ರೂ.44,990 ಬೆಲೆಯ ವಿವೋ NEX ಅನ್ನು ಕೇವಲ ರೂ.1947ಕ್ಕೆ ಖರೀದಿಸಿ: ಯಾವುದೇ ಷರತ್ತುಗಳಿಲ್ಲ..!

|

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ವಿಶೇಷತೆಗಳಿಂದ ಸದ್ದು ಮಾಡುತ್ತಿರುವ ವಿವೋ NEX ಸ್ಮಾರ್ಟ್‌ಫೋನ್, ಸದ್ಯದ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳಿಗೆ ಸೆಡ್ಡು ಹೊಡೆಯುತ್ತಿದೆ. ತನ್ನ ವಿಶೇಷ ಪಾಪ್ ಆಪ್ ಕ್ಯಾಮೆರಾದಿಂದಲೇ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ವಿವೋ NEX ಸ್ಮಾರ್ಟ್‌ಫೋನ್, ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಹಲವು ಯೂನಿಕ್ ವಿಶೇಷತೆಗಳನ್ನು ತನ್ನದಾಗಿಸಿಕೊಂಡಿದೆ.

ವಿವೋ ಇದೇ ಆಗಸ್ಟ್ 7 ರಿಂದ 9ನೇ ತಾರೀಕಿನವರೆಗೂ ವಿವೋ ಫ್ರಿಡಮ್ ಕಾರ್ನವಲ್ ಆಯೋಜನೆ ಮಾಡಿದ್ದು, ಈ ಸಂದರ್ಭದಲ್ಲಿ ತನ್ನ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಆಗಿರುವ ವಿವೋ NEX ಸ್ಮಾರ್ಟ್‌ಫೋನ್ ಅನ್ನು ಕೇವಲ ರೂ.1947ಕ್ಕೆ ಮಾರಾಟ ಮಾಡಲಿದೆ. ಅದುವೇ ಯಾವುದೇ ರೀತಿಯ ಷರತ್ತು ಇಲ್ಲದೇ ಮತ್ತು ಕ್ಯಾಷ್ ಬ್ಯಾಕ್ ಇಲ್ಲದೇ ಕೇವಲ ರೂ.1947ಕ್ಕೆ ವಿವೋ NEX ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.

ಯಾವುದೇ ಷರತ್ತು ಇಲ್ಲ:

ಯಾವುದೇ ಷರತ್ತು ಇಲ್ಲ:

ವಿವೋ ಫ್ರಿಡಮ್ ಕಾರ್ನವಲ್ ಸೇಲ್‌ನಲ್ಲಿ ಟಾಪ್ ಎಂಡ್ ವಿವೋ NEX ಸ್ಮಾರ್ಟ್‌ಫೋನ್ ಖರೀದಿ ಮಾಡಲು ಯಾವುದೇ ರೀತಿಯಲ್ಲಿಯೂ ಷರತ್ತು ವಿಧಿಸಿಲ್ಲ. ಬದಲಾಗಿ ಫ್ಲಾಷ್ ಸೇಲಿನಲ್ಲಿ ಖರೀದಿ ಮಾಡಿದ ಅದೃಷ್ಠವಂತರಿಗೆ ಕೇವಲ ರೂ.1947ಗೆ ಮಾರಾಟ ಮಾಡಲಿದೆ. ಇದಲ್ಲದೇ ವಿವೋ ಸ್ಮಾರ್ಟ್‌ಫೋನ್ ಆಕ್ಸಿಸಿರಿಸ್ ಗಳನ್ನು ರೂ.72ಕ್ಕೆ ನೀಡಲಿದೆ.

