9,999 ರೂ.ಗೆ 6,000mAh ಬ್ಯಾಟರಿ, 50-MP ಕ್ಯಾಮೆರಾದ ಹೊಸ Vivo ಫೋನ್ ಬಿಡುಗಡೆ!
ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ Vivo T4 Lite 5G ಪೋನ್ ಭಾರತದಲ್ಲಿ ಅಂತಿಮವಾಗಿ ಬಿಡುಗಡೆಯಾಗಿದೆ. ದೇಶದಲ್ಲಿ ಈಗಾಗಲೇ ಲಭ್ಯವಿರುವ Vivo T4 Lite 5G, Vivo T4 Ultra 5G, Vivo T4 5G, ಮತ್ತು T4x 5G ಫೋನ್‌ಗಳ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಈ ಫೋನ್ ಸೇರಿಕೊಂಡಿದ್ದು, ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ಹಾಗಾದರೆ, ಈ ಹೊಸ Vivo T4 Lite 5G ಫೋನಿನ ಸಂಪೂರ್ಣ ಬೆಲೆಗಳು ಮತ್ತು ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Vivo T4 Lite 5G: ಬೆಲೆ ಮತ್ತು ಲಭ್ಯತೆ
Vivo T4 Lite 5G ಫೋನ್ 4GB RAM ಮತ್ತು 128GB ಶೇಖರಣಾ ಆಯ್ಕೆಗೆ 9,999 ರೂ.ಗಳ ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇನ್ನು, ಇದರ 6GB RAM + 128GB ಶೇಖರಣಾ ಮಾದರಿಯು ರೂ. 10,999 ಕ್ಕೆ ಬಿಡುಗಡೆಯಾಗಿದ್ದರೆ, 8GB RAM + 256GB ಶೇಖರಣಾ ಮಾದರಿಯ ಬೆಲೆ ರೂ. 12,999 ಆಗಿದೆ. ಈ ಸ್ಮಾರ್ಟ್‌ಫೋನ್ ಇದೃ ಜುಲೈ 2 ರಿಂದ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು ಪ್ರಿಸ್ಮ್ ಬ್ಲೂ ಮತ್ತು ಟೈಟಾನಿಯಂ ಗೋಲ್ಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ.
ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
ಹೊಸ Vivo T4 Lite 5G ಫೋನ್ 6.74-ಇಂಚಿನ HD+ (720x1,600 ಪಿಕ್ಸೆಲ್‌ಗಳು) LCD ಡಿಸ್ಪ್ಲೇಯನ್ನು ಹೊಂದಿದ್ದು, ಇದು90Hz ರಿಫ್ರೆಶ್ ದರ ಮತ್ತು 1,000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ. ಈ ಡಿಸ್ಪ್ಲೇಯು TÜV ರೈನ್‌ಲ್ಯಾಂಡ್ ಕಡಿಮೆ ನೀಲಿ ಬೆಳಕಿನ ಪ್ರಮಾಣೀಕರಣದೊಂದಿಗೆ ಬರುವುದರಿಂದ ಕಣ್ಣುಗಳಿಗೆ ಆಯಾಸವಾಗದಂತೆ ನೋಡಿಕೊಳ್ಳುತ್ತದೆ ಎಂದು ಕಂಪೆನಿ ತಿಳಿಸಿದೆ. ಜೊತೆಗೆ ಈ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ.

Vivo T4 Lite 5G ಫೋನ್‌ನ ಕಾರ್ಯಕ್ಷಮತೆಗೆ 6nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಶಕ್ತಿ ನೀಡುತ್ತದೆ, ಇದು 8GB ವರೆಗೆ LPDDR4X RAM ನೊಂದಿಗೆ ಜೋಡಿಯಾಗಿದೆ. ಆಂತರಿಕ ಸಂಗ್ರಹಣೆಯು 256GB ವರೆಗೆ ಲಭ್ಯವಿದ್ದು, ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, Vivo T4 Lite 5G Android 15 ಆಧಾರಿತ FuntouchOS 15 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, ಈ Vivo T4 Lite 5G ಫೋನ್ ಡುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ದ್ವಿತೀಯ ಸಂವೇದಕ ಸೇರಿವೆ, ಜೊತೆಗೆ LED ಫ್ಲ್ಯಾಷ್ ಯೂನಿಟ್ ಇದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಫೋನ್ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದೆ. ಜೊತೆಗೆ AI ಫೋಟೋ ಎನ್‌ಹಾನ್ಸ್ ಮತ್ತು AI ಎರೇಸ್‌ನಂತಹ AI- ಬೆಂಬಲಿತ ವೈಶಿಷ್ಟ್ಯಗಳು ಸಹ ಇವೆ.
ಬ್ಯಾಟರಿ ವಿಭಾಗದಲ್ಲಿ, Vivo T4 Lite ಫೋನ್ ಬೃಹತ್ 6,000mAh ಬ್ಯಾಟರಿಯನ್ನು ಹೊಂದಿದೆ. ಇದು 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G, Wi-Fi, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇನ್ನುಳಿದಂತೆ, IP64 ಧೂಳು ಮತ್ತು ಸ್ಪ್ಲಾಶ್-ನಿರೋಧಕ ರೇಟಿಂಗ್ SGS 5-ಸ್ಟಾರ್ ಆಂಟಿ-ಫಾಲ್ ಪ್ರೊಟೆಕ್ಷನ್ ಮತ್ತು MIL-STD-810H ಮಿಲಿಟರಿ-ಗ್ರೇಡ್ ಶಾಕ್-ರೆಸಿಸ್ಟೆನ್ಸ್ ಪ್ರಮಾಣೀಕರಣಗಳನ್ನು ಪಡೆದುಕೊಂಡಿದೆ.


Click it and Unblock the Notifications








