Home
ಮೊಬೈಲ್

ಇಂದಿನಿಂದ ವಿವೋ ಸ್ಮಾರ್ಟ್‌ಫೋನ್‌ಗಳ ದೀಪಾವಳಿ ಸೇಲ್‌..! ಭಾರೀ ಆಫರ್‌..!

ದೀಪಾವಳಿ ಹಬ್ಬದ ಸಡಗರಕ್ಕಾಗಿ ಅಕ್ಟೋಬರ್ 15 ರಿಂದ ವಿವೋ ಸಂಸ್ಥೆ ಸೀಸನ್ ಸೇಲ್ ನ್ನು ಆರಂಭಿಸಲಿದೆ. ದೀಪಾವಳಿ ಕಾರ್ನಿವಲ್ ಸೇಲ್ ಅಕ್ಟೋಬರ್ 18 ರ ವರೆಗೆ ನಡೆಯಲಿದ್ದು shop.vivo.com/in ನ ಆನ್ ಲೈನ್ ಸ್ಟೋರ್ ನಲ್ಲಿ ಮಾರಾಟ ಪ್ರಕ್ರಿಯೆ ನಡೆಯಲಿದೆ.ಕಂಪನಿಯು ಆಕರ್ಷಕ ರಿಯಾಯಿತಿಗಳು ಕೂಪಲ್ ಡೀಲ್ಸ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಕೆಲವು ಆಯ್ದ ವಿವೋ ಸ್ಮಾರ್ಟ್ ಫೋನ್ ಗಳಿಗೆ ನೀಡುತ್ತಿದೆ. ಅದರಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ವಿ9 ಪ್ರೋ ಮತ್ತು ವಿ11 ಪ್ರೊ ಕೂಡ ಸೇರಿದೆ.

ಇಂದಿನಿಂದ ವಿವೋ ಸ್ಮಾರ್ಟ್‌ಫೋನ್‌ಗಳ ದೀಪಾವಳಿ ಸೇಲ್‌..! ಭಾರೀ ಆಫರ್‌..!

ಈ ಸೇಲ್ ನಲ್ಲಿ ವಿವೋ ಗ್ರಾಹಕರಿಗೆ ಕ್ಯಾಷ್ ಬ್ಯಾಕ್, ನೋ ಕಾಸ್ಟ್ ಇಎಂಐ ಆಯ್ಕೆಗಳಿದ್ದು, ಪ್ರಮುಖ ಕ್ರೆಡಿಟ್ ಕಾರ್ಡ್ ಮತ್ತ ಡೆಬಿಟ್ ಕಾರ್ಡ್ ಬಳಸಿದರೆ ವಿಶೇಷ ರಿಯಾಯಿತಿ, ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ಸ್ , ಬುಯ್ ಬ್ಯಾಕ್ ಸ್ಕೀಮ್, ಒನ್-ಟೈಮ್ ಸ್ಕ್ರೀನ್ ರಿಪ್ಲೇಸ್ ಮೆಂಟ್ ಆಫರ್, ದೀಪಾವಳಿ ಗಿಫ್ಟ್ ಬಂಡಲ್ಸ್, ಉಚಿತ ಆಕ್ಸಸರೀಸ್ ಗಳು ಈ ಸೇಲ್ ನಲ್ಲಿ ಲಭ್ಯವಾಗಲಿದೆ.

ಕ್ಯಾಶ್‌ಬ್ಯಾಕ್‌ ಆಫರ್‌

ಕ್ಯಾಶ್‌ಬ್ಯಾಕ್‌ ಆಫರ್‌

ವಿವೋ ನೆಕ್ಸ್, ಎಕ್ಸ್ 21, ವಿ11 ಪ್ರೋ, ವಿ11, ವಿ9 ಪ್ರೋ, ವಿ9, ವಿ9 ಯ್ಯೂತ್, ವೈ833 ಪ್ರೋ, ವೈ83, ವೈ81, ವೈ71 ಫೋನ್ ಗಳು ಹೆಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5 ಶೇಕಡಾ ಕ್ಯಾಷ್ ಬ್ಯಾಕ್ ಆಫರ್ ಮತ್ತು ಇಎಂಐ ಆಯ್ಕೆಗಳನ್ನು ನೀಡಲಾಗುತ್ತದೆ. ಎಲ್ಲಾ ವಿವೋ ಫೋನ್ ಗಳನ್ನು ನೋ ಕಾಸ್ಟ್ ಇಎಂಐ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದಕ್ಕಾಗಿ ಬಜಾಜ್ ಫಿನ್ ಸರ್ವ್ ಜೊತೆಗೆ ಕೈಜೋಡಿಸಲಾಗಿದೆ. ಅಷ್ಟೇ ಅಲ್ಲ ಎಲ್ಲಾ ಪ್ರಮುಖ ಕ್ರೆಡಿಟ್ ಕಾರ್ಡ್ ಬಳಸಿದರೂ ಕೂಡ ರಿಯಾಯಿತಿ ಬೆಲೆ ಲಭ್ಯವಾಗುತ್ತದೆ.

