ಇಲ್ಲಿ ಕೇಳಿ.. ಆ.27ಕ್ಕೆ ಬರ್ತಿದೆ ಹೊಸ Vivo ಫೋನ್; 20 ಸಾವಿರಕ್ಕಿಂತ ಕಡಿಮೆ!
ಸ್ಮಾರ್ಟ್‌ಫೋನ್ ಪ್ರಿಯರೇ, ಇಲ್ಲಿ ಕೇಳಿ..! ಆಗಸ್ಟ್ 27 ರಂದು ಭಾರತಕ್ಕೆ ಬರುತ್ತಿದೆ ಹೊಸ ವಿವೋ ಫೋನ್. ಅದು ಕೂಡ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ! ಹೌದು, ವಿವೋ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಶೀಘ್ರದಲ್ಲೇ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ವಿವೋ (Vivo) ಕಂಪನಿಯು ವಿವೋ T3 ಪ್ರೊ 5G (Vivo T3 Pro 5G) ಎಂಬ ಹೊಸ ಫೋನನ್ನು ಭಾರತದಲ್ಲಿ ಲಾಂಚ್ ಮಾಡಲಿದೆ. ಈ ಫೋನ್ ಈಗಾಗಲೇ ಮೊಬೈಲ್ ಪ್ರಿಯರಲ್ಲಿ ನಿರೀಕ್ಷೆ ಹುಟ್ಟಿಸಿದೆ.
ಹೌದು, ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ವಿವೋ ತನ್ನ 'T' ಸರಣಿಯಲ್ಲಿ ಹೊಸ ಮೊಬೈಲ್ ವಿವೋ T3 ಪ್ರೊ 5G ಅನ್ನು ಬಿಡುಗಡೆ ಮಾಡಲಿದೆ. ಇದೇ, ಆಗಸ್ಟ್ 27 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಈ ಫೋನ್ ಎಂಟ್ರಿ ಕೊಡಲಿದೆ. ವಿವೋ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಫೋನಿನ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಮುಂಬರುವ ಹೊಸ ಫೋನಿನ ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ವಿವೋ T3 ಪ್ರೊ 5G ಫೋನಿನ ಬೆಲೆ ಎಷ್ಟು?
ವಿವೋ ಕಂಪನಿಯು ವಿವೋ T3 ಪ್ರೊ 5G ಫೋನನ್ನು 8GB RAM ಸ್ಟೋರೇಜ್ ಆಯ್ಕೆಯೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. 20,000 ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ. ಕಂಪನಿಯು ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಮೊಬೈಲ್ 3D ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಫೋನ್ಕಂ ಪನಿಯ ಐ ಪ್ರೊಟೆಕ್ಷನ್ ಫೀಚರ್, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಚಿಪ್‌ಸೆಟ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿರುತ್ತದೆ.
ಕಂಪನಿಯು ಈಗಾಗಲೇ, ಆಗಸ್ಟ್ 20 ರಂದು ಸ್ಮಾರ್ಟ್‌ಫೋನ್ ವಿನ್ಯಾಸ, ಆಗಸ್ಟ್ 21 ರಂದು ಪ್ರೊಸೆಸರ್ ವಿವರಗಳು, ಆಗಸ್ಟ್ 23 ರಂದು ಕ್ಯಾಮೆರಾ ವಿವರಗಳನ್ನು ಹಂಚಿಕೊಂಡಿದೆ. ಆಗಸ್ಟ್ 26 ರಂದು ಬ್ಯಾಟರಿ ವಿವರಗಳನ್ನು ಹಂಚಿಕೊಳ್ಳುವುದಾಗಿ ಕಂಪನಿ ತಿಳಿಸಿದೆ. ಮೂಲಗಳ ಪ್ರಕಾರ, ವಿವೋ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್ ಜೊತೆಗೆ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಪಡೆದಿರಲಿದೆ. ಟೀಸರ್‌ನಲ್ಲಿ ಕಂಡುಬರುವ ಪ್ರಕಾರ, ಈ ಸ್ಮಾರ್ಟ್‌ಫೋನಿನ ಹಿಂಭಾಗದ ಪ್ಯಾನೆಲ್ ಸಸ್ಯಾಹಾರಿ ಲೆದರ್ ಫಿನಿಶ್ ಆಗಿರುತ್ತದೆ.
ವಿವೋ T3 ಪ್ರೊ 5G ಫೋನಿನ ವೈಶಿಷ್ಟ್ಯಗಳು (ಸಂಭಾವ್ಯ)
ಮುಂಬರುವ ವಿವೋ T3 ಪ್ರೊ 5G ಮೊಬೈಲ್ 6.78 ಇಂಚಿನ ಪೂರ್ಣ HD + AMOLED ಬಾಗಿದ ಡಿಸ್ಲ್ಪೇಯನ್ನು ಹೊಂದಿರುತ್ತದೆ. ಜೊತೆಗೆ, 120Hz ರಿಫ್ರೆಶ್ ದರ, 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು 2400X1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.
ಕಂಪನಿಯು ಹೊಸ ವಿವೋ T3 ಪ್ರೊ 5G ಫೋನನ್ನು Qualcomm Snapdragon 7 Gen 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡಲಿದೆ. ಈ ವಿವೋ T3 ಪ್ರೊ 5G ಫೋನ್ 8GB RAM ಜೊತೆಗೆ 128GB ಮತ್ತು 256GB ಸ್ಟೋರೇಜ್ ಒಳಗೊಂಡಿರುವ ಸಾಧ್ಯತೆಯಿದೆ.
50MP ಕ್ಯಾಮೆರಾ, 5500mAh ಖಚಿತ!
ವಿವೋ T3 ಪ್ರೊ 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿರಲಿದೆ. ವಿವೋ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್ ಜೊತೆಗೆ 50MP (ಸೋನಿ IMX 882) ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ. 8MP ಮತ್ತು 2MPಯ Sony IMX882 ಕ್ಯಾಮೆರಾ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಫ್ರಂಟ್ ಕ್ಯಾಮೆರಾ ಲಭ್ಯವಿರುತ್ತದೆ. ಈ ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ.


Click it and Unblock the Notifications