ಪ್ಲಾಷ್ ಸೇಲ್:

ಪ್ಲಾಷ್ ಸೇಲ್:

ವಿವೋ NEX ಸ್ಮಾರ್ಟ್‌ಫೋನ್ ಅನ್ನು ರೂ.1947ಕ್ಕೆ ಮಾರಾಟ ಮಾಡಲಿರುವ ವಿವೋ, ಇದಕ್ಕಾಗಿ ಆಗಸ್ಟ್ 7 ರಿಂದ 9ನೇ ತಾರೀಕಿನವರೆಗೆ ಮಧ್ಯಾಹ್ನ 12ಕ್ಕೆ ಫ್ಲಾಷ್ ಸೇಲ್ ಆಯೋಜಿಸಲಿದೆ. ಈ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಖರೀದಿ ಮಾಡಿದವರಿಗೆ ಮಾತ್ರವೇ ಈ ಆಫರ್ ದೊರೆಯಲಿದೆ. ಸಾಮಾನ್ಯವಾಗಿ ಈ ಸ್ಮಾರ್ಟ್‌ಫೋನ್ ರೂ.44,990ಕ್ಕೆ ಮಾರಾಟವಾಗಲಿದೆ.

ವಿವೋ NEX ಸ್ಮಾರ್ಟ್‌ಫೋನ್ ಡಿಸ್‌ಪ್ಲೇ:

ವಿವೋ NEX ಸ್ಮಾರ್ಟ್‌ಫೋನ್ ಡಿಸ್‌ಪ್ಲೇ:

ಪ್ರೀಮಿಯಂ ಗ್ಲಾಸ್-ಮೆಟಲ್ ವಿನ್ಯಾಸದ ವಿವೋ NEX ಸ್ಮಾರ್ಟ್‌ಫೋನ್, 2160 x 1080p ರೆಸೊಲ್ಯೂಷನ 6.59 ಇಂಚಿನ ಸೂಪರ್ AMOLED UHD+ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್-ಟು-ಬಾಡಿ ವಿನ್ಯಾಸದಿಂದ ಕೂಡಿದ್ದು, ಮೊಬೈಲ್‌ನಲ್ಲಿ ಶೇ 91.24% ರಷ್ಟು ಡಿಸ್‌ಪ್ಲೇಯನ್ನು ವಿವೋ NEX ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ.

ಎಲಿವೆಟಿಂಗ್ ಸೆಲ್ಫಿ ಕ್ಯಾಮೆರಾ

ಎಲಿವೆಟಿಂಗ್ ಸೆಲ್ಫಿ ಕ್ಯಾಮೆರಾ

ವಿವೋ NEX ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಕ್ಯಾಮೆರಾವೇ ಪ್ರಮುಖ ಆಕರ್ಷಣೆಯಾಗಿದೆ. ವಿಶ್ವದ ಮೊದಲ ಎಲಿವೆಟಿಂಗ್ ಸೆಲ್ಫಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಸೆಲ್ಫಿ ತೆಗೆಯಲು ಮುಂದಾದಾಗ ಮಾತ್ರ ಕ್ಯಾಮೆರಾವು ಮೊಬೈಲ್ ನಿಂದ ಪಾಪ್ ಆಗಿ ಹೊರ ಬರುತ್ತದೆ. ಈ ಕ್ಯಾಮೆರಾ ಸಂವೇದಕ ಸೆನ್ಸಾರ್ ಮೊಬೈಲ್ ಐಸಿಯೊಂದಿಗೆ ನಿಯಂತ್ರಿಸಲ್ಪಡುತ್ತದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ವಿವೋ NEX ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 845 ಚಿಪ್‌ಸೆಟ್ ಅನ್ನು ಹೊಂದಿದ್ದು, ಇದರೊಂದಿಗೆ 8GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. 4000mAH ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ನೀಡಲಾಗಿದೆ. ಇದರಿಂದಾಗಿ ಬೆಸ್ಟ್ ಫಾರ್ಫಮೆನ್ಸ್ ನೀಡಲಿದೆ. ವಿವೋ NEX ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಕಾಣಬಹುದಾಗಿದೆ.

ಈ ಅಪರೂಪದ ಮೊಬೈಲ್‌ ಫೋನ್‌ಗಳ ಹೆಸರುಗಳನ್ನು ಖಂಡಿತ ನೀವು ಕೇಳಿರಲ್ಲ..

