Home
ಮೊಬೈಲ್

Vivo T3 Ultra ಬಿಡುಗಡೆ ಖಚಿತ: 24GB RAM.. 50MP ಸೆಲ್ಫಿ ಕ್ಯಾಮೆರಾ ಫಿಕ್ಸ್‌!

ವಿವೋ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಶೀಘ್ರದಲ್ಲೇ ಹೊಸ ವಿವೋ ಫೋನ್ ಬಿಡುಗಡೆಯಾಗಲಿದೆ. ಹೌದು, ವಿವೋ ಕಂಪನಿಯು ಭಾರತದಲ್ಲಿ ನೂತನ ಫೋನನ್ನು ಲಾಂಚ್ ಮಾಡಲು ಸಜ್ಜಾಗಿದೆ. ಅದುವೇ, ವಿವೋ T3 ಅಲ್ಟ್ರಾ (Vivo T3 Ultra) ಸ್ಮಾರ್ಟ್‌ಫೋನ್ ಆಗಿದೆ. ಮುಂಬರುವ ಈ ಮೊಬೈಲ್ ವಿವೋ T3 ಸರಣಿಯ ಭಾಗವಾಗಲಿದೆ. ಕಂಪನಿಯು ಇದೀಗ, ವಿವೋ ಅಲ್ಟ್ರಾ ಬಿಡುಗಡೆಯನ್ನು ಖಚಿತಪಡಿಸಿದೆ. ಈಗಾಗಲೇ, ಕೆಲವು ಪ್ರಮುಖ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ವಿವೋ T3 ಅಲ್ಟ್ರಾ ಫೋನ್ ಈ ತಿಂಗಳು ಭಾರತೀಯ ಮಾರುಕಟ್ಟೆಗೆ ಬರಲಿದೆ. ಇದರ ಮೈಕ್ರೋಸೈಟ್ ಕಂಪನಿಯ ವೆಬ್‌ಸೈಟ್ ಮತ್ತು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ವಿವೋ T3, ವಿವೋ T3x ಮತ್ತು ವಿವೋ T3 Lite ನಂತರ, ಇದು T3 ಸರಣಿಯಲ್ಲಿ ನಾಲ್ಕನೇ ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ MediaTek Dimension 9200 SoC ಚಿಪ್‌ಸೆಟ್‌ ಹೊಂದಿರಲಿದೆ. ಇದರ ಕ್ಯಾಮೆರಾ ಸೆಟಪ್ OIS ವೈಶಿಷ್ಟ್ಯದೊಂದಿಗೆ ಬರಲಿದೆ.

Vivo T3 Ultra ಬಿಡುಗಡೆ ಖಚಿತ: 24GB RAM.. 50MP ಸೆಲ್ಫಿ ಕ್ಯಾಮೆರಾ ಫಿಕ್ಸ್‌!

ವಿವೋ T3 ಅಲ್ಟ್ರಾ ಫೋನಿನ ಬೆಲೆ

ಮಾಹಿತಿಯ ಪ್ರಕಾರ, ಇದು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. 8GB + 128GB ಬೆಲೆ 30,999 ರೂ. ಇರಲಿದೆ. 8GB + 256GB ಬೆಲೆ 32,999 ರೂಪಾಯಿ ಹಾಗೂ 12GB + 256GB ಬೆಲೆ 34,999 ರೂ.ಗೆ ಬಿಡುಗಡೆಯಾಗಲಿದೆ. ಈ ಫೋನ್ ಫ್ರಾಸ್ಟ್ ಗ್ರೀನ್, ಲೂನಾ ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಈ ಮೊಬೈಲ್‌ ಖರೀದಿ ಮೇಲೆ 3,000 ರೂ. ವರೆಗೆ ಡಿಸ್ಕೌಂಟ್ ಲಭ್ಯವಿರಲಿದೆ.

