Home
ಮೊಬೈಲ್

ಬೇಕೆಂದಾಗ ಮಾತ್ರವೇ ಕಾಣಿಸಿಕೊಳ್ಳುವ ಕ್ಯಾಮೆರಾ.! ಹೊಸ ಆವಿಷ್ಕಾರದ ಸ್ಮಾರ್ಟ್ ಫೋನ್..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತರುವ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ವಿವೋ ಹೊಸದಾಗಿ ಎರಡು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ವಿವೋ Nex S ಮತ್ತು ವಿವೋ Nex A ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಹೊದ ಮಾದರಿಯ ವಿನ್ಯಾಸವನ್ನು ಹೊಂದರುವ ಈ ಫೋನ್ ಗಳು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲಿದೆ.

ಬೇಕೆಂದಾಗ ಮಾತ್ರವೇ ಕಾಣಿಸಿಕೊಳ್ಳುವ ಕ್ಯಾಮೆರಾ....!

ಜುಲೈ 19 ರಂದು ಈ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಾಂಚ್ ಆಗಲಿದ್ದು, ಇದಕ್ಕಾಗಿ ಆಹ್ವಾನ ಸಹ ಬಂದಿದೆ. ಈ ಸ್ಮಾರ್ಟ್ ಫೋನ್ ಗಳು ಸಂಫೂರ್ಣ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದ್ದು, ಸೆಲ್ಪಿಗಾಗಿ ಪಾಪ್ ಆಪ್ ಕ್ಯಾಮೆರಾಗಳನ್ನು ಹೊಂದಿದೆ. ಇದು ಹೊಸ ಮಾದರಿಯ ವಿನ್ಯಾಸವಾಗಿದ್ದು, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

ವಿಶೇಷತೆಗಳು:

ವಿಶೇಷತೆಗಳು:

ವಿವೋ Nex S ಮತ್ತು ವಿವೋ Nex A ಸ್ಮಾರ್ಟ್ ಫೋನ್ ಗಳು 6.59 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಹೊಂದಿದ್ದು, ಇದು 19.3:9 ಅನುಪಾತದ ಸೂಪರ್ ಅಮೊಲೈಡ್ ಡಿಸ್ ಪ್ಲೇ ಇದಾಗಿದೆ. ಇದರಲ್ಲಿ ವಿಡಿಯೋ ನೋಡುವ ಮತ್ತು ಗೇಮ್ ಆಡುವ ಅನುಭವು ಉತ್ತಮವಾಗಿರಲಿದೆ. ಇದಲ್ಲದೇ ಆಂಡ್ರಾಯ್ಡ್ 8.1 ಒರಿಯೋ ಮತ್ತು ಫನ್ ಟಚ್OS 4.0ವನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ವಿವೋ Nex S ಸ್ಮಾರ್ಟ್ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 875 ಪ್ರೋಸೆಸರ್ ನೊಂದಿಗೆ 8GB RAM ಅನ್ನು ಕಾಣಬಹುದಾಗಿದ್ದು, 128 GB ಮತ್ತು 256 GB ಇಂಟರ್ನಲ್ ಮೆಮೊರಿಯೊಂದಿದೆ ಲಭ್ಯವಿದೆ. ಉದೇ ಮಾದರಿಯಲ್ಲಿ ವಿವೋ Nex A ಸ್ಮಾರ್ಟ್ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 710 ಪ್ರೋಸೆಸರ್ ಅನ್ನು ಅಳವಡಿಲಾಗಿದ್ದು, 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ಈ ಸ್ಮಾರ್ಟ್ ಫೋನ್ ದೊರೆಯಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಈ ಎರಡು ಸ್ಮಾರ್ಟ್ ಫೋನ್ ನ ಪ್ರಮುಖ ಆಕರ್ಷಣೆ ಎಂದರೆ ಕ್ಯಾಮೆರಾ, ಎರಡು ಸ್ಮಾರ್ಟ್ ಫೋನಿನಲ್ಲಿ 8 MP ಪಾಪ್ ಆಪ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಇದು ಹೊಸ ಮಾದರಿಯಿಂದ ಕೂಡಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 12 MP + 5 MP ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ.

ವಿವೋ Nex A ಬೆಲೆ:

ವಿವೋ Nex A ಬೆಲೆ:

ವಿವೋ Nex A ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 6 GB RAM ಮತ್ತು 128 GB ಇಂಟರ್ನಲ್ ಮೊಮೆರಿಯನ್ನು ಹೊಂದಿರುವ ಸ್ಮಾರ್ಟ್ ಫೋನ್ ರೂ. 40,400 ರ ಅಸುಪಾಸಿನಲ್ಲಿ ಲಭ್ಯವಿರಲಿದೆ.

ವಿವೋ Nex S ಬೆಲೆ:

ವಿವೋ Nex S ಬೆಲೆ:

8GB RAM ಮತ್ತು 128 GB ಇಂಟರ್ನಲ್ ಮೆಮೊರಿಯೊಂದನ್ನು ಹೊಂದಿರುವ ವಿವೋ Nex S ಬೆಲೆ ರೂ.47000ವಾಗಲಿದ್ದು, ಇದೇ ಮಾದರಿಯಲ್ಲಿ 8GB RAM ಮತ್ತು 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ವಿವೋ Nex S ಬೆಲೆ ರೂ.52000ವಾಗಲಿದೆ.

Best Mobiles in India

English summary
Vivo Nex S, Nex A India Launch Set for July 19. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+