ನಾಳೆ Vivo T3 Pro ಬಿಡುಗಡೆ.. ಟಾಪ್ 5 ಫೀಚರ್ಸ್ ಬಹಿರಂಗ; ಬೆಲೆ ನೋಡಿ
ವಿವೋ (Vivo) ಕಂಪನಿಯು ನಾಳೆ (ಆಗಸ್ಟ್ 27) ಭಾರತದಲ್ಲಿ ವಿವೋ T3 ಪ್ರೊ 5G (Vivo T3 Pro 5G) ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹಿಂದೆ ಪರಿಚಯಿಸಿದ್ದ Vivo T2 Pro ಮೊಬೈಲ್‌ಗೆ ಹೋಲಿಸಿದರೆ ಇದು ಹಲವು ಪ್ರಮುಖ ಅಪ್ಡೇಟ್‌ಗಳೊಂದಿಗೆ ರಿಲೀಸ್ ಆಗಲಿದೆ. ವಿವೋ T3 ಪ್ರೊ 5G ತೆಳುವಾದ ಫೋನ್ ಆಗಿರುತ್ತದೆ ಎಂದು ಕಂಪನಿ ಹೇಳಿದೆ. ಇತ್ತ, ಸ್ಮಾರ್ಟ್‌ಫೋನ್ ಪ್ರಿಯರು ಹೊಸ ಫೋನ್ ಖರೀದಿಸಲು ಉತ್ಸುಕರಾಗಿದ್ದಾರೆ.
ವಿವೋ T3 ಪ್ರೊ 5G ಫೋನ್ OnePlus Nord CE4 ಮತ್ತು ನಥಿಂಗ್ ಫೋನ್ (2A) ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ. ಒನ್‌ಪ್ಲಸ್ ನಾರ್ಡ್ CE4 ಬಹುತೇಕ ವಿವೋ T3 ಪ್ರೊ 5G ನಂತೆಯೇ ಯಂತ್ರಾಂಶ ಸಂರಚನೆಯನ್ನು ಹೊಂದಿದೆ. ಇದರ ವಿನ್ಯಾಸವು ಐಕ್ಯೂ Z9s ಪ್ರೊ ಫೋನಿನಂತೆಯೇ ಕಾಣುತ್ತದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಷ್ ಹೊಂದಿದೆ. ಸೆಲ್ಫಿ ಕ್ಯಾಮೆರಾಕ್ಕಾಗಿ ಮೇಲಿನ ಮಧ್ಯಭಾಗದಲ್ಲಿ ಪಂಚ್ ಹೋಲ್ ಕಟೌಟ್‌ನೊಂದಿಗೆ ಬಾಗಿದ ಡಿಸ್ಲ್ಪೇಯನ್ನು ಹೊಂದಿದೆ.

ವಿವೋ T3 ಪ್ರೊ 5G ಬಿಡುಗಡೆ ದಿನಾಂಕ ಮತ್ತು ಲಭ್ಯತೆ
ಕಂಪನಿಯು ವಿವೋ T3 ಪ್ರೊ 5G ಫೋನನ್ನು ಭಾರತದಲ್ಲಿ ನಾಳೆ (ಆಗಸ್ಟ್ 27) ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ ಎಂದು ವಿವೋ ಅಧಿಕೃತವಾಗಿ ಪ್ರಕಟಿಸಿದೆ. ಜೊತೆಗೆ, ಈ ಫೋನ್ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ಚಾನೆಲ್‌ಗಳ ಮೂಲಕವೂ ಲಭ್ಯವಿರುತ್ತದೆ. ಇದು ಎರಡು ಬಣ್ಣಗಳಲ್ಲಿ ಬರಲಿದೆ. ನೀವು ಸ್ಯಾಂಡ್‌ಸ್ಟೋನ್ ಆರೆಂಜ್ ಮತ್ತು ಎಮರಾಲ್ಡ್ ಗ್ರೀನ್ ಕಲರ್‌ನಲ್ಲಿ ಖರೀದಿಸಬಹುದು.