ಈ ಅಪರೂಪದ ಮೊಬೈಲ್‌ ಫೋನ್‌ಗಳ ಹೆಸರುಗಳನ್ನು ಖಂಡಿತ ನೀವು ಕೇಳಿರಲ್ಲ..

ಹೆಸರಿನಲ್ಲಿ ಏನಿದೆ? ಎಂದರೆ ಹೌದು ಹೆಸರಿನಲ್ಲಿದೆ.. ನಮ್ಮ ನಿಮ್ಮೆಲ್ಲರನ್ನು ಗುರುತಿಸುವುದು ಹೆಸರಿನಿಂದಲೇ ಎಂಬುದನ್ನು ಮರೆಯುವಂತಿಲ್ಲ. ಯಾವುದೇ ಕ್ಷೇತ್ರದಲ್ಲಾಗಲಿ, ಮನುಷ್ಯ ಆಗಲಿ, ಉತ್ಪನ್ನಗಳಾಗಲಿ ಹೆಸರೇ ಪ್ರಮುಖ. ಜನರನ್ನು ತಲುಪುವ, ಜನರನ್ನು ಆಕರ್ಷಿಸುವ ಹೆಸರುಗಳು ಬೇಕು. ಅದಕ್ಕಾಗಿಯೇ ಟೆಕ್‌ ಲೋಕದಲ್ಲೂ ಕೂಡ ಹೆಸರಿಡುವಾಗ ಅನೇಕ ಪ್ರಯೋಗಗಳು ಆಗಿವೆ.

ಹೌದು ಸ್ಮಾರ್ಟ್‌ಫೋನ್‌ ಲೋಕದಲ್ಲಿ ದಿನಕ್ಕೊಂದರಂತೆ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುತ್ತಲೆ ಇರುತ್ತವೆ. ಜನ ಅವುಗಳನ್ನು ನೆನಪಿಟ್ಟುಕೊಳ್ಳುವುದು ಹೆಸರಿನಿಂದಲೇ ಎಂಬುದಂತೂ ಸತ್ಯ. ಅದಕ್ಕಾಗಿಯೇ ಸ್ಮಾರ್ಟ್‌ಫೋನ್ ಕಂಪನಿಗಳು ಸಹ ತಮ್ಮ ಮೊಬೈಲ್‌ಗಳಿಗೆ ಜನರು ನೆನಪಿಟ್ಟುಕೊಳ್ಳುವ ಹೆಸರುಗಳನ್ನು ಇಡಲು ಪ್ರಯತ್ನಿಸುತ್ತಾರೆ. ಆದರೆ, ಸ್ಮಾರ್ಟ್‌ಫೋನ್‌ ಕಂಪನಿಗಳು ಅನೇಕ ಸಲ ಅಪರೂಪದ ಹೆಸರುಗಳನ್ನು ತಮ್ಮ ಉತ್ಪನ್ನಗಳಿಗೆ ಇಟ್ಟಿವೆ.
ಅವುಗಳು ಜನರಿಗೆ ಹತ್ತಿರವಾಗಿದ್ದರೂ ಯಶಸ್ವಿ ಉತ್ಪನ್ನವಂತೂ ಆಗಿಲ್ಲ ಎನ್ನಬಹುದು. ಅಂತಹ 25 ಅಪರೂಪದ ಹೆಸರುಗಳನ್ನು ಹೊಂದಿದ ಮೊಬೈಲ್‌ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇವೆ.

ಸೋನಿ ಎರಿಕ್ಸನ್ ಲೈವ್ ವಿತ್ ವಾಕ್‌ಮ್ಯಾನ್‌ Sony Ericsson Live With Walkman

ಸೋನಿ ಎರಿಕ್ಸನ್ ಲೈವ್ ವಿತ್ ವಾಕ್‌ಮ್ಯಾನ್‌ Sony Ericsson Live With Walkman

2011ರಲ್ಲಿ ಬಿಡುಗಡೆಯಾದ ಈ ಫೋನ್‌ ಹೆಸರು ಸ್ಮಾರ್ಟ್‌ಫೋನ್‌ ಎನ್ನುವುದಕ್ಕಿಂತ ಸಂಗೀತ ಕಛೇರಿಯ ಹೆಸರು ಕೇಳಿದಂತೆ ಆಗುತ್ತದೆ.

