ವಿವೋ NEX ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ಇದು ಜುಲೈ 19 ರಂದು ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ.

ಕ್ರಾಂತಿಕಾರಕ ವಿನ್ಯಾಸ:

ಕ್ರಾಂತಿಕಾರಕ ವಿನ್ಯಾಸ:

ವಿವೋ NEX ಸ್ಮಾರ್ಟ್ ಫೋನಿನಲ್ಲಿ ಬಳಕೆ ಮಾಡಿರುವ ವಿನ್ಯಾಸವು ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ. ಬದಲಾಗುತ್ತಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಹೇಳಿ ಮಾಡಿಸಿದ ವಿನ್ಯಾಸ ಇದಾಗಿದ್ದು, ನೋಚ್ ವಿನ್ಯಾಸವನ್ನು ಎಲ್ಲರೂ ಫಾಲೋ ಮಾಡುತ್ತಿರುವ ಸಂದರ್ಭದಲ್ಲಿ ಅದನ್ನು ಧಿಕ್ಕರಿಸಿ ಬಳಕೆದಾರರಿಗೆ ಹೊಸ ಮಾದರಿಯ ಕ್ಯಾಮೆರಾ ಪಾಪ್ ಆಪ್ ಆಯ್ಕೆಯನ್ನು ವಿವೋ ನೀಡುತ್ತಿದೆ. ಮೊದಲ ಬಾರಿಗೆ ಬಳಕೆದಾರರಿಗೆ ಟ್ರೂ ಫುಲ್ ಸ್ಕ್ರಿನ್ ಡಿಸ್ ಪ್ಲೇ ಅನುಭವನ್ನು ನೀಡಲು ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿ ಯಶಸ್ಸುಗಳಿಸಿಕೊಂಡಿದೆ.
ಅಮೊಲೈಡ್ ಡಿಸ್ ಪ್ಲೇಯನ್ನು ನೀಡಲಾಗಿದ್ದು, ಇದು ಉತ್ತಮ ಗುಣಮಟ್ಟದಿಂದ ಕೂಡಿದೆ. ಇದಲ್ಲದೇ ವಿವೋ NEX ಸ್ಮಾರ್ಟ್ ಫೋನಿನಲ್ಲಿ ಸೆನ್ಸಾರ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಡಿಸ್ ಪ್ಲೇಯ ಅಡಿಯಲ್ಲಿ ನೀಡಲಾಗಿದ್ದು, ಬಳಕೆದಾರರಿಗೆ ನೋಡಲು ಕಾಣಸಿಗುವುದಿಲ್ಲ ಬದಲಾಗಿ ಅನುಭವಕ್ಕೆ ಬರಲಿದೆ ಎನ್ನಲಾಗಿದೆ. ಇದು ಹೊಸ ಮಾದರಿಯ ವಿನ್ಯಾಸ ಎನ್ನಬಹುದಾಗಿದೆ.

ಫುಲ್ ಪ್ಯೂ ಅಮೊಲೈಡ್ ಡಿಸ್ ಪ್ಲೇ:

ಫುಲ್ ಪ್ಯೂ ಅಮೊಲೈಡ್ ಡಿಸ್ ಪ್ಲೇ:

ಮಾರುಕಟ್ಟೆಯಲ್ಲಿ ಎಲ್ಲಾ ಸ್ಮಾರ್ಟ್ ಫೋನ್ ಗಳು ಫುಲ್ ಸ್ಕ್ರಿನ್ ವಿನ್ಯಾಸವನ್ನು ಹೊಂದಿವೆ ಎನ್ನಲಾಗಿದೆ, ಆದರೆ ವಿವೋ NEX ಸ್ಮಾರ್ಟ್ ಫೋನಿನ ಮಾದರಿಯಲ್ಲಿ ಯಾವುದೇ ಸ್ಮಾರ್ಟ್ ಫೋನ್ ಇಲ್ಲ. ವಿವೋ NEX ಸ್ಮಾರ್ಟ್ ಫೋನಿನಲ್ಲಿ ಟ್ರೂ ಬ್ರೆಜಿಲ್ ಲೈಸ್ ವಿನ್ಯಾಸವನ್ನು ನೀಡಲಾಗಿದ್ದು, ಎಡ್ಜ್ ಟು ಎಡ್ಜ್ ಡಿಸ್ ಪ್ಲೇಯನ್ನು ಹೊಂದಿದೆ. ಇದರಿಂದಾಗಿ ಈ ಸ್ಮಾರ್ಟ್ ಫೋನಿನಲ್ಲಿ ವಿಡಿಯೋ ನೋಡುವ ಮತ್ತು ಗೇಮ್ ಆಡುವ ಅನುಭವು ಉತ್ತಮವಾಗಿರಲಿದೆ.

