ಎದುರಾಳಿಗಳಿಗೆ ನಡುಕ.. ಇಂದು ವಿವೋನ ಈ ಹೊಸ ಫೋನ್ ಲಾಂಚ್: ಬೆಲೆ ಎಷ್ಟು?
ದಿ ವೇಟ್ ಈಸ್ ಓವರ್..! ಇಂದು ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ವಿವೋನ ಈ ಹೊಚ್ಚ ಹೊಸ ಫೋನ್. ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಹೊಸ ಮೊಬೈಲ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಟೆಕ್ನಾಲಜಿ ಬೆಳೆದಂತೆಲ್ಲ ಕಂಪನಿಗಳು ವಿನೂತನ ಮಾದರಿಯ ಮೊಬೈಲ್‌ಗಳನ್ನು ತಯಾರಿಸುತ್ತಿವೆ. ಇವುಗಳಲ್ಲಿ ಮುಖ್ಯವಾಗಿ Al ತಂತ್ರಜ್ಞಾನ ಕೂಡ ಹೊಂದಿರುತ್ತದೆ. ಅಲ್ಲದೇ, ವಿಶಿಷ್ಟವಾದ ಫಿಚರ್ಸ್‌ಗಳನ್ನು ಕೂಡ ಹೊಂದಿರುತ್ತವೆ. ಮೊಬೈಲ್‌ಗಳೆಂದರೆ ಮೊದಲು ಅದರ ಬ್ರಾಂಡ್ ನೆನಪಿಗೆ ಬರುತ್ತೆ. ಹಲವಾರು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಇಂದು ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದಿವೆ. ಅವುಗಳಲ್ಲಿ ವಿವೋ ಕೂಡ ಒಂದಾಗಿದೆ. ವಿವೋ ಫೋನ್‌ಗಳಿಗೆ ಭಾರತದಲ್ಲಿ ಸಖತ್ ಡಿಮ್ಯಾಡ್ ಇದ್ದು, ಈ ನಡುವೆ ಇಂದು Vivo T3 Lite 5G ಫೋನ್ ಲಾಂಚ್ ಆಗಲಿದೆ.
ಹೌದು, ಮೊಬೈಲ್ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ ವಿವೋ T3 ಲೈಟ್ 5G ಮೊಬೈಲ್ ಇಂದು ಭಾರತೀಯ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಈ ಫೋನ್ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗುವ ಸೂಚನೆಗಳಿದ್ದು, ಮಾರುಕಟ್ಟೆಯಲ್ಲಿ ಸೌಂಡ್ ಮಾಡುವುದರಲ್ಲಿ ಡೌಟೇ ಇಲ್ಲ. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೊಬೈಲ್‌ನ ಬೆಲೆ ಮತ್ತು ಫೀಚರ್ಸ್ ಬಗ್ಗೆ ತಿಳಿಯೋಣ ಬನ್ನಿ.

Vivo T3 Lite 5G ವಿಶೇಷತೆಗಳು
ವಿವೋ T3 ಲೈಟ್ 5G ಫೋನ್ ಎರಡು ಕಲರ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ವೈಬ್ರೆಂಟ್ ಗ್ರೀನ್ ಹಾಗೂ ಮೆಜೆಸ್ಟಿಕ್ ಬ್ಲ್ಯಾಕ್ ಕಲರ್‌ನಲ್ಲಿ ಲಭ್ಯವಿರಲಿದೆ. ಈ ಫೋನ್ ಸ್ಟೈಲಿಶ್ ಲುಕ್ ಜೊತೆಗೆ 50 ಮೆಗಾಪಿಕ್ಸಲ್ ಸೆನ್ಸಾರ್‌ನ ಸೋನಿ AI ಕ್ಯಾಮೆರಾ ಹೊಂದಿದೆ. 15W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ, ವಿವೋ T3 ಲೈಟ್ 5G ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಲು ಮುಂದೆ ಓದಿ.
ಬೊಂಬಾಟ್ ಡಿಸ್ಲ್ಪೇಯೊಂದಿವೆ ಎಂಟ್ರಿ
ಈ ವಿವೋ T3 ಲೈಟ್ 5G ಸ್ಮಾರ್ಟ್‌ಫೋನ್ 6.56 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ ನಿರೀಕ್ಷೆ ಇದೆ. ಜೊತೆಗ, 90Hz ರಿಫ್ರೆಶ್ ರೇಟ್ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಇವೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನೂ, ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಹೊಂದಿರಲಿದೆ.

ಅತ್ಯಾಕರ್ಷಕ ಕ್ಯಾಮೆರಾ ಸೆಟಪ್
ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಈ ಮೊಬೈಲ್‌ನ ದ್ವಿತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿರಲಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸಾಧ್ಯತೆಯಿದೆ. ಇದಲ್ಲದೆ, 4GB RAM + 128GB ಹಾಗೂ 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿರುವ ನಿರೀಕ್ಷೆ ಇದೆ.
ಶಕ್ತಿಯುತ ಬ್ಯಾಟರಿ, 15W ಚಾರ್ಜಿಂಗ್ ಬೆಂಬಲ
ವಿವೋ T3 ಲೈಟ್ 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಗಳು ಹೆಚ್ಚಿದೆ. ಇದಕ್ಕೆ ಅನುಗುಣವಾಗಿ 15W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇರಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ 4G VoLTE, ವೈ-ಫೈ 6, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಸೈಡ್ ಮೌಂಟ್ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿರಲಿದೆ.

Vivo T3 Lite 5Gನ ಸಂಪೂರ್ಣ ಫೀಚರ್ಸ್
- ಎತ್ತರ: 163.17 ಮಿ.ಮೀ
- ಅಗಲ: 75.81 ಮಿ.ಮೀ
- ದಪ್ಪ: 7.83 ಮಿ.ಮೀ
- ತೂಕ: 185.5 ಗ್ರಾಂ
- ಬಣ್ಣಗಳು: Crystal Flake, Cosmic Blue
- ಡಿಸ್‌ಪ್ಲೇ: 6.67 inches (16.94 cm)
- ರೆಸಲ್ಯೂಶನ್: 1080x2400 px (FHD+)
- ಬ್ರೈಟ್‌ನೆಸ್: ಗರಿಷ್ಠ 1800 nits
- ಪ್ರೊಸೆಸರ್: MediaTek Dimensity 7200 | 8 GB
- ಆಪರೇಟಿಂಗ್ ಸಿಸ್ಟಂ: Android v14
- ಕ್ಯಾಮೆರಾ: ಟ್ರಿಪಲ್ ಕ್ಯಾಮೆರಾ- 50 MP + 2 MP, 16 MP ಸೆಲ್ಫಿ ಕ್ಯಾಮೆರಾ
- ಬ್ಯಾಟರಿ: 5000 mAh
- ಚಾರ್ಜಿಂಗ್: 15W ಸ್ಪೀಡ್ ಚಾರ್ಜಿಂಗ್
- ಸಿಮ್ ಸ್ಲಾಟ್(ಗಳು): ಡ್ಯುಯಲ್ ಸಿಮ್, GSM+GSM
- ಸ್ಟೋರೇಜ್: 4GB RAM + 128GB ಹಾಗೂ 6GB RAM + 128GB ಸ್ಟೋರೇಜ್
- ಇಂಟರ್ನಲ್ ಮೆಮೊರಿ: 128 GB
- ಕನೆಕ್ಟಿವಿಟಿ ಆಯ್ಕೆಗಳು: ಡ್ಯುಯಲ್ 4G VoLTE, ವೈ-ಫೈ 6, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಸೈಡ್ ಮೌಂಟ್ ಫಿಂಗರ್‌ಫ್ರಿಂಟ್ ಸೆನ್ಸಾರ್


Click it and Unblock the Notifications