ಹೆಚ್‌ಟಿಸಿ ಚಾಚಾ HTC ChaCha

ಹೆಚ್‌ಟಿಸಿ ಚಾಚಾ HTC ChaCha

ಚಾಚಾ ಎನ್ನುವುದು ನೃತ್ಯರೂಪಕದ ಒಂದು ವಿಧವಾಗಿದೆ. 2011ರಲ್ಲಿ ಹೆಚ್‌ಟಿಸಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ ನೃತ್ಯದ ಹೆಸರು ಪಡೆದುಕೊಂಡಿತು. ಯಾಕಂದ್ರೇ ನಿಜ ಗೊತ್ತಿಲ್ಲ.

ಹೆಚ್‌ಟಿಸಿ HTC Salsa

ಹೆಚ್‌ಟಿಸಿ HTC Salsa

ಸ್ಮಾರ್ಟ್‌ಫೋನ್‌ಗೆ ಚಾಚಾ ನೃತ್ಯ ರೂಪಕದ ಹೆಸರಿಟ್ಟ ಹೆಚ್‌ಟಿಸಿ ಮತ್ತೊಂದು ಫೋನ್‌ಗೆ ಸಾಲ್ಸಾ ಎಂಬ ನೃತ್ಯದ ಹೆಸರಿಟ್ಟು ಸರಣಿಯನ್ನು ಮುಂದುವರೆಸಿತು. ಇದು ಸಹ 2011ರಲ್ಲಿ ಬಿಡುಗಡೆಯಾಗಿದೆ. ಅಂದಿನ ಸಮಯದಲ್ಲಿ ಹೆಚ್‌ಟಿಸಿ ಕಂಪನಿಯಲ್ಲಿ ಯಾರೋ ಡ್ಯಾನ್ಸ್‌ ಪ್ರೇಮಿ ಈ ಹೆಸರುಗಳನ್ನು ಇಟ್ಟಿರಬಹುದು.

ಸ್ಯಾಮ್‌ಸಂಗ್ ಮೆಸೆಜರ್ Samsung Messager

ಸ್ಯಾಮ್‌ಸಂಗ್ ಮೆಸೆಜರ್ Samsung Messager

2010ರಲ್ಲಿ ಸ್ಯಾಮ್‌ಸಂಗ್‌ ಕಂಪನಿ ಬಿಡುಗಡೆ ಮಾಡಿದ ಫೋನ್‌ ಹೆಸರು ಮೆಸೆಜರ್. ಅಂದರೆ ಈ ಮೊಬೈಲ್ ಕರೆ ಮಾಡುವುದುಕ್ಕೆ ಉಪಯೋಗಿಸಲು ಆಗುವುದಿಲ್ವಾ ಅಂತ ಪ್ರಶ್ನೆ ಹುಟ್ಟಬಹುದು. ಆದರೆ, ಸ್ಯಾಮ್‌ಸಂಗ್‌ ತಲೆಯಲ್ಲಿ ಏನು ಒಡುತ್ತಿತ್ತೋ ಅವತ್ತು.

ಎಲ್‌ಜಿ ಚಾಕೋಲೆಟ್ LG Chocolate

ಎಲ್‌ಜಿ ಚಾಕೋಲೆಟ್ LG Chocolate

ಚಾಕೋಲೆಟ್‌ ಎಂದರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ ಅದಕ್ಕಾಗಿಯೇ ಎಲ್‌ಜಿ ಕಂಪನಿ ತಾನು 2009ರಲ್ಲಿ ಬಿಡುಗಡೆ ಮಾಡಿದ ಮೊಬೈಲ್‌ಗೆ ಚಾಕೋಲೆಟ್‌ ಹೆಸರಿಟ್ಟಿದ್ದು.

