Home
ಮೊಬೈಲ್

ಭಾರತದಲ್ಲಿ ಬಹುನಿರೀಕ್ಷಿತ Vivo T4 Pro ಫೋನ್ ಬಿಡುಗಡೆ: ಖರೀದಿಸಲು ಕ್ಯೂ ಪಕ್ಕಾ!

ಭಾರತೀಯ ಮೊಬೈಲ್ ಮಾರುಕಟ್ಟೆಯು ಬಹುದಿನಗಳಿಂದ ಎದುರುನೋಡುತ್ತಿದ್ದ Vivo T4 Pro ಫೋನ್ ದೇಶದಲ್ಲಿ ಇಂದು ಬಿಡುಗಡೆಯಾಗಿದೆ. ಇಂದು ವಿವೋ ಆಯೋಜಿಸಿದ್ದ ಬಿಡುಗಡೆ ಸಮಾರಂಭದಲ್ಲಿ Vivo T4 Pro ಫೋನ್ ಭರ್ಜರಿಯಾಗಿ ಎಂಟ್ರಿ ನೀಡಿದ್ದು, ಸ್ನಾಪ್‌ಡ್ರಾಗನ್ 7 Gen 4 SoC ಚಿಪ್‌ಸೆಟ್‌, 50-ಮೆಗಾಪಿಕ್ಸೆಲ್ ಸೋನಿ IMX882 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು Google Gemini ಅಪ್ಲಿಕೇಶನ್‌ನೊಂದಿಗೆ ಪೂರ್ವ-ಸ್ಥಾಪಿತವಾಗಿ ಬಂದಿರುವ ಮೊದಲ ಫೋನ್‌ಗಳಲ್ಲಿ ಒಂದಾಗಿದೆ. ಹಾಗಾದರೆ, ಹೊಸ Vivo T4 Pro ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

Vivo T4 Pro : ಪ್ರಮುಖ ವೈಶಿಷ್ಟ್ಯಗಳು
Vivo T4 Pro ಫೋನ್ 6.77-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ರಿಫ್ರೆಶ್ ರೇಟ್, 5,000 ನಿಟ್ಸ್ ಸ್ಥಳೀಯ ಪೀಕ್ ಬ್ರೈಟ್‌ನೆಸ್ ಮತ್ತು 1,500 ನಿಟ್ಸ್ ಜಾಗತಿಕ ಪೀಕ್ ಬ್ರೈಟ್‌ನೆಸ್ ಮಟ್ಟವನ್ನು ಬೆಂಬಲಿಸುತ್ತದೆ. ಇದು ಬಳಕೆದಾರರಿಗೆ ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ಧೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್‌ ಹೊಂದಿರುವ ಈ ಫೋನ್, ಸುರಕ್ಷತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ Vivo T4 Pro ಫೋನ್ ಸ್ನಾಪ್‌ಡ್ರಾಗನ್ 7 Gen 4 SoC ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇದು 12GB ವರೆಗೆ LPDDR4x RAM ಮತ್ತು 256GB ವರೆಗೆ UFS 2.2 ಸಂಗ್ರಹಣೆಯನ್ನು ಒಳಗೊಂಡಿದೆ. ಜೊತೆಗೆ 16,470 ಚದರ ಮಿಮೀ 10-ಲೇಯರ್ ವಿ.ಸಿ ಕೂಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಫೋನ್ Android 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಾಲ್ಕು ವರ್ಷಗಳ ಪ್ರಮುಖ OS ಅಪ್‌ಗ್ರೇಡ್‌ಗಳು ಹಾಗೂ ಆರು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.

ಭಾರತದಲ್ಲಿ ಬಹುನಿರೀಕ್ಷಿತ Vivo T4 Pro ಫೋನ್ ಬಿಡುಗಡೆ: ಖರೀದಿಸಲು ಕ್ಯೂ ಪಕ್ಕಾ!

ಫೋಟೋಗ್ರಫಿ ಪ್ರಿಯರಿಗಾಗಿ, ಈ ಫೋನ್ ಪ್ರಭಾವಶಾಲಿ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಸೋನಿ IMX882 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32-ಮೆಗಾಪಿಕ್ಸೆಲ್ ಸೆನ್ಸರ್ ಇದೆ. ಇದು AI ಪ್ರೊಫೆಷನಲ್ ಪೋರ್ಟ್ರೇಟ್, AI ಎರೇಸ್ 3.0, AI ಮ್ಯಾಜಿಕ್ ಮೂವ್, AI ಇಮೇಜ್ ಎಕ್ಸ್‌ಪಾಂಡರ್ ಮತ್ತು AI ಫೋಟೋ ಎನ್‌ಹಾನ್ಸ್‌ನಂತಹ ಅನೇಕ AI ಇಮೇಜಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಬ್ಯಾಟರಿ ಸಾಮರ್ಥ್ಯದಲ್ಲಿ, ಈ ಫೋನ್ 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಫೋನಿನಲ್ಲಿ Google Gemini ಅಪ್ಲಿಕೇಶನ್‌ನೊಂದಿಗೆ ಪೂರ್ವ-ಸ್ಥಾಪಿತವಾಗಿದ್ದು, ಇತ್ತೀಚಿನ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಶಿಷ್ಟ್ಯಗಳಿವೆ. ಸಂಪರ್ಕ ಆಯ್ಕೆಗಳಲ್ಲಿ, 5G, 4G, ವೈ-ಫೈ 6, ಬ್ಲೂಟೂತ್ 5.4, GPS ಮತ್ತು USB ಟೈಪ್-ಸಿ ಸಂಪರ್ಕ ವೈಶಿಷ್ಟ್ಯಗಳಿವೆ. ಇನ್ನು ಕೇವಲ 7.53 ಮಿಮೀ ದಪ್ಪ ಮತ್ತು 192 ಗ್ರಾಂ ತೂಕದೊಂದಿಗೆ, ಈ ಹ್ಯಾಂಡ್‌ಸೆಟ್ ಉತ್ತಮ ಹಿಡಿತ ಮತ್ತು ಹಗುರವಾದ ಅನುಭವವನ್ನು ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

Vivo T4 Pro : ಬೆಲೆ ಮತ್ತು ಲಭ್ಯತೆ
ದೇಶದಲ್ಲಿ ಹೊಸ Vivo T4 Pro ಮೂರು ವಿಭಿನ್ನ ಆವೃತ್ತಿಗಳಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಬೆಲೆ 8GB RAM ಮತ್ತು 128GB ಸಂಗ್ರಹಣೆಯ ಆವೃತ್ತಿಗೆ ₹27,999 ನಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, 8GB + 256GB ಆವೃತ್ತಿಗೆ ₹29,999 ಮತ್ತು 12GB + 256GB ಆವೃತ್ತಿಗೆ ₹31,999 ಬೆಲೆ ನಿಗದಿಪಡಿಸಲಾಗಿದೆ. ಈ ಫೋನ್ ಬ್ಲೇಜ್ ಗೋಲ್ಡ್ ಮತ್ತು ನೈಟ್ರೋ ಬ್ಲೂ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. Vivo T4 Pro ಮಾರಾಟವು ಆಗಸ್ಟ್ 29 ರಿಂದ ಪ್ರಾರಂಭವಾಗಲಿದ್ದು, ಗ್ರಾಹಕರು Vivo India ಇ-ಸ್ಟೋರ್, Flipkart ಮತ್ತು ಆಯ್ದ ಆಫ್‌ಲೈನ್ ಮಳಿಗೆಗಳಲ್ಲಿ ಇದನ್ನು ಖರೀದಿಸಬಹುದು.

ಇನ್ನು ಬಿಡುಗಡೆ ಕೊಡುಗೆಗಳಾಗಿ, Vivo T4 Pro ಫೋನ್ ಖರೀದಿದಾರರಿಗೆ ಆಕರ್ಷಕ ಆಫರ್‌ಗಳು ಲಭ್ಯವಿದ್ದು, HDFC, Axis ಮತ್ತು SBI ಬ್ಯಾಂಕ್‌ಗಳ ಕಾರ್ಡ್‌ಗಳನ್ನು ಬಳಸಿ ₹3,000 ವರೆಗೆ ತ್ವರಿತ ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ, ಹಳೆಯ ಫೋನ್ ವಿನಿಮಯದ ಮೇಲೆ ₹3,000 ವಿನಿಮಯ ಬೋನಸ್ ಮತ್ತು ಆರು ತಿಂಗಳವರೆಗೆ ನೋ-ಕಾಸ್ಟ್ EMI ಸೌಲಭ್ಯ ಕೂಡ ಲಭ್ಯವಿದೆ. Jio ಗ್ರಾಹಕರು (₹1,199 ಯೋಜನೆಯಲ್ಲಿ) ಎರಡು ತಿಂಗಳವರೆಗೆ 10 OTT ಅಪ್ಲಿಕೇಶನ್‌ಗಳಿಗೆ ಉಚಿತ ಪ್ರೀಮಿಯಂ ಪ್ರವೇಶವನ್ನು ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.

Best Mobiles in India

English summary
Vivo T4 Pro debuts in India featuring a 50MP periscope camera, massive 6,500mAh battery, and premium performance upgrades.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+