ಹೆಚ್ಚುವರಿ ಆಫರ್‌

ಹೆಚ್ಚುವರಿ ಆಫರ್‌

ವಿವೋ ಉಚಿತ ಬ್ಲೂಟೂತ್ ಇಯರ್ ಫೋನ್ ನ್ನು ವಿವೋ ನೆಕ್ಸ್, ಎಕ್ಸ್21, ವಿ11, ವಿ11ಪ್ರೋ, ವಿ89, ವೈ83 ಪ್ರೋ ಗಳಿಗೆ ನೀಡುತ್ತಿದೆ. ಇದಕ್ಕೆ ಸೇರ್ಪಡೆ ಎಂಬಂತೆ, ವಿವೋ ವಿ11, ವಿ11 ಪ್ರೋ, ವಿ9 ಪ್ರೋ ಮತ್ತು ನೆಕ್ಸ್ ಗಳನ್ನು 50 ಶೇಕಡಾ ಬುಯ್ ಬ್ಯಾಕ್ ಆಫರ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ಸಲ ಸ್ಕ್ರೀನ್ ರಿಪ್ಲೇಸ್ ಮೆಂಟ್ ಆಯ್ಕೆಯನ್ನು ಹೊಸದಾಗಿ ಬಿಡುಗಡೆಗೊಳಿಸಿರುವ ವಿ11 ಮತ್ತು ವಿ11 ಪ್ರೋ ಫೋನ್ ಗಳಿಗೆ ವಿವೋ ನೀಡುತ್ತಿದೆ. ವಿವೋ ಎಕ್ಸ್ ಕ್ಲೂಸೀವ್ ಗಿಫ್ಟ್ ಬಂಡಲ್ ಗಳನ್ನು ಕೂಡ ನೀಡುತ್ತಿದ್ದು 3900 ರುಪಾಯಿ ಬೆಲೆಯ ಗಿಫ್ಟ್ ನ್ನು 10 ಲಕ್ಕಿ ವಿನ್ನರ್ ಗಳನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ.

ಹೀರೋ ಡೀಲ್ಸ್‌ ಆಫ್‌ ದಿ ಇಯರ್‌

ಹೀರೋ ಡೀಲ್ಸ್‌ ಆಫ್‌ ದಿ ಇಯರ್‌

ವಿ9, ವಿ9 ಯ್ಯೂತ್ ಮತ್ತು ವೈ66 ಡಿವೈಸ್ ಗಳನ್ನು ಖರೀದಿಸಿದವರಿಗೆ ಹಿರೋ ಡೀಲ್ಸ್ ಆಫ್ ದಿ ಇಯರ್ ನ್ನು ನೀಡುತ್ತದೆ. ಇದರ ಅನ್ವಯ ಈ ಡಿವೈಸ್ ಗಳನ್ನು ಉತ್ತಮ ರಿಯಾಯಿತಿಯಲ್ಲಿ ಪಡೆಯಲು ಸಾಧ್ಯವಿದ್ದು 5,000 ರುಪಾಯಿವರೆಗೆ ವಿವೋ ಇ-ಸ್ಟೋರ್ ನಲ್ಲಿ ಎಕ್ಸ್ ಕ್ಲೂಸೀವ್ ಆಫರ್ ನ್ನು ಪಡೆಯಬಹುದು.

ಸ್ಪಿನ್‌ ಅಂಡ್‌ ವಿನ್‌

ಸ್ಪಿನ್‌ ಅಂಡ್‌ ವಿನ್‌

ಈ ಸೇಲ್ ನಲ್ಲಿ ವಿವೋ "ಸ್ಪಿನ್ ಎಂಡ್ ವಿನ್" ಗೇಮ್ ನ್ನು ಆಯೋಜಿಸುತ್ತಿದ್ದು ಇದರಲ್ಲಿ ಗೆದ್ದವರು 2,000 ರುಪಾಯಿಯ ರಿಯಾಯಿತಿ ಕೂಪನ್ ನ್ನು ಪಡೆಯಬಹುದು ಮ್ತು ಉಚಿತ ಬುಕ್ ಮಶೋ ಮೂವಿ ವೋಚರ್ ಗಳನ್ನು ಕೂಡ ನೀಡಲಾಗುತ್ತದೆ.

ದೀಪಾವಳಿ ಸಂಭ್ರಮ

ದೀಪಾವಳಿ ಸಂಭ್ರಮ

ಈ ಆಫರ್ ಮತ್ತು ಸೇಲ್ ಗೆ ಸಂಬಂಧಿಸಿದಂತೆ ವಿವೋ ಹೇಳಿಕೆ ನೀಡಿದ್ದು ಭಾರತೀಯರಿಗೆ ದೀಪಾವಳಿ ಒಂದು ವಿಶೇಷ ಹಬ್ಬವಾಗಿದೆ ಮತ್ತು ಅದನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ನಮ್ಮ ಗ್ರಾಹಕರಿಗೆ ನಾವು ಅವಕಾಶ ಮಾಡಿಕೊಡಲಿದ್ದೇವೆ. ಇದುವರೆಗೂ ಖರೀದಿಸಿರದ ಅಧ್ಬುತ ಬೆಲೆಯಲ್ಲಿ ಗ್ರಾಹಕರು ವಿವೋ ಫೋನ್ ನ್ನು ಖರೀದಿಸಲು ಈ ಸೇಲ್ ನಲ್ಲಿ ಆಫರ್ ಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

Best Mobiles in India

English summary
Vivo NEX, V11 Pro, V9 and other Vivo phones to get big discounts during Diwali Carnival sale starting Oct 15. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+