ಮೊಟೋರೋಲಾ ಸಿಟ್ರಸ್ Motorola Citrus

ಮೊಟೋರೋಲಾ ಸಿಟ್ರಸ್ Motorola Citrus

ಮೊಟೋರೋಲಾದಲ್ಲಿ ಯಾರೋ ಕಿತ್ತಳೆ ಹಣ್ಣಿನ ಪ್ರೇಮಿ ಇದ್ದರೇನೋ. ಅದಕ್ಕೆ 2010ರಲ್ಲಿ ಮೊಟೋರೋಲಾ ಬಿಡುಗಡೆ ಮಾಡಿದ ಮೊಬೈಲ್‌ಗೆ ಸಿಟ್ರಸ್‌ ಎಂದು ಹೆಸರಿಟ್ಟರು.

ಎಲ್‌ಜಿ ಫ್ಯೂಸಿಕ್ LG Fusic

ಎಲ್‌ಜಿ ಫ್ಯೂಸಿಕ್ LG Fusic

ಎಲ್‌ಜಿ 2006ರಲ್ಲಿ ಬಿಡುಗಡೆ ಮಾಡಿದ ಮೊಬೈಲ್‌ಗೆ ಸಂಗೀತದ ವಿಧವಾದ ಫ್ಯೂಸಿನ್‌ ರೂಪದ ಫ್ಯೂಸಿಕ್‌ ಎಂಬ ಹೆಸರಿಟ್ಟಿತು.

ಒನ್‌ಪ್ಲಸ್ ಒನ್ OnePlus One

ಒನ್‌ಪ್ಲಸ್ ಒನ್ OnePlus One

ಪ್ರಸ್ತುತ ದೊಡ್ಡ ಬ್ರಾಂಡ್ ಆಗಿರುವ ಒನ್‌ಪ್ಲಸ್ 2014ರಲ್ಲಿ ತನ್ನ ಸ್ಮಾರ್ಟ್‌ಫೋನ್‌ಗೆ ಒನ್‌ಪ್ಲಸ್‌ ಒನ್ ಎಂದು ಹೆಸರಿಟ್ಟಿತ್ತು.

ಸ್ಯಾಮ್‌ಸಂಗ್‌ ಮಿಥೀಕ್ Samsung Mythic

ಸ್ಯಾಮ್‌ಸಂಗ್‌ ಮಿಥೀಕ್ Samsung Mythic

2009ರಲ್ಲಿ ಬಿಡುಗಡೆಯಾದ ಈ ಮೊಬೈಲ್‌ ಹೆಸರೇ ಮಿಥೀಕ್ ಅಂದರೆ ಪುರಾಣ, ಅದಕ್ಕೆ ಬಹಳಷ್ಟು ಜನ ಈ ಸ್ಮಾರ್ಟ್‌ಫೋನ್‌ ನಿಜವಾಗಲೂ ಇತ್ತಾ? ಎಂಬ ಪ್ರಶ್ನೆಯನ್ನು ಸ್ಯಾಮ್‌ಸಂಗ್‌ಗೆ ಕೇಳುತ್ತಾರೆ.

ಮೊಟೋರೊಲಾ ಕರ್ಮ ಕ್ಯೂಎ1 Motorola Karma QA1

ಮೊಟೋರೊಲಾ ಕರ್ಮ ಕ್ಯೂಎ1 Motorola Karma QA1

2009ರಲ್ಲಿ ಮೊಟೋರೋಲಾ ಬಿಡುಗಡೆ ಮಾಡಿದ ಫೋನ್‌ಗೆ ಕರ್ಮ ಎಂದು ಹೆಸರಟ್ಟಿತ್ತು. ಕರ್ಮ ಎಂದರೆ ಏನೆಂಬುದನ್ನು ನಾವೇನೂ ಹೇಳಬೇಕಾಗಿಲ್ಲ ಆಲ್ವಾ. ಮೊಟೋರೋಲಾ ಈ ಹೆಸರನ್ನು ಆಯ್ಕೆ ಮಾಡಿದ್ದಾದರೂ ಏಕೆ?

