Vivo S50, S50 Pro Mini ಫೋನ್ಸ್ ಲಾಂಚ್: ಬೆಲೆ ಮತ್ತು ಫೀಚರ್ಸ್ ನೋಡಿ!
ವಿಶ್ವದಾದ್ಯಂತ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Vivo S50 Pro Mini ಮತ್ತು Vivo S50 ಫೋನ್‌ಗಳು (ಡಿ.15) ಚೀನಾದಲ್ಲಿ ಬಿಡುಗಡೆಯಾಗಿವೆ. Vivo ತನ್ನ S ಸರಣಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಈ ಹಿಂದೆ ಪರಿಚಯಿಸಲಾದ Vivo S30 ಸರಣಿಗೆ ಉತ್ತರಾಧಿಕಾರಿಯಾಗಿ Vivo S50 ಸರಣಿಯನ್ನು ಪರಿಚಯಿಸಿದ್ದು, ಈ ಸರಣಿಯು ವಿನ್ಯಾಸ, ಕಾರ್ಯಕ್ಷಮತೆ ಮತ್ತು ಕ್ಯಾಮೆರಾ ವಿಭಾಗದಲ್ಲಿ ಗಮನಾರ್ಹ ಅಪ್‌ಗ್ರೇಡ್‌ಗಳನ್ನು ಒಳಗೊಂಡಿವೆ. ಹಾಗಾದರೆ, ಹೊಸ Vivo S50 Pro Mini ಮತ್ತು Vivo S50 ಫೋನ್‌ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.
Vivo S50 Pro Mini ಮತ್ತು Vivo S50: ಬೆಲೆ ವಿವರಗಳು.
Vivo S50 ಸರಣಿಯಲ್ಲಿ ಸ್ಟಾಂಡರ್ಡ್ ಮಾದರಿಯಾಗಿ ಪರಿಚಯಗೊಂಡಿರುವ Vivo S50 ಫೋನಿನ ಆರಂಭಿಕ ಮಾದರಿಯು 12GB RAM ಮತ್ತು 256GB ಸ್ಟೋರೇಜ್‌ನೊಂದಿಗೆ CNY 2,999 (ಸುಮಾರು ರೂ. 39,000) ದರದಲ್ಲಿ ಲಭ್ಯವಾಗಿದೆ. ಇದರ 12GB RAM + 512GB ಸ್ಟೋರೇಜ್, 16GB RAM + 256GB ಮತ್ತು 16GB RAM ಮತ್ತು 512GB ಸ್ಟೋರೇಜ್ ಉನ್ನತ-ಮಟ್ಟದ ಆಯ್ಕೆಗಳ ಬೆಲೆ ಕ್ರಮವಾಗಿ CNY 3,299 (ಸುಮಾರು ರೂ. 42,000) ಮತ್ತು CNY 3,399 (ಸುಮಾರು ರೂ. 44,000) ಮತ್ತು CNY 3,599 (ಸುಮಾರು ರೂ. 46,000) ಗಳಾಗಿವೆ.
ಮತ್ತೊಂದೆಡೆ, ಪ್ರೊ ಮತ್ತು ಕಾಂಪ್ಯಾಕ್ಟ್ ಮಾದರಿಯಾಗಿ ಪರಿಚಯವಾಗಿರುವ Vivo S50 Pro Mini ಬೆಲೆಯು 12GB RAM + 256GB ಸ್ಟೋರೇಜ್ ಮತ್ತು 12GB + 512GB ಸ್ಟೋರೇಜ್ ರೂಪಾಂತರಗಳಿಗೆ ಕ್ರಮವಾಗಿ CNY 3,699 (ಸುಮಾರು ರೂ. 48,000) ಮತ್ತು CNY 3,999 (ಸುಮಾರು ರೂ. 52,000) ನಿಗದಿಯಾಗಿದೆ. ಇದರ ಟಾಪ್-ಎಂಡ್ ಆಯ್ಕೆಯ ಬೆಲೆ CNY 4,299 (ಸುಮಾರು ರೂ. 55,000) ಇದ್ದು, ಇದು 16GB RAM + 512GB ಸ್ಟೋರೇಜ್ ಅನ್ನು ನೀಡುತ್ತದೆ.

ಬಣ್ಣಗಳ ಆಯ್ಕೆಯಲ್ಲೂ Vivo ಯುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಿದೆ. Vivo S50 ಅನ್ನು Confession, Yoyo Blue, Inspiration Purple ಮತ್ತು Deep Space Black ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. Vivo S50 Pro Mini ಮಾದರಿ Confession, Inspiration Purple ಮತ್ತು Deep Space Black ಶೇಡ್‌ಗಳಲ್ಲಿ ಲಭ್ಯವಿದ್ದು, ಪ್ರೀಮಿಯಂ ಲುಕ್ ನೀಡುತ್ತದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಚೀನಾದಲ್ಲಿ Vivo ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಾಗಿವೆ.
Vivo S50 Pro Mini ಮತ್ತು Vivo S50: ಪ್ರಮುಖ ವೈಶಿಷ್ಟ್ಯಗಳು.