ಸೆಲ್ಫಿ ಕ್ಯಾಮೆರಾ ಹೈಲೈಟ್:

ಸೆಲ್ಫಿ ಕ್ಯಾಮೆರಾ ಹೈಲೈಟ್:

ಸೆಲ್ಫಿ ಕ್ಯಾಮೆರಾ ವಿನ್ಯಾಸವು ವಿವೋ NEX ಸ್ಮಾರ್ಟ್ ಫೋನಿನಲ್ಲಿ ಹೈಲೈಟ್. ಇದಲ್ಲದೇ ಇದರಲ್ಲಿ ನೀಡಿರುವ ಕ್ಯಾಮೆರಾವು ಉತ್ತಮ ಸೆಲ್ಪಿಗಳನ್ನು ಸೆರೆಹಿಡಿಯುವುದಲ್ಲದೇ ಉತ್ತಮ ವಿಡಿಯೋ ರೆಕಾರ್ಡಿಂಗ್ ಮಾಡಲು ಹೇಳಿ ಮಾಡಿಸಿದಂತಿದೆ. ನೀವು ಕ್ಯಾಮೆರಾ ಆಯ್ಕೆಯನ್ನು ಸೆಲ್ಫಿಗೆ ತಿರುಗಿಸಿದ ಸಂದರ್ಭದಲ್ಲಿ ತಾನಾಯೇ ಮುಂಭಾಗದ ಕ್ಯಾಮೆರಾ ಮೇಲೆ ಬರಲಿದ್ದು, ಇದಕ್ಕಾಗಿ ಹೊಸ ಮಾದರಿಯ ಮೋಟರ್ ಗಳನ್ನು ವಿವೋ ವಿನ್ಯಾಸ ಮಾಡಿದೆ. ಇದು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸದು ಎನ್ನಲಾಗಿದೆ.

ಇನ್ ಫಿಂಗರ್ ಡಿಸ್ ಪ್ಲೇ ಸ್ಕಾನರ್;

ಇನ್ ಫಿಂಗರ್ ಡಿಸ್ ಪ್ಲೇ ಸ್ಕಾನರ್;

ವಿವೋ NEX ಸ್ಮಾರ್ಟ್ ಫೋನಿನಲ್ಲಿ ಇರುವ ಆಯ್ಕೆಗಳೇಲ್ಲೂ ಹೊಸತನದಿಂದ ಕೂಡಿದೆ. ಇದಕ್ಕಾಗಿ ಸಾಕ್ಷಿ ಎನ್ನುವಂತಿದೆ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕಾನರ್. ಇದು ಮೊದಲ ಬಾರಿಗೆ ವಿವೋ ಮೊಬೈಲ್ ನಲ್ಲಿ ಕಾಣಿಸಿಕೊಂಡಿತ್ತು. ಇದಾದ ನಂತರದಲ್ಲಿ ಮತ್ತೇ ಈ ಹೊಸ ಫೋನಿನಲ್ಲಿ ಕಾಣಿಸಿಕೊಂಡಿದ್ದು, ಆಮೊಲೈಡ್ ಡಿಸ್ ಪ್ಲೇ ಕಳೆಭಾಗದಲ್ಲಿ ಅಳವಡಿಸಲಾಗಿದ್ದು, ಫಿಂಗರ್ ಪ್ರಿಂಟ್ ಸ್ಕಾನರ್ ಅನುಭವವನ್ನು ಬದಲಾಯಿಸಲಿದೆ.

ಕೃತಕ ಬುದ್ಧಿಮತ್ತೆಯ ಡ್ಯುಯಲ್ ಕ್ಯಾಮೆರಾ:

ಕೃತಕ ಬುದ್ಧಿಮತ್ತೆಯ ಡ್ಯುಯಲ್ ಕ್ಯಾಮೆರಾ:

ವಿವೋ NEX ಸ್ಮಾರ್ಟ್ ಫೋನಿನಲ್ಲಿ ಹಿಂಭಾಗದಲ್ಲಿ ಕೃತಕಬುದ್ಧಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ 12 MP + 5 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು 4X ಜೂಮ್ ಮಾಡಲು ಸಹಾಯ ಮಾಡಲಿದೆ. ಇದಲ್ಲದೇ ಪೋಟ್ರೆಟ್, ಬೊಕ್ಕೆ, ಸ್ಲೋಮೋಷನ್, HDR ಮೋಡ್ ಗಳನ್ನು ವಿವೋ NEX ಸ್ಮಾರ್ಟ್ ಫೋನಿನಲ್ಲಿ ಕ್ಯಾಮೆರಾದಲ್ಲಿ ಕಾಣಬಹುದಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ.

ಉತ್ತಮ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳು:

ಉತ್ತಮ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳು:

ವಿವೋ NEX ಸ್ಮಾರ್ಟ್ ಫೋನಿನಲ್ಲಿ ಫಾಗ್ ಫಿಪ್ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಬಹುದಾದ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದಲ್ಲದೇ 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಇದರಲ್ಲಿ ಬಳಕೆ ಮಾಡಿಕೊಂಡಿರುವ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಉತ್ತಮ ಗುಣಮಟ್ಟದಾಗಿದ್ದು, ಹೆಚ್ಚಿನ ಕಾಲ ಬಾಳಕೆಗೆ ಬರಲಿದೆ. ಬಳಕೆದಾರರಿಗೆ ಮುಂದಿನ ತಲೆ ಮಾರಿನ ಸ್ಮಾರ್ಟ್ ಫೋನ್ ವೊಂದನ್ನು ಬಳಕೆ ಮಾಡಿದ ಅನುಭವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಜುಲೈ 19ಕ್ಕೆ ಈ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ.

Best Mobiles in India

English summary
Vivo Nex is all set to redefine the premium smartphone category in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X