ಹೆಚ್‌ಪಿ ವೀರ್ 4G HP Veer 4G

ಹೆಚ್‌ಪಿ ವೀರ್ 4G HP Veer 4G

ಹೆಚ್‌ಪಿ ಕಂಪನಿಯು 2011ರಲ್ಲಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ಗೆ ವೀರ್‌ ಎಂದು ಹೆಸರಿಟ್ಟಿತ್ತು. ವೀರ್ ಅರ್ಥ ನಿಮಗೆ ಗೊತ್ತೆ ಇದೆ. ಆದರೆ, ಈ ಫೋನ್ ಹೆಸರು ಇಂದಿಗೂ ಕೇಳದವರೇ ಹೆಚ್ಚು.

ಸ್ಯಾಮ್‌ಸಂಗ್ ಬ್ರೈಟ್‌ಸೈಡ್‌ Samsung Brightside

ಸ್ಯಾಮ್‌ಸಂಗ್ ಬ್ರೈಟ್‌ಸೈಡ್‌ Samsung Brightside

2011ರಲ್ಲಿ ಸ್ಯಾಮ್‌ಸಂಗ್‌ ಕಂಪನಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ಗೆ ಬ್ರೈಟ್‌ಸೈಡ್ ಎಂದು ಹೆಸರಿಟ್ಟಿತ್ತು. ಅಂದು ಸ್ಯಾಮ್‌ಸಂಗ್ ಆಶಾವಾದಿ ಮನಸ್ಥಿತಿಯಲ್ಲಿ ಇತ್ತು ಎಂದು ಕಾಣುತ್ತದೆ.

ಮೈಕ್ರೋಸಾಫ್ಟ್‌ ಕಿನ್ ಒನ್ Microsoft Kin One

ಮೈಕ್ರೋಸಾಫ್ಟ್‌ ಕಿನ್ ಒನ್ Microsoft Kin One

ಮೈಕ್ರೋಸಾಫ್ಟ್‌ 2010ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗೆ ಕಿನ್ ಒನ್ ಎಂದು ಕರೆದಿತ್ತು. ಇದರ ಜತೆ ಕಿನ್ ಟೂ ಎಂಬ ಹೆಸರಿನ ಮತ್ತೊಂದು ಸ್ಮಾರ್ಟ್‌ಫೋನ್‌ನ್ನು ಸಹ ಮೈಕ್ರೋಸಾಫ್ಟ್‌ ಬಿಡುಗಡೆ ಮಾಡಿತ್ತು.

ಎಲ್‌ಜಿಎಲಿ.ಜೆಪಿಜಿ LGAlly.jpg

ಎಲ್‌ಜಿಎಲಿ.ಜೆಪಿಜಿ LGAlly.jpg

ಇದು ಯಾವುದೋ ಪೋಟೋ ಫೈಲ್‌ ನೇಮ್ ಅಲ್ಲ. ಬದಲಾಗಿ 2010ರಲ್ಲಿ ಎಲ್‌ಜಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌.

ಸ್ಯಾಮ್‌ಸಂಗ್‌ ರ್ಯಾಂಟ್ Samsung Rant

ಸ್ಯಾಮ್‌ಸಂಗ್‌ ರ್ಯಾಂಟ್ Samsung Rant

ಸ್ಯಾಮ್‌ಸಂಗ್ ಕಂಪನಿಯು 2008ರಲ್ಲಿ ಬಿಡುಗಡೆ ಮಾಡಿದ ಸ್ಲೈಡರ್‌ ಫೋನ್‌ಗೆ ರ್ಯಾಂಟ್ ಎಂದು ಹೆಸರಿಟ್ಟಿದ್ದು ಗೊತ್ತೆ ಇಲ್ಲ.

ಮೈಕ್ರೋಸಾಫ್ಟ್‌ ಯೆಜ್‌ ಬಿಲ್ಲಿ 4.7 Microsoft Yezz Billy 4.7

ಮೈಕ್ರೋಸಾಫ್ಟ್‌ ಯೆಜ್‌ ಬಿಲ್ಲಿ 4.7 Microsoft Yezz Billy 4.7

ಯೆಜ್‌ ಬಿಲ್ಲಿ ನಿಜಕ್ಕೂ ಯಾರಿಗೂ ಗೊತ್ತಿರದ ಅಪರೂಪದ ಹೆಸರೇ. ಇದನ್ನು ಮೈಕ್ರೋಸಾಫ್ಟ್‌ 2014ರಲ್ಲಿ ಬಿಡುಗಡೆ ಮಾಡಿದ ವಿಂಡೋಸ್‌ ಫೋನ್‌ಗೆ ಈ ಹೆಸರಿಟ್ಟಿತ್ತು.

