Home
ಮೊಬೈಲ್

Vivo T3 Ultra: ಬಂತು ಗಟ್ಟಿಮುಟ್ಟಾದ 5G ಫೋನ್‌.. ಸಖತ್ ಫೀಚರ್ಸ್‌, ಬೆಲೆ ಇಷ್ಟೇನಾ?

ವಿವೋ (Vivo) ಭಾರತದಲ್ಲಿ ತನ್ನ ಹೊಸ 5G ಫೋನನ್ನು ಬಿಡುಗಡೆ ಮಾಡಲಿದೆ. ಅದುವೇ, ವಿವೋ T3 ಅಲ್ಟ್ರಾ 5G (Vivo T3 Ultra 5G) ಸ್ಮಾರ್ಟ್‌ಫೋನ್ ಆಗಿದೆ. ಹೌದು, ವಿವೋ ಭಾರತೀಯ ಗ್ರಾಹಕರಿಗಾಗಿ ವಿವೋ T ಸರಣಿಯಲ್ಲಿ ನೂತನ ವಿವೋ T3 ಅಲ್ಟ್ರಾ 5G ಅನ್ನು ಲಾಂಚ್ ಮಾಡಿದೆ. ಕಂಪನಿಯು ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್‌ನೊಂದಿಗೆ ಈ ಹೊಸ ಮೊಬೈಲ್ ಅನ್ನು ಪರಿಚಯಿಸಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ Sony IMX921 ಮುಖ್ಯ ಕ್ಯಾಮೆರಾವನ್ನು ನೀಡಲಾಗಿದೆ.

ವಿವೋ ಕಳೆದ ತಿಂಗಳು Vivo T3 Pro 5G ಫೋನನ್ನು ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿತ್ತು. ಇದರೆ ಬೆಲೆ 24,999 ರೂಪಾಯಿ ಇದೆ. ಇದೀಗ, ಕೇವಲ ಒಂದು ತಿಂಗಳ ಬಳಿಕ ವಿವೋ ಭಾರತದಲ್ಲಿ ಮತ್ತೊಂದು T3 ಸರಣಿಯ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ವಿವೋದ ಈ 5G ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಸ್ಮಾರ್ಟ್‌ಫೋನಿನ ಬೆಲೆ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

Vivo T3 Ultra 5G ಬಿಡುಗಡೆ.. ನೀರಿನಲ್ಲಿ ಬಿದ್ದರೂ ಹಾಳಾಗಲ್ಲ! ಬೆಲೆ ನೋಡಿ

ವಿವೋ T3 ಅಲ್ಟ್ರಾ 5G ಫೋನಿನ ಬೆಲೆ

8GB + 128GB ಸ್ಟೋರೇಜ್ ಬೆಲೆ = 31,999 ರೂ.
8GB + 256GB ಸ್ಟೋರೇಜ್ ಬೆಲೆ = 33,999 ರೂ.
12GB + 256GB ಸ್ಟೋರೇಜ್ ಬೆಲೆ = 35,999 ರೂ.

ವಿವೋ T3 ಅಲ್ಟ್ರಾ 5G ಫೋನನ್ನು ಎರಡು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ನೀವು ಲೂನಾರ್ ಗ್ರೇ ಮತ್ತು ಫ್ರಾಸ್ಟ್ ಗ್ರೀನ್ ಬಣ್ಣದಲ್ಲಿ ಖರೀದಿಸಬಹುದು. ಸೆಪ್ಟೆಂಬರ್ 19 ರಂದು ಸಂಜೆ 7 ಗಂಟೆಗೆ ಈ ಫೋನಿನ ಮೊದಲ ಮಾರಟವು ಪ್ರಾರಂಭವಾಗುತ್ತದೆ. ಈ ಫೋನಿನ ಬೆಲೆ 28,999 ರೂ. ನಿಂದ ಪ್ರಾರಂಭವಾಗುತ್ತದೆ. ಮೊದಲ ಮಾರಾಟದ ಭಾಗವಾಗಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ ಪಾವತಿ ಮೇಲೆ 3,000 ರೂ.ಗಳ ತ್ವರಿತ ರಿಯಾಯಿತಿ ಮತ್ತು 3,000 ರೂ.ಗಳ ಎಕ್ಸ್‌ಚೇಂಜ್‌ ಆಫರ್‌ ಲಭ್ಯವಿದೆ.

ವಿವೋ T3 ಅಲ್ಟ್ರಾ 5G ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ನೂತನ ವಿವೋ T3 ಅಲ್ಟ್ರಾ 5G ಫೋನ್ 6.78 ಇಂಚಿನ 3D ಬಾಗಿದ 1.5K AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 2800 x 1260 ಪಿಕ್ಸೆಲ್ ರೆಸಲ್ಯೂಶನ್, HDR10+ ಬೆಂಬಲ ಮತ್ತು 4500 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತಿದೆ.

ಪ್ರೊಸೆಸರ್: ವಿವೋ T3 ಅಲ್ಟ್ರಾ 5G ಮೊಬೈಲ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 9200 ಪ್ಲಸ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 4nm ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್: ಹೊಸ ವಿವೋ ಫೋನ್ 12GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ನೀವು, ವಿವೋ T3 ಅಲ್ಟ್ರಾದೊಂದಿಗೆ 12GB ವಿಸ್ತೃತ RAM ಅನ್ನು ಸಹ ಪಡೆಯುತ್ತೀರಿ.

Vivo T3 Ultra 5G ಬಿಡುಗಡೆ.. ನೀರಿನಲ್ಲಿ ಬಿದ್ದರೂ ಹಾಳಾಗಲ್ಲ! ಬೆಲೆ ನೋಡಿ

ಕ್ಯಾಮೆರಾ: ವಿವೋ T3 ಅಲ್ಟ್ರಾ 5G ಮೊಬೈಲ್ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಕ್ಯಾಮೆರಾ ಹೊಂದಿದೆ. ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ. ಹೆಚ್ಚುವರಿ ಲೈಟಿಂಗ್, ಫೆಸ್ಟಿವಲ್ ಪೋರ್ಟ್ರೇಟ್ ಮೋಡ್, ಎಐ ಎರೇಸರ್, ಮತ್ತು ಎಐ ಫೋಟೋ ವರ್ಧನೆಗಾಗಿ ಇದು 'ಔರಾ ಲೈಟ್' ಅನ್ನು ಹೊಂದಿದೆ.

ಬ್ಯಾಟರಿ: ಕಂಪನಿಯು ವಿವೋ T3 ಅಲ್ಟ್ರಾ 5G ಅನ್ನು 5,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ವೇಗವಾಗಿ ಚಾರ್ಜ್‌ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯವಿದೆ.

ಇತರೆ ವೈಶಿಷ್ಟ್ಯಗಳು: ವಿವೋ T3 ಅಲ್ಟ್ರಾ 5G ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, 5G SA/NSA , ಡ್ಯುಯಲ್ 4G VoLTE, Wi-Fi 6 802.11 be, Bluetooth 5.3, GPS, ಯುಎಸ್‌ಬಿ ಟೈಪ್‌ ಸಿ 2.0 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
vivo T3 Ultra 5G with 6.78 AMOLED display, Dimensity 9200+ launched; check Price, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+