ವಿವೋ T3 ಪ್ರೊ 5G ಫೋನಿನ ಬೆಲೆ (ಸಂಭಾವ್ಯ)
ಕಂಪನಿಯು ವಿವೋ T3 ಪ್ರೊ 5G ಫೋನಿನ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ಆದರೂ, ಈ ಫೋನ್ ಇತ್ತೀಚೆಗೆ ಬಿಡುಗಡೆಯಾದ ಐಕ್ಯೂ Z9s ಪ್ರೋನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಐಕ್ಯೂ Z9s ಪ್ರೋ ಮೂಲ ರೂಪಾಂತರದ ಬೆಲೆಯು 24,999 ರೂ. ಮತ್ತು ಟಾಪ್ ಎಂಡ್ ರೂಪಾಂತರದ ಬೆಲೆ 29,999 ರೂ. ಇದೆ. ವಿವೋ T3 ಪ್ರೊ 5G ಫೋನಿನ ಆರಂಭಿಕ ಬೆಲೆ 25,000 ರಿಂದ 30,000 ರೂ. ಇರಬಹುದು.
ವಿವೋ T3 ಪ್ರೊ 5G ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ: ಮುಂಬರುವ ವಿವೋ T3 ಪ್ರೊ 5G ಫೋನ್ 6.78 ಇಂಚಿನ ಪೂರ್ಣ HD + AMOLED ಬಾಗಿದ ಡಿಸ್ಲ್ಪೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರ, 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುತ್ತದೆ. ಈ ಹಿಂದೆಬಿಡುಗಡೆಯಾಗಿದ್ದ ವಿವೋ T2 ಪ್ರೋ ಫೋನ್ ಕೇವಲ 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿತ್ತು.
ಪ್ರೊಸೆಸರ್: ವಿವೋ T3 ಪ್ರೊ 5G ಸ್ಮಾರ್ಟ್‌ಫೋನ್ Adreno 720 GPU ಜೊತೆಗೆ Qualcomm Snapdragon 7 Gen 3 ಪ್ರೊಸೆಸರ್ ಅನ್ನು ಹೊಂದಿರಲಿದೆ. ಇದು ವಿವೋ T2 ಪ್ರೊ ಫೋನಿನ ಡೈಮೆನ್ಸಿಟಿ 7200 ಚಿಪ್‌ಸೆಟ್‌ನಿಂದ ಅಪ್‌ಗ್ರೇಡ್ ಆಗಿದೆ. ಕಂಪನಿಯ ಸೈಟ್‌ನಲ್ಲಿ ವಿವೋ T3 ಪ್ರೊ ಪ್ರೊಸೆಸರ್‌ನ Antutu ಸ್ಕೋರ್ 820k ಎಂದು ನಮೂದಿಸಲಾಗಿದೆ.
ಕ್ಯಾಮೆರಾ: ಕಂಪನಿಯ ಪ್ರಕಾರ, ವಿವೋ T3 ಪ್ರೊ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದು 50 ಮೆಗಾ ಪಿಕ್ಸೆಲ್ ಸೋನಿ IMX882 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಹೊಂದಿರುತ್ತದೆ. ವಿವೋ T2 ಪ್ರೊ ಮೊಬೈಲ್ 64 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ.
ಬ್ಯಾಟರಿ: ವಿವೋ T3 ಪ್ರೊ 5G ಫೋನ್ 5,500mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು ವಿವೋ T2 ಪ್ರೊನ 4,600mAh ಬ್ಯಾಟರಿಗೆ ಹೋಲಿಸಿದರೆ ದೊಡ್ಡದಾಗಿದೆ. ಉಳಿದಂತೆ, ಈ ಫೋನಿ ಇತರೆ ಫೀಚರ್ಸ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