ವಿವೋ T3 ಅಲ್ಟ್ರಾ ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ವಿವೋ ಟಿ3 ಅಲ್ಟ್ರಾ ಮೊಬೈಲ್ 6.78 ಇಂಚಿನ 3D ಬಾಗಿದ 1.5K AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. ಇದು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, 2800 x 1260 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, P3 ಸಿನಿಮಾ ಗ್ರೇಡ್ ಕಲರ್ ಗ್ಯಾಮಟ್ ಮತ್ತು HDR 10+ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಪ್ರೊಸೆಸರ್: ಕಂಪನಿಯು ವಿವೋ T3 ಅಲ್ಟ್ರಾ ಫೋನಿನಲ್ಲಿ ಮೀಡಿಯಾ ಟೆಕ್‌ ಡೈಮೆನ್ಸಿಟಿ 9200+ SoC ಅನ್ನು ಅಳವಡಿಸಿದೆ. ಈ 4nm ಚಿಪ್‌ಸೆಟ್ 17 ಬಿಲಿಯನ್ ಟ್ರಾನ್ಸಿಸ್ಟರ್‌ಗಳು ಮತ್ತು ಸುಧಾರಿತ APU ಫ್ಯೂಷನ್ ತಂತ್ರಜ್ಞಾನವನ್ನು ಹೊಂದಿದೆ. ಇದು ಸರಿಸಾಟಿಯಿಲ್ಲದ ಶಕ್ತಿ ಮತ್ತು ದಕ್ಷತೆಯನ್ನು ನೀಡುತ್ತದೆ. ಜೊತೆಗೆ, ಈ ಮೊಬೈಲ್ ಚಿಪ್ AnTuTu ಪ್ಲಾಟ್‌ಫಾರ್ಮ್‌ನಲ್ಲಿ 16,09,257ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದೆ.

ಸ್ಟೋರೇಜ್: ಈ ಮೊಬೈಲ್ 12GB RAM ಮತ್ತು 256GB ವರೆಗೆ ಆಂತರಿಕ ಸ್ಟೋರೇಜ್‌ ಅನ್ನು ಹೊಂದಿರುತ್ತದೆ ಎಂದು ಕಂಪನಿಯು ದೃಢಪಡಿಸಿದೆ. ಇದರೊಂದಿಗೆ 12GB ವರೆಗಿನ ವರ್ಚುವಲ್ RAM ತಂತ್ರಜ್ಞಾನವನ್ನು ಸಹ ಒದಗಿಸಲಾಗುತ್ತದೆ. ಇದರ ಸಹಾಯದಿಂದ ನೀವು 24GB ವರೆಗೆ ಒಟ್ಟು ಶಕ್ತಿಯನ್ನು ಪಡೆಯಬಹುದು.

ಕ್ಯಾಮೆರಾ: ವಿವೋ T3 ಅಲ್ಟ್ರಾ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಇದು OIS ಮತ್ತು f/1.88 ಅಪರ್ಚರ್‌ನೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX 921 ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಸೆಟಪ್ ಬಳಿ ಸ್ಮಾರ್ಟ್ ಔರಾ ಲೈಟ್ ಅನ್ನು ಒದಗಿಸಲಾಗುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಇದು f/2.0 ಅಪರ್ಚರ್, ಆಟೋಫೋಕಸ್ ಮತ್ತು ಎಐ ಫೇಸ್ ಕಲರ್ ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಕಂಪನಿಯು ವಿವೋ T3 ಅಲ್ಟ್ರಾ ಮೊಬೈಲ್‌ನಲ್ಲಿ 5500mAh ಬ್ಯಾಟರಿಯನ್ನು ಒದಗಿಸಲಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್‌ ಬೆಂಬಲವಿರುತ್ತದೆ. ನೀವು ದೀರ್ಘ ಬ್ಯಾಕಪ್ ಮತ್ತು ತ್ವರಿತ ಚಾರ್ಜಿಂಗ್ ಸೌಲಭ್ಯವನ್ನು ಪಡೆಯಬಹುದು.

ಇತರೆ ವೈಶಿಷ್ಟ್ಯಗಳು: ಮುಂಬರುವ ವಿವೋ T3 ಅಲ್ಟ್ರಾ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌ ಪಡೆದಿದೆ. ಈ ಫೋನ್‌ ಡ್ಯುಯಲ್ ಸ್ಪೀಕರ್‌, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿರಲಿದೆ.

Best Mobiles in India

English summary
Vivo T3 Ultra landing page goes live on Flipkart, expected to launch on September 17: expected Price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+