ಡಿಸ್‌ಪ್ಲೇ ವಿಷಯದಲ್ಲಿ, ಸ್ಟ್ಯಾಂಡರ್ಡ್ ಮಾದರಿಯಾದ Vivo S50 ಫೋನ್ 120Hz ವರೆಗೆ ರಿಫ್ರೆಶ್ ದರ, 1.07 ಬಿಲಿಯನ್ ಬಣ್ಣಗಳು ಮತ್ತು 94.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 6.59-ಇಂಚಿನ (1,260x2,750 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದ್ದರೆ, Pro Mini ರೂಪಾಂತರವು 1,216x2,640 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 1.07 ಬಿಲಿಯನ್ ಬಣ್ಣಗಳು ಮತ್ತು 94.38 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 6.31-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ.
ಕಾರ್ಯಕ್ಷಮತೆಯ ವಿಷಯದಲ್ಲಿ, Vivo S50 Pro Mini ಕ್ವಾಲ್ಕಾಮ್‌ನ ಆಕ್ಟಾ ಕೋರ್ 3nm ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಎರಡು ಪ್ರೈಮ್ ಕೋರ್‌ಗಳು ಮತ್ತು ಆರು ದಕ್ಷತೆಯ ಕೋರ್‌ಗಳನ್ನು ಒಳಗೊಂಡಿದ್ದು, 3.80GHz ಕ್ಲಾಕ್ ಸ್ಪೀಡ್ ಅನ್ನು ನೀಡುತ್ತದೆ. ಈ ಫೋನ್ Adreno 829 GPU, 16GB ವರೆಗೆ LPDDR5x ಅಲ್ಟ್ರಾ RAM ಮತ್ತು 512GB ವರೆಗೆ UFS 4.1 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿದೆ. ಆದರೆ, ಸ್ಟಾಂಡರ್ಡ್ Vivo S50 ಫೀನ್ ಆಕ್ಟಾ ಕೋರ್ 4nm ಸ್ನಾಪ್‌ಡ್ರಾಗನ್ 8s Gen 3 SoC ಅನ್ನು ಹೊಂದಿದ್ದು, 3.01GHz ನ ಗರಿಷ್ಠ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು Adreno 735 GPU ನೊಂದಿಗೆ ಜೋಡಿಸಲಾಗಿದೆ. ಇದು 16GB ವರೆಗೆ LPDDR5x RAM ಮತ್ತು 512GB ವರೆಗೆ UFS 4.1 ಆಂತರಿಕ ಸ್ಟೋರೇಜ್ ಅನ್ನು ಪಡೆದಿದೆ.ಇದು ಎರಡರ ಹೋಲಿಕೆಯಲ್ಲಿ ಸ್ವಲ್ಪ ಕಡಿಮೆ ಶಕ್ತಿಯನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, Vivo S50 Pro Mini ಮತ್ತು Vivo S50 ಎರಡೂ ಫೋನ್‌ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕಗಳನ್ನು ಹೊಂದಿವೆ, ಇದರಲ್ಲಿ 50-ಮೆಗಾಪಿಕ್ಸೆಲ್ (f/1.57) ಪ್ರಾಥಮಿಕ ಸೋನಿ ಸಂವೇದಕ, 50-ಮೆಗಾಪಿಕ್ಸೆಲ್ (f/2.65) ಸೋನಿ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾಗಳು ಮತ್ತು f/2.2 ಅಪರ್ಚರ್ ಮತ್ತು 110-ಡಿಗ್ರಿ ವ್ಯೂ ಕ್ಷೇತ್ರವನ್ನು ಹೊಂದಿರುವ ಅನಿರ್ದಿಷ್ಟ ಅಲ್ಟ್ರಾವೈಡ್ ಕ್ಯಾಮೆರಾಗಳು ಸೇರಿವೆ. ಮುಂಭಾಗದಲ್ಲಿ, ಎರಡೂ ಫೋನ್‌ಗಳು f/2.0 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ.
ಬ್ಯಾಟರಿ ಮತ್ತು ಚಾರ್ಜಿಂಗ್ ವಿಭಾಗದಲ್ಲೂ Vivo S50 ಸರಣಿ ಗಮನಸೆಳೆದಿದೆ. Vivo S50 ಮತ್ತು Vivo S50 Pro Mini 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಬ್ಯಾಟರಿಗಳನ್ನು ಪ್ಯಾಕ್ ಮಾಡುತ್ತವೆ. ಆದಾಗ್ಯೂ, ಪ್ರೊ ಮಿನಿ ಮಾದರಿ ಮಾತ್ರ 40W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮಾದರಿಯು 157.52x74.33x7.59mm ಆಯಾಮಗಳನ್ನು ಹೊಂದಿದ್ದರೆ, ಪ್ರೊ ಮಿನಿ 150.83x71.76x8.10mm ಅಳತೆಗಳನ್ನು ಹೊಂದಿದೆ. ವಿವೋ S50 ಸುಮಾರು 197g ತೂಗುತ್ತದೆ ಮತ್ತು ವಿವೋ S50 ಪ್ರೊ ಮಿನಿ ಸುಮಾರು 192g ತೂಗುತ್ತದೆ.
ಗಮನಿಸಬೇಕಾದ ವಿಷಯವೆಂದರೆ, Vivo S50 Pro Mini ಮತ್ತು Vivo S50 ಫೋನ್‌ಗಳು ಈ ಹೆಸರುಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿಲ್ಲ. ಆದರೆ, 2026 ರ ಮೊದಲ ತ್ರೈಮಾಸಿಕದಲ್ಲಿ ಇವುಗಳನ್ನು Vivo V70 and Vivo V70 Pro ಹೆಸರುಗಳಲ್ಲಿ ಪರಿಚಯಿಸುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications








