Home
ಮೊಬೈಲ್

ಇನ್ನೆರಡು ದಿನದಲ್ಲಿ ಬರುತ್ತಿದೆ ಟಾಪ್ ಕ್ಲಾಸ್ ಕ್ಯಾಮೆರಾದ ಹೊಸ ವಿವೋ ಫೋನ್!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ತನ್ನ ಬಹುನಿರೀಕ್ಷಿತ Vivo T4 Pro 5G ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಆಗಸ್ಟ್ 26 ರಂದು ದೇಶದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ನಿರೀಕ್ಷೆಯಂತೆಯೇ, ಈ ಮುಂಬರುವ Vivo T4 Pro 5G ಫೋನ್ 3X ಜೂಮ್ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 882 (Sony IMX882) ಟೆಲಿಫೋಟೋ ಕ್ಯಾಮೆರಾವನ್ನು ಅಳವಡಿಸಲಾಗುವುದು ಎಂದು ಬಹಿರಂಗಪಡಿಸಿದೆ.! ಹಾಗಾದರೆ, ಮುಂಬರುವ Vivo T4 Pro 5G ಫೋನ್ ಹೇಗಿರಲಿದೆ?, ಬೆಲೆ ಎಷ್ಟಿರಲಿದೆ ಮತ್ತು ಫಿಚರ್ಸ್ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Vivo T4 Pro 5G: ಬಣ್ಣ, ಲಭ್ಯತೆ ಮತ್ತು ಬೆಲೆ
Vivo T4 Pro 5G ಫೋನ್ ದೇಶದಲ್ಲಿ ಇದೇ ಆಗಸ್ಟ್ 26 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದೆ. ಇದರ ಬೆಲೆ ದೇಶದಲ್ಲಿ 25,000 ರೂ. ರಿಂದ 30,000 ರೂ. ರವರೆಗೆ ಇರುತ್ತದೆ ಎಂದು ಕಂಪನಿಯು ತಿಳಿಸಿದೆ. ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಈಗ ಲೈವ್ ಆಗಿದ್ದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಫೀನಿನ ಲಭ್ಯತೆಯನ್ನು ದೃಢಪಡಿಸುತ್ತದೆ. ಈ ಪೋಸ್ಟರ್ ನಲ್ಲಿ ಫೋನ್ ಅನ್ನು ನೀಲಿ ಮತ್ತು ಚಿನ್ನದ ಎರಡು ಬಣ್ಣಗಳಲ್ಲಿ ತೋರಿಸಲಾಗಿದೆ.

Vivo T4 Pro 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Vivo T4 Pro 5G ಫೋನ್ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ ಮತ್ತು ಕೇವಲ 7.53 ಮಿಮೀ ದಪ್ಪದ ಸುಂದರ ವಿನ್ಯಾಸವನ್ನು ಹೊಂದಿದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್ ಶಕ್ತಿಯುತ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ ಮತ್ತು ಬಳಕೆದಾರರಿಗೆ ಸುಲಭ ಅನುಭವವನ್ನು ನೀಡುತ್ತದೆ. ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ಇತರ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಈ ಚಿಪ್‌ಸೆಟ್ ಸಹಾಯ ಮಾಡುತ್ತದೆ.

 ಇನ್ನೆರಡು ದಿನದಲ್ಲಿ ಬರುತ್ತಿದೆ ಟಾಪ್ ಕ್ಲಾಸ್ ಕ್ಯಾಮೆರಾದ ಹೊಸ ವಿವೋ ಫೋನ್!

ಕ್ಯಾಮೆರಾ ವಿಭಾಗದಲ್ಲಿ, Vivo T4 Pro 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50-ಮೆಗಾಪಿಕ್ಸೆಲ್ ಸೋನಿ IMX882 ಟೆಲಿಫೋಟೋ ಲೆನ್ಸ್ ಮುಖ್ಯ ಆಕರ್ಷಣೆಯಾಗಿದೆ, ಇದು 3x ಆಪ್ಟಿಕಲ್ ಜೂಮ್ ಅನ್ನು ಬೆಂಬಲಿಸುತ್ತದೆ. ಇದಕ್ಕೆ ಜೊತೆಗೆ ಇತರ ಎರಡು ಕ್ಯಾಮೆರಾ ಲೆನ್ಸ್‌ಗಳು ಕೂಡ ಇವೆ. ಫೋನಿನ ಹಿಂಭಾಗದಲ್ಲಿ ಲಂಬವಾಗಿ ಇರಿಸಲಾದ ಪಿಲ್-ಆಕಾರದ ಮಾಡ್ಯೂಲ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಇದು ವಿಭಿನ್ನ ವಿನ್ಯಾಸವನ್ನು ನೀಡುತ್ತದೆ.

ಈ ಫೋನಿನ ಮೂರನೇ ಕ್ಯಾಮೆರಾ ಮತ್ತು ರಿಂಗ್-ತರಹದ ಔರಾ ಲೈಟ್ ಮಾಡ್ಯೂಲ್‌ ಕೂಡ ಇದೆ. ಫೋನ್‌ನ ಪ್ರಚಾರದ ಪೋಸ್ಟರ್‌ಗಳು AI-ಬೆಂಬಲಿತ ಇಮೇಜಿಂಗ್ ಮತ್ತು ಇತರೆ ಉತ್ಪಾದಕತಾ ಪರಿಕರಗಳ ಉಪಸ್ಥಿತಿಯನ್ನು ಖಚಿತಪಡಿಸುತ್ತವೆ. ಇದು ಬಳಕೆದಾರರ ಫೋಟೋಶಾಪ್ ಅನುಭವವನ್ನು ಸುಧಾರಿಸಲು ಮತ್ತಷ್ಟು ಸಹಾಯ ಮಾಡಲಿದೆ ಎಂದು ಹೇಳಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ Vivo T4 Pro 5G ಫೋನ್ 6,500mAh ಬ್ಯಾಟರಿಯೊಂದಿಗೆ ಬರುತ್ತದೆ!

ಈ ಹೊಸ Vivo T4 Pro 5G ಫೋನ್, ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ Vivo T4 5G ಸರಣಿಯ ಮುಂದುವರಿದ ಭಾಗವಾಗಿದೆ. ಈ ಹೊಸ Vivo T4 Pro 5G ಫೋನ್ ಕಳೆದ ವರ್ಷ ಬಿಡುಗಡೆಯಾದ Vivo T3 Pro ಮಾದರಿಯ ಉತ್ತರಾಧಿಕಾರಿಯಾಗಿ ಬರುತ್ತಿದೆ. ಕಳೆದ Vivo T3 Pro ಮಾದರಿಯು ಸ್ನಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್, 5,500mAh ಬ್ಯಾಟರಿ, 50-ಮೆಗಾಪಿಕ್ಸೆಲ್ ಸೋನಿ IMX882 ಪ್ರಾಥಮಿಕ ಕ್ಯಾಮೆರಾ ಮತ್ತು 6.77-ಇಂಚಿನ ಫುಲ್-HD+ AMOLED ಡಿಸ್ಪ್ಲೇಯನ್ನು ಒಳಗೊಂಡಿತ್ತು.

ಈ Vivo T3 Pro ಮಾದರಿಯು 8GB + 128GB ಮತ್ತು 8GB + 256GB ರೂಪಾಂತರಗಳಿಗೆ ಕ್ರಮವಾಗಿ ರೂ. 24,999 ಮತ್ತು ರೂ. 26,999 ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಹೊಸ Vivo T4 Pro ಈ ಹಿಂದಿನ ಮಾದರಿಯಲ್ಲಿರುವ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆಯಾಗಿ, ಹೊಸ Vivo T4 Pro 5G ಮಾದರಿಯು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಉತ್ತಮ ಆಯ್ಕೆಯಾಗುವ ನಿರೀಕ್ಷೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Vivo T4 Pro 5G is launching in India on August 26 with its full specifications, features, price and design details revealed ahead of the debut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+