ಐಬಾಲ್‌ ಆಂಡಿ 5ಎನ್ ಡ್ಯೂಡ್ iBall Andi 5N Dude

ಐಬಾಲ್‌ ಆಂಡಿ 5ಎನ್ ಡ್ಯೂಡ್ iBall Andi 5N Dude

2016ರಲ್ಲಿ ಐಬಾಲ್ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ ಕೂಲ್‌ ಫ್ಯಾಕ್ಟರ್‌ಗೆ ಗಮನ ಸೆಳೆದಿತ್ತು. ಆದರೆ, ಇಂದು ಆ ಹೆಸರು ಯಾರಿಗೂ ನೆನಪಿಲ್ಲ. ಆ ಹೆಸರೇ ಐಬಾಲ್ ಆಂಡಿ 5N ಡ್ಯೂಡ್.

ಕ್ರಿಕೆಟ್ ಟಿಎಕ್ಸ್‌ಟಿಎಂ8 Cricket TxtM8

ಕ್ರಿಕೆಟ್ ಟಿಎಕ್ಸ್‌ಟಿಎಂ8 Cricket TxtM8

ಅಮೇರಿಕಾ ಮೂಲದ ಕ್ರಿಕೆಟ್ ವೈರ್‌ಲೆಸ್‌ ಕಂಪನಿ ಈ ಸ್ಮಾರ್ಟ್‌ಫೋನ್‌ನ್ನು 2009ರಲ್ಲಿ ಬಿಡುಗಡೆ ಮಾಡಿತು. ಕ್ರಿಕೆಟ್ ಎನ್ನುವ ಮೊಬೈಲ್ ಫೋನ್ ಇದೆ ಎಂಬುದು ಖಂಡಿತ ಗೊತ್ತಿದ್ದಿಲ್ಲ ಅಲ್ವಾ..!

ಲಾವಾ ಐರಿಸ್ ಎಫ್‌1 ಫ್ಯುಯಲ್ ಮಿನಿ Lava Iris F1 Fuel Mini

ಲಾವಾ ಐರಿಸ್ ಎಫ್‌1 ಫ್ಯುಯಲ್ ಮಿನಿ Lava Iris F1 Fuel Mini

ಇದ್ಯಾವುದೋ ಫಾರ್ಮುಲಾ ರೇಸ್‌ನ ಕಾರ್ ಅಲ್ಲ ಅಥವಾ ಯಾವುದೋ ಬಿಎಂಡಬ್ಲ್ಯೂ ಕಾರ್ ಅಲ್ಲ ಬದಲಾಗಿ ಲಾವಾ 2015ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗೆ ಐರಿಸ್‌ ಎಫ್‌1 ಫ್ಯುಯಲ್ ಮಿನಿ ಎಂದು ಹೆಸರಿಟ್ಟಿತು.

ನೋಕಿಯಾ ಎಕ್ಸ್‌3-02 ಟಚ್ ಅಂಡ್ ಟೈಪ್‌ Nokia X3-02 Touch And Type

ನೋಕಿಯಾ ಎಕ್ಸ್‌3-02 ಟಚ್ ಅಂಡ್ ಟೈಪ್‌ Nokia X3-02 Touch And Type

2010ರಲ್ಲಿ ನೋಕಿಯಾ ತನ್ನ ಫೋನ್‌ಗೆ ಟಚ್‌ ಅಂಡ್‌ ಟೈಪ್‌ ಎಂದು ಹೆಸರಿಟ್ಟಿತು. ಟಚ್ ಮಾಡದೇ ಟೈಪ್ ಹೇಗೆ ಮಾಡೋದು ಅಲ್ವಾ..! ಈ ಹೆಸರಿಟ್ಟಾಗ ನೋಕಿಯಾ ತಲೆಯಲ್ಲಿ ಏನಿತ್ತೋ ಏನೋ?

ಸ್ಯಾಮ್‌ಸಂಗ್ :) Samsung :)

ಸ್ಯಾಮ್‌ಸಂಗ್ :) Samsung :)

ಸ್ಯಾಮ್‌ಸಂಗ್ 2010ರಲ್ಲಿ ಬಿಡುಗಡೆ ಮಾಡಿದ ತನ್ನ ಪೋನ್‌ಗೆ ಏನು ಹೆಸರು ಕೊಡದೇ ಕೇವಲ :) ಈ ರೀತಿ ಹೆಸರು ಕೊಟ್ಟಿತ್ತು.

ಕ್ಯಾಸಿಯೋ ಜಿಜೋನ್ ಕಮಾಂಡೋ Casio G'zOne Commando

ಕ್ಯಾಸಿಯೋ ಜಿಜೋನ್ ಕಮಾಂಡೋ Casio G'zOne Commando

ಎನ್‌ಇಸಿ ಕ್ಯಾಸಿಯೋ ಮೊಬೈಲ್ ಕಮ್ಯುನಿಕೇಷನ್ ಕಂಪನಿ 2013ರಲ್ಲಿ ಬಿಡುಗಡೆ ಮಾಡಿದ ಈ ಫೋನ್ ಹೆಸರು ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಆದರೂ ಕ್ಯಾಸಿಯೋ ಜಿಜೋನ್ ಕಮಾಂಡೋ ಎಂಬ ಸ್ಮಾರ್ಟ್‌ಫೋನ್ ಇರುವುದಂತೂ ಸತ್ಯ.

ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ ಎಸ್‌ II ಎಪಿಕ್ 4G ಟಚ್ Samsung Galaxy S II Epic 4G Touch

ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ ಎಸ್‌ II ಎಪಿಕ್ 4G ಟಚ್ Samsung Galaxy S II Epic 4G Touch

ಸ್ಯಾಮ್‌ಸಂಗ್ 2011ರಲ್ಲಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ನಲ್ಲಿ 3 ರೀತಿಯ ಹೆಸರನ್ನು ನೀಡಿತ್ತು. ಟಚ್, 4G, ಎಪಿಕ್‌ ಯಾಕಂತ್ ಗೊತ್ತಿಲ್ಲ.

ಹೆಚ್‌ಪಿ ಪ್ರೇ 3 HP Pre 3

ಹೆಚ್‌ಪಿ ಪ್ರೇ 3 HP Pre 3

ಇದು ಖಂಡಿತ ರೈಮ್‌ ಅಲ್ಲ. ಹೆಚ್‌ಪಿ 2011ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್ ಪ್ರೇ 3 ಎಂಬ ಹೆಸರಿಟ್ಟುಕೊಂಡಿತು. ಹೆಸರಿನ ಕಾರಣಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಈ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಉಳಿಯಲಿಲ್ಲ.

ಹೆಚ್‌ಟಿಸಿ ಒನ್‌ಎಂ9+ ಸುಪ್ರಿಂ ಕ್ಯಾಮೆರಾ HTC One M9+ Supreme Camera

ಹೆಚ್‌ಟಿಸಿ ಒನ್‌ಎಂ9+ ಸುಪ್ರಿಂ ಕ್ಯಾಮೆರಾ HTC One M9+ Supreme Camera

2015ರಲ್ಲಿ ಹೆಚ್‌ಟಿಸಿ ತನ್ನ ಸ್ಮಾರ್ಟ್‌ಫೋನ್‌ಗೆ ಇಷ್ಟುದ್ದ ಹೆಸರಿಟ್ಟಿತ್ತು. ಯಾರ್ ನೆನಪಿಟ್ಕೋತಾರೆ ಇಷ್ಟು ದೊಡ್ಡ ಹೆಸರನ್ನು ಅಲ್ವಾ..!

Best Mobiles in India

English summary
Vivo NEX will sell for Rs 1,947 this week. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X